Srirastu Shubhamastu ; ಮಗಳನ್ನು ಹುಡುಕುತ್ತಾ ಬಂದ ವನಜಾಳಿಗೆ ಕಾದಿದ್ಯಾ ಶಾಕ್..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದೀಪಿಕಾಳಿಗೆ ಪೂರ್ಣಿಮಾ ಕೊಟ್ಟ ಉತ್ತರದಿಂದ ಶಾಕ್ ಆಗಿದ್ದಾಳೆ. ತನ್ನ ಮಾತಿಗೆ ಕಣ್ಣಿರು ಹಾಕುತ್ತಾ ಸಂಕಟ ಪಡುತ್ತಿದ್ದ ಪೂರ್ಣಿಮಾ ಬದಲಾಗಿದ್ದಾಳೆ. ಅನಾಥೆ ಎಂದು ಹೀಯಾಳಿಸಿದರೂ ಕೂಡ ಹೌದು ನಾನು ಅನಾಥೆಯೇ, ನಿನಗೆ ಅದೊಂದೆ ಮಾತಿನಿಂದ ನನ್ನನ್ನು ಚುಚ್ಚುವುದಕ್ಕೆ ಆಗುವುದು. ಏನಾದರೂ ಹೇಳಿಕೊ ನನಗೆ ಬೇಸರವಿಲ್ಲ ಎಂದಿದ್ದಾಳೆ. ಇದು ದೀಪಿಕಾಳಿಗೆ ಅನುಮಾನ ತರಿಸಿದೆ. ಅಪ್ಪ ಜನಾರ್ಧನ್ ಗೆ ಕಾಲ್ ಮಾಡಿ ಇದೇ ವಿಚಾರದ ಬಗ್ಗೆ ದೂರು ಹೇಳುತ್ತಾಳೆ. ಜನಾರ್ಧನ್ ದೀಪಿಕಾಳಿಗೆ ಸಪೋರ್ಟ್ ಮಾಡುತ್ತಾನೆ.
ದೀಪಿಕಾಳಿಗೆ ವಾಪಸ್ ಉತ್ತರ ಕೊಟ್ಟ ಪೂರ್ಣಿಮಾ
ಪೂರ್ಣಿಮಾ ಡ್ಯಾನ್ಸ್ ಪ್ರಾಕ್ಟೀಸ್ ಮಾಡುವುದನ್ನು ನೋಡಿದ ದೀಪಿಕಾ ಸುಮ್ಮನೆ ಇರುವುದಿಲ್ಲ. ನೀನು ಡ್ಯಾನ್ಸ್ ಕಲಿತು ಯಾವ ಸಾಧನೆಯನ್ನೂ ಮಾಡಬೇಕಿಲ್ಲ. ಎಲ್ಲೂ ಪರ್ಫಾರ್ಮ್ ಮಾಡುವ ಅಗತ್ಯವೇನೂ ಇಲ್ಲ ಎಂದು ಹೇಳುತ್ತಾಳೆ. ಪೂರ್ಣಿಮಾ ಈ ಮಾತಿಗೆ ಸ್ವಲ್ಪವೂ ಕೋಪ ಮಾಡಿಕೊಳ್ಳದೇ, ಪ್ರತ್ಯುತ್ತರ
ಕೊಡುತ್ತಾಳೆ. ಇದ್ದರೆ ಇರಲಿ, ನಿನಗೆ ನೋಡುವುದಕ್ಕೆ ಆಗದಿದ್ದರೆ ಕಣ್ಣು ಮುಚ್ಚಿಕೊ, ಕೇಳೋದಕ್ಕೆ ಕಷ್ಟ ಆದರೆ, ಕಿವಿ ಮುಚ್ಚಿಕೊ ಇಲ್ಲದೇ ಹೋದರೆ, ಇಲ್ಲಿಂದ ಹೊರಗೆ ಹೋಗಬಹುದು ಹೇಳುತ್ತಾಳೆ. ಇದು ದೀಪಿಕಾಳಿಗೆ ಇನ್ನಷ್ಟು ಕೋಪವನ್ನು ತರಿಸುತ್ತದೆ. ಆದರೆ, ಪೂರ್ಣಿಮಾ ಕೂಲ್ ಆಗಿರುತ್ತಾಳೆ.

ಡೆತ್ ಸರ್ಟಿಫಿಕೇಟ್ ಜುಗ್ಗನ ಅಲೆದಾಟ
ದತ್ತ ತಾತ ಬದುಕಿರುವಾಗಲೇ ಅವರ ಡೆತ್ ಸರ್ಟಿಫಿಕೇಟ್ ಅನ್ನು ಮಾಡಿಸಿ, ಮನೆಯನ್ನು ಸೊಸೆಯ ಹೆಸರಿಗೆ ಬದಲಾಯಿಸಲು ಜುಗ್ಗ ಮಾವ ಅಲೆದಾಡುತ್ತಿದ್ದಾರೆ. ಆಫೀಸರ ಅನ್ನು ಭೇಟಿ ಮಾಡಿ ಡುಪ್ಲಿಕೇಟ್ ಡೆತ್ ಸರ್ಟಿಫಿಕೇಟ್ ಮಾಡಿಕೊಡುವಂತೆ ಕೇಳುತ್ತಾನೆ. ಆತ ಮೊದಲು ಆಗುವುದಿಲ್ಲ ಎಂದಿದ್ದಕ್ಕೆ, ಎಷ್ಟು ಬೇಕಾದರೂ ಹಣ ಕೊಡುವುದಾಗಿ ಆಮೀಷವೊಡ್ಡಿದ್ದಾನೆ. ಅದಕ್ಕೆ ಆತ ಸ್ಮಶಾನದಿಂದ ಲೆಟರ್ ತಂದರೆ ಡೆತ್ ಸರ್ಟಿಫಿಕೇಟ್ ಅನ್ನು ಮಾಡಿಕೊಡುತ್ತೇನೆ ಎಂದು ಒಪ್ಪಿಕೊಳ್ಳುತ್ತಾನೆ. ಈಗ ಜುಗ್ಗ ಮಾವ ಸ್ಮಶಾನದ ಕಡೆಗೆ ಪ್ರಯಾಣ ಬೆಳೆಸಿದ್ದು, ಮತ್ತೇನು ಎಡವಟ್ಟು ಮಾಡುತ್ತಾರೋ ಕಾದು ನೋಡಬೇಕಿದೆ.
ಮಗಳನ್ನು ಹುಡುಕುತ್ತಾನಾ ಜನಾರ್ಧನ್
ಮಗಳು ಇಲ್ಲದೇ ಈಗ ಇರುವ ಆಸ್ತಿಯನ್ನೆಲ್ಲಾ ಕಳೆದುಕೊಳ್ಳಬೇಕೆ ಎಂದು ಜನಾರ್ಧನ್ ತಲೆ ಕೆಡಿಸಿಕೊಂಡು ಕುಳಿತಿದ್ದಾನೆ. ವನಜಾ ತನ್ನ ಮೊದಲ ಮಗುವನ್ನು ಹುಡುಕೋಣ, ಆಗ ಆಸ್ತಿ ನಮಗೆ ಉಳಿಯುತ್ತದೆ ಎಂದು ಕೇಳುತ್ತಾಳೆ. ಆದರೆ, ಜನಾರ್ಧನ್ ಆ ಮಗು ತನಗೆ ಅಪಶಕುನ ಎಂದು ಕೂಗಾಡುತ್ತಾನೆ. ವನಜಾ ಸುಳ್ಳು ಆರೋಪ ಮಾಡಬೇಕಿ. ಆ ಮಗು ಹುಟ್ಟಿದ್ದಕ್ಕೆ, ದೊಡ್ಡ ಆಕ್ಸಿಡೆಂಟ್ ಆದರೂ ನಿಮಗೇನು ಆಗಲಿಲ್ಲ. ಗೋಡೌನ್ ಸುಟ್ಟು ಹೋದರು, ಇನ್ಶ್ಯೂರೆನ್ಸ್ ಹೆಸರಲ್ಲಿ ಹೆಚ್ಚು ಹಣ ಗಳಿಸಿದ್ರಿ ಎಂದು ವಾದ ಮಾಡುತ್ತಾಳೆ. ಆಗ ಜನಾರ್ಧನ್ ಮಗುವನ್ನು ಹುಡುಕು ಆದರೆ, ಆ ಮಗುವಿನ ಬಗ್ಗೆ ಮಾಧವ್ ಮನೆಗೆ ಯಾವುದೇ ಕಾರಣಕ್ಕೂ ಗೊತ್ತಾಗಬಾರದು ಅದರಿಂದ ನನ್ನ ಮಗಳು ದೀಪಿಕಾಳಿಗೆ ತೊಂದರೆ ಆಗುತ್ತದೆ ಎಂದು ಹೇಳುತ್ತಾನೆ.

ರಾಮಚಂದ್ರ ಅರ್ಚಕರ ಮನೆಗೆ ಬಂದವರಾರು..?
ಮಗುವನ್ನು ಬಸವನಗುಡಿಯಲ್ಲಿರುವ ದೇವಸ್ಥಾನದಲ್ಲಿ ಬಿಟ್ಟು ಬಂದಿರುವುದಾಗಿ ಹೇಳುತ್ತಾನೆ. ವನಜಾ ಜನಾರ್ಧನ್ ಮಾತು ಕೇಳಿಕೊಂಡು ದೇವಸ್ಥಾನಕ್ಕೆ ಹೋಗಿ ಅಲ್ಲಿ ರಾಮಚಂದ್ರ ಅರ್ಚಕರನ್ನು ಹುಡುಕಿಕೊಂಡು ಬರುತ್ತಾಳೆ. ಆಗ ಅರ್ಚಕರು ಮಗುವಿನ ಬಗ್ಗೆ ಹೇಳಲಾಗದೇ ಅನ್ನಪೂರ್ಣೇಶ್ವರಿ ದೇವಿಯ ಫೋಟೋವನ್ನು ತೋರಿಸುತ್ತಿರುತ್ತಾರೆ. ಆದರೆ ಅದು ವನಜಾಳಿಗೆ ಅರ್ಥವಾಗುವುದಿಲ್ಲ. ಅಷ್ಟರಲ್ಲಿ ಅದೇ ಮನೆಗೆ ತುಳಸಿ ಕೂಡ ಪೂರ್ಣಿಮಾ ತಂದೆ ತಾಯಿ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದಾಳೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











