Srirasthu Shubhamasthu ; ಶಾರ್ವರಿಗೆ ತುಳಸಿ ಗರ್ಭಿಣಿ ಎಂಬ ಸತ್ಯ ಗೊತ್ತಾಯ್ತಾ : ಜುಗ್ಗನಿಂದ ಮತ್ತೆ ಸಮಸ್ಯೆ ಎದುರಾಗುತ್ತಾ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತನ ಮನೆಯಲ್ಲಿ ಎಲ್ಲವೂ ಅರಾಮವಾಗಿ ನಡೆದುಕೊಂಡು ಹೋಗುತ್ತಿದೆ. ಸಮರ್ಥ್ ತನ್ನ ತಾಯಿ ಬಗ್ಗೆ ಹೆಚ್ಚಿನ ಕೇರ್ ಮಾಡುತ್ತಿದ್ದಾನೆ.ಸಿರಿ ಮತ್ತು ಸಂಧ್ಯಾ ಪದೇ ಪದೇ ಅಮ್ಮನಿಗೆ ಏನಾಗಿದೆ. ಯಾಕೆ ಅವರಿಗೆ ಆರೋಗ್ಯ ಸಮಸ್ಯೆ ಇದೆ ಎಂಬಂತೆ ಮಾತನಾಡುತ್ತೀಯಾ ಏನಾಗಿದೆ ಹೇಳು ಎಂದು ಕೇಳುತ್ತಲೇ ಇರುತ್ತಾರೆ. ಆದರೆ, ಸಮರ್ಥ್ ಏನನ್ನು ಹೇಳದೇ ಮಾತು ಮರೆಸುತ್ತಿದ್ದಾನೆ. ತುಳಸಿಗೆ ಬ್ರೈನ್ ಟ್ಯೂಮರ್ ಇದೆ ಎಂದು ನಂಬಿರುವ ಸಮರ್ಥ್ ಅಮ್ಮನಿಗಾಗಿ ಸದಾ ಮಿಡಿಯುತ್ತಿರುತ್ತಾನೆ.
ತುಳಸಿಯನ್ನು ವ್ಯಂಗ್ಯವಾಗಿ ಮಾತನಾಡಿಸಿದ ಶಾರ್ವರಿ
ಶಾರ್ವರಿ ತುಳಸಿಯನ್ನು ಗಮನಿಸುತ್ತಿದ್ದು, ತುಳಸಿ ಪದೇ ಒದೇ ತಲೆ ಸುತ್ತು, ವಾಂತಿಯನ್ನು ಮಾಡುತ್ತಲೇ ಇದ್ದಾಳೆ. ಕೇಳಿದರೆ ನಿಶ್ಯಕ್ತಿ ಎಂದು ಸುಳ್ಳು ಹೇಳಿ ಮ್ಯಾನೇಜ್ ಮಾಡುತ್ತಿದ್ದಾಳೆ. ಆದರೆ, ಶಾರ್ವರಿ ತುಳಸಿಯ ಆಸ್ಪತ್ರೆ ರಿಪೋರ್ಟ್ ಅನ್ನು ಕದ್ದು ಓದಲು ಯತ್ನಿಸಿದ್ದಾಳೆ. ಸಾಧ್ಯವಾಗಿಲ್ಲವಾದರೂ ತುಳಸಿಯನ್ನು ಯಾಕೆ ಹೀಗೆ ಪದೇ ಪದೇ ತಲೆ ಸುತ್ತು, ವಾಂತಿ ಎನ್ನುತ್ತೀರಾ ಏನಾದರೂ ಗುಡ್ ನ್ಯೂಸ್ ಇದೆಯಾ ಎಂದು ಪ್ರಶ್ನಿಸುತ್ತಾಳೆ. ಈ ಮಾತನ್ನು ಕೇಳಿದ ಸಮರ್ಥ್ ಹುಷಾರಿಲ್ಲ ಎಂಬುದು ಗೊತ್ತಿದ್ದರೂ ಕೂಡ ಹೀಗೆಲ್ಲಾ ವ್ಯಂಗ್ಯ ಮಾಡುತ್ತೀರಲ್ಲ ನೀವೆಲ್ಲಾ ಮನುಷ್ಯರ ಎಂದು ಬೇಸರ ಮಾಡಿಕೊಂಡಿದ್ದಾನೆ. ಮಾಧವ್ ಬಳಿ ಹೋಗಿ ತುಳಸಿ ಅಮ್ಮನನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಕೇಳುತ್ತಾನೆ. ಆದರೆ, ಮಾಧವ್ ಬೇಡ ಎಂದು ಹೇಳುತ್ತಾನೆ.

ಶಾರ್ವರಿಗೆ ಸತ್ಯ ಗೊತ್ತಾಗುತ್ತಾ..?
ಶಾರ್ವರಿಗೆ ರಿಪೋರ್ಟ್ ನೋಡಿ ಸತ್ಯ ಗೊತ್ತಾಗಿದೆಯಾ..? ಅಥವಾ ಬೇಕಂತಲೇ ಹೀಗೆಲ್ಲಾ ಪ್ರಶ್ನಿಸುತ್ತಿದ್ದಾಳಾ ಗೊತ್ತಿಲ್ಲ. ಆದರೆ, ದಿನ ದಿನಕ್ಕೂ ತುಳಸಿ ತಾನು ಗರ್ಭಿಣಿ ಎಂದು ಮುಚ್ಚಿಟ್ಟಷ್ಟೂ ಅವಳಿಗೆ ಕಷ್ಟವಾಗುವುದಂತೂ ಪಕ್ಕಾ ಆಗಿದೆ. ಹಾಗಾಗಿ ಮಾಧವ್ ದಸರಾ ಹಬ್ಬ ಮುಗಿದ ಕೂಡಲೇಯೇ ಅಬಾರ್ಷನ್ ಮಾಡಸೋಣ ಎಂದು ಹೇಳಿದ್ದಾನೆ. ಆದರೆ, ಇದು ತುಳಸಿಗೆ ಕೊಂಚವೂ ಇಷ್ಟವಿಲ್ಲ. ಶಾರ್ವರಿಗೆ ತುಳಸಿ ಗರ್ಭಿಣಿ ಎಂಬ ಸತ್ಯ ಗೊತ್ತಾದರೆ, ಒಟ್ಟಿಗೆ ಖುಷಿ ಖುಷಿಯಾಗಿರುವ ಕುಟುಂಬ ಮತ್ತೆ ಛಿದ್ರ ಛಿದ್ರವಾಗುವುದರಲ್ಲಿ ಅನುಮಾನವಿಲ್ಲ.
ದೀಪಿಕಾಳನ್ನು ಎತ್ತಿಕಟ್ಟಲು ಜುಗ್ಗ ಪ್ಲಾನ್
ಇತ್ತ ದೀಪಿಕಾಳಿಗೆ ಈಗಾಗಲೇ ಪೂರ್ಣಿಮಾ ಮೇಲೆ ಸಾಕಷ್ಟು ಕೋಪ ಬಂದಿದೆ. ತನ್ನ ತಾಯಿ ವನಜಾ ಪ್ರತಿ ದಿನ ಮನೆಗೆ ಬಂದು ಪೂರ್ಣಿಮಾಳನ್ನು ಮಾತನಾಡಿಸಿ ಹೋಗುತ್ತಾರೆ. ತನಗಿಂತಲೂ ಪೂರ್ಣಿಮಾಳನ್ನು ಹೆಚ್ಚು ಪ್ರೀತಿಸುತ್ತಾರೆ ಎಂಬ ಸಿಟ್ಟಿದೆ. ಇದರ ಜೊತೆಗೆ ಪೂರ್ಣಿಮಾ ಅನಾಥೆ ಎಂಬ ತಿರಸ್ಕಾರವಿದೆ. ಇದೀಗ ಸಂಧ್ಯಾಳಿಗೆ ದೀಪಿಕಾ ಐದು ಲಕ್ಷ ಹಣವನ್ನು ಕೊಟ್ಟಿದ್ದು, ಸಂಧ್ಯಾ ಆ ಹಣನ್ನು ತನಗೆ ಹಿಂತಿರುಗಿಸುವಂತೆ ತನ್ನ ಮಾವನನ್ನು ಪೀಡಿಸುತ್ತಿದ್ದಾಳೆ. ಹೀಗಾಗಿ ಈಗ ಜುಗ್ಗ ಜಗನ್ನಾಥ ದೀಪಿಕಾಳನ್ನು ಭೇಟಿ ಮಾಡಿ ಬೇರೆ ಏನಾದರೂ ಪ್ಲಾನ್ ಮಾಡಬೇಕು ಎಂದು ಯೋಚಿಸಿದ್ದಾನೆ.
ಮಗುವನ್ನು ಹೆತ್ತು ಪೂರ್ಣಿಗೆ ಕೊಡುತ್ತಾಳಾ ತುಳಸಿ
ಪೂರ್ಣಿಮಾಳಿಗೆ ಮಗುವಿಲ್ಲ ಎಂಬ ಕೊರಗು ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಮಗು ಬೇಕೇಬೇಕು ಎಂದು ಅವಳ ಮನಸ್ಸು ಮಿಡಿಯುತ್ತಿದ್ದು, ಈಗ ತುಳಸಿ ಗರ್ಭಿಣಿ ಆಗಿದ್ದಾಳೆ. ಮಗುವನ್ನು ಅಬಾರ್ಷನ್ ಮಾಡಿಸಲು ಇಷ್ಟವಿಲ್ಲದ ತುಳಸಿ ಮಗುವನ್ನು ಹೆತ್ತು ಪೂರ್ಣಿಮಾಳಿಗೆ ಕೊಡುತ್ತಾಳಾ ಎಂಬ ಅನುಮಾನ ಶುರುವಾಗಿದೆ. ಮಗು ಹೆತ್ತು ತುಳಸಿ ಪ್ರಾಣ ಬಿಡಬಹುದಾ ಎಂದು ಕೂಡ ವೀಕ್ಷಕರು ಗೆಸ್ ಮಾಡಲು ಪ್ರಾರಂಭಿಸಿದ್ದಾರೆ. ಆದರೆ, ನಿಜ ಸಂಗತಿ ಯಾವುದು ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.


Click it and Unblock the Notifications











