Srirastu Shubhamastu ; ಕುಡಿದು ತೂರಾಡಿದ ನಿಧಿ, ಪೊಲೀಸರಿಂದ ರಕ್ಷಿಸಿದ ತುಳಸಿ ; ಗಾಬರಿಯಾದ ಶಾರ್ವರಿ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಿರಿ ಮೇಲೆ ಬಂದಿದ್ದ ಆರೋಪವನ್ನು ಉಪಾಯವಾಗಿ ದತ್ತ ತಾತ ನಿವಾರಿಸಿದ್ದಾರೆ. ಬಂಗಾರದ ಚೈನ್ ನ ಜುಗ್ಗ ತಪ್ಪೊಪ್ಪಿಕೊಂಡು ವಾಪಸ್ ಕೊಟ್ಟಿದ್ದಾನೆ. ಶಾರ್ವರಿಗೆ ಮಹೇಶ ಪರೋಕ್ಷವಾಗೊ ಕಾಟ ಕೊಡುತ್ತಿದ್ದಾನೆ. ಮಹೇಶನಿಗೆ ಎಲ್ಲವೂ ನೆನಪಿದ್ದು, ಶಾರ್ವರಿ ಎದುರು ಬೇಕಂತಲೇ ನಾಟಕ ಮಾಡುತ್ತಿದ್ದಾನೆ. ಆಗಾಗ ತನಗೆ ಶಾರ್ವರಿ ಹೇಳಿದ ಮಾತುಗಳು ನೆನಪಾದಂತೆ ಮಾಡುತ್ತಾನೆ. ಶಾರ್ವರಿಯನ್ನು ಗೊಂದಲಕ್ಕೆ ಸಿಲುಕಿಸಿದ್ದಾನೆ. ಶಾರ್ವರಿ ಈಗ ಸಂಪೂರ್ಣವಾಗಿ ಹಳಿ ತಪ್ಪುತ್ತಿದ್ದಾಳೆ.
ಗಾಬರಿಯಾಗಿರುವ ಶಾರ್ವರಿಗೆ ಕೆಟ್ಟ ಕನಸು
ಶಾರ್ವರಿ ಸದಾ ಮಹೇಶನ ಬಗ್ಗೆಯೇ ಯೋಚಿಸುವಂತಾಗಿದೆ. ಅದರಲ್ಲೂ ತುಳಸಿ ಬಳಿ ಮಹೇಶ ಮಾತನಾಡುವುದಾಗಿ ಹೇಳಿರುವುದರಿಂದ ಶಾರ್ವರಿ ಫುಲ್ ಗಾಬರಿಯಾಗಿದ್ದಾಳೆ. ತುಳಸಿ ಬಳಿ ಮಹೇಶ ಮಾತನಾಡದಂತೆ ನೋಡಿಕೊಂಡಿದ್ದಾಳೆ. ಮಲಗಿರುವ ಶಾರ್ವರಿಗೆ ಕೆಟ್ಟ ಕನಸು ಬಿದ್ದಿದೆ. ಮಹೇಶ ಅವರ ಅತ್ತಿಗೆಯನ್ನು ಕೊಂದಿದ್ದು, ಶಾರ್ವರಿಯೇ ಎಂದು ಅವಿ ಹಾಗೂ ಅಭಿ ಎದುರು ಹೇಳಿದಂತೆ ಕನಸು ಕಂಡಿದ್ದಾಳೆ. ಆಗ ಶಾರ್ವರಿ ಎದುರು ಅವಿ ಹಾಗೂ ಅಭಿ ಮಾತನಾಡಿದಂತೆ ಆಗುತ್ತದೆ. ಗಾರಿಯಾಗುವ ಶಾರ್ವರಿ ನಿದ್ದೆಯಿಂದ ಏಳುತ್ತಾಳೆ. ಕೆಟ್ಟ ಕನಸಾಗಿದ್ದಕ್ಕೆ ಸ್ವಲ್ಪ ಸಮಾಧಾನ ಮಾಡಿಕೊಂಡರೂ ಕೂಡ, ಮುಂದೊಂದು ದಿನ ಮಹೇಶ ಎಲ್ಲಾ ಸತ್ಯವನ್ನು ಮನೆಯವರಿಗೆ ಹೇಳಬಹುದಾ ಎಂಬ ಅನುಮಾನ ಹೊಕ್ಕಿದೆ. ಮುಂದೆ ಏನು ಮಾಡುತ್ತಾಳೋ ಗೊತ್ತಿಲ್ಲ.

ನಿಧಿಯನ್ನು ಫಾಲೋ ಮಾಡಿದ ತುಳಸಿ
ಇನ್ನು ನಿಧಿ ನಿತ್ಯ ಪಾರ್ಟಿಗೆಂದು ರಾತ್ರಿ ಹೊತ್ತು ಮನೆಯಿಂದ ಹೊರಗೆ ಹೋಗುತ್ತಿದ್ದಾಳೆ. ಆದರೆ, ಈ ವಿಚಾರ ಮನೆಯವರಿಗೆ ಗೊತ್ತಿಲ್ಲ. ಆದರೆ, ತುಳಸಿ ನಿಧಿ ಬಗ್ಗೆ ಕಾಳಜಿ ವಹಿಸಿದ್ದಾಳೆ. ಹಾಗಾಗಿ ಮಗ ಸಮರ್ಥ್ ಗೆ ಸಮಸ್ಯೆನ ಹೇಳಿದ್ದು. ನಿಧಿ ಮನೆಯಿಂದ ಪಾರ್ಟಿಗೆ ಕದ್ದು ಹೊರಟ ಕೂಡಲೇ ಮಗನ ಜೊತೆಗೆ ಫಾಲೋ ಮಾಡಿಕೊಂಡು ಹೋಗಿದ್ದಾಳೆ. ನಿಧಿ ಹಾಗೂ ಅವರ ಸ್ನೇಹಿತರು ಜೀಪ್ ನಲ್ಲಿ ಬೆಂಗಳೂರು ರಸ್ತೆಯಲ್ಲಿ ಸುತ್ತಾಡುತ್ತಿದ್ದಾರೆ. ಅದರಲ್ಲೂ ನಿಧಿ ಮದ್ಯಪಾನ ಮಾಡಿದ್ದಾಳೆ.
ನಿಧಿಯನ್ನು ಕಾಪಾಡಿದ ತುಳಸಿ
ನಿಧಿ ಅಪಾಯದಲ್ಲಿರಬಹುದು ಎಂದು ಭಾವಿಸುವ ತುಳಸಿ ಮತ್ತು ಸಮರ್ಥ್ ಇಬ್ಬರೂ ನಿಧಿಯನ್ನು ಫಾಲೋ ಮಾಡುತ್ತಾರೆ. ನಿಧಿ ಮತ್ತಿನಲ್ಲಿರುತ್ತಾಳೆ. ಪೊಲೀಸರು ಬಂದು ಅವರನ್ನೆಲ್ಲಾ ಅರೆಸ್ಟ್ ಮಾಡಲು ಮುಂದಾಗುತ್ತಾರೆ. ಈ ದೃಶ್ಯವನ್ನು ನೋಡಿದ ಕೂಡಲೇ ಕೆಂಡಾಮಂಡಲವಾಗುವ ತುಳಸಿ ಪೊಲೀಸರ ಬಳಿ ರಿಕ್ವೆಸ್ಟ್ ಮಾಡಿಕೊಂಡು ನಿಧಿಯನ್ನು ಮನೆಗೆ ಕರೆದುಕೊಂಡು ಹೋಗುತ್ತಾಳೆ. ಸಮರ್ಥ್ ತುಳಸಿ ಮತ್ತು ನಿಧಿಯನ್ನು ಸೇಫ್ ಆಗಿ ಕರೆದುಕೊಂಡು ಹೋಗುತ್ತಾನೆ. ಮನೆಯಲ್ಲಿ ಸೋಫಾ ಮೇಲೆ ಮಲಗಿಸಿದಾಗ ಅಲ್ಲಿಗೆ ಶಾರ್ವರಿ ಕೂಡ ಬರುತ್ತಾಳೆ.

ಶಾರ್ವರಿಗೆ ಮಾತು ಕೊಟ್ಟ ತುಳಸಿ
ಶಾರ್ವರಿ ನಿಧಿಯನ್ನು ಕಂಡು ಗಾಬರಿಯಾದರೂ ಕೂಡ ಸಮರ್ಥ್ ಗೆ ನಿನ್ನ ಕೆಲಸ ನೀನು ನೋಡಿಕೋ. ನಿಧಿಯನ್ನು ಸೇಫ್ ಅಗಿ ಕರೆದುಕೊಂಡು ಬಂದಿದ್ದಕ್ಕೆ ಎಷ್ಟು ಹಣ ಬೇಕಿದ್ದರೂ ಕೊಡುತ್ತೀನಿ ಎಂದು ಹೇಳುತ್ತಾಳೆ. ಆಗ ತುಳಸಿ ನಡೆದ ಘಟನೆಯನ್ನು ಹೇಳುತ್ತಾಳೆ. ಮನೆಯವರಿಗೆಲ್ಲಾ ಹೇಳಬೇಡಿ ಎಂದು ತುಳಸಿ ಬಳಿ ಶಾರ್ವರಿ ಮಾತು ತೆಗೆದುಕೊಳ್ಳುತ್ತಾಳೆ. ಈ ಬಾರಿಯೂ ನಿಧಿ ಮನೆಯವರಿಂದ ಬಚಾವ್ ಆಗಿದ್ದಾಳೆ. ಇನ್ನು ಮಾರನೇಯ ದಿನ ಯುಗಾದಿ ಹಬ್ಬ ಹಿನ್ನೆಲೆ ಮಾಧವ ಮತ್ತು ದತ್ತ ತಾತನ ಮನೆಯಲ್ಲಿ ಗಂಡಸರಿಗೆಲ್ಲಾ ಎಣ್ಣೆ ಸ್ನಾನ ನಡೆಯುತ್ತಿದೆ. ಸಮರ್ಥ್ ತನ್ನ ತಾಯಿ ತುಳಸಿಯನ್ನು ನೆನಪಿಸಿಕೊಂಡು ಬೇಸರ ಮಾಡಿಕೊಂಡಿದ್ದಾನೆ. ದತ್ತ ತಾತ ಸಮರ್ಥ್ ಗೆ ಬುದ್ಧಿವಾದ ಹೇಳುತ್ತಾರೆ.


Click it and Unblock the Notifications











