Srirasthu Shubhamasthu ;ಶಾರ್ವರಿಯ ಆಟಗಳಿಗೆ ಬ್ರೇಕ್ ಹಾಕುತ್ತಿರುವ ತುಳಸಿ ; ಅಮ್ಮನ ಸೀಮಂತ ಮಾಡಲು ಚಿಂತನೆ ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಜುಗ್ಗ ಮಾವ ಸುಮ್ಮನೆ ಮನೆಯಲ್ಲಿ ದಂಡಪಿಂಡದಂತಿದ್ದಾನೆ ಎಂದು ಸಂಧ್ಯಾಳಿಗೆ ಕೋಪವಿದೆ. ಏನೇ ಕೆಲಸ ಹೇಳಿದರೂ ಜಗನ್ನಾಥ ತಪ್ಪಿಸಿಕೊಳ್ಳುತ್ತಿರುತ್ತಾನೆ. ಮನೆಯಲ್ಲಿ ಕಷ್ಟವಿದ್ದರೂ ಕೂಡ ತುಳಸಿ ಅಮ್ಮನ ಬಯಕೆಗಳನ್ನು ತೀರಿಸಬೇಕು ಎಂದು ಸಿರಿ ಆಲೋಚಿಸಿದ್ದಾಳೆ. ಹೀಗಾಗಿ ಸಿರಿ, ಸಂಧ್ಯಾ ಮತ್ತು ಸಮರ್ಥ್ ಚರ್ಚೆ ಮಾಡುತ್ತಿರುತ್ತಾರೆ. ಇದಕ್ಕೆಲ್ಲಾ ಸುಮ್ಮನೆ ಹಣ ಖರ್ಚಾಗುತ್ತದೆ. ಮೊದಲೇ ಮನೆಯಲ್ಲಿ ಕಷ್ಟವಿದೆ ಎಂದು ಜಗನ್ನಾಥ ಕೊಂಕು ಆಡಿದಾಗ ಸಂಧ್ಯಾ ನಿಮಗೆ ನಿತ್ಯ ಬಿಟ್ಟಿ ಊಟ ಹಾಕುತ್ತಿದ್ದೇವೆ ಎಂದು ವಾಪಸ್ ಮಾತನಾಡುತ್ತಾಳೆ.

ಮಗನಿಗಾಗಿ ಅಡುಗೆ ತಯಾರಿಸಿದ ತುಳಸಿ

ಇನ್ನು ಅಭಿ ಮತ್ತು ದೀಪಿಕಾ ಬ್ರೇಕ್ ಬೇಕು ಎಂದು ಟ್ರಿಪ್ ಗೆ ತೆರಳಿದ್ದಾರೆ. ಟ್ರಿಪ್ ಎಲ್ಲಾ ಮುಗಿಸಿಕೊಂಡು ಮನೆಗೆ ಬರುತ್ತಿರುವ ಮುದ್ದು ಮಗನಿಗೆ ಅಡುಗೆ ಮಾಡಬೇಕು ಎಂದು ತುಳಸಿ ಪ್ಲಾನ್ ಮಾಡುತ್ತಿರುತ್ತಾಳೆ. ಆದರೆ, ಶಾರ್ವರಿ ಬಂದು ತುಳಸಿಯನ್ನು ಡಿಸ್ಟರ್ಬ್ ಮಾಡಲು ಯತ್ನಿಸುತ್ತಾಳೆ. ಬೇಕಂತಲೇ ತುಳಸಿ ಆಟ ಏನೂ ನಡೆಯುವುದಿಲ್ಲ. ಈ ಮನೆಯಲ್ಲಿ ನಡೆಯುವುದೆಲ್ಲಾ ತನ್ನದೇ ಆಟಗಳು ಎಂದು ಜಂಬದಿಂದ ಮಾತನಾಡುತ್ತಾಳೆ. ಮನೆಯಲ್ಲಿ ಎಲ್ಲರೂ ತನ್ನನ್ನು ನಂಬುವಷ್ಟು ನಿನ್ನನ್ನು ನಂಬುವುದಿಲ್ಲ. ನಾನು ವಿಷ ಕೊಟ್ಟರೂ ಅಮೃತ ಎಂದು ಭಾವಿಸುತ್ತಾರೆ ಎಂದು ಹೇಳುತ್ತಾಳೆ. ತುಳಸಿ ಶಾರ್ವರಿ ಮಾತುಗಳಿಗೆ ಬಗ್ಗುವುದೇ ಇಲ್ಲ.

srirasthu-shubhamasthu-serial-10-december-episode-written-update

ತುಳಸಿ ಕೆಲಸವನ್ನು ಹಾಳು ಮಾಡುತ್ತಾಳಾ ಶಾರ್ವರಿ

ಅಭಿ ಮನೆಗೆ ಬಂದ ಕೂಡಲೇ ಎಲ್ಲರೂ ಊಟಕ್ಕೆ ಕೂರುತ್ತಾರೆ. ಆಗ ಶಾರ್ವರಿ ಬೇಕಂತಲೇ ಅಭಿಗೆ ಇಷ್ಟ ಎಂದು ಪಿಜ್ಜಾ ಆರ್ಡರ್ ಮಾಡಿದ್ದೇನೆ. ಅವನಿಗೆ ಮನೆಯ ಊಟ ಬೇಡ ಎಂದು ಹೇಳುತ್ತಾಳೆ. ಆದರೆ ಅಭಿ ಇಲ್ಲ ಚಿಕ್ಕಮ್ಮ ಮನೆಯಿಂದ ಹೊರಗೆ ಇದ್ದಾಗ ಬರೀ ಪಿಜ್ಜಾ, ಸ್ಯಾಂಡ್ ವಿಚ್ ತಿಂದು ಸಾಕಾಗಿದೆ. ನನಗೆ ಮನೆಯ ಊಟವೇ ಬೇಕು ಎಂದು ಹೇಳಿ ತುಳಸಿಯಿಂದ ಅನ್ನ ಮತ್ತು ಸಾಂಬರ್ ಬಡಿಸಿಕೊಳ್ಳುತ್ತಾನೆ. ಆಗ ತುಳಸಿ ಮನದಲ್ಲೇ ಹಿಗ್ಗುತ್ತಾಳೆ. ಇನ್ನು ಕಂಪನಿಯ ಅಕೌಂಟ್ ಬಗ್ಗೆ ಶಾರ್ವರಿಯೇ ನೋಡಿಕೊಲ್ಳುತ್ತಿದ್ದಳು. ಇನ್ಮುಂದೆ ಅವಳಿಗೆ ರೆಸ್ಟ್ ಬೇಕು ಎಂಬ ಕಾರಣಕ್ಕೆ ಅದನ್ನು ಅಭಿಗೆ ವಹಿಸಲಾಗಿದೆ ಎಂದು ಮಹೇಶ ಹೇಳುತ್ತಾನೆ. ಈ ಮಾತನ್ನು ಕೇಳಿದ ಶಾರ್ವರಿಗೆ ಬೇಸರವಾಗುತ್ತದೆ. ಆದರೆ, ಈ ಐಡಿಯಾ ಕೊಟ್ಟಿದ್ದೇ ತುಳಸಿ ಎಂದು ಕೇಳಿ ಅಭಿ ಖುಷಿ ಪಡುತ್ತಾನೆ.


ಸೇರಿಗೆ ಸವಾ ಸೇರು ಎಂದ ತುಳಸಿ

ಎಲ್ಲರ ಊಟ ಮುಗಿದ ಬಳಿಕ ತುಳಸಿ ಒಬ್ಬಳೇ ಇರುವಾಗ ಶಾರ್ವರಿ ಹೆದರಿಸಲು ಯತ್ನಿಸುತ್ತಾಳೆ. ಈ ಮನೆಯಲ್ಲಿ ನೀನು ಏನೇನು ಅಲ್ಲ. ಎಚ್ಚರವಾಗಿರು, ನಿನ್ನ ಮಕ್ಕಳು ಹಾಗೂ ಗಂಡನ ನೆಮ್ಮದಿಯನ್ನು ಹಾಳು ಮಾಡುತ್ತೇನೆ. ನೋಡಿ ದುಃಖ ಪಡುವುದೊಂದೇ ನಿನ್ನ ಕೈಯಲ್ಲಿ ಆಗುವ ಕೆಲಸ ಎಂದು ಹೇಳುತ್ತಾಳೆ. ಶಾರ್ವರಿ ಮಾತಿಗೆ ಹೆದರದ ತುಳಸಿ ಹಾಗೆಲ್ಲಾ ಬಾವಿಸಬೇಡ. ಮನೆಯವರನ್ನು ಸಂತೋಷವಾಗಿ ಇಡುವುದು ನನ್ನ ಕೆಲಸ ನಾಳೆಯೇ ಎಲ್ಲರೂ ಮನೆಯಲ್ಲಿ ಸಂಭ್ರಮದಿಂದ ಇರುತ್ತಾರೆ. ಅದನ್ನು ನೋಡಿ ಹೊಟ್ಟೆ ಉರಿದುಕೋ ಎಂದು ಹೇಳುತ್ತಾಳೆ.


ಸೀಮಂತದ ಹೆಸರಲ್ಲಿ ತುಳಸಿ ಚಾಲೆಂಜ್

ಶಾರ್ವರಿ ಎದುರಿಗೆ ಚಾಲೆಂಜ್ ಹಾಕಿದ ತುಳಸಿಗೆ ಮನೆಯಲ್ಲಿ ಸಂತಸವಾಗುವಂತೆ ಏನು ಮಾಡುವುದು ಎಂದು ಯೋಚಿಸುತ್ತಾಲೆ. ತಕ್ಷಣ ಅವಳ ಹೊಟ್ಟೆಯಲ್ಲಿ ಮಗುವಿರುವುದನ್ನು ನೆನದು, ಸೀಮಂತ ಕಾರ್ಯ ಮಾಡಿಸಿಕೊಂಡರೆ ಮನೆಯವರೆಲ್ಲಾ ಸಂಭ್ರಮದಿಂದ ಓಡಾಡಿಕೊಂಡು ಇರುತ್ತಾರೆ ಎಂದು ಆಲೋಚಿಸುತ್ತಾಳೆ. ಒಟ್ನಲ್ಲಿ ಏನಾದರೂ ಆಗಲಿ ತಾನು ಶಾರ್ವರಿಯನ್ನು ಗೆಲ್ಲಲು ಬಿಡಬಾರದು ಎಂದು ತನ್ನಲ್ಲಿ ತಾನೇ ಚಾಲೆಂಜ್ ಹಾಕಿಕೊಂಡಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X