Srirasthu Shubhamasthu ; ಜುಗ್ಗ ಜಗನ್ನಾಥನಿಗೆ ಮಾಧವನಿಂದ ಕಪಾಳ ಮೋಕ್ಷ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಮನೆಯಲ್ಲಿ ಭಾಗ ಕೇಳಿದ್ದು, ಸದ್ಯ ಕಂಪನಿಯ ಆನಿವರ್ಸರಿ ಮುಗಿಯುವವರೆಗೂ ಯಾವುದೇ ಸಮಸ್ಯೆ ಇಲ್ಲ.ಆದರೆ, ಕಾರ್ಯಕ್ರಮ ಮುಗಿದ ಬಳಿಕ ಮನೆಯನ್ನು ಅಭಿಗೆ ಬೇಕಾದಂತೆ ಭಾಗ ಮಾಡಬೇಕಿದೆ. ತುಳಸಿ ಬೇರೆ ಮನೆಯಲ್ಲಿ ಭಾಗ ಕೇಳಬೇಡ ನಾನು ಮನೆಬಿಟ್ಟು ಹೋಗುತ್ತೇನೆ ಎಂದಿದ್ದಾಳೆ. ತುಳಸಿ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದು, ದತ್ತ ತಾತನ ಮನೆಯಲ್ಲೇ ನೆಲೆಸಬೇಕು ಎಂದುಕೊಂಡಿದ್ದಾಳೆ. ಆದರೆ, ಅಂತಹ ಸಂದರ್ಭ ಬಂದರೆ, ಮಾಧವ್ ಏನು ಮಾಡುತ್ತಾನೋ ಗೊತ್ತಿಲ್ಲ.


ಜುಗ್ಗ ಜಗನ್ನಾಥನ ಪ್ಲಾನ್ ಅರಿತ ಮಾಧವ್

ಜುಗ್ಗ ಜಗನ್ನಾಥ ಮತ್ತು ಸಂಧ್ಯಾ ದತ್ತ ತಾತನ ಮನೆಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಮಾಧವ್ ಮತ್ತು ತುಳಸಿ ಇಬ್ಬರೂ ದತ್ತ ತಾತನ ಮನೆಗೆ ಬರುವ ದಾರಿಯಲ್ಲಿ ಮಾಧವ್ ಅಂಗಡಿಗೆ ಬಂದಿದ್ದು, ಅಲ್ಲಿ ಜುಗ್ಗ ಜಗನ್ನಾಥ ದತ್ತನ ಡೆತ್ ಸರ್ಟಿಫಿಕೇಟ್ ಬಗ್ಗೆ ಮಾತನಾಡುತ್ತಿರುತ್ತಾನೆ. ಈ ಮಾತನ್ನು ಕೇಳಿಸಿಕೊಂಡ ಮಾಧವ್ ಗೆ ಬೇಸರವಾಗುತ್ತದೆ. ದತ್ತ ತಾತನ ಮನೆಗೆ ಹೋದಾಗ ಜುಗ್ಗ ಮತ್ತು ಸಂಧ್ಯಾ ಡೆತ್ ಸರ್ಟಿಫಿಕೇಟ್ ಅನ್ನು ಕೈಯಲ್ಲಿ ಹಿಡಿದುಕೊಂಡಿರುತ್ತಾರೆ. ಅದನ್ನು ನೋಡಿ ಮಾಧವ್ ಏನೆಂದು ಕೇಳಿದ್ದಕ್ಕೆ ಜುಗ್ಗ ವೇಸ್ಟ್ ಹಾಳೆಗಳು ಗಾಳಿ ಬೀಸಿಕೊಳ್ಳಲು ತಂದೆ ಎನ್ನುತ್ತಾನೆ. ಆದರೆ ಮಾಧವನಿಗೆ ಅದು ದತ್ತ ತಾತನ ನಕಲಿ ಡೆತ್ ಸರ್ಟಿಫಿಕೇಟ್ ಎಂಬುದು ಗೊತ್ತಿರುತ್ತದೆ. ತನಗೂ ಸೆಕೆ ಆಗುತ್ತಿದೆ ಎಂದು ಆ ಪೇಪರ್ಗಳನ್ನು ತೆಗೆದುಕೊಂಡು ಅರಿದು ಹಾಕುತ್ತಾರೆ.

srirasthu-shubhamasthu-serial-10-june-episode-written-update

ಜುಗ್ಗನಿಗೆ ಕಪಾಳ ಮೋಕ್ಷ ಮಾಡಿದ ಮಾಧವ್

ಆಗ ಜುಗ್ಗ ಜಗನ್ನಾಥ ಸಂಕಟ ಪಡುತ್ತಾ ಟೆರೆಸ್ ಮೇಲೆ ಹೋಗುತ್ತಾರೆ. ಹಿಂದೆಯೇ ಹೋದ ಮಾಧವ್ ಜುಗ್ಗನ ಕೆನ್ನೆಗೆ ಭಾರಿಸುತ್ತಾರೆ. ಎಲ್ಲರಿಗೂ ಒಳ್ಳಯದನ್ನೇ ಬಯಸುವ ದತ್ತ ತಾತನ ನಕಲಿ ಡೆತ್ ಸರ್ಟಿಫಿಕೇಟ್ ಮಾಡಿಸಿ, ಅವರಿಗೆ ಮೋಸ ಮಾಡಲು ಹೊರಟಿದ್ದೀಯಾ. ಆಸರೆ ಕೊಟ್ಟವರ ಬೆನ್ನಿಗೆ ಚೂರಿ ಹಾಕುವಂತಹ ಕೆಲಸ ಮಾಡುತ್ತಿದ್ದೀಯಾ ಎಂದು ಬೈಯುತ್ತಾರೆ. ನಿನ್ನಿಂದ ಈ ಮನೆಗೆ ಇನ್ಮುಂದೆ ಯಾವುದೇ ಸಮಸ್ಯೆ ಆಗಬಾರದು. ಹಾಗೇನಾದರೂ ಆದರೆ, ಜೈಲಿಗೆ ಹಾಕುತ್ತೇನೆ ಎಂದು ಹೆದರಿಸುತ್ತಾರೆ. ಜುಗ್ಗ ಜಗನ್ನಾಥ ಹೆದರಿಕೊಳ್ಳುತ್ತಾರೆ.

ಕಂಪನಿ ಆನಿವರ್ಸರಿಗೆ ಆಹ್ವಾನ ನೀಡಿದ ತುಳಸಿ

ಇನ್ನು ತುಳಸಿ ಮನೆಯಲ್ಲಿ ಕ್ಯಾರೆಟ್ ಹಲ್ವಾ ಮಾಡಿ, ಎಲ್ಲರನ್ನೂ ಕಂಪನಿಯ ವಾರ್ಷಿಕೋತ್ಸವ ಸಮಾರಂಭಕ್ಕೆ ಬರಬೇಕು ಎಂದು ಆಹ್ವಾನಿಸುತ್ತಾಳೆ. ಎಲ್ಲರೂ ಖುಷಿಯಿಂದ ಬರಲು ಒಪ್ಪಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ, ತುಳಸಿಯೇ ಕಾರು ಡ್ರೈವ್ ಮಾಡುತ್ತಾಳೆ ಎಂಬ ಮಾತನ್ನು ಕೇಳಿ ಎಲ್ಲರೂ ಆಶ್ಚರ್ಯ ಪಡುತ್ತಾರೆ. ತುಳಸಿ ಎಲ್ಲರನ್ನೂ ಕೂರಿಸಿಕೊಂಡು ಒಂದು ರೌಂಡ್ ಹೋಗಿ ಬರುತ್ತಾಳೆ. ಆಗ ದತ್ತ ತಾತ ಅಂತೂ ಬಹಳ ಖುಷಿ ಪಡುತ್ತಾರೆ. ಡ್ರೈವಿಂಗ್ ಎಲ್ಲಿ ಕಲಿತೆ..? ಯಾರು ಹೇಳಿಕೊಟ್ಟಿದ್ದು ಎಂದು ಸಂಧ್ಯಾ ಕೇಳಿದ್ದಕ್ಕೆ, ತುಳಸಿ ಸಮರ್ಥ್ ಕಡೆ ನೋಡಿ ನಗುತ್ತಾಳೆ.

srirasthu-shubhamasthu-serial-10-june-episode-written-update


ಅಣ್ಣನಿಗೂ, ಅಪ್ಪನಿಗೂ ಅಭಿಯೇ ಡ್ಯಾನ್ಸ್ ಮಾಸ್ಟರ್

ಇತ್ತ ಕಂಪನಿಯ ವಾರ್ಷಿಕೋತ್ಸವ ಸಮಾರಂಭಕ್ಕೆ ಮಾಧವ್ ಮನೆಯಲ್ಲಿ ಸಕಲ ತಯಾರಿಗಳೂ ನಡೆಯುತ್ತಿವೆ. ಎಲ್ಲರೂ ಡ್ಯಾನ್ಸ್ ಕಲಿತು, ಸ್ಟೆಪ್ಸ್ ಹಾಕಲು ಪ್ರ್ಯಾಕ್ಟೀಸ್ ಮಾಡುತ್ತಿರುತ್ತಾರೆ. ಅಭಿಗೆ ಡ್ಯಾನ್ಸ್ ಬರುವುದರಿಂದ ಈಗ ಮಾಧವ್ ಮತ್ತು ಅವಿನಾಶ್ ಇಬ್ಬರಿಗೂ ಅವನೇ ಡ್ಯಾನ್ಸ್ ಹೇಳಿಕೊಡುತ್ತಿದ್ದಾನೆ. ಮಹೇಶ ಕೂಡ ಡ್ಯಾನ್ಸ್ ಹೇಳಿಕೊಡುವ ಜವಾಬ್ದಾರಿಯನ್ನು ಅಭಿಗೆ ಒಪ್ಪಿಸಿದ್ದಾನೆ. ಅಭಿ ಬೇರೆ ದಾರಿ ಇಲ್ಲದೇ, ಒಪ್ಪಿಕೊಂಡಿದ್ದು, ಅವನ ಗಮನವೆಲ್ಲಾ ಮನೆ ಭಾಗ ಮಾಡುವುದರಲ್ಲೇ ಇದೆ.

More from Filmibeat

English summary
Madhav comes to know about jugga’s plan and warns him
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X