Srirasthu Shubhamasthu ; ಮಾವನ ಕೆನ್ನೆಗೆ ಭಾರಿಸಿದ ಸಂಧ್ಯಾ : ಮಗಳು ಸಿಕ್ಕ ಖುಷಿಯಲ್ಲಿ ವನಜಾ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಗೌರಿ-ಗಣೇಶ ಹಬ್ಬವನ್ನು ಅದ್ಧೂರಿಯಾಗಿಯೇ ಆಚರಿಸಲಾಯ್ತು. ಮುತ್ತೈದೆಯರಿಗೆ ಬಾಗಿಣ ಕೊಟ್ಟು ಪೂಜೆ ಸಂಪೂರ್ಣ ಮಾಡಿದರು.ಆಫೀಸ್ ನೌಕರರಿಗೆ ಬಂದ ಲಾಭದಲ್ಲಿ ಬೋನಸ್ ಹಣವನ್ನು ಕೊಟ್ಟು ಖುಷಿ ಪಡಿಸಿದರು. ತುಳಸಿ ಮತ್ತು ಅಭಿ ನಿಧಾನವಾಗಿ ಒಂದಾಗುತ್ತಿದ್ದು, ಮನೆಯವರಿಗೂ ಇದು ಖುಷಿ ಕೊಟ್ಟಿದೆ. ಅಭಿ ತುಳಸಿಯತ್ತ ವಾಲುತ್ತಿರುವುದನ್ನು ಕಂಡು ಶಾರ್ವರಿ ಮತ್ತು ದೀಪಿಕಾ ಕಂಡು ಗಾಬರಿಯಾಗಿದ್ದಾರೆ. ಅವಿ ತುಳಸಿಯನ್ನು ಅಮ್ಮ ಎಂದು ಒಪ್ಪಿದ್ದಾಗಿದೆ. ಅಭಿ ಕೂಡ ಒಪ್ಪಿಕೊಂಡರೆ ತಮ್ಮ ಪ್ಲಾನ್ ಉಲ್ಟಾ ಆಗುತ್ತೆ ಎಂದು ಆತಂಕಗೊಂಡಿದ್ದಾರೆ.

ಸಮರ್ಥ್, ಅಭಿ ನಡುವೆ ತುಳಸಿ ಪೀಕಲಾಟ

ಅಭಿಗೆ ತುಳಸಿ ಇತ್ತೀಚೆಗೆ ಹತ್ತಿರವಾಗುತ್ತಿದ್ದಾಳೆ. ಅಭಿ ನಡೆದುಕೊಳ್ಳುತ್ತಿರುವ ರೀತಿಯನ್ನು ಸಮರ್ಥ್ ಒಪ್ಪಿಕೊಳ್ಳಲು ತಯಾರಿಲ್ಲ. ಯಾಕೆಂದರೆ ತನ್ನ ತಾಯಿಯನ್ನು ಅವಿ ಮತ್ತು ಅಭಿ ಕಿತ್ತುಕೊಂಡಿದ್ದಾರೆ ಎಂಬ ಭಾವನೆಯಲ್ಲಿದ್ದಾನೆ. ಆದರೆ ಅಭಿ ಜೊತೆಗೆ ತುಳಸಿ ದತ್ತ ತಾತನ ಮನೆಗೆ ಬಂದಿದ್ದು ಸಮರ್ಥ್ ಹೊಟ್ಟೆಗೆ ಬೆಂಕಿ ಹಾಕಿದಂತೆ ಆಗಿದೆ. ತುಳಸಿ ಜೊತೆಗೆ ಇದ್ದರೆ ಸಮರ್ಥ್ ಗೆ ಇರಿಟೇಟ್ ಆಗುತ್ತೆ ಎಂಬುದನ್ನು ತಿಳಿದ ಅಭಿ ಬೇಕಂತಲೇ ಸಮರ್ಥ್ ಹೊಟ್ಟೆ ಉರಿಸುತ್ತಿದ್ದಾನೆ. ತುಳಸಿಗೆ ತಿಂಡಿ ತಿನ್ನಿಸಲು ಹೇಳಿ ಸಮರ್ಥ್ ಗೆ ಇನ್ನಷ್ಟು ಇರಿಟೇಟ್ ಮಾಡಿದ್ದಾನೆ. ಅಭಿ ತುಳಸಿಗೆ ಹೊಂದಿಕೊಳ್ಳುವುದನ್ನು ನೋಡಿದ ಮಾಧವ್ ಖುಷಿಪಟ್ಟಿದ್ದಾನೆ.

srirasthu shubhamasthu serial 10 September episode written update


ಪೂರ್ಣಿಮಾ ಬಗ್ಗೆ ಸತ್ಯ ತಿಳಿದ ವನಜಾ

ಇನ್ನು ಪೂರ್ಣಿಮಾ ಯಾರ ಮಗು ಎಂಬುದು ಮಾಧವ್ ಮತ್ತು ತುಳಸಿಗೆ ಸ್ಪಷ್ಟವಾಗಿ ತಿಳಿದಿದೆ. ಜನಾರ್ಧನ್ ಮತ್ತು ವನಜಾ ಮಗಳೇ ಪೂರ್ಣಿಮಾ ಎಂಬ ಸತ್ಯ ತಿಳಿದಿದೆ. ಆದರೆ, ಜನಾರ್ಧನ್ ಕೆಟ್ಟ ಬುದ್ಧಿಗೆ ಪೂರ್ಣಿಮಾ ಬಳಕೆ ಆಗಬಾರದು ಎಂದು ಸತ್ಯವನ್ನು ಮುಚ್ಚಿಟ್ಟಿದ್ದಾರೆ. ನನ್ನ ಮಗಳು ಎಲ್ಲಿದ್ದಾಳೋ ಎಂದು ನಿತ್ಯ ಕೊರಗುವ ವನಜಾ ಅನ್ನಪೂರ್ಣಾಳನ್ನು ಭೇಟಿಯಾಗಿದ್ದು, ಪೂರ್ಣಿಮಾಳ ಬಗ್ಗೆ ಸತ್ಯವನ್ನು ತಿಳಿದುಕೊಂಡಿದ್ದಾಳೆ. ತನ್ನ ಮಗಳೇ ಪೂರ್ಣಿಮಾ ಹಾಗಾಗಿ ಅವಳ ಕೊರಳಲ್ಲಿ ಆ ಸರವಿದೆ ಎಂಬುದು ವನಜಾಳೀಗೆ ಗೊತ್ತಿದ್ದರೂ ಸತ್ಯ ಅರ್ಥವಾಗಿರಲಿಲ್ಲ. ಈಗ ಸತ್ಯ ತಿಳಿದಿದ್ದು ಖುಷಿಯಾಗಿದ್ದಾಳೆ.

ಮಗಳು ಸಿಕ್ಕ ಖುಷಿಯಲ್ಲಿರುವ ವನಜಾ

ತುಳಸಿಯನ್ನು ಭೇಟಿಯಾಗಿ ಸ್ವೀಟ್ ಬಾಕ್ಸ್ ಕೊಟ್ಟು ನನಗೆ ನನ್ನ ಮಗಳು ಸಿಕ್ಕಿದಳು ಎಂದು ಹೇಳುತ್ತಾಳೆ. ಈ ಮಾತನ್ನು ಕೇಳುತ್ತಿದ್ದಂತೆ ತುಳಸಿಗೆ ಗಾಬರಿಯಾಗುತ್ತದೆ. ಯಾರು, ಎಲ್ಲಿದ್ದಾರೆ ಎಂದು ವಿಚಾರಿಸಿದ್ದಕ್ಕೆ, ಎದುರಿಗಿರುವ ಪೂರ್ಣಿಮಾಳೇ ತನ್ನ ಮಗಳು ಎಂಬ ಸತ್ಯವನ್ನು ಹೇಳುತ್ತಾಳೆ. ಅಲ್ಲದೇ ಅನ್ನಾಪೂರ್ಣ ಅವರು ಹೇಳಿದ್ದನ್ನು ಹೇಳಿ ತುಳಸಿಗೆ ನಿಮಗೆ ಈ ಸತ್ಯ ಗೊತ್ತಿತ್ತು. ಆದರೂ ನನ್ನಿಂದ ಮುಚ್ಚಿಟ್ಟಿದ್ದಿರಿ ಎನ್ನುತ್ತಾಳೆ. ಆಗ ತುಳಸಿ ತಾನು ಸತ್ಯವನ್ನು ಮುಚ್ಚಿಡಲು ಕಾರಣ ಜನಾರ್ಧನ್ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆ. ನನ್ನನ್ನು ಕ್ಷಮಿಸಿ ಬಿಡಿ ಎಂದು ತುಳಸಿ ಕ್ಷಮೆ ಕೇಳುತ್ತಾಳೆ. ಆಗ ವನಜಾ ಅದು ನಿಜವೇ ನನ್ನ ಮಗಳು ನನಗೆ ಸಿಕ್ಕಳಲ್ಲ ಅಷ್ಟೇ ಸಾಕು. ಈ ಸತ್ಯವನ್ನು ಯಾರಿಗೂ ಹೇಳುವುದು ಬೇಡ ಎಂದು ನಿರ್ಧರಿಸುತ್ತಾರೆ.

srirasthu-shubhamasthu-serial-10-september-episode-written-update

ಮಾವನಿಗೆ ಕಪಾಳಮೋಕ್ಷ ಮಾಡಿದ ಸಂಧ್ಯಾ

ಇತ್ತ ಸಂಧ್ಯಾ ಕೆಲಸವನ್ನು ಹುಡುಕುತ್ತಿರುತ್ತಾಳೆ. ಲ್ಯಾಪ್ ಟಾಪ್ ಹಿಡಿದು ರೆಸ್ಯೂಮ್ ಮೇಲ್ ಮಾಡುತ್ತಿರುವುದನ್ನು ನೋಡಿ ಜುಗ್ಗ ಜಗನ್ನಾಥ ಹೊಸ ಐಡಿಯಾ ಕೊಡುತ್ತಾನೆ. ಮಾಧವ್ ಈಗ ನಿನ್ನ ತಂದೆ. ಅವರ ಬಳಿ ಹೋಗಿ ಆಸ್ತಿಯಲ್ಲಿ ಪಾಲು ಕೇಳು. ಆಗ ದೀಪಿಕಾ ಸಾಲವೂ ತೀರುತ್ತದೆ. ನೀನು ಕೆಲಸ ಮಾಡುವ ಅಗತ್ಯವೂ ಇರುವುದಿಲ್ಲ ಎನ್ನುತ್ತಾನೆ. ಈ ಮಾತನ್ನು ಕೇಳುತ್ತಿದ್ದಂತೆ ಸಂಧ್ಯಾ ಮಾವನ ಕೆನ್ನೆಗೆ ಹೊಡೆದು. ಮತ್ತೆ ಇಂತಹ ನೀಚ ಆಲೋಚನೆಗಳನ್ನು ಮಾಡಬೇಡಿ ಎಂದು ಬುದ್ಧಿ ಹೇಳುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X