Srirasthu Shubhamasthu ; ತನ್ನ ಬಗ್ಗೆ ಸತ್ಯ ತಿಳಿದ ದತ್ತ ತಾತನನ್ನು ಕೊಲ್ಲಲು ಶಾರ್ವರಿ ಪ್ಲಾನ್ !

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದೀಪಿಕಾ ಪೂರ್ಣಿಯನ್ನು ಪಾರ್ಟಿಯಲ್ಲಿ ಅವಮಾನ ಮಾಡಿದ್ದಕ್ಕೆ ತುಳಸಿ ಮತ್ತು ಅಭಿ ಧೈರ್ಯ ತುಂಬುತ್ತಾರೆ.ಇದನ್ನೇ ಚಾಲೆಂಜಿಂಗ್ ಆಗಿ ಸ್ವೀಕರಿಸಿದ ಪೂರ್ಣಿಮಾ ಅದೇ ಪಾರ್ಟಿಗೆ ಪಾರ್ಟಿ ವೇರ್ ಸೀರೆಯನ್ನು ಧರಿಸಿ ಬರುತ್ತಾಳೆ. ದೀಪಿಕಾಳಿಗೆ ವಾಪಸ್ ಅವಮಾನ ಆಗುವಂತೆ ಮಾಡುತ್ತಾಳೆ. ಅಲ್ಲದೇ, ಪೂರ್ಣಿ ಜೊತೆಗೆ ಹಾಗೆ ದೀಪಿಕಾ ನಡೆದುಕೊಂಡಿದ್ದಕ್ಕೆ ಅಭಿ ಬೇಸರ ಮಾಡಿಕೊಂಡಿರುತ್ತಾನೆ. ದೀಪಿಕಾ ಮಾತನಾಡಿಸಿದರೂ ಮಾತನಾಡದೇ ಬರುತ್ತಾನೆ. ಆಗ ದೀಪಿಕಾ ನನ್ನ ತಂಗಿ ಅವಳ ಜೊತೆಗೆ ನೀನು ಹೀಗೆಲ್ಲಾ ನಡೆದುಕೊಳ್ಳಬೇಡ ಎಂದು ಪೂರ್ಣಿ ಬುದ್ಧಿ ಹೇಳುತ್ತಾಳೆ.

ಮನೆಯಲ್ಲಿ ನಿಧಿ ಮದುವೆಯ ಸಂಭ್ರಮ

ಮನೆಯಲ್ಲಿ ನಿಧಿ ಮದುವೆಯ ಶಾಸ್ತ್ರಗಳು ಜೋರಾಗಿ ನಡೆಯುತ್ತಿರುತ್ತದೆ. ಪಾರ್ಟಿ ಮುಗಿದ ಮಾರನೇಯ ದಿನ ನಿಧಿಗೆ ಮೆಹಂದಿ ಶಾಸ್ತ್ರಕ್ಕೆ ತಯಾರಿ ನಡೆಯುತ್ತಿರುತ್ತದೆ. ಮನೆಯಲ್ಲಿ ಎಲ್ಲರೂ ಕೂಡ ಸಂಭ್ರಮದಿಂದ ಇರುತ್ತಾರೆ. ಪೂರ್ಣಿಮಾಳೇ ಮೆಹಂದಿ ಹಾಕುತ್ತಿರುತ್ತಾಳೆ. ನಿಧಿ ಸ್ನೇಹಿತರಿಗೆ ಹೊರಗಡೆ ಪಾರ್ಟಿ ಕೊಡಿಸಬೇಕು ಎಂದು ಪ್ಲಾನ್ ಮಾಡಿರುತ್ತಾಳೆ. ಹಾಗಾಗಿ ಮೆಹಂದಿ ಶಾಸ್ತ್ರ ಮುಗಿದ ಬಳಿಕ ಮನೆಯವರಿಗೆ ಗೊತ್ತಿಲ್ಲದಂತೆ ಹೊರಗೆ ಹೋಗಲು ನಿರ್ಧರಿಸಿರುತ್ತಾಳೆ.

srirasthu shubhamasthu serial 11 January episode written update

ದತ್ತ ತಾತನನ್ನು ಮುಗಿಸಲು ಶಾರ್ವರಿ ಪ್ಲಾನ್

ಶಾರ್ವರಿಯ ಬಣ್ಣವನ್ನು ಬಯಲು ಮಾಡಲೇಬೇಕು ಎಂದು ತುಳಸಿ ಪಣ ತೊಟ್ಟಿದ್ದಾಳೆ. ದತ್ತ ಮಾವನ ಜೊತೆಗೆ ಸೇರಿ ಶಾರ್ವರಿಯ ಕುಟುಂಬದ ಬಗ್ಗೆ ವಿಚಾರಿಸಲು ಮುಂದಾಗಿದ್ದಾಳೆ. ತುಳಸಿ ತನ್ನ ಬದುಕಿನ ಗುರಿಯನ್ನೇ ದಿಕ್ಕಾಪಾಲಾಗುತ್ತದೆ. ತನ್ನ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲದೇ, ಮಾಧವ್ ಕುಟುಂಬ ಸರ್ವನಾಶ ಆಗಬೇಕು. ಅವರೆಲ್ಲಾ ಸದಾ ದುಃಖದಲ್ಲಿರಬೇಕು ಎಂದು ಆಸೆ ಪಟ್ಟಿದ್ದೀನಿ. ಆದರೆ, ಈ ದತ್ತ ಮತ್ತು ತುಳಸಿ ಸೇರಿಕೊಂಡು ತನ್ನ ಹಲವು ವರ್ಷಗಳ ಪ್ಲಾನ್ ಅನ್ನು ಹಾಳು ಮಾಡುತ್ತಿದ್ದಾರೆ ಎಂದು ಗಾಬರಿಯಾಗಿರುತ್ತಾಳೆ. ಅಲ್ಲದೇ ದತ್ತ ತಾತ ಈಗಾಗಳೇ ತಾವರೆಕೆರೆಗೆ ಹೋಗಿ ತನ್ನ ಕುಟುಂಬದ ಬಗ್ಗೆ ವಿಚಾರಿಸಿದ್ದಾರೆ. ಈಗ ತನ್ನ ಬಗ್ಗೆ ಅವರಿಗೆ ಸತ್ಯ ಗೊತ್ತಾಗಿದ್ದು, ಮನೆಯವರಿಗೆ ಹೇಳಿದರೆ ಕಷ್ಟವಾಗುತ್ತದೆ. ದತ್ತ ತಾತ ಸತ್ಯ ಹೇಳಿದರೆ, ಇನ್ನು ಈ ಮನೆಯಲ್ಲಿ ತನಗೆ ಉಳಿಗಾಲ ಇರುವುದಿಲ್ಲ. ಹಾಗಾಗಿ ಶಾರ್ವರಿ ದತ್ತ ತಾತನನ್ನು ಮುಗಿಸಬೇಕು ಎಂದು ಆಲೋಚಿಸಿದ್ದಾಳೆ.


ಪಾರ್ಟಿಗೆ ಹೋದ ನಿಧಿಯಿಂದ ಎಡವಟ್ಟು

ಮನೆಯಲ್ಲಿ ಎಲ್ಲರೂ ಮಲಗಿದ ಬಳಿಕ ನಿಧಿ ರೆಡಿಯಾಗಿ ಪಾರ್ಟಿಗೆ ಹೊರಡುತ್ತಾಳೆ. ಆಗ ಸಮರ್ಥ್ ನಿಧೀಯನ್ನು ನೋಡಿ ಎಲ್ಲಿಗೆ ಹೋಗುತ್ತಿದ್ದೀರಾ ಎಂದು ವಿಚಾರಿಸಿದ್ದಕ್ಕೆ, ಲಾನ್ ನಲ್ಲಿ ವಾಕ್ ಮಾಡಲು ಹೋಗುತ್ತಿದ್ದೇನೆ ಎಂದು ಯಾಮಾರಿಸುತ್ತಾಳೆ. ನಿಧಿ ಪಾರ್ಟಿಗೆ ಹೋಗಿ ಪಾರ್ಟಿ ಮುಗಿಸಿ ಬರುವಾಗ ಎಡವಟ್ಟೊಂದನ್ನು ಮಾಡಿಕೊಂಡಿದ್ದಾಳೆ. ಪ್ರೊಮೋದಲ್ಲಿ ತೋರಿಸಿದಂತೆ ನಿಧಿ ಕಾರು ಓಡಿಸುವಾಗ ಗಮನ ಬೇರೆಡೆ ಕೊಟ್ಟು ಅಪಘಾತವನ್ನು ಮಾಡಿದ್ದಾಳೆ.


ನಿಧಿ ಕಾರಿಗೆ ಸಿಕ್ಕಿದ ದತ್ತ ತಾತ

ದತ್ತ ತಾತ ಮತ್ತು ಸಿರಿ ತಂದೆ ಇಬ್ಬರೂ ತಾವರೆಕೆರೆಯಿಂದ ಮನೆ ಕಡೆಗೆ ಹೋಗುತ್ತಿರುತ್ತಾರೆ. ಅದೇ ದಾರಿಯಲ್ಲಿ ಕಾರು ಓಡಿಸಿಕೊಂಡು ಬರುವ ನಿಧಿ ಅಪಘಾತ ಮಾಡುತ್ತಾಳೆ. ದತ್ತ ತಾತನಿಗೆ ಕಾರು ಗುದ್ದ ಬಾರದು ಎಂದು ತಾತನನ್ನು ತಳ್ಳುವ ಸಿರಿ ತಂದೆ ಕಾರಿಗೆ ಸಿಗುತ್ತಾರೆ. ಅಪಘಾತದಲ್ಲಿ ಇಬ್ಬರೂ ಪ್ರಜ್ಞೆ ತಪ್ಪಿ ಬಿದ್ದಿದ್ದು, ಇದನ್ನು ಲೆಕ್ಕಿಸದೇ, ನಿಧಿ ಅಲ್ಲಿಂದ ಹೊರಡುತ್ತಾಳೆ. ಈ ಅಪಾಘಾತದಲ್ಲಿ ಸತ್ತವರು ಯಾರು..? ಅಲ್ಲಿಗೆ ಶಾರ್ವರಿಯ ನಿಜವಾದ ಬಣ್ಣ ಬಯಲಾಗುವುದಿಲ್ಲವಾ..? ತುಳಸಿ ಏನು ಮಾಡುತ್ತಾಳೆ. ಮುಂದೆ ಏನು ಎಂಬ ಕುತೂಹಲ ಮೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X