Srirasthu Shubhamasthu; ಮೈಸೂರಿಗೆ ಹೊರಟ ಮಾಧವ್-ತುಳಸಿ : ಗಾಬರಿಯಾಗಿರುವ ಮಹೇಶ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತನ ಡೆತ್ ಸರ್ಟಿಫಿಕೇಟ್ ವಿಚಾರ ಮನೆಯವರಿಗೆಲ್ಲಾ ಗೊತ್ತಾಗಿದ್ದು, ಎಲ್ಲರೂ ಸಂಧ್ಯಾ ಮೇಲೆ ಕೋಪ ಮಾಡಿಕೊಳ್ಳುತ್ತಾರೆ. ಆಗ ಸಂಧ್ಯಾ ಎಲ್ಲರ ಬಳಿಯೂ ಕ್ಷಮೆ ಕೇಳುತ್ತಾಳೆ. ಬುದ್ಧಿ ಇಲ್ಲದೇ ಮಣ್ಣು ತಿನ್ನುವ ಕೆಲಸವನ್ನು ಮಾಡಿಬಿಟ್ಟೆ. ನನ್ನನ್ನು ಕ್ಷಮಿಸಿ ಬಿಡಿ ಎಂದು ಹೇಳುತ್ತಾಳೆ. ಬಳಿಕ ಇದಕ್ಕೆಲ್ಲಾ ಕುಮ್ಮಕ್ಕು ಕೊಟ್ಟಿದ್ದು, ತಮ್ಮ ಮಾವ ಜನಾರ್ಧನ್ ಎಂದು ಎಲ್ಲರ ಎದುರು ಹೇಳುತ್ತಾಳೆ. ಈ ಮಾತನ್ನು ಕೇಳಿದ ಕೂಡಲೇ ಎಲ್ಲರೂ ಶಾಕ್ ಆಗುತ್ತಾರೆ.
ಸತ್ಯ ಹೇಳಿದ ಜುಗ್ಗ ಜನಾರ್ಧನ್
ತುಳಸಿ ಮನೆಗೆ ಬಂದ ಸೊಸೆಗೆ ಒಳ್ಳೆಯ ಬುದ್ಧಿ ಹೇಳಿಕೊಡುವುದನ್ನು ಬಿಟ್ಟು ಇಂತಹ ನೀಚ ಕೆಲಸ ಮಾಡಿದ್ದೀರಾ ಎಂದು ಬೈಯುತ್ತಾಳೆ. ಈ ಕೂಡಲೇ ಇವರನ್ನೆಲ್ಲಾ ಮನೆಯಿಂದ ಹೊರಗೆ ಹಾಕಬೇಖು ಎಂದು ಸಮರ್ಥ್ ಹೇಳುತ್ತಾನೆ. ಆಗ ಆಗ ಜನಾರ್ಧನ್ ನನ್ನನ್ನು ಕ್ಷಮಿಸಿ ಬಿಡಿ ನಿಮ್ಮ ಅಲೀಯ ಮಾಧವ್ ಅವರು ನನ್ನ ಕೆನ್ನೆಗೆ ಹೊಡೆದಾಗಳೇ ನಾನು ಎಲ್ಲಾ ಬಿಟ್ಟು ಬಿಟ್ಟೆ ಎಂದು ಹೇಳುತ್ತಾನೆ. ಆಗ ದತ್ತ ತಾತ ಏನು ಹೇಳುತ್ತಿದ್ದೀಯಾ ಎಂದಿದ್ದಕ್ಕೆ ನಡೆದ ಘಟನೆಯನ್ನು ಜನಾರ್ಧನ್ ವಿವರಿಸುತ್ತಾನೆ. ಆಗ ದತ್ತ ತಾತ ಇದೊಂದು ಬಾರಿ ಇವರನ್ನೆಲ್ಲಾ ಕ್ಷಮಿಸೋಣ. ಇನ್ನು ಎರಡು ವಾರದೊಳಗೆ ನನ್ನ ಪೆಂಷನ್ ಹಣ ನನಗೆ ಬರಬೇಕು. ಇಲ್ಲದೇ ಹೋದರೆ ನಾನು ಸುಮ್ಮನಿರೊಲ್ಲ ಎನ್ನುತ್ತಾನೆ.

ಪ್ರಶ್ನೆ ಮಾಡಿದ ತುಳಸಿ
ಸತ್ಯ ಗೊತ್ತಾದ ಮೇಲೂ ನಮಗೆ ಹೇಳದೇ ಮಾಧವ್ ಇಷ್ಟೆಲ್ಲಾ ಮಾಡಿದ್ದಾನೆ ಎಂದರೆ ಅವನು ನಿಜವಾಗಲೂ ಪುಣ್ಯಾತ್ಮ ಎಂದು ಹೇಳುತ್ತಾರೆ. ತುಳಸಿ ಮನೆಗೆ ಬಂದು ಮಾಧವ್ ಮೇಲೆ ಕೋಪ ಮಾಡಿಕೊಂಡವಳಂತೆ ನಟಿಸುತ್ತಾಳೆ. ನೀವ್ಯಾಕೆ ನನ್ನ ಬಳಿ ಸತ್ಯ ಹೇಳೊಲ್ಲ ಎಂದು ನಡೆದ ಘಟನೆಯನ್ನು ಹೇಳುತ್ತಾಳೆ. ಆಗ ಮಾಧವ್ ಅದರಿಂದ ನಿಮಗೆಲ್ಲಾ ನೋವಾಗುತ್ತೆ ಎಂದು ಹೇಳಲಿಲ್ಲ. ಇನ್ಮುಂದೆ ಹಾಗೆ ಮಾಡೋದಿಲ್ಲ. ಅದೇ ರೀತಿಯಲ್ಲಿ ನೀವೂ ಕೂಡ ನನ್ನ ಬಳಿ ಏನೂ ಮುಚ್ಚಿಡಬಾರದು ಎಂದು ಹೇಳುತ್ತಾನೆ. ಇನ್ನು ಮಾಧವ್ ತುಳಸಿಗೆ ಸರ್ಪ್ರೈಸ್ ಕೊಡುವುದಾಗಿ ಹೇಳುತ್ತಾನೆ.
ತುಳಸಿ ಮತ್ತು ಮಾಧವ್ ಟ್ರಿಪ್
ಮಾಧವ್ ಹಾಗೂ ತುಳಸಿ ಇಬ್ಬರೂ ಎರಡು ದಿನಗಳ ಕಾಲ ಮೈಸೂರಿಗೆ ಹೋಗಬೇಕು ಎಂದು ಪ್ಲಾನ್ ಮಾಡಿದ್ದಾರೆ. ಮನೆಯವರನ್ನೆಲ್ಲಾ ಕರೆದು ಮಾಧವ್ ಮಾತನಾಡುತ್ತಾನೆ. ಯಾವುದೋ ಒಂದು ಮುಖ್ಯವಾದ ಕೆಲಸವಿದೆ. ಹಾಗಾಗಿ ತಾನು ಹಾಗೂ ತುಳಸಿ ಇಬ್ಬರೂ ಮೈಸೂರಿಗೆ ಹೋಗಲೇಬೇಕು ಎಂದು ಹೇಳಿದ್ದಾಣೆ. ಫುರ್ಣಿಮಾ ಮತ್ತು ಅವಿನಾಶ್ ಬೇಕಂತಲೇ ತಾವು ಬರುವುದಾಗಿ ನಾಟಕ ಮಾಡುತ್ತಾರೆ. ಆಗ ಮಾಧವ್ ಬೇಡ ಬೇಡ, ನಾವಿಬ್ಬರೇ ಹೋಗಿ ಬರುತ್ತೇವೆ ಎಂದು ಹೇಳುತ್ತಾನೆ. ಇಬ್ಬರೂ ಮೈಸೂರಿಗೆ ಹೊರಡುತ್ತಾರೆ. ಆಗ ಶಾರ್ವರಿ ರೂಮಿನಲ್ಲಿ ಅದೇನೇ ಆದರೂ ಬಿಡಬೇಡಿ. ಅವರನ್ನು ಹಿಡಿಯಿರಿ, ಎಲ್ಲೆಲ್ಲಿಗೆ ಹೋಗುತ್ತಾರೋ ಅಲ್ಲೆಲ್ಲಾ ಫಾಲೋ ಮಾಡಿ ಎಂದು ಫೋನ್ ನಲ್ಲಿ ಮಾತನಾಡುತ್ತಿರುತ್ತಾಳೆ. ಈ ಮಾತುಗಳನ್ನು ಕೇಳಿದ ಮಹೇಶನಿಗೆ ಗಾಬರಿಯಾಗುತ್ತದೆ.

ಗಾಬರಿಗೊಂಡ ಮಹೇಶ
ತುಳಸಿ ಮತ್ತು ಮಾಧವ್ ಮೈಸೂರಿಗೆ ಹೊರಟಿದ್ದು, ಇಬ್ಬರಿಗೂ ಅಪಾಯವಿದೆ ನೀನೇ ಕಾಪಾಡಬೇಕು ಎಂದು ಮಹೇಶ ಸಮರ್ಥ್ ಗೆ ಹೇಳುತ್ತಾನೆ. ಇನ್ನು ಮಾಧವ್ ಮತ್ತು ತುಳಸಿ ಎರಡು ದಿನ ತಮ್ಮನ್ನು ಯಾರೂ ಡಿಸ್ಟರ್ಬ್ ಮಾಡುವುದು ಬೇಡ ಎಂದು ಇಬ್ಬರ ಫೋನ್ ಕೂಡ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಮಹೇಶನಿಗೆ ಫೋನ್ ನೆಟ್ ವರ್ಕ್ ಸಿಗದ ಕಾರಣ ಗಾಬರಿಯಾಗಿದ್ದಾನೆ. ಣ್ಣ-ಅತ್ತಿಗೆಗೆ ಅಪಾಯ ಆಗಿರಬಹುದು ಎಂದು ಭಾವಿಸಿ ಅವಿಯನ್ನು ಕರೆದುಕೊಂಡು ಮೈಸೂರಿಗೆ ಹೊರಟಿದ್ದಾನೆ.


Click it and Unblock the Notifications











