Srirastu Shubhamastu ; ಆಸ್ತಿ ಉಳಿಸಿಕೊಳ್ಳಲು ಶತಪ್ರಯತ್ನ ಪಡುತ್ತಿರುವ ಜನಾರ್ಧನ್
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಲಾಯರ್ ಪದೇ ಪದೇ ಬಂದು ನಿಮ್ಮ ದೊಡ್ಡ ಮಗಳನ್ನು ಹುಡುಕಿ. ಇಲ್ಲದಿದ್ದರೆ, ಆಸ್ತಿಯೆಲ್ಲಾ ಕೈ ಮೀರಿ ಹೋಗುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಜನಾರ್ಧನ್ ಗೆ ತನ್ನ ಮೊದಲ ಮಗಳ ಮೇಲೆ ಸ್ವಲ್ಪವೂ ಪ್ರೀತಿ ಇಲ್ಲ. ಅವಳನ್ನು ಅನಿಷ್ಟ ಎಂದೇ ನಂಬಿದ್ದಾನೆ. ಆದರೆ, ವನಜಾಳಿಗೆ ತನ್ನ ಮೊದಲ ಮಗಳ ಮೇಲೆ ಅಪಾರವಾದ ಪ್ರೀತಿ ಇದೆ. ಆದರೆ ಬೇರೆ ದಾರಿ ಇಲ್ಲದೇ ಇಷ್ಟು ವರ್ಷದಿಂದ ತನ್ನ ಮಗಳು ಎಲ್ಲಿದ್ದಾಳೋ ಹೇಗಿದ್ದಾಳೋ ಎಂಬುದು ಗೊತ್ತಿಲ್ಲದೆಯೇ ಕೊರಗುತ್ತಿದ್ದಳು. ಈಗ ಮಗಳಿಗಾಗಿ ಹುಡುಕಾಟ ಶುರು ಮಾಡಿದ್ದಾಳೆ.
ಒಬ್ಬರಿಗೊಬ್ಬರು ಸುಳ್ಳು ಹೇಳಿದ ವನಜಾ-ತುಳಸಿ
ವನಜಾ ತನ್ನ ಮಗಳು ಎಲ್ಲಿರಬಹುದು ಎಂದು ತಿಳಿದುಕೊಳ್ಳಲು ರಾಮಚಂದ್ರ ಅರ್ಚಕರ ಬಳಿ ಬಂದಿದ್ದಾಳೆ. ಅರ್ಚಕರು ಹೇಳುವುದು ಅರ್ಥವಾಗದೇ ಒದ್ದಾಡುತ್ತಿದ್ದಾಳೆ. ಅನ್ನಪೂರ್ಣೇಶ್ವರಿ ದೇವರ ಫೋಟೋವನ್ನು ಅರ್ಚಕರು ತೋರಿಸಿದರೂ ಅರ್ಥವಾಗುತ್ತಿಲ್ಲ. ಇದೇ ಸಮಯದಲ್ಲಿ ತುಳಸಿ ಅಲ್ಲಿಗೆ ಬಂದಿದ್ದು, ವನಜಾ ಗಾಬರಿಯಾಗಿದ್ದಾಳೆ. ಅರ್ಚಕರು ನಮಗೆ ಬಹಳ ಬೇಕಾದವರು. ಅವರಿಗೆ ಹುಷಾರಿಲ್ಲ ಎಂದು ತಿಳಿದು ಬಂದೆ ಎನ್ನುತ್ತಾಳೆ. ತುಳಸಿಯೂ ಕೂಡ ಅಂತಹದ್ದೇ ಸುಳ್ಳನ್ನು ಹೇಳುತ್ತಾಳೆ. ಇಬ್ಬರೂ ಸತ್ಯ ಹೇಳದೇ, ಅಂಗೈಲ್ಲಿನ ಬೆಣ್ಣೆಯನ್ನು ಮುಚ್ಚಿಟ್ಟುಕೊಂಡು ತುಪ್ಪ ಹುಡುಕುತ್ತಿದ್ದಾರೆ.

ಕೋಪ ಮಾಡಿಕೊಂಡಿರುವ ದಂಪತಿಗಳು
ತುಳಸಿ ಪೂರ್ಣಿಮಾ ಹುಟ್ಟನ್ನು ತಿಳಿದುಕೊಳ್ಳಲು ಮತ್ತೆ ಆಶ್ರಮಕ್ಕೆ ಹೋಗಿದ್ದು ತಿಳಿದು ಮಾಧವ್ ಕೋಪ ಮಾಡಿಕೊಂಡಿದ್ದಾನೆ. ಮಾಧವ್ ಗೆ ಕೋಪ ಬಂದರೂ ಸರಿಯೇ, ಪೂರ್ಣಿಮಾ ಪೋಷಕರನ್ನು ಹುಡುಕಲೇಬೇಕು ಎನ್ನುವುದು ತುಳಸಿ ಹಠವಾಗಿದೆ. ಹೀಗಾಗಿ ಇಬ್ಬರೂ ಮಾತು ಬಿಟ್ಟಿದ್ದಾರೆ. ಇಬ್ಬರೂ ಮುನಿಸಿಕೊಂಡಿದ್ದರೂ ಮನದಲ್ಲಿ ಪ್ರೀತಿ ಇದೆ. ಅದನ್ನು ತೋರಿಸಲಾಗದೇ ಒದ್ದಾಡುತ್ತಿದ್ದಾರೆ. ಚಿಕ್ಕ ಮಕ್ಕಳಂತೆ ಆಡುತ್ತಿರುವ ತುಳಸಿ ಮತ್ತು ಮಾಧವ್ ನನ್ನು ನೋಡಿ ಪೂರ್ಣಿಮಾಳಿಗೆ ನಗು ಬರುತ್ತಿದೆ. ಇಬ್ಬರೂ ಮಾತನಾಡದೇ ಇರುವ ವಿಚಾರವನ್ನು ಮುಚ್ಚಿಟ್ಟು, ಮ್ಯಾನೇಜ್ ಮಾಡಲು ಯತ್ನಿಸುತ್ತಿದ್ದಾರೆ.
ತಾಯಿ ಮನೆಗೆ ಹೊರಟ ಪೂರ್ಣಿಮಾ
ವನಜಾ ಇದೇ ಸಮಯದಲ್ಲಿ ತುಳಸಿಗೆ ಫೋನ್ ಮಾಡಿ ಮನೆಗೆ ದೀಪಿಕಾ ಹಾಗೂ ಅಭಿ ಅನ್ನು ಕಳಿಸಿ, ಜೊತೆಗೆ ನೀವೂ ಬನ್ನಿ ಎಂದು ಕರೆದಿದ್ದಾಳೆ. ತುಳಸಿ ಮಾಧವ್ ಗೆ ಹೇಳಿದರೆ, ಮಾಧವ್ ಬರುವುದಿಲ್ಲ ಎಂದು ಹಠ ಮಾಡಿದ್ದಾನೆ. ಮಾಧವ್ ಬಾರದಿದ್ದ ಮೇಲೆ ತುಳಸಿಗೂ ಹೋಗಲು ಮನಸ್ಸಿಲ್ಲ. ಹಾಗಾಗಿ ತುಳಸಿ ಪೂರ್ಣಿಮಾ ಮತ್ತು ಅವಿನಾಶ್ ನನ್ನು ಕಳಿಸಲು ಮುಂದಾಗಿದ್ದಾಳೆ. ಪೂರ್ಣಿಮಾಳಿಗೆ ವನಜಾ ಮನೆಗೆ ಹೋಗುವುದೆಂದರೆ ಮೊದಲೇ ಖುಷಿ. ಈಗ ದೀಪಿಕಾಳಿಗೆ ಈ ವಿಚಾರ ಗೊತ್ತಾಗಿ ಹೊಟ್ಟೆ ಕಿಚ್ಚು ಬರುತ್ತಿದೆ. ಅವಳು ತನ್ನ ಮನೆಗೆ ಯಾಕೆ ಬರಬೇಕು ಎಂದು ಸಿಟ್ಟಾಗಿದ್ದರೆ, ಪೂರ್ಣಿಮಾ ಅಮ್ಮನಂತಿರುವ ವನಜಾ ಅವರನ್ನು ನೋಡಲು ಹೋಗಲು ಸಂಭ್ರಮಿಸಿದ್ದಾಳೆ. ಈ ಸಂಭ್ರಮ ಪೂರ್ಣಿಮಾಳ ಬಾಳಲ್ಲಿ ಹಾಗೆ ಉಳಿಯುತ್ತದೆಯೋ ಅಥವಾ ಜನಾರ್ಧನ್ ಹಾಳು ಮಾಡುತ್ತಾನೋ ಕಾದು ನೋಡಬೇಕಿದೆ.
ಹೆಣ್ಣು ಮಗಳ ಹುಡುಕಾಟದಲ್ಲಿ ಜನಾರ್ಧನ್
ತನ್ನ ಮೊದಲು ಮಗು ಸಿಗದ ಕಾರಣ, ಜನಾರ್ಧನ್ 25 ವರ್ಷದ ಒಳಗಿನ ಅನಾಥ ಹೆಣ್ಣು ಮಕ್ಕಳನ್ನು ಹುಡುಕಲು ಮುಂದಾಗಿದ್ದಾನೆ. ಆಸ್ತಿಯನ್ನು ಉಳಿಸಿಕೊಳ್ಳಲಿ ಜನಾರ್ಧನ್ ಶತಪ್ರಯತ್ನ ಮಾಡುತ್ತಿದ್ದಾನೆ. ಆದರೆ, ಯಾರು ಸೆಟ್ ಅಗುತ್ತಿಲ್ಲ ಎಂದು ತಲೆ ಕೆಡಿಸಿಕೊಂಡಿದ್ದಾನೆ. ಇನ್ನು ಪೂರ್ಣಿಮಾ ಸಿಗುತ್ತಾಳಾ..? ಅವಳೇ ತನ್ನ ಮೊದಲ ಮಗು ಎಂಬ ಸತ್ಯ ಗೊತ್ತಾಗುತ್ತದೆಯೇ..? ಇಲ್ಲ ಪೂರ್ಣಿಮಾಳಿಗೆ ಇದರಿಂದ ಸಮಸ್ಯೆ ಆಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











