Srirastu Shubhamastu ; ಮಹೇಶನ ದಾರಿ ತಪ್ಪಿಸಲು ಯತ್ನಿಸಿದ ಶಾರ್ವರಿ ಕಂಡು ಅನುಮಾನಗೊಂಡ ತುಳಸಿ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಯುಗಾದಿ ಹಬ್ಬವನ್ನು ದತ್ತ ತಾತ ಹಾಗೂ ಮಾಧವ ಇಬ್ಬರ ಮನೆಯಲ್ಲೂ ಸರಳವಾಗಿ ಆಚರಿಸಲಾಗಿದೆ. ದತ್ತ ತಾತನ ಮನೆಯಲ್ಲಿ ಈಗ ಸಂಧ್ಯಾ ಕುಟುಂಬದವರೂ ಕೂಡ ಸೇರಿಕೊಂಡಿದ್ದಾರೆ. ಹಬ್ಬದ ದಿನವೂ ಮಾವ ಹಾಗೂ ಸೊಸೆ ದುಡ್ಡಿನ ಲೆಕ್ಕಚಾರ ಹಾಕಿದ್ದಾರೆ. ಸಂಧ್ಯಾ ದುಡ್ಡು ದಾರಿಯಲ್ಲಿ ಸಿಗುತ್ತೆ ಎಂದು ಆಲೋಚಿಸಿದ್ದಲ್ಲದೇ, ಒಂದೇ ಸಲ ಶ್ರೀಮಂತಳಾಗಲು ಲಾಟರಿ ಟಿಕೆಟ್ ನ ಖರೀದಿಸಿದ್ದಾಳೆ. ಆದರೆ, ಕೇವಲ 50 ರೂಪಾಯಿ ಗೆದ್ದು ಬೈಯಿಸಿಕೊಂಡಿದ್ದಾಳೆ.
ಯುಗಾದಿ ಹಬ್ಬ ಆಚರಿಸಿದ ಮಾಧವ ಕುಟುಂಬ
ಮಾಧವ ಮನೆಯಲ್ಲಿ ಯುಗಾದಿ ಹಬ್ಬವನ್ನು ಆಚರಿಸಿದ್ದಾರೆ. ತುಳಸಿ ದೇವರ ಮನೆಯಲ್ಲಿ ದೀಪ ಹಚ್ಚಲು ಹೋದಾಗ ಅಭಿ ವಿರೋಧಿಸುತ್ತಾನೆ. ಈ ಮನೆ ಯಜಮಾನಿ ಪಟ್ಟ ಶಾರ್ವರಿ ಚಿಕ್ಕಮ್ಮನಿಗೆ ಕೊಡಬೇಕು. ಅವರೇ ಇಂದು ದೀಪ ಹಚ್ಚಿ ಪೂಜೆ ಮಾಡಬೇಕು ಎಂದು ಹೇಳುತ್ತಾನೆ. ಆದರೆ, ಮನೆಯಲ್ಲಿ ಮಹೇಶ ಇದಕ್ಕೆ ಒಪ್ಪುವುದಿಲ್ಲ. ಕೊನೆಗೆ ಅವಿನಾಶ್ ಕೂಡ ತುಳಸಿ ಅಮ್ಮನೇ ಪೂಜೆ ಮಾಡಲಿ. ಅವರಲ್ಲಿ ನಾನು ನನ್ನ ಅಮ್ಮನನ್ನು ನೋಡಿದ್ದೇನೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಮನೆಯವರಿಗೆಲ್ಲಾ ಖುಷಿಯಾಗುತ್ತದೆ. ಆದರೆ ಶಾರ್ವರಿ ಮನದೊಳಗೆ ಬೇಸರ ಮಾಡಿಕೊಳ್ಳುತ್ತಾಳೆ.

ತುಳಸಿಯನ್ನು ಒಪ್ಪಿಕೊಂಡ ಅವಿನಾಶ್
ತುಳಸಿಗೆ ಅವಿ ತನ್ನನ್ನು ಒಪ್ಪಿಕೊಂಡ ಎಂಬ ಸಿಹಿ ಹಾಗೂ ಅಭಿ ತನ್ನನ್ನು ನಿಷ್ಠೂರವಾಗಿ ನೋಡುತ್ತಿದ್ದಾನೆ ಎಂಬ ಕಹಿ ಎರಡೂ ಇದೆ. ಯುಗಾದಿ ಹಬ್ಬದ ದಿನವೇ ತುಳಸಿಗೆ ಬೇವು ಬೆಲ್ಲದ ಅನುಭವವಾಗಿದೆ. ಇನ್ನು ರಾತ್ರಿ ಹೊತ್ತಿನಲ್ಲಿ ಚಂದ್ರನನ್ನು ಮೊದಲು ತುಳಸಿ ನೋಡಿದ್ದಕ್ಕೂ ಶಾರ್ವರಿಗೆ ಬೇಸರವಾಗುತ್ತದೆ. ಎಲ್ಲಾ ಶುಭಕಾರ್ಯಕ್ಕೂ ಈ ವರ್ಷ ತುಳಸಿಯೇ ಮುಂದಿರಬೇಕಲ್ಲ ಎಂದು ಮನದಲ್ಲೇ ಕೊರಗುತ್ತಾಳೆ. ಆದರೆ, ತನ್ನ ಅಸಹಾಯಕತೆಯನ್ನು ಯಾರ ಮುಂದೆಯೂ ತೋರಿಸಲಾಗದೇ ಬೇಸರ ಮಾಡಿಕೊಳ್ಳುತ್ತಾಳೆ.
ನಿಧಿಗೆ ಕಪಾಳ ಸೇವೆ ಮಾಡಿದ ಶಾರ್ವರಿ
ಇನ್ನು ನಿಧಿ ಮನೆಯಲ್ಲಿ ಯಾರಿಗೂ ಹೇಳದೆಯೇ ಸ್ನೇಹಿತರ ಜೊತೆಗೆ ಪಾರ್ಟಿಗೆಂದು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುತ್ತಾಳೆ. ಆದರೆ, ತುಳಸಿ ಹಾಗೂ ಸಮರ್ಥ್ ಸಹಾಯದಿಂದ ಮನೆಗೆ ಸೇಫ್ ಆಗಿ ರೀಚ್ ಆಗಿರುತ್ತಾಳೆ. ಹುಡುಗರು ಕುಡಿದ ಮತ್ತಿನಲ್ಲಿ ಜಾಲಿ ಮಾಡಿದ ವಿಡಿಯೋ ಟಿವಿಯಲ್ಲಿ ಬರುತ್ತದೆ. ಇದನ್ನು ನೋಡಿ ಮಹೇಶ ಫುಲ್ ಬೇಸರ ಮಾಡಿಕೊಳ್ಳುತ್ತಾನೆ. ಶಾರ್ವರಿಗೆ ಕೋಪ ಬಂದು ನಿಧಿಯನ್ನು ರೂಮಿಗೆ ಕರೆದುಕೊಂಡು ಹೋಗುತ್ತಾಳೆ. ನಿಧಿ ಕೆನ್ನೆಗೆ ಹೊಡೆದು. ಅದೇ ಹುಡುಗರ ಜೊತೆಗೆ ಸುತ್ತಾಡಿದ್ದೀಯಾ. ಈಗ ನನ್ನ ಎದುರು ನಾಟಕ ಮಾಡಬೇಡ. ಇನ್ಮುಂದೆ ಯಾವತ್ತೂ ನನ್ನ ಒಪ್ಪಿಗೆ ಇಲ್ಲದೇ ನೀನು ಮನೆಯಿಂದ ಹೊರಗಡೆ ಹೋಗಬಾರದು ಎಂದು ಹೇಳುತ್ತಾಳೆ. ಆದರೆ, ನಿಧಿ ಸ್ನೇಹಿತರಿಗೆ ಬೇಸರವಾಗಿದ್ದು, ನಿಧಿಯನ್ನು ಸಮಸ್ಯೆಯಲ್ಲಿ ಸಿಲುಕಿಸಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದಾರೆ.

ಮಹೇಶನ ದಾರಿ ತಪ್ಪಿಸುತ್ತಿರುವ ಶಾರ್ವರಿ
ಇತ್ತ ಮಹೇಶ ಮತ್ತು ಶಾರ್ವರಿಯ 20ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಆಚರಿಸಲು ಮನೆಯವರು ನಿರ್ಧರಿಸಿದ್ದಾರೆ. ಈ ವೇಳೆ ಮಹೇಶ ತನ್ನ ಗೆಳೆಯರನ್ನು ನೆನಪಿಸಿಕೊಂಡಿದ್ದು, ತಮ್ಮ ಎಸ್ಟೇಟ್ ನಲ್ಲಿದ್ದ ಚಂದ್ರಕಾಂತ್ ನನ್ನು ನೆನಪು ಮಾಡಿಕೊಂಡಿದ್ದಾನೆ. ಸುಮತಿ ಅತ್ತಿಗೆ ಸಾವಿನಿಂದ ಚಂದ್ರಕಾಂತನಿಗೆ ಹುಚ್ಚು ಹಿಡಿದಿರುವ ವಿಚಾರವನ್ನು ತುಳಸಿ ಹೇಳುತ್ತಾಳೆ. ಆಗ ಮಹೇಶನಿಗೆ ತಲೆ ಕೆಟ್ಟ ಹಾಗೆ ಆಗುತ್ತದೆ. ನಮ್ಮ ಅತ್ತಿಗೆಯದ್ದು ಕೊಲೆನಾ ಎಂದು ಪ್ರಶ್ನಿಸುತ್ತಾನೆ. ಇನ್ನೆಲ್ಲಿ ಮಹೇಶನಿಗೆ ಎಲ್ಲಾ ನೆನಪು ಬರುತ್ತದೋ ಎಂದು ಗಾಬರಿಯಾದ ಶಾರ್ವರಿ ಮಾತು ಮರೆಸಲು ಮುಂದಾಗುತ್ತಾಳೆ. ಇದನ್ನು ತಿಳಿದ ತುಳಸಿಗೆ ಶಾರ್ವರಿ ಮೇಲೆ ಅನುಮಾನ ಮೂಡುತ್ತದೆ.


Click it and Unblock the Notifications











