Srirasthu Shubhamasthu ; ಕಂಪನಿ ಸಮಾರಂಭಕ್ಕೆ ತೆರಳಿದ ಮನೆಯವರು : ತುಳಸಿ ಮತ್ತೆ ಮಿಸ್ಸಿಂಗ್..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಮತ್ತು ತುಳಸಿ ದತ್ತ ತಾತನ ಮನೆಗೆ ಖುದ್ದು ಬಂದು ಕಂಪನಿಯ ಸಮಾರಂಭಕ್ಕೆ ಬರಬೇಕು ಎಂದು ಆಹ್ವಾನಿಸಿದ್ದಾರೆ. ಆದರೂ ಸಮರ್ಥ್ ಜಂಬ ಮಾಡಿದ್ದಾನೆ. ಮನದಲ್ಲಿ ಪ್ರೀತಿ ಇದ್ದರೂ ಎಲ್ಲರ ಎದುರು ಕೋಪ ತೋರಿಸುತ್ತಿದ್ದಾನೆ. ಇನ್ನು ತುಳಸಿಗೆ ಸಮರ್ಥ್ ಕಾರು ಒಡಿಸುವುದನ್ನು ಹೇಳಿಕೊಟ್ಟಿದ್ದಕ್ಕೆ ಮನೆಯವರೆಲ್ಲಾ ರೇಗಿಸಿದ್ದಾರೆ. ಮಾಧವ್ ಮನೆಯಲ್ಲಿ ನಿತ್ಯವೂ ಡ್ಯಾನ್ಸ್ ಪ್ರ್ಯಾಕ್ಟೀಸ್ ನಡೆಯುತ್ತಿದೆ. ಅಭಿ ಗಂಡಸರಿಗೆ, ಪೂರ್ಣಿಮಾ ಹೆಂಗಸರಿಗೆ ಡ್ಯಾನ್ಸ್ ಸ್ಟೆಪ್ಸ್ ಗಳನ್ನು ಹೇಳಿಕೊಡುತ್ತಿದ್ದಾರೆ.
ಮಕ್ಕಳೊಂದಿಗೆ ಫೋಟೋ ತೆಗೆಸಿಕೊಂಡ ಮಾಧವ್
ಅಭಿ ಮಾಧವ್ ಮತ್ತು ಅವಿನಾಶ್ ಗೆ ಡ್ಯಾನ್ಸ್ ಸ್ಟೆಪ್ಸ್ ಅನ್ನು ಹೇಳಿಕೊಡುತ್ತಿರುತ್ತಾನೆ. ಈ ಸಂದರ್ಭದಲ್ಲಿ ಅಭಿ ಮಾಧವ್ ಗೆ ಹೆಗಲ ಮೇಲೆ ಕೈ ಹಾಕಲು ಹೇಳುತ್ತಾನೆ. ಇದು ಮಾಧವ್ ಗೆ ಖುಷಿಯನ್ನು ತಂದು ಕೊಡುತ್ತದೆ. ಈ ಸಂದರ್ಭವನ್ನು ಸಂಭ್ರಮಿಸುವ ತುಳಸಿ ಕೂಡ ಫೋಟೋ ತೆಗೆಯುತ್ತಾಳೆ. ಮಾಧವ್ ಇಬ್ಬರೂ ಮಕ್ಕಳ ಹೆಗಲ ಮೇಲೆ ಕೈ ಹಾಕಿದ ಫೋಟೋವನ್ನು ನೋಡಿ ಪದೇ ಪದೇ ಮನದೊಳಗೆ ಖುಷಿ ಪಡುತ್ತಿರುತ್ತಾನೆ. ನನ್ನ ಬದುಕಿನಲ್ಲಿ ಇಂತಹದ್ದೊಂದು ದಿನ ಬರುತ್ತೆ ಅನ್ನೋ ಊಹೆಯೂ ಇರಲಿಲ್ಲ. ನಿಜಕ್ಕೂ ಖುಷಿಯಾಗುತ್ತದೆ. ಆದರೆ, ಅಭಿ ಮನೆಯಲ್ಲಿ ಭಾಗ ಕೇಳುತ್ತಿರುವುದು ಅಷ್ಟೇ ಆತಂಕವನ್ನು ತಂದಿದೆ ಎಂದು ತುಳಸಿ ಬಳಿ ಹೇಳಿಕೊಳ್ಳುತ್ತಾ ಕ್ಷಣದ ಖುಷಿ ನೋವು ಎರಡನ್ನೂ ಸಮಾನಾಗಿ ಅನುಭವಿಸುತ್ತಾನೆ.

ಆಸ್ತಿ ಬಗ್ಗೆ ಕೇಳಲು ಪ್ರೋತ್ಸಾಹಿಸಿದ ಶಾರ್ವರಿ
ಇನ್ನು ಎಲ್ಲರೂ ಸಮಾರಂಭಕ್ಕೆ ಹೋಗಲು ತಯಾರಾಗುತ್ತಿರುತ್ತಾರೆ. ಮಾಧವ್ ತುಳಸಿಗೆ ಪ್ರೀತಿಯಿಂದ ಮೇಕಪ್ ಮಾಡುತ್ತಾನೆ. ಕಣ್ಣಿಗೆ ಐ-ಲೈನರ್ ಹಾಕಿ, ತುಟಿಗೆ ಲಿಪ್ ಸ್ಟಿಕ್, ಕೆನ್ನೆಗೆ ರೋಸ್ ಪೌಡರ್ ಹಾಕಿ ಖುಷಿ ಪಡುತ್ತಾನೆ. ತುಳಸಿ ಅಂದವನ್ನು ಹೊಗಳುತ್ತಿರುತ್ತಾನೆ. ಇನ್ನು ಎಲ್ಲರೂ ರೆಡಿಯಾದ ಬಳಿಕ ಶಾರ್ವರಿ ಅಭಿ ರೂಮಿಗೆ ಹೋಗುತ್ತಾಳೆ. ಸುಖಾಸುಮ್ಮನೆ ತನಗೆ ಅಭಿ ಕಾರ್ಯಕ್ರಮದಲ್ಲಿ ಸ್ಟೇಜ್ ಮೇಲೆ ಆಸ್ತಿಯಲ್ಲಿ ಪಾಲು ಬೇಕು ಎಂದು ಕೇಳಿದಂತಾಯ್ತು ಎಂದು ಸುಳ್ಳು ಹೇಳುತ್ತಾನೆ. ಇದನ್ನು ನಂಬಿದ ಅಭಿ ಸ್ಟೇಜ್ ಮೇಲೆ ಭಾಗ ಕೇಳಿದರೆ, ಮನೆಯವರು ಮುಜುಗರದಿಂದಲಾದರೂ ಭಾಗ ಕೊಡುತ್ತಾರೆ ಎಂದು ನಂಬಿದ್ದಾನೆ. ತಾನು ಭಾಗ ಕೇಳುವುದಾಗಿ ಶಾರ್ವರಿಗೂ ದೀಪಿಕಾಳಿಗೂ ಹೇಳಿದ್ದಾನೆ.
ತುಳಸಿಯನ್ನು ಕೂಡಿ ಹಾಕಿದ ದೀಪಿಕಾ
ದೀಪಿಕಾ ಮತ್ತು ಶಾರ್ವರಿ ಇಬ್ಬರೂ ಅಭಿ ಸ್ಟೇಜ್ ಮೇಲೆ ಭಾಗ ಕೇಳಿದರೆ ಮಾಧವ್ ಗೆ ಅವಮಾನ ಆಗುತ್ತದೆ. ಜೀವನ ಪರ್ಯಂತ ಈ ಅವಮಾನದಿಂದ ಕುಗ್ಗಿ ಹೋಗುತ್ತಾರೆ ಎಂದು ಭಾವಿಸಿದ್ದಾರೆ. ಹೀಗಾಗಿ ಅಭೀ ಭಾಗ ಕೇಲಲಿ ಎಂದು ಹುರಿದುಂಬಿಸಿದ್ದಾರೆ. ತುಳಸಿ ಅಭಿಯನ್ನು ಯಾವುದೇ ಕಾರಣಕ್ಕೂ ತಡೆಯಬಾರದು ಎಂದು ದೀಪಿಕಾ ಪ್ಲಾನ್ ಮಾಡಿದ್ದಾಳೆ. ರೆಡಿಯಾಗಿದ್ದ ತುಳಸಿಯನ್ನು ತುಂಬಾ ಚೆನ್ನಾಗಿ ಕಾಣುತ್ತಿದ್ದೀರಾ ಎಂದು ಹೇಳಿ ಮುತ್ತು ಕೊಡುತ್ತಾಳೆ. ಲಿಪ್ ಸ್ಟಿಕ್ ಕೆನ್ನೆಗೆ ಅಂಟಿಕೊಂಡಿದ್ದಕ್ಕೆ ತುಳಸಿ ಮುಖ ತೊಳೆಯಲು ರೂಮಿಗೆ ಹೋಗುತ್ತಾಳೆ. ಈ ಸಂದರ್ಭದಲ್ಲಿ ದೀಪಿಕಾ ತುಳಸಿ ರೂಮ್ ಅನ್ನು ಆಚೆಯಿಂದ ಲಾಕ್ ಮಾಡುತ್ತಾಳೆ.

ತುಳಸಿಗಾಗಿ ಮಾಧವ್ ಹುಡುಕಾಟ
ಮನೆಯಿಂದ ಎಲ್ಲರೂ ಹೊರಟಾಗ ದೀಪಿಕಾ ತುಳಸಿ ಅವರು ಪೂರ್ಣಿಮಾ ಅವರ ಜೊತೆಗೆ ಹೋಗಿರಬೇಕು ಎಂದು ಹೇಳುತ್ತಾಳೆ. ಎಲ್ಲರೂ ದೀಪಿಕಾ ಮಾತನ್ನು ನಂಬಿ ಕಾರ್ಯಕ್ರಮಕ್ಕೆ ತೆರಳುತ್ತಾರೆ. ಅಲ್ಲಿ ನೋಡಿದರೆ ತುಳಸಿ ಕಾಣುವುದಿಲ್ಲ. ಮಾದವ್ ತುಳಸಿಗೆ ಫೊನ್ ಮಾಡುತ್ತಾನೆ. ಸಮರ್ಥ್ ಗೆ ಮನೆಯಲ್ಲಿ ಹುಡುಕಲು ಹೇಳುತ್ತಾನೆ. ಎಲ್ಲೂ ತುಳಸಿ ಕಾಣುವುದಿಲ್ಲ. ಆಗ ಮಾಧವ್ ಗಾಬರಿಯಾಗುತ್ತಾನೆ. ತುಳಸಿಯನ್ನು ಹುಡುಕಲು ಶುರು ಮಾಡಿದ್ದಾನೆ.


Click it and Unblock the Notifications











