Sriasthu Shubhamasthu ; ಶಾರ್ವರಿಯನ್ನು ಸ್ಮಶಾನದಲ್ಲಿ ನೋಡಿದ ತುಳಸಿ : ಅಭಿಯನ್ನು ಮನೆಗೆ ಕರೆತಂದ ಸಮರ್ಥ್

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ತುಳಸಿ ಮತ್ತು ಸಮರ್ಥ್ ಮೇಲಿನ ಕೋಪದಿಂದ ಅವಿನಾಶ್ ಗೆ ಆಫೀಸ್ ಕೆಲಸದಲ್ಲಿ ಸಹಾಯ ಮಾಡಲು ನಿರಾಕರಿಸುತ್ತಾನೆ. ಮೀಟಿಂಗ್ ಗೆ ಪ್ರೆಸೆಂಟೇಷನ್ ಸಿದ್ಧಪಡಿಸು ಎಂದರೂ ಕೂಡ ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಆಗ ಅವಿನಾಶ್ ಬೇರೆ ದಾರಿ ಇಲ್ಲದೇ ತಾನೊಬ್ಬನೇ ಒಂದು ರಾತ್ರಿ ಇಡೀ ಇದನ್ನೆಲ್ಲಾ ಮಾಡಲು ಆಗುವುದಿಲ್ಲ ಎಂದು ಸಮರ್ಥ್ ಗೆ ಕೆಲಸ ವಹಿಸುತ್ತಾನೆ. ಸಮರ್ಥ್ ಕೂಡ ಅವಿನಾಶ್ ಗೆ ಆಫೀಸ್ ನ ಕೆಲಸದಲ್ಲಿ ಸಹಾಯ ಮಾಡುತ್ತಾನೆ. ಇದನ್ನು ನೋಡುವ ಅಭಿಗೆ ಕೋಪ ಬರುತ್ತದೆ. ತನಗೆ ಕೊಡದ ಮರಿಯಾದೆಯನ್ನು ಸಮರ್ಥ್ ಗೆ ಕೊಡುತ್ತಿದ್ದಾರೆ ಎಂದು ಬೇಸರ ಮಾಡಿಕೊಳ್ಳುತ್ತಾರೆ.


ಕೆಲಸಕ್ಕಾಗಿ ಹುಡುಕಾಡುತ್ತಿರುವ ಸಂಧ್ಯಾ

ಇತ್ತ ಸಂಧ್ಯಾ ತನ್ನ ಮಾವ ಐದು ಲಕ್ಷ ಹಣವನ್ನು ಕೂಡ ತೆಗೆದುಕೊಂಡು ಪರಾರಿಯಾಗಿದ್ದಾರೆ. ಇದರಿಂದ ಗಾಬರಿಯಾಗಿರುವ ಸಂಧ್ಯಾ ಕೆಲಸವನ್ನು ಹುಡುಕುತ್ತಿದ್ದಾಳೆ. ಪೇಪರ್ ನಲ್ಲಿ ಬಂದ ಆಡ್ ಗಳನ್ನು ಗಮನಿಸಿ ಎಲ್ಲವನ್ನೂ ಮಾರ್ಕ್ ಮಾಡುತ್ತಿದ್ದಾರೆ. ದತ್ತ ತಾತ ಮತ್ತು ಸಿರಿ ಇಬ್ಬರೂ ಸಂಧ್ಯಾಳಿಗೆ ಸ್ವಂತ ಬಿಸಿನೆಸ್ ಅನ್ನು ಓಪನ್ ಮಾಡಲು ಸಲಹೆ ನೀಡುತ್ತಾರೆ. ಆಗ ಸಂಧ್ಯಾಳಿಗೆ ಈಗಾಗಲೇ ಮಾಡಿರುವ ಸಾಲದ ದುಡ್ಡು ಮಾವನ ಪಾಲಾಗಿದೆ. ಈಗ ಮತ್ತೆ ಸಾಲ ಮಾಡಿ ಬಿಸಿನೆಸ್ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದಾಳೆ. ಸಂಧ್ಯಾಳಿಗೆ ತನ್ನ ತಪ್ಪಿನ ಅರಿವಾಗಿದ್ದು, ಒಳ್ಳೆಯ ಬುದ್ಧಿಯನ್ನು ಕಲಿತಿದ್ದಾಳೆ.

srirasthu shubhamasthu serial 13 August episode written update

ಸ್ಮಶಾನದಲ್ಲಿ ಶಾರ್ವರಿಯನ್ನು ಕಂಡ ತುಳಸಿ

ಇನ್ನು ತುಳಸಿ ಮಾರ್ಕೆಟ್ ಗೆ ತರಕಾರಿ ತರಲೆಂದು ಹೊರಟಿದ್ದು, ಶಾರ್ವರಿಯನ್ನು ದಾರಿಯಲ್ಲಿ ನೋಡಿದ್ದಾಳೆ. ಅನುಮಾನಗೊಂಡು ಶಾರ್ವರಿಯನ್ನು ತುಳಸಿ ಫಾಲೋ ಮಾಡುತ್ತಾಳೆ. ಶಾರ್ವರಿ ಸ್ಮಶಾನಕ್ಕೆ ತೆರಳಿದ್ದು, ಅಲ್ಲಿ ಶರ್ಮಿಳಾ ಎಂಬ ಗೋರಿ ಮುಂದೆ ತೆಂಗಿನ ಕಾಯಿಗೆ ಕರ್ಪೂರ ಹಚ್ಚಿ ಶಪಥ ಮಾಡುತ್ತಾಳೆ. ಈ ತೆಂಗಿನಕಾಯಿ ಚೂರಾಗುವಂತೆ ಮಾಧವ್ ಕುಟುಂಬ ಕೂಡ ಒಡೆದು ಹೋಗುವಂತೆ ಮಾಡುತ್ತೇನೆ ಎಂದು ಹೇಳುತ್ತಾಳೆ. ತುಳಸಿ ಇದನ್ನೆಲ್ಲಾ ಗಮನಿಸುತ್ತಾಳೆ. ಶಾರ್ವರಿ ಯಾಕೆ ಅಲ್ಲಿಗೆ ಹೋದಳು ಎಂದು ತುಳಸಿ ಆಲೋಚಿಸುತ್ತಿರುತ್ತಾಳೆ. ತುಳಸಿ ಶಾರ್ವರಿಯ ಮೂಲವನ್ನು ಕಂಡು ಹಿಡಿಯುತ್ತಾರೆ.

ಅಣ್ಣನ ನಡವಳಿಕೆಯಿಂದ ಅಭಿ ಬೇಸರ

ಹೊಸ ಪ್ರಾಜೆಕ್ಟ್ ಬಗ್ಗೆ ಮೀಟಿಂಗ್ ಮುಗಿದಾಗ ಅವಿನಾಶ್ ಗೆ ಖುಷಿಯಾಗುತ್ತದೆ. ಟೆಂಡರ್ ತಮ್ಮ ಪಾಲಾಗಿದ್ದಕ್ಕೆ ಸಂತಸ ಪಡುತ್ತಾನೆ. ಈ ಬಗ್ಗೆ ಎಲ್ಲರ ಎದುರು ಅವಿ ಆಫೀಸಿನಲ್ಲಿ ಸಮರ್ಥ್ ಅನ್ನು ಪ್ರಶಂಶಿಸುತ್ತಾನೆ. ಇಷ್ಟಕ್ಕೆಲ್ಲಾ ಕಾರಣ ಸಮರ್ಥ್ ಎಂದು ಅವಿ ತಬ್ಬಿಕೊಳ್ಳುತ್ತಾನೆ. ಇದರಿಂದ ಅಭಿಗೆ ತೀರಾ ಕೋಪ ಬರುತ್ತದೆ. ಬೇಸರಗೊಂಡ ಅಭಿ ಕಂಟ ಪೂರ್ತಿ ಕುಡಿದು ರಸ್ತೆಯಲ್ಲಿ ತೂರಾಡುತ್ತಿರುತ್ತಾನೆ. ಇದನ್ನು ನೋಡುವ ಸಮರ್ಥ್ ಹಾಗೆ ಬಿಟ್ಟು ಹೋಗಲು ಮನಸಾಗದೇ, ಅವನನ್ನು ಮನೆಗೆ ಡ್ರಾಪ್ ಮಾಡಲು ಮುಂದಾಗುತ್ತಾನೆ.

srirasthu shubhamasthu serial 13 August episode written update

ಅಭಿಯನ್ನು ಮನೆಗೆ ಕರೆತಂದ ಸಮರ್ಥ್

ಮನೆಯಲ್ಲಿ ತುಳಸಿ ಇನ್ನು ಅಭಿ ಮನೆಗೆ ಬಂದಿಲ್ಲ ಎಂದು ಯೋಚಿಸುತ್ತಾ ಕಾಯುತ್ತಿರುತ್ತಾಳೆ. ತುಳಸಿ ಜೊತೆಗೆ ಅವಿ ಕೂಡ ಎದ್ದಿರುತ್ತಾನೆ. ಸಮರ್ಥ್ ಅವನನ್ನು ಕರೆದುಕೊಂಡು ಬರುವುದನ್ನು ನೋಡಿ ಶಾಕ್ ಆಗುತ್ತಾರೆ. ರಾತ್ರಿ ಪೂರ್ತಿ ಅವಿ ಮತ್ತು ತುಳಸಿ ಇಬ್ಬರೂ ಅಭಿ ಸೇವೆಯನ್ನು ಮಾಡುತ್ತಾ ರಾತ್ರಿಯೆಲ್ಲಾ ನಿದ್ದೆಗೆಡುತ್ತಾರೆ. ಬೆಳಗಿನ ಜಾವ ಅವನಿಗೆ ನಮ್ಮನ್ನು ನೋಡಿ ಮನಸ್ಸಿಗೆ ನೋವಾಗಬಾರದು ಎಂದು ಅಲ್ಲಿಂದ ಎದ್ದು ಬರುತ್ತಾರೆ. ಈ ಸಂದರ್ಭವನ್ನು ಬಳಸಿಕೊಂಡ ಶಾರ್ವರಿ ಅಭಿ ಏಳುವ ಸಮಯದಲ್ಲಿ ಎದುರಿಗಿದ್ದು, ನೀನು ಮನೆಗೆ ಬಂದ ರೀತಿಯನ್ನು ಯಾರ ಬಳೀಯೂ ಹೇಳಬೇಡ. ನನಗೆ ಮಾತ್ರ ಗೊತ್ತಿದೆ ಎಂದು ಸುಳ್ಳು ಹೇಳಿ ಕಳಿಸುತ್ತಾಳೆ. ಇದನ್ನು ತುಳಸಿ ಗಮನಿಸುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X