ಪೂರ್ಣಿ ಬದುಕಿಗೆ ಕಂಟಕವಾದ ದೀಪಿಕಾ ; ಅಪಾಯದಿಂದ ಕಾಪಾಡ್ತಾಳಾ ತುಳಸಿ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದೀಪಿಕಾ ಪ್ರಿಯಕರ ಅಭಿ ಅನ್ನು ಮದುವೆಯಾಗಿ ಖುಷಿ ಖುಷಿಯಾಗಿ ದಾಂಪತ್ಯ ಜೀವನವನ್ನು ಆರಂಭಿಸಿದ್ದಾಳೆ. ಆದರೆ, ಈ ಸಂತಸದ ನಡುವಲ್ಲೂ ಮನದೊಳಗೆ ದ್ವೇಷದ ಬೆಂಕಿಯನ್ನು ಆರಲು ಬಿಡದೇ, ಮಾಧವ್, ಪೂರ್ಣಿಮಾ ಮೇಲೆ ದೀಪಿಕಾ ವಿಷ ಕಾರಲು ಮುಂದಾಗಿದ್ದಾಳೆ. ತುಳಸಿ ಮತ್ತು ಮಾಧವ್ ಮೇಲಿನ ದ್ವೇಷವನ್ನು ದೀಪಿಕಾ, ಪೂರ್ಣಿ ಮೂಲಕ ತೋರಿಸಿಕೊಳ್ಳಲು ಪ್ಲಾನ್ ಮಾಡಿದ್ದಾಳೆ. ಪೂರ್ಣಿಯನ್ನು ಪ್ರತೀ ಕ್ಷಣವೂ ಕೂಡ ಚುಚ್ಚಿ ಚುಚ್ಚಿ ಮಾತನಾಡಿಸುತ್ತಿದ್ದಾಳೆ.

ಪೂರ್ಣಿ ಬದುಕಿಗೆ ವಿಷವಾಗುತ್ತಾಳಾ ದೀಪಿಕಾ..?

ಪೂರ್ಣಿಮಾಳಿಗೆ ಮಕ್ಕಳಾಗಲಿ ಎಂದು ತುಳಸಿ ಕೊಡಿಸುತ್ತಿರುವ ಟಾನಿಕ್ ಬಾಟಲ್ ಗಳನ್ನು ಕದ್ದು ರೂಮಿಗೆ ತಂದ ದೀಪಿಕಾ ಅದಕ್ಕೆ ವಿಷಕ್ಕಿಂತಲೂ ಅಪಾಯಕಾರಿಯಾದ ಬಾತ್ ರೂಮ್ ಕ್ಲೀನರ್ ಅನ್ನು ಮಿಕ್ಸ್ ಮಾಡಿದ್ದಾಳೆ. ಪೂರ್ಣಿಮಾ ಗರ್ಭಿಣಿ ಆಗಬಾರದು. ಇದರಿಂದ ಪೂರ್ಣಿಮಾ ಹಾಗೂ ಅವಿಗೆ ಎಷ್ಟು ನೋವಾಗುತ್ತದೆಯೋ ಅದಕ್ಕಿಂತಲೂ ಹೆಚ್ಚು ನೋವಾಗುವುದು ಮಾಧವ್ ಗೆ. ಆಗ ಮಾಧವ್ ಬಾಳಲ್ಲಿ ಬರೀ ದುಃಖವೇ ತುಂಬಿರುತ್ತದೆ ಎಂದು ದೀಪಿಕಾ ಹೀಗೆ ಪ್ಲಾನ್ ಮಾಡಿದ್ದಾಳೆ. ಪೂರ್ಣಿಮಾಳನ್ನು ಟಾರ್ಗೆಟ್ ಮಾಡಿರುವ ದೀಪಿಕಾ ಶಾರ್ವರಿಗೆ ಸಪೋರ್ಟ್ ಮಾಡುವುದರ ಜೊತೆಗೆ ಖುಷಿಯನ್ನ ಹೆಚ್ಚಿಸಿದ್ದಾಳೆ.

Srirasthu shubhamasthu serial 13 February episode written update

ಪ್ರೇಮಿಗಳ ದಿನಾಚರಣೆಗೆ ದೀಪಿಕಾ ಪ್ಲ್ಯಾನ್

ಮನೆಯವರ ಬಳಿ ಒಳ್ಳೆಯ ಹೆಸರು ಪಡೆಯಲು ದೀಪಿಕಾ ಬಹಳಷ್ಟು ನಾಟಕ ಮಾಡುತ್ತಿದ್ದಾಳೆ. ಆದರೆ, ದೀಪಿಕಾಳ ಈ ನಾಟಕದ ಬದುಕು ಹೆಚ್ಚು ಕಾಲ ನಡೆಯುವುದಿಲ್ಲ. ಹಾಗಿದ್ದರೂ ಕೂಡ ಮನೆಯವರ ಎದುರು ಒಳ್ಳೆ ಹೆಸರು ಪಡೆಯಲು ಕಾತುರರಾಗಿದ್ದಾಳೆ. ಇದೇ ಸಂದರ್ಭದಲ್ಲಿ ಅಭಿ ಜೊತೆಗೆ ಪ್ರೇಮಿಗಳ ದಿನದ ಅಂಗವಾಗಿ ಸರ್ಪ್ರೈಸ್ ಕೊಡಲು ಮುಂದಾಗಿದ್ದಾಳೆ. ತನಗೂ ಮತ್ತು ಅಭಿಗೂ ಟೇಬಲ್ ಬುಕ್ ಮಾಡಿ ಅದಕ್ಕೆ ಅಲಂಕಾರ ಮಾಡಿಸಿದ್ದಾಳೆ. ಕೆಕ್ ಆರ್ಡರ್ ಕೊಟ್ಟಿದ್ದಾಳೆ. ಸಂಜೆ ಇಬ್ಬರೇ ಪಾರ್ಟಿಯಲ್ಲಿ ಎಂಜಾಯ್ ಮಾಡಲು ತಯಾರಿ ನಡೆಸಿದ್ದಾಳೆ. ಆದರೆ, ಮನೆಯಲ್ಲಿ ಎಲ್ಲರೂ ಪ್ರೇಮಿಗಳ ದಿನವನ್ನು ಮನೆಯಲ್ಲೇ ಆಚರಿಸೋಣ ಎಂದು ನಿರ್ಧರಿಸಿದ್ದಾರೆ. ಇದರಿಂದ ದೀಪಿಕಾಳಿಗೆ ಈಗ ಸಂಕಷ್ಟ ಎದುರಾಗಿದೆ.

ಮತ್ತೆ ಕಿತ್ತಾಡಿದ ಸಮರ್ಥ್-ಅಭಿ

ಇನ್ನು ಸಮರ್ಥ್ ತನ್ನ ಪಾಡಿಗೆ ತಾನು ಬಂದು ಕೆಲಸದ ಬಗ್ಗೆ ಅಭಿ ಬಳಿ ವಿಚಾರಿಸುತ್ತಾನೆ. ಅಭಿ ಸಮರ್ಥ್ ಬಳಿ ಕೆಟ್ಟದಾಗಿ ನಡೆದುಕೊಂಡು ಕೋಪ ಬರಿಸುತ್ತಾನೆ. ಇಬ್ಬರೂ ಕಿತ್ತಾಡುವುದನ್ನು ನೋಡಿದ ಮಹೇಶ ಬಂದು ಜಗಳ ಬಿಡಿಸುತ್ತಾನೆ. ಆದರೆ, ಅಭಿ ಬಾಯಿ ಮುಚ್ಚಿಕೊಂಡು ಸುಮ್ಮನಿರದೇ ಸಮರ್ಥ್ ಅನ್ನು ಚುಚ್ಚಿ ಮಾತನಾಡುತ್ತಾನೆ. ಇದರಿಂದ ಸಮರ್ಥ್ ಗೂ ಕೋಪ ಬಂದು ಅಭಿಯನ್ನು ಹೊಡೆಯಲು ಮುಂದಾಗುತ್ತಾನೆ. ಆಗ ಮಹೇಶ್ ಸಮರ್ಥ್ ಗೆ ರಜೆ ಕೊಟ್ಟು ಕಳಿಸುತ್ತಾನೆ. ಸಮರ್ಥ್ ನ ಗಮನಿಸಿದ ದೀಪಿಕಾ ಈಗ ತನ್ನ ಲಿಸ್ಟ್ ನಲ್ಲಿ ಸಮರ್ಥ್ ಅನ್ನು ಕೂಡ ಸೇರಿಸಿಕೊಳ್ಳುತ್ತಾಳೆ.

Srirasthu shubhamasthu serial 13 February episode written update

ದೀಪಿಕಾಳನ್ನು ತಯಾರಿ ಮಾಡುತ್ತಿರುವ ಶಾರ್ವರಿ

ಶಾರ್ವರಿ ಬಳಿ ಸಮರ್ಥ್ ಅನ್ನು ಸುಮ್ಮನೆ ಬಿಡುವುದಿಲ್ಲ ಎಂದು ದೀಪಿಕಾ ಹೇಳುತ್ತಾಳೆ. ಶಾರ್ವರಿಗೂ ಕೂಡ ಇದೇ ಬೇಕಾಗಿರುವುದು, ಸಾಧ್ಯವಾದಷ್ಟು ತನ್ನ ಕೆಲಸಗಳನ್ನು ದೀಪಿಕಾಳೇ ಮಾಡಿದರೆ, ತನಗೆಲ್ಲವೂ ಸುಲಭವಾಗುತ್ತದೆ ಎಂದು ಆಲೋಚಿಸಿದ್ದಾಳೆ. ಹೀಗಾಗಿ ಶಾರ್ವರಿ ಪದೇ ಪದೇ ಬಂದು ದೀಪಿಕಾಳ ತಲೆಗೆ ಬೇಡದ ಕೆಟ್ಟ ಆಲೋಚನೆಗಳನ್ನೇ ತುಂಬುತ್ತಿರುತ್ತಾಳೆ. ದೀಪಿಕಾ, ಶಾರ್ವರಿ ಜೊತೆಗೆ ಸೇರಿಕೊಂಡು ಮನೆಯನ್ನು ಛಿಧ್ರ ಛಿಧ್ರ ಮಾಡಲು ಮುಂದಾಗಿದ್ದಾಳೆ. ಆದರೆ, ತುಳಸಿ ಇದೆಲ್ಲಾ ಅಪಾಯಗಳಿಂದಲೂ ಹೇಗೆ ಮನೆಯವರನ್ನೂ ಕಾಪಾಡಿಕೊಳ್ಳುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
deepika is now planning to detroy house. Even sharvari is supporting deepika
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X