Srirasthu Shubhamasthu ಸತ್ಯ ಮುಚ್ಚಿಡಲಾಗದೇ ಒದ್ದಾಡುತ್ತಿರುವ ನಿಧಿ ; ದತ್ತ ತಾತ ಕಾಣದೇ ಕಂಗಾಲಾದ ಸಿರಿ !

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಿಧಿ ಮನೆಯವರಿಗೆ ತಿಳಿಸದೇ ಗೆಳೆಯರಿಗೆ ಪಾರ್ಟಿ ಕೊಡಿಸಲು ಹೋಗಿ ಸಮಸ್ಯೆಯನ್ನು ತಂದೊಡ್ಡಿಕೊಂಡಿದ್ದಾಳೆ. ವಾಪಸ್ ಬರುವಾಗ ದತ್ತ ತಾತ ಹಾಗೂ ಸಿರಿ ತಂದೆಗೆ ಕಾರನ್ನು ಗುದ್ದಿದ್ದಾಳೆ. ಗಾಬರಿಯಲ್ಲಿ ಯಾರು ಎಂಬುದನ್ನೂ ನೋಡದೇ, ಅಲ್ಲಿಂದ ಮನೆಗೆ ಬಂದಿದ್ದಾಳೆ.
ಮನೆಗೆ ಬಂದವಳೇ ಸಮರ್ಥ್ ಬಳಿ ಸತ್ಯ ಹೇಳಿದ್ದಾರೆ. ಇಬ್ಬರಿಗೆ ಆಕ್ಸಿಡೆಂಟ್ ಮಾಡಿದೆ. ಅವರಿಗೆ ಏನಾಯ್ತೋ ಗೊತ್ತಿಲ್ಲ ಎಂದು ಗಾಬರಿಯಾಗಿ ಹೇಳಿಕೊಂಡಿದ್ದಾಳೆ.

ನಾಪತ್ತೆಯಾಗಿರುವ ದತ್ತ ತಾತ

ಸಮರ್ಥ್ ಎಲ್ಲಾ ತಾನು ಮ್ಯಾನೇಜ್ ಮಾಡುವುದಾಗಿ ಹೇಳಿದ್ದು, ಕಾರಿನ ಮೇಲಾಗಿರುವ ರಕ್ತದ ಕಲೆಯನ್ನು ತೊಳೆದಿದ್ದಾನೆ. ಇತ್ತ ಸಿರಿ ಇಡೀ ರಾತ್ರಿ ದತ್ತ ತಾತ ಮತ್ತು ತನ್ನ ತಂದೆಗಾಗಿ ಕಾದಿದ್ದಾಳೆ. ಆದರೆ ಅವರು ಮನೆಗೆ ಬಂದಿಲ್ಲ. ಬೆಳಗ್ಗೆದ್ದು ಮದುವೆಗೆ ಹೊರಡಲು ತಯಾರಿ ನಡೆಸಿದ್ದಾಳೆ. ಈಗಳೂ ಫೋನ್ ಮಾಡಿದರೂ ಸಿಗದ ಕಾರಣ ಸಿರಿ ಸ್ವಲ್ಪ ಗಾಬರಿಯಾಗಿದ್ದಾಳೆ. ಆದರೆ, ನ್ಯೂಸ್ ಚಾನೆಲ್ ನಲ್ಲಿ ಅಪಘಾತದ ಬಗ್ಗೆ ವೀಡಿಯೋ ಸಮೇತ ತೋರಿಸಿದ್ದು, ಸಿರಿ ಟಿವಿ ಪಕ್ಕದಲ್ಲೇ ಇದ್ದರೂ ಗಮನಿಸಿಲ್ಲ. ಸಂಧ್ಯಾ ಮಾತ್ರ ತಾತ ಮತ್ತು ನಿಮ್ಮ ತಂದೆ ನಿಧಾನವಾಗಿ ಮನೆಗೆ ಬಂದು ಬಳಿಕ ಮದುವೆಗೆ ಬರುತ್ತಾರೆ ಎಂದು ಸಮಾಧಾನ ಹೇಳಿದ್ದಾಳೆ.

srirasthu shubhamasthu serial 13 January episode written update

ಸತ್ಯ ಹೇಳಲು ಪ್ರಯತ್ನಿಸಿದ ನಿಧಿ

ನಿಧಿಗೆ ಟೆನ್ಷನ್ ಆಗಿದ್ದು, ಬೆಳಗ್ಗೆ ಅವಳಿಗೆ ಜ್ವರ ಬಂದಿದೆ. ಅಲ್ಲದೇ ನಿದ್ದೆಯಲ್ಲಿ ತಾನು ಏನೂ ಮಾಡಿಲ್ಲ ಎಂದು ಕೊರಗುತ್ತಿದ್ದಾಳೆ. ಇದನ್ನು ನೋಡಿ ಶಾರ್ವರಿ ಗಾಬರಿಯಾಗುತ್ತಾಳೆ. ಆದರೆ, ಅವಿ ನಿಧಿಗೆ ಮದುವೆಯಾಗುತ್ತಿರುವುದಕ್ಕೆ ಟೆಂಷನ್ ಆಗಿ ಹೀಗೆ ಜ್ವರ ಬಂದಿರಬೇಕು ಎಂದು ಹೇಳಿದ್ದಾನೆ. ತುಳಸಿಗೆ ನಿಧೀ ಕನವರಿಕೆ ಬಗ್ಗೆ ಅನುಮಾನವಿದ್ದು, ಏನೂ ಗೊತ್ತಿಲ್ಲದ ಕಾರಣ ಸುಮ್ಮನಾಗುತ್ತಾಳೆ. ಬೆಳಗೆದ್ದು ರೆಡಿಯಾದ ನಿಧಿ ಶಾರ್ವರಿ ಬಳಿ ಸತ್ಯ ಹೇಳಲು ಯತ್ನಿಸುತ್ತಾಳೆ. ಆದರೆ, ಸಾಧ್ಯವಾಗುವುದಿಲ್ಲ. ಹಾಗಾಘಿ ತಂದೆ ಮಹೇಶನ ಬಳಿ ಹೋಗಿ ಸತ್ಯ ಹೇಳಲು ಮುಂದಾಗುತ್ತಾಳೆ.


ನಿಧಿ ಪರ ನಿಂತಿರುವ ಸಮರ್ಥ್

ಅಷ್ಟರಲ್ಲಿ ಅಲ್ಲಿಗೆ ಬಂದ ಸಮರ್ಥ್ ನಿಧಿ ಸತ್ಯ ಹೇಳದಂತೆ ತಡೆಯುತ್ತಾನೆ. ಮಹೇಶನನ್ನು ಮಾಧವ್ ಕರೆಯುತ್ತಿದ್ದಾರೆ ಎಂದು ಹೇಳಿ ಅಲ್ಲಿಂದ ಕಳಿಸುತ್ತಾನೆ. ಬಳಿಕ ನಿಧಿಗೆ ಸಮಾಧಾನ ಮಾಡುತ್ತಾನೆ. ಇದರ ಬಗ್ಗೆ ನೀವು ಗಾಬರಿಯಾಗಬೇಡಿ. ಇದನ್ನೆಲ್ಲಾ ನಾನು ಮ್ಯಾನೇಜ್ ಮಾಡುತ್ತೇನೆ. ಇವತ್ತು ನಾಳೆ ನಿಮ್ಮ ಮದುವೆ. ನಿಮ್ಮ ಬದುಕು ಬದಲಾಗುವ ಸಮಯ. ಈಗ ಎಡವಟ್ಟು ಮಾಡಿಕೊಳ್ಳಬೇಡಿ ಎಂದು ಹೇಳುತ್ತಾನೆ. ಇದನ್ನು ತುಳಸಿ ಕೇಳಿಸಿಕೊಳ್ಳುತ್ತಾಳೆ. ತುಳಸಿ ಸತ್ಯ ತಿಳಿಯುತ್ತಾಳಾ..? ಮುಂದೇನಾಗಬಹುದು ಎಂಬ ಕುತೂಹಲ ಮೂಡಿದೆ.


ದೀಪಿಕಾಳನ್ನು ದಾರಿಗೆ ತರಲು ಪೂರ್ಣಿ ಯತ್ನ

ಇನ್ನು ದೀಪಿಕಾಳಿಗೆ ಪೂರ್ಣಿ ಎಂದರೆ ಆಗುವುದಿಲ್ಲ ಎಂಬ ಸತ್ಯ ಈಗ ಅಭಿಗೂ ಗೊತ್ತಾಗಿದೆ. ತನ್ನ ಅತ್ತಿಗೆಗೋಸ್ಕರ ಕಾಸ್ಟ್ಲಿ ಸೀರೆಯನ್ನು ತಂದಿದ್ದಾನೆ. ಇದನ್ನು ದೀಪಿಕಾನೇ ಕೊಡಬೇಕು ಎಂದು ಹೇಳಿದ್ದಾನೆ. ಸೀರೆ ನೋಡಿ ದೀಪಿಕಾ ಹೊಟ್ಟೆ ಉರಿದುಕೊಂಡಿದ್ದು, ಅಭಿ ಮುಂದೆ ಕೋಪ ತೋರಿಸಲಾಗದೇ ಸುಮ್ಮನಾಗಿದ್ದಾಳೆ. ಆ ಸೀರೆಯನ್ನು ತೆಗೆದುಕೊಂಡು ಹೋಗಿ ಪೂರ್ಣಿ ಮುಂದೆ ಎಸೆಯುತ್ತಾಳೆ. ಅಭಿ ನಿನಗೋಸ್ಕರ ತಂದಿದ್ದು ಎಂದು ವ್ಯಂಗ್ಯವಾಗಿ ಮಾತನಾಡುತ್ತಾಳೆ. ಆಗ ಪೂರ್ಣಿಮಾ ದೀಪಿಕಾಳನ್ನು ಜೋರು ಮಾಡಿ ಸೀರೆಯನ್ನು ಅವಳೇ ತೆಗೆದು ಕೈಗೆ ಕೊಡುವಂತೆ ಮಾಡುತ್ತಾಳೆ. ಇದನ್ನು ಗಮನಿಸಿದ ಅಭಿ ದೀಪಿಕಾ ದಾರಿಗೆ ಬರುತ್ತಿದ್ದಾಳೆ ಎಂದು ಖುಷಿ ಪಡುತ್ತಾನೆ. ಆದರೆ, ದೀಪಿಕಾ ಪೂರ್ಣಿಮಾ ನಡವಳಿಕೆಯನ್ನು ಕಂಡು ಬೇಸರ ಮಾಡಿಕೊಂಡಿದ್ದಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X