Srirasthu Shubhamasthu ; ಪೂರ್ಣಿಮಾ ಬಗ್ಗೆ ಸತ್ಯ ತಿಳಿದ ಅವಿನಾಶ್ : ಜನಾರ್ಧನ್ ಬಲೆಗೆ ಬಿದ್ದ ಕುಳ ಯಾರು..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಿಧಿ ಮದುವೆ ನಿಂತು ಹೋಯ್ತು ಎಂಬ ಕಾರಣಕ್ಕೆ ತುಳಸಿ ಮತ್ತು ಮಾಧವ್ ಮನೆ ಬಿಟ್ಟು ಹೊರಟಿದ್ದರು.ಆದರೆ, ಈಗ ಬೀಗರು ಮದುವೆಗೆ ಒಪ್ಪಿರುವುದಕ್ಕೆ ತುಳಸಿ ಮತ್ತು ಮಾಧವ್ ಮನೆಯಲ್ಲೇ ಉಳಿದಿದ್ದಾರೆ. ಈಗ ಶಾರ್ವರಿ ತುಳಸಿ ಹೊಟ್ಟೆಯಲ್ಲಿರುವ ಮಗುವನ್ನು ಕೊಲ್ಲಲು ಪ್ಲಾನ್ ಮಾಡಿದ್ದಾಳೆ. ಇತ್ತ ದೀಪಿಕಾಳಿಗೆ ಪೂರ್ಣಿಮಾ ಮೇಲಿನ ಕೋಪ, ದ್ವೇಷ ಹೆಚ್ಚಾಗಿದೆ. ತನ್ನ ತಂದೆ-ತಾಯಿ ಪೂರ್ಣಿಮಾ ಜೊತೆಗೆ ಮಾತನಾಡುವುದು ದೀಪಿಕಾಳಿಗೆ ಸ್ವಲ್ಪವೂ ಇಷ್ಟವಿಲ್ಲ.
ವನಜಾಳನ್ನು ಅವಾಯ್ಡ್ ಮಾಡುತ್ತಿರುವ ಪೂರ್ಣಿಮಾ
ಹಾಗಾಗಿ ದೀಪಿಕಾ ಪೂರ್ಣಿಮಾಳಿಗೆ ವಾರ್ನಿಂಗ್ ಕೊಟ್ಟಿದ್ದಾಳೆ. ತನ್ನ ತಂದೆ-ತಾಯಿಯಿಂದ ದೂರ ಇರು. ನನ್ನ ನೆಮ್ಮದಿಯನ್ನು ಹಾಳು ಮಾಡಲು ಬರಬೇಡ. ನೀನು ಅನಾಥೆ ಎಂಬುದನ್ನು ಮರೆಯಬೇಡ ಎಂದು ತನ್ನ ಇನ್ ಸೆಕ್ಯುರಿಟಿಯನ್ನು ಹೇಳಿಕೊಂಡಿದ್ದಾಳೆ. ದೀಪಿಕಾ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡ ಪೂರ್ಣಿಮಾ ಈಗ ವನಜಾಳ ಜೊತೆಗೆ ಮಾತನಾಡುವುದನ್ನೇ ನಿಲ್ಲಿಸಿದ್ದಾಳೆ. ವನಜಾ ಎಷ್ಟೇ ಫೊನ್ ಮಾಡಿದರೂ ಕೂಡ ರೆಸ್ಪಾನ್ಸ್ ಮಾಡುತ್ತಿಲ್ಲ. ತನ್ನಿಂದ ದೀಪಿಕಾಳಿಗೆ ನೋವಾಗುವುದು ಬೇಡ ಪೂರ್ಣಿಮಾ ತೀರ್ಮಾನಿಸಿದ್ದಾಳೆ. ತುಳಸಿಗೆ ಸತ್ಯ ಗೊತ್ತಿಲ್ಲದೇ ಹೋದರೂ ಪೂರ್ಣಿಮಾಳಿಗೆ ಭೇಸರ ಮಾಡಬಾರದು ಎಂದು ಸುಮ್ಮನಿದ್ದಾಳೆ.

ಅನಾಥಾಶ್ರಮಕ್ಕೆ ಬಂದ ಜನಾರ್ಧನ್
ಇತ್ತ ಜನಾರ್ಧನ್ ಆಸ್ತಿಗಾಗಿ ತನ್ನ ಮೊದಲ ಮಗಳ ಹುಡುಕಾಟದಲ್ಲಿದ್ದಾನೆ. ಎಲ್ಲಾ ಅನಾಥಾಶ್ರಮವನ್ನು ಸುತ್ತಾಡಿದ ಜನಾರ್ಧನ್ ಈಗ ವನಜಾ ಜೊತೆಗೆ ಸಂಪರ್ಕದಲ್ಲಿರುವ ಅನಾಥಶ್ರಮಕ್ಕೆ ಬಂದಿದ್ದಾನೆ. ಅನ್ನಪೂರ್ಣೇಶ್ವರಿಗೆ ಐದು ಲಕ್ಷ ಹಣ ಕೊಟ್ಟಿದ್ದಾನೆ. ತನ್ನ ಮಗುವಿನ ಬಗ್ಗೆ ಮಹಿತಿ ನೀಡಿ ಎಂದು ಕೇಳಿದ್ದಾನೆ. ಮಗುವಿನ ಫೋಟೋ ನೋಡುತ್ತಿದ್ದ ಹಾಗೆಯೇ ಅನ್ನಪೂರ್ಣೇಶ್ವರಿ ಗಾಬರಿಯಾಗಿದ್ದಾಳೆ. ಪೂರ್ಣಿಮಾ ತನ್ನ ಆಶ್ರಮದಲ್ಲೇ ಓದಿದ ಮಗು. ಅವಳ ಬದುಕಿಗೆ ತೊಂದರೆಯಾಗಬಾರದು ಎಂದು ವನಜಾಳಿಗೆ ಫೋನ್ ಮಾಡಿ ಸತ್ಯ ಹೇಳಿದ್ದಾಳೆ. ವನಜಾ ಯಾವುದೇ ಕಾರಣಕ್ಕೂ ತನ್ನ ಪತಿಸಿಗೆ ಸತ್ಯ ಹೇಳಬೇಡಿ ಎಂದಿದ್ದಾಳೆ.
ಮಗಳ ಬಗ್ಗೆ ಜನಾರ್ಧನ್ ಗೆ ಮಾಹಿತಿ ಸಿಗುತ್ತಾ..?
ಅನ್ನಪೂರ್ಣೇಶ್ವರಿ ಸತ್ಯ ಹೇಳಲು ನಿರಾಕರಿಸಿದ್ದು, ಹಣವನ್ನು ಜನಾರ್ಧನ್ ಗೆ ವಾಪಸ್ ಮಾಡಿದ್ದಾರೆ. ಈಗ ಜನಾರ್ಧನ್ ಅದೇ ಅನಾಥಾಶ್ರಮದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬನನ್ನು ಭೇಟಿ ಮಾಡಿ ಹಣದಾಸೆ ತೋರಿಸಿ ಪೂರ್ಣಿಮಾ ಬಗ್ಗೆ ವಿಚಾರಿಸಿದ್ದಾನೆ. ಆ ವ್ಯಕ್ತಿ ಹಣದಾಸೆಗೆ ಎಲ್ಲಾ ಸತ್ಯವನ್ನೂ ಹೇಳುತ್ತಾನಾ..? ಹಾಗೇನಾದರೂ ಆದರೆ, ಪೂರ್ಣಿಮಾಳೇ ತನ್ನ ಮಗಳು ಎಂಬ ಸತ್ಯ ಜನಾರ್ಧನ್ ಗೆ ಗೊತ್ತಾದರೆ ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿದೆ.
ಅವಿಗೆ ಸತ್ಯ ಹೇಳಿದ ಮಾಧವ್
ಇತ್ತ ವನಜಾ ತುಳಸಿಗೆ ಜನಾರ್ಧನ್ ಅನಾಥಾಶ್ರಮಕ್ಕೆ ಹೋಗಿರುವ ವಿಚಾರವನ್ನು ಹೇಳುತ್ತಾಳೆ. ತುಳಸಿ ಮಾತುಗಳನ್ನು ಕೇಳಿಸಿಕೊಂಡ ಅವಿ, ಪ್ರಶ್ನೆ ಮಾಡುತ್ತಾನೆ. ಪೂರ್ಣಿಮಾ ತಂದೆ-ತಾಯಿ ಬಗ್ಗೆ ನಿಮಗೆ ಗೊತ್ತಿದೆಯಾ ಎಂದು ಪ್ರಶ್ನಿಸಿದ್ದು. ಮಾಧವ್ ಬಂದು ಸತ್ಯ ಹೇಳಿದ್ದಾನೆ. ಪೂರ್ಣಿಮಾ ಅಪ್ಪ-ಅಮ್ಮ ವನಜಾ ಮತ್ತು ಜನಾರ್ಧನ್ ಆದರೆ, ಈ ವಿಚಾರವನ್ನು ನಾವೇ ಮುಚ್ಚಿಟ್ಟಿದ್ದೀವಿ. ಜನಾರ್ಧನ್ ಬದಲಾದ ಬಳಿಕ ಈ ಸತ್ಯವನ್ನು ತಿಳಿಸುತ್ತೇವೆ. ಇಲ್ಲದೇ ಹೋದರೆ ಪೂರ್ಣಿಮಾಳಿಗೆ ಬಹಳ ನೋವಾಗುತ್ತದೆ ಎಂದು ಹೇಳುತ್ತಾನೆ. ಮಾಧವ್ ಮಾತನ್ನು ಕೇಳಿದ ಅವಿಗೆ ಖುಷಿಯಾಗಿದೆ. ಈ ಸತ್ಯ ಯಾರಿಗೆ ತಿಳಿದರೂ ಖುಷಿ ಪಡುತ್ತಾರೆ. ಆದರೆ, ದೀಪಿಕಾ ಈಗಲೇ ತನ್ನ ಪ್ರೀತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಬಯಸುತ್ತಿಲ್ಲ. ಇನ್ನು ಪೂರ್ಣಿಮಾ ತನ್ನ ಅಕ್ಕ ಎಂದು ತಿಳಿದರೆ ಏನು ಮಾಡುತ್ತಾಳೆ ಎಂಬ ಆತಂಕ ವೀಕ್ಷಕರಲ್ಲಿ ಮೂಡಿದ್ದು ಎಲ್ಲಾ ಕುತೂಹಲಗಳಿಗೂ ಮುಂದಿನ ಸಂಚಿಕೆಗಳೇ ತೆರೆ ಎಳೆಯಬೇಕಿದೆ.


Click it and Unblock the Notifications











