Srirasthu Shubhamasthu ; ಪೊಲೀಸ್ ಠಾಣೆಗೆ ಹೋದ ಸಮರ್ಥ್ : ಮಾಧವ್ ಕುಟುಂಬದ ವಿರುದ್ಧ ದೂರು ದಾಖಲು
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಿರಿ ಗಾಬರಿಯಾಗಿದ್ದಾಳೆ. ಸಮರ್ಥ್ ತುಳಸಿ ಬಗ್ಗೆ ತಲೆ ಕೆಡಿಸಿಕೊಂಡಿದ್ದು, ಅಮ್ಮನನ್ನು ನಾನು ಮನೆಗೆ ಕರೆದುಕೊಂಡು ಬರುತ್ತೇನೆ ಎಂದು ಹೋಗಿದ್ದಾನೆಸಿರಿ ಮನೆಯಲ್ಲಿ ಯಾವುದೇ ಸಮಸ್ಯೆ ಶುರುವಾಗದಿರಲಿ ಎಂದು ದೇವರ ಬಳಿ ಬೇಡಿಕೊಂಡಿದ್ದಾಳೆ. ಭಯದಲ್ಲೇ ದೀಪ ಹಚ್ಚಿದ್ದಾಳೆ. ಆದರೆ, ದೀಪ ತಣ್ಣಗಾಗಿದ್ದು, ಸಿರಿ ಇನ್ನಷ್ಟು ಆತಂಕಗೊಂಡಿದ್ದಾಳೆ.ಆದರೆ, ದತ್ತ ತಾತ ಏನು ಆಗುವುದಿಲ್ಲ. ಹೆದರಬೇಡ ಎಂದು ಸಿರಿಗೆ ಧೈರ್ಯ ತುಂಬಿದ್ದಾರೆ. ಆದರೆ, ಸಮರ್ಥ್ ಅಂತೂ ನಿಜವಾಗಿಯೂ ತಲೆ ಕೆಟ್ಟವನಂತೆ ಆಡುತ್ತಿದ್ದಾನೆ.
ಅಪ್ಪನ ಬಳಿ ದೂರು ನೀಡಿದ ದೀಪಿಕಾ
ಇತ್ತ ವನಜಾ ಮಗಳ ಮನೆಗೆ ಬಂದು ದೀಪಿಕಾಳನ್ನು ಭೇಟಿಯಾಗದೆಯೇ ಪೂರ್ಣಿ ಜೊತೆಗೆ ಹರಟುತ್ತಿರುತ್ತಾಳೆ. ಇದು ದೀಪಿಕಾ ಕೈಯಲ್ಲಿ ಸಹಿಸಿಕೊಳ್ಳಲು ಆಗುವುದಿಲ್ಲ. ತನ್ನ ತಾಯಿ ಆ ಅನಾಥೆ ಪೂರ್ಣಿಮಾಳನ್ನು ಹೆಚ್ಚು ಕಾಳಜಿ ತೋರುತ್ತಿದ್ದಾರೆ ಎಂದು ಬೇಸರ ಮಾಡಿಕೊಳ್ಳುತ್ತಾಳೆ. ಸೀದಾ ಅವಳ ತಂದೆ ಜನಾರ್ಧನ್ ಗೆ ಫೋನ್ ಮಾಡುವ ದೀಪಿಕಾ, ತನ್ನ ತಾಯಿ ಮಾಡಿದ್ದನ್ನು ದೂರಿನಂತೆ ಹೇಳುತ್ತಾಳೆ. ಜನಾರ್ಧನ್ ಮಾಧವ್ ಮನೆಗೆ ಬಾರದೇ ಇರುವುದಕ್ಕೆ ಬೇಸರ ಮಾಡಿಕೊಳ್ಳುತ್ತಾನೆ. ಇಬ್ಬರೂ ಸೇರಿ ಈ ಪರಿಸ್ಥಿತಿಯನ್ನು ಸರಿ ಮಾಡಬೇಕು ಎಂದು ಮಾತನಾಡಿಕೊಳ್ಳುತ್ತಾಳೆ. ಪೂರ್ಣಿಯನ್ನು ನೋಡಲು ವನಜಾ ನಿತ್ಯ ಮನೆಗೆ ಬರುತ್ತಿರುವುದು ಇವತ್ತಲ್ಲ ನಾಳೆ ಸಮಸ್ಯೆಯನ್ನು ತಂದೊಡ್ಡುವುದಂತೂ ಸತ್ಯ.

ಪೊಲೀಸರನ್ನು ಕರೆ ತಂದ ಸಮರ್ಥ್
ಸಮರ್ಥ್ ಸೀದಾ ಮಾಧವ್ ಮನೆಗೆ ಬಂದು ತನ್ನ ತಾಯಿ ತುಳಸಿಯನ್ನು ತನ್ನ ಮನೆಗೆ ಬರುವಂತೆ ಬೇಡಿಕೊಳ್ಳುತ್ತಾನೆ. ಆದರೆ, ತುಳಸಿ ಬರುವುದಿಲ್ಲ ಎಂದು ಹೇಳಿದ್ದಕ್ಕೆ ಸಮರ್ಥ್ ಹುಚ್ಚನೇ ಆಗಿ ಹೋಗಿದ್ದಾನೆ. ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದಾನೆ. ತನ್ನ ತಾಯಿ ಕಿಡ್ನ್ಯಾಪ್ ಆಗಿದ್ದಾರೆ. ಅಪಹರಿಸಿರುವವರು ಯಾರು ಎಂಬುದೂ ಗೊತ್ತಿದೆ. ದಯವಿಟ್ಟು ನನ್ನ ತಾಯಿಯನ್ನು ನನಗೆ ವಾಪಸ್ ಕೊಡಿಸಿ ಎಂದು ದೂರು ನೀಡಿದ್ದಾನೆ. ಸಮರ್ಥ್ ಹೇಳಿದ ಮಾತಿನಲ್ಲಿ ಸತ್ಯವಿದೆ ಎಂದು ಭಾವಿಸಿದ ಪೊಲೀಸರು, ಅವನ ಮಾತಿನಂತೆ ಸಮರ್ಥ್ ಜೊತೆಗೆ ಬರುತ್ತಾರೆ.
ಸಮರ್ಥ್ ಗೆ ಹುಚ್ಚು ಹಿಡಿದಿದೆಯಾ..?
ಸಮರ್ಥ್ ಸೀದಾ ಮಾಧವ್ ಮನೆಗೆ ಪೊಲೀಸರನ್ನು ಕರೆ ತರುತ್ತಾನೆ. ಈ ಮನೆಯವರೇ ನನ್ನ ತಾಯಿಯನ್ನು ಅಪಹರಿಸಿರುವುದು ಎನ್ನುತ್ತಾನೆ. ಪೊಲೀಸರು ಕೂಡ ವಿಚಾರಣೆ ನಡೆಸಲು ಮುಂದಾಗುತ್ತಾರೆ. ಅವಿ ಮತ್ತು ಅಭಿಗೆ ಸಮರ್ಥ್ ನಡವಳಿಕೆ ಶಾಕ್ ಉಂಟು ಮಾಡುತ್ತದೆ. ಅಮ್ಮನನ್ನು ನಾವು ಅಪಹರಿಸಿ ತಂದಿಲ್ಲ. ತುಳಸಿ ಅಮ್ಮ ಈ ಮನೆಯಲ್ಲಿ ಇರುವುದು ನಿಜ ಎನ್ನುತ್ತಾರೆ. ಮಾಧವ್ ಮತ್ತು ತುಳಸಿ ಬಂದು ನೋಡಿದಾಗ ಎಲ್ಲರೂ ಗಾಬರಿಯಾಗುತ್ತಾರೆ. ಮಾಧವ್ ನಮಗೆ ಮದುವೆಯಾಗಿದೆ. ನಾವಿಬ್ಬರು ಒಪ್ಪಿ ಮದುವೆಯಾಗಿದ್ದೇವೆ ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿದ ಸಮರ್ಥ್ ಹುಚ್ಚನಂತೆ ನಡೆದುಕೊಳ್ಳುತ್ತಾನೆ. ನನ್ನ ತಾಯಿಗೆ ಬ್ರೈನ್ ವಾಶ್ ಮಾಡಿದ್ದಾರೆ. ಇವರನ್ನು ಅರೆಸ್ಟ್ ಮಾಡಿ ಎಂದು ಮಾಧವ್ ಕಡೆಗೆ ಬೆಟ್ಟು ಮಾಡಿ ತೋರಿಸುತ್ತಾನೆ.

ತಾಯಿಯಾಗುತ್ತಿದ್ದಾಳಾ ತುಳಸಿ..?
ತುಳಸಿ ಕೈ ಹಿಡಿದು ಮನೆಗೆ ಹೋಗೋಣ ಬಾರಮ್ಮ ಎಂದು ಎಳೆಯುತ್ತಾನೆ. ಆದರೆ, ತುಳಸಿ ಮಗನ ನಡವಳಿಕೆಯನ್ನು ವಿರೋಧಿಸುತ್ತಾಳೆ. ಸಮರ್ಥ್ ಕೆನ್ನೆಗೆ ಹೊಡೆಯುತ್ತಾಳೆ. ಬಳಿಕ ತಲೆ ತಿರುಗಿ ಬೀಳುವ ತುಳಸಿಯನ್ನು ಸಮರ್ಥ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರು ತುಳಸಿಗೆ ನೀವು ತಾಯಿ ಆಗುತ್ತಿದ್ದೀರಾ ಎಂದು ಹೇಳುತ್ತಾರೆ. ಹಾಗಾದರೆ, ತುಳಸಿ ಈಗ ತಾಯಿಯಾಗಿರುವ ಸುದ್ದಿ ಎರಡು ಕುಟುಂಬದಲ್ಲೂ ಇನ್ನಷ್ಟು ಸಮಸ್ಯೆಯನ್ನು ಉಂಟು ಮಾಡುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











