Srirasthu Shubhamasthu ; ನನಗೆ ಮನೆಯಲ್ಲಿ ನೆಮ್ಮದಿ ಇಲ್ಲ, ನನ್ನ ಪಾಲು ನನಗೆ ಕೊಡಿ ಎಂದ ಅಭಿ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಕಂಪನಿಯನ್ನು ಶುರು ಮಾಡಿ ಈಗ 25 ವರ್ಷಗಳು ಕಳೆದಿವೆ. 25ನೇ ವರ್ಷದ ಸಿಲ್ವರ್ ಜುಬ್ಲಿ ಅನ್ನು ಆಚರಿಸಲಾಗುತ್ತಿದೆ. ಕಂಪನಿ ವಾರ್ಷಿಕೋತ್ಸವ ಸಮಾರಂಭಕ್ಕೆ ಎಲ್ಲರೂ ಆಗಮಿಸಿದ್ದಾರೆ. ಪೂರ್ಣಿಮಾ ಮತ್ತು ಸಿರಿ ಬಹಳ ದಿನಗಳ ಬಳಿಕ ಭೇಟಿ ಮಾಡಿದ್ದು, ಇಬ್ಬರೂ ಮಾತನಾಡುತ್ತಿರುತ್ತಾರೆ.
ಇದೇ ವೇಳೆಗೆ ಬರುವ ಸಮರ್ಥ್ ಸಿರಿಗೆ ಬೈಯುತ್ತಾನೆ. ತಾತನ ಜೊತೆಗೆ ಇರು. ಇಲ್ಯಾಕ್ ಇದೀಯಾ ಎಂದು ಕೇಳುತ್ತಾನೆ. ಅವಿ ನಾವೆಲ್ಲಾ ಒಂದೇ ಕುಟುಂಬದವರು ಸಮರ್ಥ್ ಎಂದು ಹೇಳಿದ್ದಕ್ಕೆ ಸಮರ್ಥ್ ನಮಗ್ಯಾರೂ ಬೇಕಿಲ್ಲ ಎಂದು ಸಿಡುಕುತ್ತಾನೆ.

ಸಂಧ್ಯಾಳಿಗೆ ಹಣ ಕಳಿಸಿದ ದೀಪಿಕಾ
ಇತ್ತ ಸಂಧ್ಯಾ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕೆ ದತ್ತ ತಾತ ಬೈಯುತ್ತಾನೆ. ಆದರೆ, ಮಾಧವ್ ಹೋಗಲಿ ಬಿಡಿ, ಕೆಟ್ಟ ಘಳಿಗೆ ಏನೋ ತಪ್ಪಾಗಿದೆ ಎಂದು ಹೇಳುತ್ತಾಳೆ. ಸಂಧ್ಯಾ ಒಬ್ಬಳೇ ಇದ್ದಾಗ ದೀಪಿಕಾ ಮತ್ತು ಶಾರ್ವರಿ ಬೇಕಂತಲೇ ಅವಳನ್ನು ಮಾತನಾಡಿಸುತ್ತಾರೆ. ಹೇಗಿದೆ ನಿನ್ನ ಬದುಕು, ಕಷ್ಟವೆಲ್ಲಾ ಸರಿ ಹೋಯ್ತಾ ಎಂದು ವಿಚಾರಿಸುತ್ತಾರೆ. ಸಂಧ್ಯಾ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕಷ್ಟದಲ್ಲಿದ್ದೀನಿ. ತನ್ನ ಜೀವನ ಬಹಳ ಕಷ್ಟದಲ್ಲಿ ಸಾಗುತ್ತಿದೆ ಎಂದು ಕೊರಗುತ್ತಾಳೆ. ಆಗ ದೀಪಿಕಾ ಚಿನ್ನದ ತಾಳಿಯನ್ನು ಮಾಡಿಸಿಕೋ ಎಂದು ಹೇಳಿ ಅಕೌಂಟ್ ಗೆ ಹಣವನ್ನು ಹಾಕುತ್ತಾಳೆ. ಸಂಧ್ಯಾ ಹಣವನ್ನು ನೋಡಿ ಖುಷಿಯಾಗುತ್ತಾಳೆ. ಸಾಲದೇ ಹೋದರೆ, ಇನ್ನೂ ಬೇಕು ಎನಿಸಿದರೆ ಕೇಳು ಎಂದು ಶಾರ್ವರಿ ಹೇಳುತ್ತಾಳೆ. ಸಂಧ್ಯಾಳಿಗೆ ಯಾವುದೋ ವಿಚಾರಕ್ಕೆ ಗಾಳ ಹಾಕುತ್ತಿದ್ದು, ಇದು ಸಂಧ್ಯಾಳಿಗೆ ಅರ್ಥವಾಗಿಲ್ಲ.
ಮಕ್ಕಳ ಜೊತೆಗೆ ಕುಣಿದ ಮಾಧವ್
ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಲು ಮಹೇಶ, ಅವಿ ಹಾಗೂ ಅಭಿ ಬರುತ್ತಾರೆ. ಆದರೆ, ಮಾಧವ್ ಕಾಣಿಸುವುದಿಲ್ಲ. ತುಳಸಿ ಮಾಧವ್ ಅನ್ನು ಹುಡುಕುತ್ತಾಳೆ. ಮಾಧವ್ ಒಬ್ಬನೇ ನಿಂತು ಗಾಬರಿಯಿಂಧ ಆತಂಕಗೊಂಡಿರುತ್ತಾರೆ. ಏನಾಯ್ತು ಎಂದು ತುಳಸಿ ಕೇಳಿದ್ದಕ್ಕೆ, ನನ್ನ ಮಕ್ಕಳ ಹೆಗಲ ಮೇಲೆ ಕೈ ಹಾಕಿ ಡ್ಯಾನ್ಸ್ ಪ್ರ್ಯಾಕ್ಟೀಸ್ ಮಾಡಿದ್ದೇ ಹೆಚ್ಚು. ಆ ನೆನಪುಗಳೇ ನನಗೆ ಸಾಕು. ಬಹಳ ಖುಷಿ ಕೊಟ್ಟಿದೆ. ಆದರೆ, ಈಗ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡಲು ಮುಜುಗರವಾಗುತ್ತಿದೆ. ಸ್ಟೆಪ್ಸ್ ಮರೆತು ಹೋದರೆ ಎಂದು ಭಯವಾಗುತ್ತಿದೆ ಎಂದು ಆತಂಕವನ್ನು ಹೇಳಿಕೊಳ್ಳುತ್ತಾನೆ. ಆಗ ತುಳಸಿ ಧೈರ್ಯ ಹೇಳಿ ಕಳಿಸುತ್ತಾಳೆ. ಎಲ್ಲರೂ ಸ್ಟೇಜ್ ಮೇಲೆ ಕುಣಿದು ರಂಜಿಸುತ್ತಾರೆ.

ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ ತುಳಸಿ
ಇನ್ನು ಸ್ಟೇಜ್ ಮೇಲೆ ಅಭಿ ಸರ್ಪ್ರೈಸ್ ಆಗಿ ಬಂದು ತನ್ನ ತಾಯಿಯ ನೆನಪನ್ನು ಹಂಚಿಕೊಂಡು, ಮನೆಯಲ್ಲಿ ಭಾಗ ಬೇಕು. ತನಗೆ ನೆಮ್ಮದಿ ಇಲ್ಲದಂತಾಗಿದೆ ಎಂದು ಹೇಳಿದಂತೆ ಕನಸು ಕಾಣುತ್ತಾನೆ. ಅಷ್ಟರಲ್ಲಿ ತುಳಸಿ ಬಂದು ಭರತನಾಟ್ಯ ಡ್ಯಾನ್ಸ್ ಅನ್ನು ಮಾಡುತ್ತಾಳೆ. ಇದನ್ನು ನೋಡಿದ ಎಲ್ಲರೂ ಶಾಕ್ ಆಗುತ್ತಾರೆ.
ತುಳಸಿಯನ್ನು ಕಂಡು ನಿಬ್ಬರಗಾದ ಜನ
ತುಳಸಿ ಡ್ಯಾನ್ಸ್ ಮಾಡಿದ ಬಳಿಕ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾರೆ. ಮಾಧವ್ ಆಶ್ಚರ್ಯ ಚಕಿತನಾಗಿ ಸ್ಟೇಜ್ ಮೇಲೆ ಬಂದು ತುಳಸಿಯನ್ನು ಪ್ರಶ್ನಿಸುತ್ತಾನೆ. ಇದೆಲ್ಲಾ ಹೇಗೆ ಸಾಧ್ಯವಾಯ್ತು. ನನಗಂತೂ ನಂಬೋದಕ್ಕೇ ಆಗುತ್ತಿಲ್ಲ ಎಂದು ಹೇಳುತ್ತಾನೆ. ಆಗ ತುಳಸಿ ಇದೆಲ್ಲವೂ ನನ್ನ ಗುರುಗಳಿಂದಲೇ ಸಾಧ್ಯವಾಗಿದ್ದು ಎಂದು ಹೇಳಿದ ಪೂರ್ಣಿಮಾಳನ್ನು ಸ್ಟೇಜ್ ಮೇಲೆ ಬರುವಂತೆ ಹೇಳುತ್ತಾಳೆ. ತುಳಸಿಯ ಡ್ಯಾನ್ಸ್ ನೋಡಿದ ಅಭಿ ತನ್ನ ನಿರ್ಧಾರವನ್ನು ಬದಲಿಸುತ್ತಾನಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











