Srirastu Shubhamastu ; ಅಭಿ ದಾರಿಯನ್ನು ತಪ್ಪಿಸುತ್ತಿರುವ ಶಾರ್ವರಿ : ತುಳಸಿಗೆ ಮಾತು ಕೊಟ್ಟ ನಿಧಿ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಿಧಿ ಸ್ನೇಹಿತರ ಬಳಿ ಕ್ಷಮೆ ಕೇಳಬೇಕು, ಗೆಳೆತನವನ್ನು ಕಳೆದುಕೊಳ್ಳಬಾರದು ಎಂದು ಮನೆಯವರಿಗೆ ತಿಳಿಯದಂತೆ ಮತ್ತೆ ರಾತ್ರಿ ಹೊತ್ತು ಹೊರಟಿದ್ದಾಳೆ. ಸ್ನೇಹಿತರನ್ನು ಮಾತನಾಡಿಸಲು ಹೋದ ನಿಧಿಗೆ ಗೆಳೆಯರು ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಮತ್ತು ಬರುವ ಮಾತ್ರೆಯನ್ನು ಹಾಕಿ ನಿಧಿಗೆ ಜ್ಯೂಸ್ ಕೊಟ್ಟಿದ್ದಾರೆ.ಅದನ್ನು ಕುಡಿದ ನಿಧಿ ಮತ್ತಿನಲ್ಲಿದ್ದು, ಗೆಳೆಯರು ಆಕೆಯ ಜೊತೆಗೆ ಮಿಸ್ ಬಿಹೇವ್ ಮಾಡಿದ್ದಾರೆ. ಅದೇ ಸಮಯಕ್ಕೆ ಸರಿಯಾಗಿ ಅಭಿ ಆ ಜಾಗಕ್ಕೆ ಬಂದಿದ್ದಾನೆ.
ತುಳಸಿ ಮೇಲೆ ಆರೋಪಿಸಿದ ಶಾರ್ವರಿ
ನಿಧಿಯನ್ನು ಅಪಾಯದಿಂದ ಕಾಪಾಡಿದ್ದಾನೆ. ಆದರೆ, ಹುಡುಗರು ಅಭಿಗೆ ಹೊಡೆದ ಪರಿಣಾಮ ಕಾರು ಓಡಿಸಲು ಸಾಧ್ಯವಾಗುವುದಿಲ್ಲ. ಆಗ ತುಳಸಿ ಅಲ್ಲಿಗೆ ಬಂದು ನಿಧಿ ಮತ್ತು ಅಭಿನಕಾರು ಡ್ರೈವ್ ಮಾಡಿಕೊಂಡು ಮನೆಗೆ ಕರೆದುಕೊಂಡು ಬರುತ್ತಾಳೆ. ಇದನ್ನು ನೋಡಿದ ಅವಿ ಹಾಗೂ ಅಭಿ ಇಬ್ಬರಿಗೂ ಖುಷಿಯಾಗುತ್ತದೆ. ಅಲ್ಲದೇ, ತುಳಸಿಯಲ್ಲಿ ಅಭಿ ತನ್ನ ತಾಯಿಯನ್ನು ನೋಡುತ್ತಾನೆ. ಇದೇ ವಿಚಾರವನ್ನು ಶಾರ್ವರಿ ಹಾಗೂ ದೀಪಿಕಾ ಬಳಿ ಅಭಿ ಹೇಳಿಕೊಳ್ಳುತ್ತಾನೆ. ಇಬ್ಬರೂ ಸೇರಿ ಅಭಿ ಆಲೋಚನೆಯ ದಿಕ್ಕನ್ನೇ ಬದಲಾಯಿಸುತ್ತಾರೆ. ತುಳಸಿಗೆ ಮೊದಲಿನಿಂದಲೂ ಕಾರು ಡ್ರೈವ್ ಮಾಡಲು ಬರುತ್ತದೆ. ಆದರೂ, ತನಗೇನೂ ಗೊತ್ತೇ ಇಲ್ಲ ಎಂಬಂತೆ ನಟಿಸುತ್ತಿದ್ದಾಳೆ. ಇದೆಲ್ಲವೂ ಮನೆಯವರ ಸಿಂಪತಿ ಪಡೆಯಲು ಹೀಗೆ ಮಾಡುತ್ತಿದ್ದಾಳೆ ಎಂದು ಹೇಳುತ್ತಾರೆ. ಶಾರ್ವರಿ ಹಾಗೂ ದೀಪಿಕಾ ಮಾತನ್ನು ಅಭಿ ನಂಬುತ್ತಾನೆ.

ತುಳಸಿಗೆ ಮಾತು ಕೊಟ್ಟ ನಿಧಿ
ಇನ್ನು ಪೂರ್ಣಿಮಾ ಬಳಿ ಅವಿನಾಶ್ ನಡೆದ ವಿಚಾರವನ್ನೆಲ್ಲಾ ಹೇಳಿಕೊಂಡು ಖುಷಿ ಪಡುತ್ತಾನೆ. ಅವರಲ್ಲಿ ನನ್ನ ಅಮ್ಮನನ್ನು ನೋಡಿದೆ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾನೆ. ಪೂರ್ಣಿಮಾಳಿಗೂ ಈ ಮಾತನ್ನು ಕೇಳಿ ಖುಷಿಯಾಗುತ್ತದೆ. ನಿಧಿಗೆ ಎಚ್ಚರವಾದ ಮೇಲೆ ಶಾರ್ವರಿ ಮಗಳನ್ನು ಬೈಯುತ್ತಾ ಅಳುತ್ತಾ ಕೂರುತ್ತಾಳೆ. ಆದರೆ, ತುಳಸಿ ಸಮಾಧಾನವಾಗಿ ನಿಧಿಗೆ ಬುದ್ಧಿ ಹೇಳುತ್ತಾಳೆ. ಪೂರ್ಣಿಮಾ ಬಂದು ನಡೆದ ಘಟನೆಯನ್ನೆಲ್ಲಾ ವಿವರಿಸುತ್ತಾಳೆ. ಆಗ ನಿಧಿ ತುಳಸಿಗೆ ಮಾತು ಕೊಡುತ್ತಾಳೆ. ಇನ್ಯಾವತ್ತು ಇಂತಹ ಕೆಲಸವನ್ನು ಮಾಡಿಕೊಳ್ಳುವುದಿಲ್ಲ. ನಿಮ್ಮ ಮಾತನ್ನು ಕೇಳುತ್ತೇನೆ ಎಂದು ತುಳಸಿಗೆ ಹೇಳುತ್ತಾಳೆ. ಈ ಮಾತುಗಳನ್ನು ನಿಧಿ ಆಡಿದಾಗ ಶಾರ್ವರಿ ಮನದೊಳಗೆ ಕೋಪ ಬರುತ್ತದೆ.
ನಿಧಿ ಆಸೆಗಾಗಿ ಮಂತ್ರವಾದಿ ಮೊರೆ
ಇನ್ನು ದತ್ತ ತಾತನ ಮನೆಯಲ್ಲಿ ಆಶ್ರಯ ಪಡೆದಿರುವ ಜುಗ್ಗನಿಗೆ ಸದಾ ಕಾಲ ಹಣದ ಬಗ್ಗೆಯೇ ಯೋಚನೆಯಾಗಿದೆ. ದತ್ತ ತಾತನ ಮನೆಯಲ್ಲಿ ನಿಧಿ ಇದೆ ಎಂದು ಹೇಳಿ ಸಂಧ್ಯಾಳನ್ನು ಮಂತ್ರವಾದಿ ಬಳಿ ಕರೆದುಕೊಂಡು ಹೋಗಿದ್ದಾನೆ. ಮಂತ್ರವಾದಿ ನಿಧಿ ತೆಗೆದುಕೊಡುತ್ತೇನೆ ಎಂದು ಹೇಳಿ 25 ಸಾವಿರ ಹಣವನ್ನು ಪೀಕಿದ್ದಾನೆ. ಈಗ ನಿಧಿ ತೆಗೆಯಲು ಮನೆಯಲ್ಲಿ ಯಾರೂ ಕೂಡ ಇರಬಾರದು ಎಂದು ಹೇಳಿದ್ದಾನೆ. ನಿಧಿ ಹೆಸರಿನಲ್ಲಿ ದತ್ತ ತಾತನ ಮನೆಯನ್ನು ನಾಶ ಮಾಡಲು ಮಾವ ಸೊಸೆ ಮುಂದಾಗಿದ್ದಾರೆ.

ಅಮ್ಮನ ಜೊತೆಗೆ ಮಾರ್ಕೆಟ್ ಗೆ ಹೋದ ಅವಿ
ಇನ್ನು ಅವಿಗೆ ತುಳಸಿ ಮೇಲಿನ ಗೌರವ ಹಾಗೂ ಪ್ರೀತಿ ಹೆಚ್ಚಾಗಿದೆ. ತುಳಸಿ ಮಾರ್ಕೆಟ್ ಗೆ ಸೊಪ್ಪು ತರಕಾರಿ ತರಲು ಹೊರಟಿದ್ದಾಳೆ. ಆಗ ಅವಿ ಸಮರ್ಥ್ ಗೆ ಅಮ್ಮ ಮಾರ್ಕೆಟ್ ಗೆ ಹೊರಟಿದ್ದಾರೆ. ಹುಷಾರಾಗಿ ಕರೆದುಕೊಂಡು ಹೋಗು ಎನ್ನುತ್ತಾನೆ. ಬಳಿಕ ತಾನೇ ತುಳಸಿ ಜೊತೆಗೆ ಮಾರ್ಕೆಟ್ ಹೋಗಲು ಮುಂದಾಗುತ್ತಾನೆ. ಅವಿ ತನ್ನ ತಾಯಿಯನ್ನು ಅಮ್ಮ ಎಂದು ಕರೆಯುತ್ತಿರುವುದನ್ನು ನೋಡಿ ಸಮರ್ಥ್ ಗೆ ಹಿಂಸೆ ಆಗಿದೆ.


Click it and Unblock the Notifications











