Srirasthu Shubhamasthu ಸಂಧ್ಯಾಳ ಕೊರಳಿಗೆ ಉರುಳಾಗುತ್ತಾ ದೀಪಿಕಾ ಕೊಟ್ಟ ಐದು ಲಕ್ಷ ಸಾಲ ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ದಿನ ದಿನಕ್ಕೂ ಮನೆಯವರ ಮೇಲೆ ಧ್ವೇಷವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ. ಸಮರ್ಥ್ ಮತ್ತು ತುಳಸಿಯ ಆಗಮನವನ್ನು ಸಹಿಸದ ಅಭಿ ಮನೆಯವರ ಮೇಲೆ ಸಿಡುಕುತ್ತಿದ್ದಾನೆ.ಸಮರ್ಥ್ ಆಗಮನದಿಂದ ತನ್ನ ಮತ್ತು ತನ್ನ ಅಣ್ಣನ ಸಂಬಂಧ ಹಾಳಾಗುತ್ತಿದೆ ಎಂದು ಭಾವಿಸಿರುವುದಲ್ಲದೇ, ಹೆಜ್ಜೆ ಹೆಜ್ಜೆಗೂ ಅಣ್ಣನ ಮೇಲೆ ಕೋಪ ಮಾಡಿಕೊಳ್ಳುತ್ತಿದ್ದಾನೆ.ಅಭಿ ಮನಸ್ಸು ಒಳ್ಳೆಯದನ್ನೇ ಯೋಚಿಸುತ್ತಿದ. ಹಾಗಿದ್ದರೂ ಕೂಡ ಅವನ ಸುತ್ತ-ಮುತ್ತಲಿನವರು ಕೆಟ್ಟದ್ದನ್ನೇ ಹೇಳಿಕೊಡುತ್ತಿದ್ದು, ಈಗ ಅಭಿ ತನ್ನವರನ್ನೇ ನಂಬದಂತಾಗಿದ್ದಾನೆ.

ಸುಳ್ಳು ಹೇಳಿರುವ ಶಾರ್ವರಿ

ಅಭಿ ಸಮರ್ಥ ಮತ್ತು ಅವಿನಾಶ್ ಮೇಲಿನ ಬೇಸರಕ್ಕೆ ಕಂಠ ಪೂರ್ತಿ ಕುಡಿದು ಬಂದಿದ್ದಾನೆ. ರಾತ್ರಿ ಪೂರ್ತಿ ಅಭಿಯನ್ನು ಅವಿ ಹಾಗೂ ತುಳಸಿ ಕಣ್ಣಿನಲ್ಲಿ ಕಣ್ಣಿಟ್ಟು ಕಾದಿದ್ದಾರೆ. ಆದರೆ, ಬೆಳಗ್ಗೆ ಎದ್ದ ಕೂಡಲೇ ಶಾರ್ವರಿ ಕ್ರೆಡಿಟ್ಸ್ ಪಡೆದಿದ್ದಾಳೆ. ತಾನೇ ರಾತ್ರಿ ಪೂರ್ತಿ ಅಭಿಯನ್ನು ನೋಡಿಕೊಂಡಿದ್ದು, ಮನೆಯವರಿಗ್ಯಾರಿಗೂ ಈ ವಿಚಾರ ಗೊತ್ತಿಲ್ಲ ಎಂಬಂತೆ ನಡೆದುಕೊಂಡಿದ್ದಾಳೆ. ಆದರೆ, ಅಭೀಗೆ ರಾತ್ರಿಯೆಲ್ಲಾ ತನ್ನ ತಲೆ ಸವರಿದವರು ಯಾರು ಎಂಬ ಅನುಮಾನವಿದ್ದರೂ ಚಿಕ್ಕಮ್ಮನ ಮಾತನ್ನು ನಂಬಿದ್ದಾನೆ. ಶಾರ್ವರಿ ಆಡಿದ ಸುಳ್ಳಿನ ಮಾತುಗಳನ್ನು ತುಳಸಿ ಕೇಳಿಸಿಕೊಂಡಿದ್ದು, ಅನುಮಾನ ಮೂಡಿದೆ.

srirasthu-shubhamasthu-serial-15-august-episode-written-update


ಮತ್ತೆ ಅಭಿ ತಲೆ ಕೆಡಿಸಿದ ಶಾರ್ವರಿ-ದೀಪಿಕಾ

ಇನ್ನು ದೀಪಿಕಾ ಮತ್ತು ಶಾರ್ವರಿ ಸೇರಿ ಮತ್ತೆ ಅಭಿ ತಲೆಗೆ ಕೆಟ್ಟ ಆಲೋಚನೆಗಳನ್ನು ತುಂಬಿದ್ದಾರೆ. ಈ ಮನೆಯಿಂದ ಭಾಗ ತೆಗೆದುಕೊಂಡು ಹೊರಗೆ ಹೋಗದೇ ಅಭಿಗೆ ಬೇರೆ ದಾರಿಯೂ ಇಲ್ಲ. ಬೆಲೆಯೂ ಇರುವುದಿಲ್ಲ ಎಂದು ಹೇಳಿದ್ದಾರೆ. ಅಭಿ ಚಿಕ್ಕಮ್ಮ ಮತ್ತು ಹೆಂಡತಿಯ ಮಾತುಗಳನ್ನು ಸತ್ಯ ಎಂದು ನಂಬಿದ್ದಾನೆ. ಅಲ್ಲದೇ, ಆಫೀಸಿನಲ್ಲಿ ಬೇಕಂತಲೇ ಸಮರ್ಥ್ ಅನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ. ಕಾಫಿ ತಂದು ಕೊಡಲು ಹೇಳಿ ಅದನ್ನು ಚೆಲ್ಲಿದ್ದು, ಕ್ಲೀನ್ ಮಾಡಿಸಿದ್ದಾನೆ. ಅಭಿ ನಡವಳಿಕೆಯನ್ನು ಕಂಡ ಅವಿನಾಶ್ ಬೇಸರ ಮಾಡಿಕೊಂಡಿದ್ದಾನೆ.


ಮನೆಗೆ ಕಳ್ಳನಂತೆ ಬಂದ ಜುಗ್ಗ ಜಗನ್ನಾಥ

ಇತ್ತ ದತ್ತ ತಾತನ ಮನೆಯಿಂದ ಇದ್ದಕ್ಕಿದ್ದ ಹಾಗೆಯೇ ಕಾಣೆಯಾಗಿದ್ದ ಜುಗ್ಗ ಜಗನ್ನಾಥ ಈಗ ಪ್ರತ್ಯಕ್ಷನಾಗಿದ್ದಾನೆ. ಕತ್ತಲಲ್ಲಿ ಕಳ್ಳನಂತೆ ಬಂದು ಮನೆಯವರಿಂದ ಗೂಸ ಪಡೆದಿದ್ದಾನೆ. ಕಥೆ ಕಟ್ಟಿ ಹೇಳಿ ಈಗ ಮನೆಯಲ್ಲಿ ದತ್ತ ತಾತನ ಕೈಯಲ್ಲಿ ಮನೆ ಕೆಲಸವನ್ನು ಮಾಡಿಸಿಕೊಂಡಿದ್ದಾರೆ. ಸೊಂಟ ಮುರಿದುಕೊಂಡಿದ್ದರೂ ಕೂಡ ಬೇರೆ ದಾರಿ ಇಲ್ಲದೇ ಮನೆ ಕೆಲಸವನ್ನು ಮಾಡುತ್ತಿದ್ದಾರೆ. ಸಮರ್ಥ್ ಮನೆ ಖರ್ಚಿಗೆಂದು ಸಿರಿಗೆ ಹಣ ಕೊಟ್ಟರೆ ಈಗ ಅದರ ಮೇಲೂ ಕಣ್ಣು ಬಿದ್ದಿದೆ. ಎಲ್ಲಾ ಹಣವನ್ನು ತೆಗೆದುಕೊಂಡು ಹೋಗಿ ತನ್ನ ಬ್ಯಾಂಕ್ ನಲ್ಲಿ ಇಟ್ಟುಕೊಳ್ಳುವ ಜುಗ್ಗ ಜಗನ್ನಾಥನ ಉದ್ದೇಶವೇ ಅರ್ಥವಾಗದಂತಾಗಿದೆ.

srirasthu-shubhamasthu-serial-15-august-episode-written-update

ಸಂಧ್ಯಾಳಿಗೆ ಕಾಡುತ್ತಿರುವ ಸಾಲದ ಚಿಂತೆ

ಸಂಧ್ಯಾ ದೀಪಿಕಾ ಬಳಿ ಐದು ಲಕ್ಷ ಹಣವನ್ನು ಸಾಲ ಮಾಡಿದ್ದಾಳೆ. ಮಾವನ ಮಾತು ಕೇಳಿಕೊಂಡು ಬಿಸಿನೆಸ್ ಮಾಡಲು ಹೋಗಿ ಈಗ ತಗಲಾಕ್ಕೊಂಡಿದ್ದಾಳೆ. ಜುಗ್ಗ ಜಗನ್ನಾಥ ಆ ಹಣವನ್ನು ಕಳ್ಳರು ಕದ್ದರು. ತನ್ನ ಕೈಯಲ್ಲಿ ಹಿಡಿಯಲಾಗಲಿಲ್ಲ ಎಂದು ಸುಳ್ಳು ಹೇಲಿದ್ದಾಣೆ. ಸಂಧ್ಯಾ ಈಗ ಪೀಕಲಾಟಕ್ಕೆ ಸಿಲುಕಿದ್ದಾಳೆ. ಸಾಲ ಮಾಡಿರುವ ವಿಚಾರ ಮನೆಯಲ್ಲಿ ಗೊತ್ತಾದರೆ ಕಷ್ಟವಾಗುತ್ತದೆ. ಮತ್ತೆ ಅವರ ತಾಯಿ ತುಳಸಿ ಬಂದು ಕಪಾಳಮೋಲ್ಷಾ ಮಾಡಿದಂತೆ ಹಗಲುಗನಸು ಕಂಡಿದ್ದು ಸಂಧ್ಯಾ ಗಾಬರಿಯಾಗಿದ್ದಾಳೆ. ಈಗ ಸಂಧ್ಯಾ ಮಾವನ ಮಾತು ಕೇಳಿ ಮಾಡಿಕೊಂಡಿರುವ ಎಡವಟ್ಟನ್ನು ಯಾವ ರೀತಿಯಲ್ಲಿ ಸರಿ ಮಾಡಿಕೊಳ್ಳುತ್ತಾಳೋ ಗೊತ್ತಿಲ್ಲ. ಆದರೆ, ಈ ಸಾಲ ಸಂಧ್ಯಾ ಕೊರಳಿಗೆ ಉರುಳಾಗುವುದಂತೂ ಪಕ್ಕಾ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X