Srirasthu Shubhamasthu ; ತುಳಸಿ VS ದೀಪಿಕಾ ; ದೀಪಿಕಾ ನಾಟಕಕ್ಕೆ ಬೀಳುತ್ತಾ ತೆರೆ, ಏನ್ಮಾಡ್ತಾಳೆ ತುಳಸಿ..?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದೀಪಿಕಾ ಮನೆಯಲ್ಲಿ ತನ್ನ ಹಿಡಿತವನ್ನು ಸಾಧಿಸಲು ಮುಂದಾಗಿದ್ದಾಳೆ. ತನಗೆ ಬೇಕಾದಂತೆ ನಡೆಸಿಕೊಳ್ಳುತ್ತಿದ್ದಾಳೆ. ಎಲ್ಲರ ಎದುರು ನಾಟಕ ಮಾಡಿಕೊಂಡು ಹೋಗುತ್ತಿರುವ ದೀಪಿಕಾ, ಮನೆಯನ್ನು ಇಬ್ಬಾಗ ಮಾಡಬೇಕು, ತಾನೇ ರಾಣಿ ಎಂಬಂತೆ ಬದುಕಬೇಕು ಎಂದುಕೊಂಡಿದ್ದಾಳೆ. ಆದರೆ, ದೀಪಿಕಾ ಆಡುತ್ತಿರುವ ನಾಟಕದ ಮಾತುಗಳನ್ನೇ ಎಲ್ಲರೂ ನಂಬಿದ್ದಾರೆ. ಶಾರ್ವರಿಗೆ ಹೊರತುಪಡಿಸಿ, ದೀಪಿಕಾ ಬಗ್ಗೆ ಮತ್ಯಾರಿಗೂ ಅರ್ಥವಾಗುತ್ತಿಲ್ಲ.
ತನ್ನ ಬದುಕಿನ ಬಗ್ಗೆ ಆತಂಕಗೊಂಡ ದತ್ತ ತಾತ
ಈ ಕಡೆ ದತ್ತ ತಾತನಿಗೆ ಪಾರ್ವತಿಯ ಬದುಕನ್ನು ನೋಡಿ ಸಂಕಟ ಹೆಚ್ಚಾಗಿದೆ. ವಯಸ್ಸಾದವರ ಜೀವನ ಹೇಗೆ..? ಪಾರ್ವತಿ ಅಂತೆ ಮಕ್ಕಳು ಹಾಗೂ ಮೊಮ್ಮಕ್ಕಳು ದೂರ ಮಾಡಿದರೆ, ಅನಾಥಾಶ್ರಮಗಳಿಗೆ ಸೇರಿಸಿದರೆ ಹೇಗೆ ಎಂಬ ಯೋಚನೆ ಶುರುವಾಗಿದೆ.

ದೇವರ ಮುಂದೆ ನಿಂತು, ವಯಸ್ಸಾದವರಿಗೆ ಹೊಟ್ಟೆ ತುಂಬ ಊಟ ಹಾಗೂ ನೆಮ್ಮದಿಯಾಗಿ ಮಲಗಲು ಸೂರು ಇರಲಿ ಎಂದು ಬೇಡಿಕೊಂಡಿದ್ದಾರೆ. ರಾತ್ರಿ ಮಲಗಿದ್ದಾಗಲೂ, ಸಂಧ್ಯಾ ಬಂದು ದತ್ತ ತಾತನನ್ನು ಮನೆಯಿಂದ ಹೊರಗೆ ಕಳಿಸಿದಂತೆ ಕನಸು ಕಂಡಿದ್ದು ಗಾಬರಿಯಾಗಿದ್ದಾರೆ. ಆದರೆ, ಸಮರ್ಥ್ ಒಳ್ಳೆಯ ಮೊಮ್ಮಗನಾಗಿದ್ದು, ತನಗೆ ಅನ್ಯಾಯ ಮಾಡುವುದಿಲ್ಲ ಎಂದು ನಂಬಿದ್ದಾನೆ.
ನಾಟಕ ಮಾಡುತ್ತಿರುವ ದೀಪಿಕಾ
ದೀಪಿಕಾ ಮನೆಯವರ ಎದುರು ಒಳ್ಳೆಯವಳಂತೆ ನಡೆದುಕೊಳ್ಳುತ್ತಿದ್ದಾಳೆ. ಆದರೆ, ಪೂರ್ಣಿಮಾ ಹಾಗೂ ತುಳಸಿ ಪಾಲಿಗೆ ಮಾತ್ರ ರಾಕ್ಷಸಿಯಾಗಿದ್ದಾಳೆ. ಪೂರ್ಣಿಮಾಳನ್ನು ಮಾತು ಮಾತಿಗೂ ಅನಾಥಾಶ್ರಮದಿಂದ ಬಂದವಳು ಎಂದು ವ್ಯಂಗ್ಯವಾಗಿ ಚುಚ್ಚಿ ಮಾತನಾಡಿಸುತ್ತಿದ್ದಾಳೆ.

ಪೂರ್ಣಿಮಾಳಿಗೆ ದೀಪಿಕಾ ಮಾಡುತ್ತಿರುವುದೆಲ್ಲವೂ ಗೊತ್ತಾಗಿದ್ದರೂ ಕೂಡ ಯಾರ ಮುಂದೆಯೂ ಹೇಳಲಾಗದೇ ಒದ್ದಾಡುತ್ತಿದ್ದಾಳೆ. ಇನ್ನು ದೀಪಿಕಾ ಮಾಡುತ್ತಿರುವ ಪ್ರತಿಯೊಂದು ಕೆಲಸಕ್ಕೂ ಶಾರ್ವರಿಯ ಸಪೋರ್ಟ್ ಇದೆ. ತುಳಸಿ, ಪೂರ್ಣಿಮಾ ಇಬ್ಬರೂ ಕೂಡ ಮುಗ್ಧರು ಎಂಬುದು ಗೊತ್ತಿದ್ದೇ ದೀಪಿಕಾ ಹೀಗೆ ನಡೆದುಕೊಳ್ಳುತ್ತಿದ್ದಾಳೆ.
ತುಳಸಿಯನ್ನು ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸಿದ ದೀಪಿಕಾ
ಈಗಾಗಲೇ ತುಳಸಿಗೆ ವಯಸ್ಸಾಗಿದೆ. ಅವರಿಗೆ ಯಾವ ಜವಾಬ್ದಾರಿಯನ್ನೂ ನಿಭಾಯಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರೂವ್ ಮಾಡಲು ಮುಂದಾಗಿದ್ದಾಳೆ. ಅದಾಗಲೇ ಅಡುಗೆ ಮನೆಯಿಂದ ತುಳಸಿಯನ್ನು ದೀಪಿಕಾ ಹೊರಗಿಟ್ಟಿದ್ದಾಳೆ. ಈಗ ಇತರೆ ಜವಾಬ್ದಾರಿಗಳನ್ನು ಕಸಿದುಕೊಳ್ಳಲು ಯತ್ನಿಸಿದ್ದಾಳೆ.

ಮನೆಗೆ ದೇಣಿಗೆ ಕೇಳಿಕೊಂಡು ಬರುವವರನ್ನು ನಂಬಬಾರದು ಎಂದು ಹೇಳುತ್ತಾಳೆ. ಇದನ್ನೇ ನಂಬಿದ ತುಳಸಿ, ಮಾಧವ ಗೆ ತಿಳಿದ ಅನಾಥಾಶ್ರಮದವರು ಬಂದು ದೇಣಿಗೆ ಕೇಳಿದಾಗ ಪ್ರಶ್ನೆ ಮಾಡಿ ಅವರ ಮನಸ್ಸಿಗೆ ನೋವು ಮಾಡುತ್ತಾಳೆ. ಇದರಿಂದ ಮನೆಯಲ್ಲಿ ಇರಿಸು ಮುರಿಸಾಗುತ್ತದೆ. ಎಲ್ಲರಿಗೂ ತುಳಸಿ ಮೇಲೆ ಬೇಸರವಾಗುತ್ತದೆ.
ತುಳಸಿ ಫೈಲ್ ಕೊಟ್ಟಿದ್ದು ಯಾರಿಗೆ..?
ತುಳಸಿ ಕೂಡ ತಾನು ಮಾಡಿದ್ದು ತಪ್ಪು ಎಂದು ಅರಿವಾಗಿ ಎಲ್ಲರ ಬಳಿ ಕ್ಷಮೆ ಕೇಳುತ್ತಾಳೆ. ಮಾರನೇಯ ದಿನ ಆಫೀಸಿನಿಂದ ಹುಡುಗನೊಬ್ಬ ಬಂದು ಅವಿ ಸರ್ ಕಳಿಸಿದ್ದಾರೆ. ಫೈಲ್ ಬೇಕಂತೆ ಎಂದು ಕೇಳಿದಾಗ ದೀಪಿಕಾ ಅನುಮಾನಗೊಂಡು ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾಳೆ.
ನೀನು ಆಫೀಸಿನಿಂದಲೇ ಬಂದಿದ್ದೀಯಾ ಎಂಬುದಕ್ಕೆ ಸಾಕ್ಷಿ ಏನು ಎಂದು ಪ್ರಶ್ನಿಸಿದರೂ, ತುಳಸಿ ಫೈಲ್ ನ ಅವನ ಕೈಗೆ ಕೊಟ್ಟು ಕಳಿಸುತ್ತಾಳೆ. ದೀಪಿಕಾ ಪ್ಲಾನ್ ಮಾಡಿದ್ದು, ಮತ್ತೆ ತುಳಸಿ ಮೇಲೆ ಅಪವಾದವನ್ನು ಹಾಕುವುದು ಪಕ್ಕಾ ಆಗಿದೆ. ದೀಪಿಕಾ ಮಾಡುತ್ತಿರುವ ಕೆಲಸದಿಂದ ದಿನ ದಿನಕ್ಕೂ ತುಳಸಿ ಮೇಲಿನ ನಂಬಿಕೆ ಹಾಗೂ ಪ್ರೀತಿ ಎಲ್ಲರಲ್ಲೂ ಕಡಿಮೆಯಾಗುತ್ತಿದೆ.


Click it and Unblock the Notifications











