Srirasthu Shubhamasthu ; ಪೂರ್ಣಿಮಾ ಮೇಲೆ ಗೂಬೆ ಕೂರಿಸಿದ ದೀಪಿಕಾ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಈಗಾಗಲೇ ನಿಧಿಗೆ ಸಂಜಯ್ ಜೊತೆಗೆ ಮದುವೆ ಫಿಕ್ಸ್ ಆಗಿದ್ದು, ಇಬ್ಬರೂ ಔಟಿಂಗ್ ಹೋಗುತ್ತಾ ಸುತ್ತಾಡುತ್ತಿದ್ದಾರೆ. ಸಮರ್ಥ್ ಇದೆಲ್ಲವನ್ನೂ ನೋಡಿಕೊಂಡು ಸುಮ್ಮನಿದ್ದಾನೆ.ಇನ್ನು ಸಂಧ್ಯಾಳಿಗೆ ಅಷ್ಟೆಲ್ಲಾ ಬೈದರೂ ಬುದ್ಧಿಯೇ ಬಂದಿಲ್ಲ. ಒಳ್ಳೆಯತನವನ್ನು ಮರೆತು ಮತ್ತೆ ಮಾವನ ಜೊತೆಗೆ ಸೇರಿಕೊಂಡು ಇನ್ನೇನೋ ಕಿತಾಪತಿ ಮಾಡಲು ಹೊರಟಿದ್ದಾಳೆ. ಮಾವ ಹೇಳಿಕೊಟ್ಟಂತೆ ದೀಪಿಕಾಳಿಗೆ ಫೋನ್ ಮಾಡಿ, ಬಿಸಿನೆಸ್ ಮಾಡಲು ಹಣದ ಅಗತ್ಯವಿದೆ. ಸಾಲ ಕೊಡಿ ಎಂದು ಕೇಳಿದ್ದಾಳೆ. ಮುಂದೆ ಏನಾಗುತ್ತದೋ ಕಾದು ನೋಡಬೇಕಿದೆ.

ಪೂರ್ಣಿಮಾಳನ್ನು ಕೆಣಕುತ್ತಿರುವ ದೀಪಿಕಾ

ಇತ್ತ ದೀಪಿಕಾ ಪೂರ್ಣಿಮಾಳನ್ನು ಬಿಟ್ಟಂತೆ ಬಿಡಬಾರದು. ಅವಳಾಗಿಯೇ ಅವಳು ಈ ಮನೆ ಬಿಟ್ಟು ಹೋಗುವಂತೆ ಮಾಡಬೇಕು. ಪ್ರತಿ ಕ್ಷಣವೂ ಅವಳನ್ನು ಅವಮಾನಿಸಬೇಕು ಎಂದಿದ್ದಾಳೆ. ಹೀಗಾಗಿಯೇ ಪೂರ್ಣಿಮಾ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ದೀಪಿಕಾ ಬಂದು ಕೆಣಕುತ್ತಾಳೆ. ಅನಾಥೆ ನೀನು. ನಿನಗೆ ಯಾರೂ ಗತಿಯಿಲ್ಲ ಎಂದು ರೇಗಿಸುತ್ತಾಳೆ. ಆದರೆ ಪೂರ್ಣಿಮಾ ಕೋಪ ಮಾಡಿಕೊಳ್ಳದೇ, ನಗು ನಗುತ್ತಲೇ ಬುದ್ಧಿ ಹೇಳುತ್ತಾಳೆ. ಹಾಲಿನಂತೆ ಮನಸ್ಸಿರಬೇಕು. ಹಣ-ಐಶ್ವರ್ಯ ಮುಖ್ಯ ಅಲ್ಲ. ಒಳ್ಳೆಯತನ ಮುಖ್ಯ ಎಂದು ಹೇಳುತ್ತಾ ಹಾಲನ್ನು ಕೊಡುತ್ತಾಳೆ. ಆದರೆ ಆ ಹಾಳಿಗೆ ದೀಪಿಕಾ ಹುಳಿ ಹಿಂಡಿ ಹೋಗುತ್ತಾಳೆ.

srirasthu shubhamasthu serial 16 July episode written update


ಪೂರ್ಣಿ ಮೇಲೆ ದೀಪಿಕಾ ಆರೋಪ

ದೀಪಿಕಾ ಅಭಿ ಬಳಿ ಪೂರ್ಣಿಮಾ ಬಗ್ಗೆ ಕಂಪ್ಲೇಂಟ್ ಮಾಡುತ್ತಾಳೆ. ಆದರೆ, ಅಭಿ ದೀಪಿಕಾ ಮಾತನ್ನು ನಂಬುವುದೇ ಇಲ್ಲ. ಇನ್ನು ದೀಪಿಕಾ ಪೂರ್ಣಿಮಾ ಬಟ್ಟೆ ಐರನ್ ಮಾಡುವಾಗ ಹೋಗಿ ಇದನ್ನು ಐರನ್ ಮಾಡಿಕೊಡಿ ಎಂದು ಹೇಳುತ್ತಾಳೆ. ಬೇಕಂತಲೇ ನೀರು ಚೆಲ್ಲಿ ತನ್ನ ಸೀರೆಯನ್ನು ತಾನೇ ಸುಡುವಂತೆ ಮಾಡುತ್ತಾಳೆ. ಬಳಿಕ ಇದನ್ನೆಲ್ಲಾ ಪೂರ್ಣಿಮಾ ತಲೆ ಮೇಲೆ ಹಾಕುತ್ತಾಳೆ. ಆಗ ಅಭಿ ಕೂಡ ದೀಪಿಕಾ ಪರ ಮಾತನಾಡುತ್ತಾನೆ. ಅವಿಯೂ ಇನ್ನೊಬ್ಬರ ವಸ್ತುವನ್ನು ಬಳಸುವಾಗ ಎಚ್ಚರ ಎಂದು ಹೇಳಿ ಹೋಗುತ್ತಾನೆ. ಪೂರ್ಣಿಮಾ ಬೇಸರ ಮಾಡಿಕೊಳ್ಳುತ್ತಾಳೆ. ದೀಪಿಕಾ ಆಟದಲ್ಲಿ ಪೂರ್ಣಿಮಾ ಗೆಲ್ಲಲಾಗದೇ, ಸೋಲುತ್ತಿದ್ದು, ಮುಂದೇನಾಗುತ್ತದೋ ಗೊತ್ತಿಲ್ಲ.


ಹೆಂಡತಿ ಕನಸನ್ನು ನೆರವೇರಿಸಿದ ಮಾಧವ

ಇನ್ನು ತುಳಸಿಗೆ ಚಿಕ್ಕ ವಯಸ್ಸಿನಿಂದಲೂ ಹಳ್ಳಿಯಲ್ಲಿ ಇರಬೇಕು. ಗದ್ದೆಯಲ್ಲಿ ಕೆಲಸ ಮಾಡಬೇಕು. ಗುರಿಯಿಲ್ಲದೇ ಯಾವುದೋ ದಾರಿಯಲ್ಲಿ ಹೋಗಿ ಸೇರಬೇಕು. ತಮ್ಮವರನ್ನು ಮರೆತು ಬದುಕಬೇಕು. ಒಂದು ಇಡೀ ರಾತ್ರಿ ತೋಟದದಲ್ಲಿ ಮಲಗಬೇಕು ಎಂದು ಆಸೆ ಪಟ್ಟಿರುತ್ತಾಲೆ. ಇದನ್ನೆಲ್ಲಾ ತುಳಸಿ ಬರೆದ ಡೈರಿ ಮಾಧವ್ ಗೆ ಸಿಕ್ಕಿರುತ್ತದೆ. ಅದರಂತೆ ಹೆಂಡತಿಯ ಆಸೆ ಅನ್ನು ಇಡೇರಿಸಲು ಕರೆದುಕೊಂಡು ಹೋಗಿರುತ್ತಾನೆ. ಸರ್ ಪ್ರೈಸ್ ಆಗಿ ಹಳ್ಳಿಯೊಂದರಲ್ಲಿ ಎರಡು ದಿನ ಜೀವನ ಮಾಡುತ್ತಾರೆ. ಗದ್ದೆಯಲ್ಲಿ ಮುದ್ದೆ ತಿಂದು, ಬಾವಿಯಲ್ಲಿ ನೀರು ಸೇದಿ ಎಂಜಾಯ್ ಮಾಡುತ್ತಾಳೆ.

srirasthu-shubhamasthu-serial-16-july-episode-written-update

ರಾತ್ರಿ ಪೂರ್ತಿಯಲ್ಲಿ ಗದ್ದೆಯಲ್ಲಿ ವಾಸ

ಗದ್ದೆಯಲ್ಲಿ ತುಳಸಿ ಕೆಲಸ ಮಾಡಿ, ಹರಕಥೆ ಮಾಡಿ ಅಲ್ಲಿಂದ ಹೊರಡಬೇಕು ಎಂದು ಬಯಸುತ್ತಾರೆ. ದೇವರ ಪೂಜೆ ಮಾಡಿ, ತಾವೇ ಅಡುಗೆ ಮಾಡಿ ಖುಷಿ ಪಡುತ್ತಾರೆ. ವಾಪಸ್ ಬೆಂಗಳೂರಿಗೆ ಹೋಗೋಣ ಎಂದು ಹೊರಡುತ್ತಾರೆ. ತುಳಸಿಯ ಮತ್ತೊಂದು ಆಸೆಯನ್ನು ನೆರವೇರಿಸಿದ್ದಾನೆ. ತೋಟದ ಮಧ್ಯೆದಲ್ಲಿ ಕಾರು ಕೆಟ್ಟು ಹೋಗಿದೆ ಎಂದು ಹೇಳಿ ಅಲ್ಲೇ ಇದ್ದ ಒಂದು ಜಾಗದಲ್ಲಿ ಇಬ್ಬರೂ ತಂಗಿದ್ದಾರೆ. ತುಳಸಿ ಈ ಸಂದರ್ಭವನ್ನು ಎಂಜಾಯ್ ಮಾಡುತ್ತಿದ್ದಾಳೆ. ತುಳಸಿಯ ಖುಷಿಯನ್ನು ಕಂಡು ಮಾಧವ್ ಕೂಡ ತೃಪ್ತನಾಗಿದ್ದಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X