Srirasthu Shubhamasthu ;ತಂದೆ-ಮಗಳು ಸೇರಿ ಆಡಿದ ನಾಟಕ : ತಾಯಿ ಪ್ರೀತಿ ಪಡೆದು ಸಂತೃಪ್ತಳಾದ ಪೂರ್ಣಿಮಾ
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿಮಾಳಿಗೆ ಅಪ್ಪ-ಅಮ್ಮಾ ಯಾರು ಎಂಬುದನ್ನು ಹುಡುಕಿ ಅವಳ ಮುಂದೆ ತಂದು ನಿಲ್ಲಿಸಬೇಕು ಎಂದು ತುಳಸಿ ಓಡಾಡುತ್ತಿದ್ದಾಳೆ. ವನಜಾ ತನ್ನ ಮೊದಲು ಮಗಳು ಸಿಕ್ಕರೆ ಸಾಕು. ಅವಳನ್ನು ಇಷ್ಟು ವರ್ಷ ಬಿಟ್ಟು ಬದುಕಿದ ತಪ್ಪಿಗೆ ಪಶ್ಚಾತಪ ಪಡುತ್ತಾ ಮಗಳಿಗಾಗಿ ಹುಡುಕಾಡುತ್ತಿದ್ದಾಳೆ. ಇತ್ತ ದತ್ತ ತಾತನ ಮನೆ ಛತ್ರ ಆಗಿದೆ. ಸಂಧ್ಯ ಮನೆಯವರು ಕುಟುಂಬ ಸಮೇತರಾಗಿ ಬಂದು ದತ್ತ ತಾತನ ಮನೆಯಲ್ಲಿ ಶಾಶ್ವತವಾಗಿ ಝಾಂಢ ಹೂಡಿದ್ದಾರೆ.
ದತ್ತ ತಾತನ ಕೈಯಲ್ಲಿ ಬುಗುರಿಯಾದ ಜುಗ್ಗ
ಅವರನ್ನು ಮನೆಯಿಂದ ಹೊರಗೂ ಹಾಕಲಾಗದೇ, ಮನೆಯಲ್ಲೂ ಇರಿಸಿಕೊಳ್ಳಲಾಗದೇ, ದತ್ತ ತಾತ ಕಷ್ಟ ಪಡುತ್ತಿದ್ದಾರೆ. ಜುಗ್ಗ ಹಾಗೂ ಸಂಧ್ಯಾ ಇಬ್ಬರಿಗೂ ಕೂಡ ಬುದ್ಧೀ ಕಲಿಸಬೇಕು ಎಂದು ಏನೇನೋ ಹರಸಾಹಸ ಪಡುತ್ತಿರುತ್ತಾರೆ. ಆದರೂ ಇಬ್ಬರೂ ರಂಗೋಲಿ ಕೆಳಗೆ ನುಸುಳಿ ದತ್ತ ತಾತನಿಗೆ ಒಂದಲ್ಲ ಒಂದು ಕಷ್ಟವನ್ನು ಕೊಡುತ್ತಿರುತ್ತಾರೆ. ಹೀಗಾಗಿ ದತ್ತ ತಾತ ಈಗ ಊಟದ ವಿಷಯದಲ್ಲಿ ಸ್ಟ್ರಿಕ್ಟ್ ಆಗಿದ್ದಾರೆ. ದುಡ್ಡು ಕೊಟ್ಟರೆ ಮಾತ್ರವೇ ಊಟ ಎಂದು ಹೇಳಿದ್ದಾರೆ. ಸಂಧ್ಯಾ ಹೇಗೋ ಪ್ರಸಾದ್ ದುಡ್ಡಿನಿಂದ ಊಟ ಮಾಡುತ್ತಿದ್ದಾಳೆ. ಆದರೆ, ಜುಗ್ಗನಿಗೆ ದುಡ್ಡು ಕಳೆದುಕೊಳ್ಳಲು ಇಷ್ಟವಿಲ್ಲದೇ, ದತ್ತ ತಾತ ಹೇಳಿದಂತೆ ಕೇಳುತ್ತಿದ್ದಾನೆ. ದತ್ತ ತಾತನ ಸೇವೆ ಮಾಡುತ್ತಾ, ಬಿಟ್ಟಿ ಊಟ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾನೆ.

ಆಸ್ತಿಗಾಗಿ ಸುಳ್ಳು ಕಥೆ ಕಟ್ಟಿದ ಜನಾರ್ಧನ್
ಇನ್ನು ಜನಾರ್ಧನನಿಗೆ ಈಗ ತನ್ನ ಆಸ್ತಿಯನ್ನು ಉಳಿಸಿಕೊಳ್ಳುವ ತವಕದಲ್ಲಿದ್ದಾನೆ. ಇದಕ್ಕಾಗಿ ಏನೇ ಪ್ಲಾನ್ ಮಾಡಿದರೂ ಆಗುತ್ತಿಲ್ಲ. ಹಾಗಾಗಿ ಪೂರ್ಣಿಮಾಳನ್ನೇ ತನ್ನ ಮಗಳು ಎಂದು ಒಪ್ಪಿಕೊಳ್ಳಲು ಮುಂದಾಗಿದ್ದಾನೆ. ಮನೆಗೆ ಬಂದಿದ್ದ ಪೂರ್ಣಿಮಾಳನ್ನು ನನ್ನ ಮಗಳಿದ್ದಂತೆ ಎಂದು ಹೇಳಿ ಹರಸಿ ಕಳಿಸಿದ್ದಲ್ಲದೇ, ಈಗ ತಾನು ಅನಾಥಾಶ್ರಮಕ್ಕೆ ಬಿಟ್ಟು ಬಂದ ಮಗುವೇ ಪೂರ್ಣಿಮಾ ಎಂದು ವನಜಾ ಎದುರು ಸುಳ್ಳು ಕಥೆಯನ್ನು ಹೇಳಿದ್ದಾನೆ. ಜನಾರ್ಧನನ ಮಾತು ಸತ್ಯ ಎಂದು ವನಜಾ ನಂಬಿದ್ದು, ಈಗಲೇ ಮಗಳನ್ನು ನೋಡಬೇಕು ಎಂದು ಮಾಧವನ ಮನೆಗೆ ಬಂದಿದ್ದಾಳೆ.
ಸತ್ಯ ಒಪ್ಪಿಕೊಳ್ಳಲಾಗದೇ ಒದ್ದಾಡಿದ ಪೂರ್ಣಿ
ಮಾಧವನ ಮನೆಗೆ ಬಂದ ಜನಾರ್ಧನ ರಾಮಚಂದ್ರ ಆಚಾರ್ಯರ ಬಳಿ ನನ್ನ ಮಗಳನ್ನು ಬಿಟ್ಟು ಬಂದೆ. ಮನಸ್ಡಸು ಒಪ್ಪದೇ ಮತ್ತೆ ಆ ಮಗುವನ್ನು ಅನಾಥಾಶ್ರಮಕ್ಕೆ ಬಿಟ್ಟು ಬಂದೆ. ಅನಿಷ್ಠ ಎಂದು ನಾನು ತಪ್ಪು ತಿಳಿದುಕೊಂಡಿದ್ದೆ. ಆದರೆ, ಈಗ ನನಗೆ ಬುದ್ಧಿ ಬಂದಿದ್ದು, ನನ್ನ ಮಗಳನ್ನು ಹುಡುಕಿಕೊಂಡು ಹೋಗಿದ್ದಕ್ಕೆ ಅವಳು ನಿಮ್ಮ ಮನೆಯ ಸೊಸೆಯಾಗಿದ್ದಾಳೆ ಎಂಬುದು ತಿಳಿದು ಬಂತು. ಇದರಿಂದ ತುಂಬಾ ಸಂತೋಷವಾಯ್ತು ಎಂದು ಹೇಳುತ್ತಾನೆ. ಆದರೆ, ಜನಾರ್ಧನನ ಮಾತನ್ನು ಯಾರಿಂದಲೂ ನಂಬಲು ಆಗುವುದಿಲ್ಲ. ಪೂರ್ಣಿಮಾ ಅಂತೂ ಸತ್ಯ ಕೇಳಿ ಒದ್ದಾಡುತ್ತಾಳೆ.
ಅಪ್ಪ-ಮಗಳ ಪ್ಲಾನ್ ಸಕ್ಸಸ್ ಆಯ್ತಾ..?
ತನಗೆ ತಂದೆ ತಾಯಿ ಸಿಕ್ಕರು ಎಂದು ಖುಷಿ ಪಡಬೇಕೇ..? ಇಲ್ಲ ಇದೆಲ್ಲಾ ನಿಜ ಎಂದು ನಂಬಬೇಕೇ..? ನಾನು ಈಗ ಏನು ಮಾಡಲಿ ಎಂದು ಖುಷಿ, ದುಃಖ ಎರಡರ ಮಧ್ಯದಲ್ಲಿ ಒದ್ದಾಡಿದ್ದಾಳೆ. ಜನಾರ್ಧನಾ ಮಾಡಿದ್ದೆಲ್ಲವೂ ನಾಟಕ ಎಂದು ತಿಳಿದಿರುವ ದೀಪಿಕಾ ಮೂಖಳಾಗಿ ನೋಡಿದ್ದಾಳೆ. ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ತಂದೆ ಮಗಳು ಸೇರಿ ನಾಟಕ ಮಾಡಿದ್ದು, ಈ ಸತ್ಯ ಯಾವಾಗ ಹೊರಗೆ ಬರುತ್ತದೋ ಗೊತ್ತಿಲ್ಲ. ಆದರೆ, ಪೂರ್ಣಿಮಾಳಿಗಂತೂ ತಾಯಿ ಪ್ರೀತಿ ಸಿಕ್ಕಿದೆ. ಇನ್ನು ಪೂರ್ಣಿಮಾ ಹುಟ್ಟಿನ ಸತ್ಯ ಇದೇನಾ..? ಅಥವಾ ಕಥೆಯಲ್ಲಿ ಇನ್ನೂ ಟ್ವಿಸ್ಟ್ ಇದೆಯಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











