Srirasthu Shubhamasthu ; ಅಭಿಗೆ ತುಳಸಿ ಗರ್ಭಿಣಿ ಎಂದು ತಿಳಿಸಿದ ದೀಪಿಕಾ,ಅಮ್ಮ ಬಳಿ ಕ್ಷಮೆ ಕೇಳಿದ ಅವಿನಾಶ್..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ತಾನು ಗರ್ಭಿಣಿಯಾಗಿದ್ದು, ಮಗುವನ್ನು ತೆಗೆಸಲು ಬಯಸುತ್ತಿಲ್ಲ. ಆದರೆ, ವೈದ್ಯರು ತುಳಸಿ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ. ಮಾಧವ್ ಈಗಾಗಲೇ ಏನೇ ಆಗಲೀ, ತನಗೆ ತುಳಸಿಗಿಂತ ಬೇರೆ ಏನೂ ಮುಖ್ಯವಲ್ಲ. ಹಾಗಾಗಿ ಮಗುವನ್ನು ಅಬಾರ್ಟ್ ಮಾಡಿಸಬೇಕು ಎಂದು ತೀರ್ಮಾನ ಮಾಡಿದ್ದಾನೆ. ಮನೆಯವರಿಗೆಲ್ಲಾ ಈ ಸತ್ಯ ತಿಳಿಯುವ ಮುನ್ನವೇ ಅಬಾರ್ಟ್ ಮಾಡಿಸಬೇಕು ಎಂದು ಮಾಧವ್ ಅಂದುಕೊಂಡಿದ್ದರೆ, ತುಳಸಿ ಮಗುವನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿದ್ದಾಳೆ.

ತುಳಸಿ ಗರ್ಭಿಣಿ ಎಂಬ ಸತ್ಯ ತಿಳಿದ ಅಭಿ

ಶಾರ್ವರಿ ತುಳಸಿ ಗರ್ಭಿಣಿ ಎಂಬ ಸತ್ಯವನ್ನು ತಿಳಿದು ಮನೆಯವರೆಲ್ಲರ ಎದುರು ಸತ್ಯ ಹೇಳಿದ್ದಾಳೆ. ಮಾಧವ್ ಮತ್ತು ತುಳಸಿ ಇಬ್ಬರೂ ಈ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಶಾರ್ವರಿ ತಮ್ಮ ಮಗಳು ನಿಧಿ ಮದುವೆಗೆ ಇದರಿಂದ ಸಮಸ್ಯೆ ಆಗುತ್ತದೆ ಎಂದು ಹೇಳಿದರೆ, ಮಹೇಶ ಹಾಗೆಲ್ಲಾ ಏನೂ ಆಗುವುದಿಲ್ಲ ಎಂದು ಹೇಳಿದ್ದಾನೆ. ಇನ್ನು ಮಾಧವ್ ಮಗುವನ್ನು ತೆಗೆಸುತ್ತೇವೆ ಎಂದಿದ್ದಕ್ಕೆ ತುಳಸಿ ಖಡಾಖಂಡಿತವಾಗಿ ಸಾಧ್ಯವಿಲ್ಲ. ಈ ಮಗು ತನಗೆ ಬೇಕು ಎಂದು ಹೇಳಿದ್ದಾಳೆ. ಈ ಮಾತನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ. ಈ ವಿಚಾರವನ್ನು ದೀಪಿಕಾ ಅಭಿ ಬಂದ ಕೂಡಲೇ ತಿಳಿಸಿದ್ದು, ಅಭಿ ಕೂಡ ಶಾಕ್ ಆಗಿದ್ದಾನೆ.

srirasthu shubhamasthu serial 16 October episode written update

ಸತ್ಯ ತಿಳಿದು ನಿಟ್ಟುಸಿರು ಬಿಟ್ಟ ಸಮರ್ಥ್

ಸಮರ್ಥ್ ಮನೆಗೆ ಬರುತ್ತಿದ್ದಂತೆಯೇ ಶಾರ್ವರಿ ವ್ಯಂಗ್ಯವಾಡಿದ್ದಾಳೆ. ನಿಮ್ಮ ತಾಯಿ ಈಗ ಗರ್ಭಿಣಿ. ಈ ವಯಸ್ಸಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಪ್ರಶ್ನಿಸಿದ್ದಾಳೆ. ಸಮರ್ಥ್ ತನ್ನ ತಾಯಿಗೆ ಬ್ರೈನ್ ಟ್ಯೂಮರ್ ಇಲ್ಲ. ಆಕೆ ಗರ್ಭಿಣಿ ಆಗಿದ್ದಾಳೆ. ತನ್ನ ತಾಯಿ ಪ್ರಾಣಕ್ಕೆ ಅಪಾಯವಿಲ್ಲ ಎಂಬ ಸತ್ಯವನ್ನು ತಿಳಿದು ನಿಟ್ಟುಸಿರು ಬಿಟ್ಟಿದ್ದಾನೆ. ಸಮರ್ಥ್ ಸೀದಾ ತನ್ನ ತಾಯಿ ಬಳಿ ಹೋಗಿದ್ದು, ತಬ್ಬಿಕೊಂಡು ಸಮಾಧಾನ ಪಟ್ಟುಕೊಂಡಿದ್ದಾನೆ. ನೀವು ನೂರು ಕಾಲ ಆರೋಗ್ಯವಾಗಿದ್ದರೆ ಅಷ್ಟೇ ಸಾಕು ಎಂದು ಹೇಳಿ ಖುಷಿ ಪಡುತ್ತಾನೆ. ಮನೆಗೆ ಹೋಗಿ ಸಿರಿ ಮತ್ತು ಸಂಧ್ಯಾಳನ್ನು ಅಪ್ಪಿಕೊಂಡು ಅಮ್ಮನ ಆರೋಗ್ಯದಲ್ಲಿ ಏನೂ ಸಮಸ್ಯೆ ಇಲ್ಲ ಎಂದು ಹೇಳಿ ಸಂತಸ ಹಂಚಿಕೊಂಡಿದ್ದಾನೆ.


ತುಳಸಿ ತ್ಯಾಗ ತಿಳಿದು ಕಣ್ಣೀರಿಟ್ಟ ಅವಿನಾಶ್

ತುಳಸಿ ತಾಯಿ ಆಗುತ್ತಿರುವ ಸತ್ಯ ತಿಳಿದು ಅವಿನಾಶ್ ಬೇಸರ ಮಾಡಿಕೊಂಡಿರುತ್ತಾನೆ. ಹಾಗಾಗಿ ತುಳಸಿಯನ್ನು ತಿರಸ್ಕಾರದಿಂದ ನೋಡುತ್ತಾನೆ. ಪೂರ್ಣಿಮಾ ಅವಿ ಬಳಿ ಹೋಗಿ ತುಳಸಿ ಮಾಡುತ್ತಿರುವ ತ್ಯಾಗದ ಬಗ್ಗೆ ಹೇಳುತ್ತಾಳೆ. ತುಳಸಿ ತನ್ನ ಜೀವಕ್ಕೆ ತೊಂದರೆಯಾದರೂ ಪರವಾಗಿಲ್ಲ. ಆದರೆ, ಈ ಮಗುವನ್ನು ಉಳಿಸಿಕೊಳ್ಳಬೇಕು. ಆ ಮಗುವನ್ನು ಪೂರ್ಣಿಮಾಳಿಗೆ ಕೊಡಬೇಕು. ಪೂರ್ಣಿಗೆ ಮಗುವಾಗುವುದಿಲ್ಲ. ಹಾಗಾಗಿ ತನ್ನ ಮಗುವನ್ನು ಆಕೆಗೆ ಕೊಡಬೇಕು ಎಂಬುದು ತುಳಸಿ ಆಲೋಚನೆ. ಈ ವಿಚಾರವನ್ನು ತಿಳಿದು ಅವಿನಾಶ್ ತುಳಸಿ ಬಳಿ ಕ್ಷಮೆ ಕೇಳುತ್ತಾನೆ. ತಮಗೋಸ್ಕರ ಇಷ್ಟು ದೊಡ್ಡ ತ್ಯಾಗ ಮಾಡುತ್ತಿರುವುದಕ್ಕೆ ಪಶ್ಚಾತಾಪ ಪಡುತ್ತಾನೆ.

ತುಳಸಿಯನ್ನು ನೋಯಿಸಿದ ಶಾರ್ವರಿ

ಆದರೆ, ಶಾರ್ವರಿ ಮತ್ತು ದೀಪಿಕಾಳಿಗೆ ತುಳಸಿ ಗರ್ಭಿಣಿ ಆಗಿರುವುದು ಕೊಂಚವೂ ಇಷ್ಟವಿರುವುದಿಲ್ಲ. ಇನ್ನು ತುಳಸಿ ಗರ್ಭಿಣಿ ಆಗಿರುವುದು ತಪ್ಪು ಎಂದು ಅಭಿ ಬಳಿ ಮಾತನಾಡುತ್ತಾಳೆ. ಅಲ್ಲದೇ, ತುಳಸಿಯನ್ನು ಯಾವುದೇ ಕಾರಣಕ್ಕೂ ಬೀಗರು ಮನೆಗೆ ಬಂದಾಗ ಕಾಣಿಸಿಕೊಳ್ಳಬೇಡಿ ಎಂದು ಚುಚ್ಚಿ ಹೇಳುತ್ತಾಳೆ. ಈ ಮಗುವನ್ನು ತೆಗೆಸುವುದೇ ಸೂಕ್ತ ಎಂದು ತುಳಸಿಗೆ ಸಲಹೆಯನ್ನೂ ಕೊಡುತ್ತಾಳೆ. ಆದರೆ, ತುಳಸಿ ಸುತಾರಾಂ ಮಗುವನ್ನು ಕಳೆದುಕೊಳ್ಳಲಾರೆ ಎಂದು ಹೇಳುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X