Shrirastu Shubhamasthu: ಕೊನೆಗೂ ತುಳಸಿ- ಶಾರ್ವರಿ ಭೇಟಿ: ಹಣ ಕದಿಯಲು ಸಂಧ್ಯಾ ಪ್ಲ್ಯಾನ್

By ಪ್ರಿಯಾ ದೊರೆ

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಅವಿ ಮನೆಯಲ್ಲಿ ಸ್ವಲ್ಪ ಅಪ್ಸೆಟ್ ಆಗಿರುತ್ತಾನೆ. ಪೂರ್ಣಿಮಾ ಈ ವಿಚಾರದ ಬಗ್ಗೆ ಕೇಳುವುದೋ ಬೇಡವೋ ಎಂದು ಯೋಚಿಸುತ್ತಿರುತ್ತಾಳೆ. ಅಷ್ಟರಲ್ಲಿ ಅವಿ ಮನೆಗೆ ಬಂದು ತುಳಸಿ ಕೊಟ್ಟ ಕೊಬ್ಬರಿ ಮಿಠಾಯಿ ಅನ್ನು ಪೂರ್ಣಿಗೆ ಕೊಟ್ಟು, ಖುಷಿಯಾಗಿ ಮಾತನಾಡುತ್ತಾನೆ. ಕೊಬ್ಬರಿ ಮಿಠಾಯಿ ಕೊಟ್ಟು ಅವರ ಬಗ್ಗೆ ಹಂಚಿಕೊಳ್ಳುತ್ತಾನೆ.

ಕೊಬ್ಬರಿ ಮಿಠಾಯಿ ತಿಂದು ಯಾಕೆ ಬೇಸರದಲ್ಲಿ ಇದ್ದದ್ದು ಎಂದು ಕೇಳಿದಾಗ ಅವಿ, ಶಾರ್ವರಿ ಅತ್ತೆ ಬಗ್ಗೆ ಗೊತ್ತಿದ್ದು ಅವರನ್ನು ಅನುಮಾನಿಸಿದೆ ಎಂದು ಹೇಳಿ ಬೇಸರವನ್ನು ಹೇಳಿಕೊಳ್ಳುತ್ತಾನೆ. ಇತ್ತ ಶಾರ್ವರಿ ಆಫೀಸ್ ಕೆಲಸದ ನಿಮಿತ್ತ ಮಾಧವ್ ಕೆಫೆಗೆ ಬಂದಿದ್ದಾಳೆ. ಮ್ಯಾಗಿ ಬಳಿ ಇವತ್ತಿನ ಮೆನು ಬಗ್ಗೆ ತುಳಸಿ ಹೇಳುತ್ತಿರುವುದನ್ನು ಶಾರ್ವರಿ ಕೇಳಿಸಿಕೊಳ್ಳುತ್ತಾಳೆ.

Srirasthu Shubhamasthu serial 16th June Episode Written Update

ಈ ಹಿಂದೆಯೇ ಕಾರಣಾಂತರಗಳಿಗೆ ತುಳಸಿ ಹಾಗೂ ಸಿರಿ ಅನ್ನು ಭೇಟಿ ಮಾಡಿರುವ ಶಾರ್ವರಿ, ಇಬ್ಬರ ಬಗ್ಗೆಯೂ ಅಪಾರ್ಥ ಮಾಡಿಕೊಂಡಿದ್ದಳು. ಹೀಗಾಗಿ ತುಳಸಿಯನ್ನು ಕೆಫೆಯಲ್ಲಿ ನೋಡಿ, ಇಂತಹ ದೊಡ್ಡ ಜಾಗಕ್ಕೆ ನೀನ್ಯಾಕೆ ಬಂದಿದ್ದೀಯಾ ಎಂದು ಪ್ರಶ್ನೆ ಮಾಡುತ್ತಾಳೆ. ತುಳಸಿಯ ಮೇಲೆ ಶಾರ್ವರಿ ಕೆಂಡ ಕಾರುತ್ತಾಳೆ. ತುಳಸಿ ಅನ್ನು ಸರಿಯಾಗಿ ಮಾತನಾಡಲು ಕೂಡ ಬಿಡುವುದಿಲ್ಲ. ಅಷ್ಟರಲ್ಲಿ ಅಲ್ಲಿಗೆ ಮಾಧವ್ ಬರುತ್ತಾರೆ.

ಹಣ ಕದಿಯಲು ಸಂಧ್ಯಾ ಪ್ಲಾನ್

ಇನ್ನು ದತ್ತ ತಾತ, ತುಳಸಿಯ ಆಸ್ಪತ್ರೆಗೆ ಖರ್ಚನ್ನು ಭರ್ತಿ ಮಾಡಿದ್ದ ಮಾಧವ್‌ಗೆ ಹಣ ವಾಪಸ್ ನೀಡಬೇಕೆಂದು ಮನೆಗೆ ದುಡ್ಡು ತಂದಿರುತ್ತಾರೆ. ಈ ಬಗ್ಗೆ ಶೇಷು ಬಳಿ ಹೇಳಿಕೊಳ್ಳುವಾಗ ಸಂಧ್ಯಾ ಕೇಳಿಸಿಕೊಳ್ಳುತ್ತಾಳೆ. ಹೇಗಾದರೂ ಮಾಡಿ ಈ ಹಣವನ್ನು ತೆಗೆದುಕೊಳ್ಳಬೇಕು ಎಂದು ದತ್ತ ತಾತನ ವಾಡ್ರೂಬ್ ಲಾಕ್ ಅನ್ನು ಹಾಳು ಮಾಡಿದ್ದಾಳೆ.

Srirasthu Shubhamasthu serial 16th June Episode Written Update

ಸಂಧ್ಯಾ ಮಾಸ್ಟರ್ ಪ್ಲ್ಯಾನ್

ದತ್ತ ತಾತ ಹಣ ಇಟ್ಟಾಗ ಲಾಕ್ ಮಾಡಲು ಆಗುವುದಿಲ್ಲ. ಹಾಗಾಗಿ ದತ್ತ ತಾತ ರೂಮ್‌ನಲ್ಲೇ ಕಾವಲು ಕಾಯುತ್ತಿರುತ್ತಾರೆ. ಸಂಧ್ಯಾ, ತಾತನ ರೂಮ್‌ಲ್ಲಿದ್ದು, ನಂದಿನಿ ಬಂದಳು ಎಂದು ರೂಮ್ ಬೀಗ ಹಾಕಿಕೊಂಡು ಬಂದಿದ್ದಾರೆ. ಈಗ ಹಣ ತೆಗೆದುಕೊಂಡು ಹೋಗುವ ಸಂಧ್ಯಾ ಮಾಸ್ಟರ್ ಪ್ಲಾನ್‌ಗೆ ಉಲ್ಟಾ ಆಗುವಂತಿದೆ.

ಅತ್ತೆ ಮಾವನನ್ನು ಹೊರಗಟ್ಟಿದ ತಾತ

ನಂದಿನಿ ಈಗ ಅತ್ತೆಯ ಸರವನ್ನು ಅಡವಿಟ್ಟು ಸ್ವಂತ ಉದ್ಯಮವನ್ನು ಶುರು ಮಾಡಬೇಕು ಎಂದುಕೊಂಡಿದ್ದಾಳೆ. ಇದಕ್ಕಾಗಿ ಒಂದು ಬಾರಿ ಜಗಳವನ್ನೂ ಆಡಿದ್ದಾಳೆ. ದತ್ತ ತಾತ, ನಂದಿನಿಗೆ ಬೈದಿದ್ದಾಳೆ. ಅತ್ತೆ-ಮಾವನನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಅಂತಹದರಲ್ಲಿ ಅವರ ಒಡವೆ ಮೇಲೆ ಕಣ್ಣು ಹಾಕಿದ್ದೀಯಾ ಎಂದು ಬೈದು ಬುದ್ಧಿ ಹೇಳುತ್ತಾರೆ. ಇದರಿಂದ ಕೋಪಗೊಂಡಿರುವ ನಂದಿನಿ ಲಗೇಜ್ ಸಮೇತ ದತ್ತ ತಾತನ ಮನೆಗೆ ಶೇಷು ಮತ್ತು ಅವರ ಪತ್ನಿಯನ್ನು ಕರೆದುಕೊಂಡು ಬಿಟ್ಟಿದ್ದಾಳೆ. ಇವರ ಮನೆಯಲ್ಲೇ ಇರಿ. ನಮ್ಮ ಮನೆಯಲ್ಲಿ ನಿಮಗೆ ಜಾಗವಿಲ್ಲ ಎಂದು ಹೇಳಿದ್ದಾಳೆ.

ತುಳಸಿಯನ್ನು ಪರಿಚಯಿಸಿದ ಮಾಧವ್

ಮಾಧವ್, ಶಾರ್ವರಿಗೆ ಇವರೇ ನನ್ನ ಬೆಸ್ಟ್ ಫ್ರೆಂಡ್ ಎಂದು ಪರಿಚಯಿಸುತ್ತಾರೆ. ಇದರಿಂದ ಶಾರ್ವರಿಗೆ ಶಾಕ್ ಆಗುತ್ತದೆ. ಇವಳನ್ನು ನೋಡುವುದಕ್ಕಾಗಿ ನಾನು ಏನೆಲ್ಲಾ ಮಾಡಬೇಕಾಯ್ತು. ಇವಳಿಂದ ತಾನು ಮಾಡುತ್ತಿರುವ ಪ್ಲಾನ್‌ಗಳೆಲ್ಲಾ ಉಲ್ಟಾ ಆಗುತ್ತಿದೆ ಎಂದು ಮನದಲ್ಲಿ ತನ್ನ ಕೋಪ ಹೆಚ್ಚಿಸಿಕೊಳ್ಳುತ್ತಾಳೆ. ಆದರೆ, ಈ ಬಗ್ಗೆ ಮಾಧವ್‌ಗೆ ಏನೂ ತಿಳಿಯುವುದಿಲ್ಲ. ಇನ್ನು ತುಳಸಿ ಈಗ ಕೆಫೆಯ ಲೀಡ್ ಶೆಫ್ ಎಂಬುದನ್ನು ತಿಳಿದು ಶಾರ್ವರಿಗೆ ಇನ್ನಷ್ಟು ಶಾಕ್ ಆಗುತ್ತದೆ.

More from Filmibeat

English summary
Srirasthu Shubhamasthu serial 16th June Episode Written Update. here is details about now Tulasi is infront of sharvari after several searches. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X