Srirasthu Shubhamasthu ; ಶಾರ್ವರಿ ಹಿನ್ನೆಲೆ ಹೇಳಿದ ಮಹೇಶ : ಅತ್ತೆಯನ್ನು ಅನಾಥೆ ಎಂದ ದೀಪಿಕಾ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಿರಿ ತಂದೆ ಪರೀಸ್ಥಿತಿ ದಿನ ದಿನಕ್ಕೂ ಹದಗೆಡುತ್ತಿದೆ. ಮರೆವಿನ ಖಾಯಿಲೆ ಹೆಚ್ಚಾಗುತ್ತಿದ್ದು, ಇದರಿಂದ ಎಡವಟ್ಟುಗಳಾಗುತ್ತಿವೆ. ಈ ಪರಿಸ್ಥಿತಿಯನ್ನು ಲಾಭವಾಗಿ ಪಡೆಯುತ್ತಿರುವ ಸಂಧ್ಯಾ ಮಾವ ಬೇಕಂತಲೇ ಸಿರಿ ತಂದೆಯನ್ನು ಆಟವಾಡಿಸುತ್ತಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಾಗ ಕಾಫಿ ಮಾಡಿಕೊಡುವಂತೆ ಕೇಳಿದ್ದಾರೆ.

ಸಿರಿ ತಂದೆ ಕಾಫಿ ಮಾಡಲು ಹೋಗಿ ಹಾಲನ್ನು ಸ್ಟೌವ್ ಮೇಲೆ ಇಟ್ಟು ಮರೆತಿದ್ದಾರೆ. ಹಾಲು ಉಕ್ಕಿದ್ದು, ಗ್ಯಾಸ್ ಲೀಕ್ ಆಗಿದೆ. ಕಾಫಿ ಮಾಡಲು ಮತ್ತೆ ಲೈಟರ್ ಕೈಗೆತ್ತಿಕೊಂಡಿದ್ದಾರೆ. ಅಷ್ಟರಲ್ಲಿ ಸಿರಿ ಬಂದು ಕಾಪಾಡಿದ್ದಾಳೆ.

Srirasthu shubhamasthu serial 17 April episode written update

ಅಮ್ಮನ ಜೊತೆಗೆ ಎಂಜಾಯ್ ಮಾಡಿದ ಅವಿ

ಇತ್ತ ಅವಿನಾಶ್ ತುಳಸಿ ಜೊತೆಗೆ ಮಾರ್ಕೆಟ್ ನಲ್ಲಿ ತರಕಾರಿ ಸೊಪ್ಪನ್ನು ಖರೀದಿ ಮಾಡಿ ಖುಷಿ ಪಟ್ಟಿದ್ದಾನೆ. ಅಮ್ಮನೊಂದಿಗೆ ಜ್ಯೂಸ್ ಕುಡಿಯಲು ಹೊರಟಾಗ ಸಂಧ್ಯಾ ಎದುರಾಗಿದ್ದಾಳೆ. ಬಲೂನ್ ಮಾರಾಟ ಮಾಡುತ್ತಿದ್ದು, ಜ್ಯೂಸ್ ಕೊಡಿಸಿ, ಊಟ ಕೊಡಿಸಿ ಎಂದು ಅವಿ ಹಾಗೂ ತುಳಸಿ ಬೆನ್ನು ಬಿದ್ದಿದ್ದಾಳೆ. ಸಂಧ್ಯಾಳ ಮಾತುಗಳನ್ನು ಕೇಳಿದ ಅವಿ ಮತ್ತು ತುಳಸಿಗೆ ಮತ್ತೆ ಕಿರಿಕಿರಿಯಾಗಿದೆ. ತುಳಸಿ ಸಂಧ್ಯಾಗೆ ಬೈದು ಹೋಗುತ್ತಾಳೆ. ಆದರೆ, ಮನಸ್ಸು ತಡೆಯದೆ, ಜ್ಯೂಸ್ ಮತ್ತು ಲಸ್ಸಿಯನ್ನು ಖರೀದಿಸಿ ತಂದು ಸಂಧ್ಯಾಳಿಗೆ ತಂದುಕೊಟ್ಟು ಬುದ್ಧಿವಾದ ಹೇಳುತ್ತಾಳೆ. ದುಡಿದು ತಿನ್ನು ಎಂದು ಹೇಳುತ್ತಾಳೆ. ತುಳಸಿ ಗುಣವನ್ನು ಕಂಡು ಅವಿ ಮನದಲ್ಲೇ ಖುಷಿ ಪಡುತ್ತಾನೆ.

ಲವ್ ಸ್ಟೋರಿ ಹೇಳಿದ ಮಹೇಶ

ಇನ್ನು ಶಾರ್ವರಿ ಮತ್ತು ಮಹೇಶನ ಮದುವೆಯ ವಾರ್ಷಿಕೋತ್ಸವ. ಮಹೇಶ ಈಗ ಸರಿ ಹೋಗಿರುವುದಕ್ಕೆ ಈ ಬಾರಿ ಆನಿವರ್ಸರಿಯನ್ನು ಮನೆಯವರೆಲ್ಲಾ ಸೇರಿ ಆಚರಿಸಲು ಮುಂದಾಗಿದ್ದಾರೆ. ಬೆಳಗೆದ್ದು ಎಲ್ಲರೂ ಶಾರ್ವರಿ ಮತ್ತು ಮಹೇಶನಿಗೆ ವಿಶ್ ಮಾಡುತ್ತಾರೆ. ಆಗ ಮಹೇಶ ತಾವಿಬ್ಬರೂ ಪ್ರೀತಿಸಿ ಮದುವೆಯಾದ ವಿಚಾರವನ್ನು ತಿಳಿಸುತ್ತಾರೆ. ಇಬ್ಬರ ಪ್ರೀತಿ ಹೇಗೆ ಶುರುವಾಯ್ತು, ಶಾರ್ವರಿಯನ್ನು ಎಲ್ಲಿ ಭೇಟಿ ಮಾಡಿದ್ದು ಎಂದು ಮಹೇಶ ಎಲ್ಲರಿಗೂ ಕಥೆ ಹೇಳುತ್ತಾರೆ. ಶಾರ್ವರಿಯನ್ನು ಮೊದಲ ಬಾರಿ ಮಹೇಶ ಮತ್ತು ಮಾಧವ್ ನೋಡಿದ್ದು ಪೊಲೀಸ್ ಠಾಣೆಯಲ್ಲಂತೆ.

ಶಾರ್ವರಿ ಕೂಡ ಅನಾಥೆನಾ..?

ಶಾರ್ವರಿ ಅವರು ಮನೆಯವರನ್ನೆಲ್ಲಾ ಕಳೆದುಕೊಂಡು ಒಬ್ಬಂಟಿಗರಾಗಿದ್ದರಂತೆ. ಅಲ್ಲಿಂದ ಅವರನ್ನು ಕರೆದುಕೊಂಡು ಬಂದ ಮಹೇಶ ಮತ್ತು ಮಾಧವ ಅವರು ತಮ್ಮ ಹೋಟೆಲ್ ನಲ್ಲಿ ಕೆಲಸ ಕೊಟ್ಟರಂತೆ. ಶಾರ್ವರಿ ದೋಸೆ ಹಾಕುತ್ತಾ ಮಹೇಶನನ್ನು ಪ್ರೀತಿಸಿದರಂತೆ. ಆಗ ಶಾರ್ವರಿ ಅನ್ನು ಸುಮತಿ ಒಪ್ಪಿಕೊಳ್ಳಲಿಲ್ಲವಂತೆ ಕೊನೆಗೆ ಮಾಧವ, ಮಹೇಶ ಮತ್ತು ಶಾರ್ವರಿ ಮದುವೆಯನ್ನು ಮಾಡಿಸಿದರಂತೆ. ಈ ಮಾತನ್ನು ಕೇಳಿದ ಮನೆಯವರೆಲ್ಲಾ ಒಂದು ರೀತಿ ಯೋಚಿಸಿದರೆ, ದೀಪಿಕಾ ನೀವು ಕೂಡ ಪೂರ್ಣಿಮಾ ರೀತಿ ಅನಾಥೆನಾ ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಎಲ್ಲರಿಗೂ ಮುಜುಗರವಾಗುತ್ತದೆ.

Srirasthu shubhamasthu serial 17 April episode written update

ಮಹೇಶನ ಎದುರು ಬುಗರಿಯಂತಾದ ಶಾರ್ವರಿ

ಶಾರ್ವರಿಗೆ ಬೇಸರವಾಗುತ್ತದೆ. ತನ್ನ ಹಿನ್ನೆಲೆ ಬಗ್ಗೆ ಮನೆಯವರಿಂದ ಬಚ್ಚಿಟ್ಟದ್ದ ವಿಚಾರ ಈಗ ಬಹಿರಂಗವಾಯ್ತು ಎಂದು ಗೊಣಗುತ್ತಾಳೆ. ಮಹೇಶ ಶಾರ್ವರಿಯನ್ನು ಬುಗರಿಯಂತೆ ಆಡಿಸುತ್ತಿದ್ದಾನೆ. ಶಾರ್ವರಿ ಕನಸಿನಲ್ಲಿ ಮಾತನಾಡಿ ಮಅತುಗಳನ್ನು ಕೇಳಿಸುತ್ತಾನೆ. ಶಾರ್ವರಿ ಈ ಮನೆಯನ್ನು ಒಡೆಯಲು ಹೊಂಚಾಕುತ್ತಿಯಾ ಎಂದೆಲ್ಲಾ ಹೇಳಿ ಭಯ ಹುಟ್ಟಿಸುತ್ತಾನೆ. ಶಾರ್ವರಿಗೆ ಮಹೇಶನ ಮಾತುಗಳಿಂದ ತಪ್ಪಿಸಿಕೊಳ್ಳಲಾಗದೇ ಒದ್ದಾಡುತ್ತಾಳೆ. ಮಹೇಶನಿಗೆ ಎಲ್ಲಾ ಸತ್ಯ ಗೊತ್ತಿದ್ದರೂ ಕೂಡ ಶಾರ್ವರಿನ ಬೇಕಂತಲೇ ಆಟವಾಡಿಸುತ್ತಿದ್ದಾನೆ. ಯಾವತ್ತು ಎಲ್ಲಾ ಸತ್ಯವನ್ನು ಬಯಲು ಮಾಡಿ ಶಾರ್ವರಿ ಬಣ್ಣವನ್ನು ಕಳಚುತ್ತಾನೋ ಕಾದು ನೋಡಬೇಕಿದೆ.

More from Filmibeat

English summary
Sharvari is also orphan. Mahesh tells her story
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X