Srirasthu Shubhamasthu ; ಇಬ್ಬಾಗವಾದ ಮಾಧವ್ ಕುಟುಂಬ : ಮನೆಯಿಂದ ಹೊರನಡೆದ ತುಳಸಿ, ಅವಿ, ಪೂರ್ಣಿಮಾ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ವರಮಹಾಲಕ್ಷ್ಮೀ ಹಬ್ಬ ನಡೆಯುತ್ತಿದೆ. ದತ್ತ ತಾತನ ಮನೆಯಲ್ಲಿ ಸಿಂಪಲ್ ಆಗಿ ಹಬ್ಬವನ್ನು ಮಾಡುತ್ತಿದ್ದಾರೆ. ಪ್ರಸಾದ್, ಜುಗ್ಗ ಜಗನ್ನಾಥನ ಹೆಂಡತಿ, ಸಿರಿ ತಂದೆ ಮನೆಯೀಮದ ಕಾಣೆಯಾಗಿ ಬಹಳ ಕಾಲವಾಗಿದೆ. ಇವರೆಲ್ಲಾ ಇಲ್ಲದೇ, ಸಂಧ್ಯಾ, ಸಿರಿ, ಸಮರ್ಥ್, ದತ್ತ ತಾತ ಹಾಗೂ ಜುಗ್ಗ ಜಗನ್ನಾಥ್ ಮಾತ್ರವೇ ಇದ್ದು, ಸಿಂಪಲ್ ಆಗಿ ಹಬ್ಬವನ್ನು ಮಾಡಿದ್ದಾರೆ. ಸಂಧ್ಯಾಳಿಗೆ ಸಿಂಪಲ್ ಆಗಿ ಹಬ್ಬ ಮಾಡುತ್ತಿರುವುದು ಬೇಸರ ತಂದಿದೆ. ಇನ್ನು ಸಂಧ್ಯಾಳಿಗೆ ನಂಬರ್ ಒಂದರಿಂದ ಪದೇ ಪದೇ ಫೋನ್ ಬರುತ್ತಲೇ ಇದೆ. ಆದರೆ, ರಿಸೀವ್ ಮಾಡದೇ ಕಟ್ ಮಾಡುತ್ತಿದ್ದಾಳೆ. ಮನೆಯವರೆಲ್ಲಾ ಫೋನ್ ರಿಸೀವ್ ಮಾಡಲು ಹೇಳಿದ್ದಕ್ಕೆ ಗಾಬರಿಯಾಗುತ್ತಿದ್ದಾಳೆ.


ಸಂಧ್ಯಾಳಿಗೆ ಸಾಲಗಾರರ ಕಾಟ ಶುರು

ಮನೆಯಿಂದ ಹೊರಗೆ ಹೋಗಿ ಕದ್ದು ಮುಚ್ಚಿ ಮಾತನಾಡಿದ್ದಾಳೆ. ಸಾಲ ಕೊಟ್ಟಿರುವವನು ಸಂಧ್ಯಾಳಿಗೆ ಬಾಯಿಗೆ ಬಂದಂತೆ ಬೈದಿದ್ದು, ಈಗಲೇ ಮನೆ ಬಳಿ ಬರುತ್ತೇನೆ ಹಣ ವಾಪಸ್ ಮಾಡು ಎಂದು ಹೇಳಿದ್ದಾರೆ. ಕೈಯಲ್ಲಿ ಕಾಸಿಲ್ಲದೇ ಸಂಧ್ಯಾ ಒದ್ದಾಡುತ್ತಿದ್ದಾಳೆ. ದೀಪಿಕಾ ಬಳಿ ಪಡೆದ ಹಣವೂ ಕೂಡ ಮಾವನ ಪಾಲಾಗಿದೆ. ಕೈಯಲ್ಲಿ ಕೆಲಸ ಬೇರೆ ಇಲ್ಲದೇ ಸಂಧ್ಯಾ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಹೀಗಾಗಿ ಸಂಧ್ಯಾ ಮನೆ ಬಾಗಿಲಲ್ಲೇ ಕಾಯುತ್ತಾ ಕುಳಿತಿದ್ದಾಳೆ. ಸಾಲ ನೀಡಿದಾತ ಬಂದ ತಕ್ಷಣ ಮನೆಯವರಿಗೆ ತಿಳಿಯದಂತೆ ಸಾಗಾಕಬೇಕು ಎಂದು ಕಾಯುತ್ತಿದ್ದಾಳೆ. ಸಂಧ್ಯಾ ನಡವಳಿಕೆಯನ್ನು ಕಂಡು ಮನೆಯವರೆಲ್ಲಾ ಅನುಮಾನಗೊಂಡಿದ್ದಾರೆ.

srirasthu shubhamasthu serial 18 August episode written update

ಹೆಂಗಸರಿಂದ ಜಗಳ ಮಾಡಿದ ಅವಿ-ಅಭಿ

ಇತ್ತ ಮಾಧವ್ ಮನೆಯಲ್ಲಿ ಪರೀಸ್ಥಿತಿ ತೀರಾ ಹದಗೆಡುತ್ತಿದೆ. ಅಭಿ ಸ್ವಂತ ಅಣ್ಣನನ್ನು ಅಪಾರ್ಥ ಮಾಡಿಕೊಂಡಿದ್ದಾನೆ. ಸಮರ್ಥ್ ಮಾಡಿದ ಪಿಪಿಟಿಯಿಂದಾಗಿ ಜೆಜೆ ಕಂಪನಿಯ ಟೆಂಡರ್ ತಮ್ಮದಾಗಿತು ಎಂದು ಅವಿನಾಶ್ ಸಿಹಿ ಹಂಚಿರುತ್ತಾನೆ. ಇದರಿಂದ ಅಪ್ಸೆಟ್ ಆಗಿರುವ ಅಭಿ ಬೇಕಂತಲೇ ಎಡವಟ್ಟು ಮಾಡಿದ್ದಾನೆ. ಜೆಜೆ ಕಂಪನಿಯ ಟೆಂಡರ್ ಅನ್ನು ಕ್ಯಾನ್ಸಲ್ ಮಾಡಿ, ಬೇರೊಂದು ಕಂಪನಿಯ ಟೆಂಡರ್ ಗೆ ಸಹಿ ಹಾಕಲು ಮುಂದಾಗಿದ್ದಾನೆ. ಇದು ಸರಿಯಲ್ಲ. ಇದರಿಂದ ನಮ್ಮ ಕಂಪನಿಗೆ ಲಾಸ್ ಆಗುತ್ತದೆ ಎಂದು ಅವಿ ಎಷ್ಟು ಹೇಳಿದರೂ ಅಭಿ ಕೇಳುವುದಿಲ್ಲ. ಇನ್ನು ವರಮಹಾಲಕ್ಷ್ಮೀ ಹಬ್ಬದ ದಿನವೇ ದೀಪಿಕಾ ಪೂರ್ಣಿಮಾ ಬಳಿ ಜಗಳ ತೆಗೆದಿದ್ದಾಳೆ. ನಿಮಗೆ ಮಕ್ಕಳಾಗುವುದಿಲ್ಲ ಎಂದು ಎಲ್ಲರ ಎದುರು ಹೀಯಾಳಿಸಿದ್ದಾಳೆ. ಇದರಿಂದ ಅಣ್ಣ-ತಮ್ಮ ಜಗಳ ಮಾಡುವಂತಾಗಿದೆ.

ಮಗನನ್ನು ಹೊರಗಟ್ಟಿದ ಮಾಧವ್

ಅಭಿ ಮತ್ತು ದೀಪಿಕಾ ಇಬ್ಬರೂ ಪೂರ್ಣಿಮಾಳನ್ನು ಅನಾಥೆ, ಸಂಬಂಧದ ಬೆಲೆ ಗೊತ್ತಿಲ್ಲದವರು, ತಾಯಿ ಆಗುವ ಯೋಗವಿಲ್ಲ ಎಂದೆಲ್ಲಾ ಚುಚ್ಚಿ ಮಾತನಾಡುತ್ತಾರೆ. ಇದನ್ನೆಲ್ಲಾ ಕೇಳಿಸಿಕೊಂಡಸುಮ್ಮನಿರಲಾರದೇ ಅವಿನಾಶ್ ಅಭಿಗೆ ಬೈಯುತ್ತಾನೆ. ಮಾತಿಗೆ ಮಾತು ಬೆಳೆದು ಅವಿ, ಅಭಿಗೆ ಬೈಯುತ್ತಾನೆ. ಕೊನೆಗೆ ಕೋಪ ತಡೆಯಲಾರದೆ ಕಪಾಳಕ್ಕೆ ಒಂದು ಏಟು ಕೂಡ ಕೊಡುತ್ತಾನೆ. ಇದನ್ನು ನೋಡಿದ ಮಾಧವ್ ಮಕ್ಕಳಿಗೆ ಬೈಯುತ್ತಾನೆ. ಹೀಗೆಲ್ಲಾ ಕಿತ್ತಾಡೋರಿಗೆ ಈ ಮನೆಯಲ್ಲಿ ಜಾಗವಿಲ್ಲ ಎಂದು ಅವಿ ಹಾಗೂ ಪೂರ್ಣಿಮಾಳನ್ನು ಮನೆಯಿಂದ ಹೊರಗೆ ಹೋಗಲು ಹೇಳುತ್ತಾನೆ.

srirasthu-shubhamasthu-serial-18-august-episode-written-update

ಮನೆಯಿಂದ ಹೊರ ಬಂದ ತುಳಸಿ

ಇದರಿಂದ ತುಳಸಿ ಕೋಪ ಮಾಡಿಕೊಳ್ಳುತ್ತಾಳೆ. ಮನೆ ಎರಡು ಭಾಗವಾಗುವುದು ಭೇಡ ಎನ್ನುತ್ತಾಳೆ. ಆದರೆ, ಮಾಧವ್ ನೀವೂ ಹೊರಡಬಹುದು ಎಂದಾಗ ತುಳಸಿ ಅವಿ ಮತ್ತು ಪೂರ್ಣಿಮಾ ಜೊತೆಗೆ ಮನೆಯನ್ನು ಬಿಟ್ಟು ಹೊರಗೆ ಬರುತ್ತಾಳೆ. ಇದರಿಂದ ದೀಪಿಕಾ ಮತ್ತು ಶಾರ್ವರಿ ಖುಷಿಯಾಗಿರುತ್ತಾರೆ. ಅಭಿ ಶಾಕ್ ನಲ್ಲಿ ಇದ್ದು, ಮಹೇಶ್ ಮತ್ತು ಶಾರ್ವರಿ ಮಾಧವ್ ಗೆ ನೀವು ಮಾಡಿದ್ದು ಸರಿಯಿಲ್ಲ ಎಂದು ಹೇಳುತ್ತಾರೆ. ಮಾಧವ್ ಯಾರ ಮಾತನ್ನೂ ಕೇಳುವುದಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X