Srirasthu Shubhamasthu ; ಮಾಧವ್ ಗೆ ಅಪಘಾತದ ಹಿಂದೆ ನಿಧಿ ಇರುವುದು ಎಂಬ ಸತ್ಯ ಗೊತ್ತಾಗುತ್ತಾ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ನಿಧಿ ಮದುವೆಗೆ ಎಲ್ಲಾ ತಯಾರಿಯೂ ಆಗಿದೆ. ಆದರೆ, ಅತ್ತ ಸಿರಿ ತಂದೆ ಸಾವನ್ನಪ್ಪಿದ್ದಾರೆ. ದತ್ತ ತಾತ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.ಮನೆಯಲ್ಲಿ ನಿಧಿ ಮಾಡಿದ ತಪ್ಪನ್ನು ಮುಚ್ಚಿಡಲಾಗದೇ ಒದ್ದಾಡುತ್ತಿದ್ದರೆ, ಇತ್ತ ಸಮರ್ಥ್ ಸುಳ್ಳು ಆರೋಪವನ್ನು ನಿಜ ಎಂದು ನಂಬಿಸಲು ಪ್ರಯತ್ನಿಸುತ್ತಿದ್ದಾನೆ. ಸಿರಿ ತಂದೆ ಸಾವನ್ನು ನಂಬಲಾಗದೇ ಗೋಳಾಡುತ್ತಿದ್ದು, ಈಗ ಏನು ಮಾಡಬೇಕು ಎಂಬುದು ಅರಿಯದೇ ಸಂಕಟದಲ್ಲಿದ್ದಾಳೆ. ಇತ್ತ ಸತ್ಯವನ್ನು ತುಳಸಿಗೆ ಹೇಳುವುದು ಹೇಗೆ ಎಂಬ ಗೊಂದಲದಲ್ಲಿ ಮಾಧವ್ ಇದ್ದಾನೆ.

ಸಮರ್ಥ್ ಹೇಳಿದ ಸುಳ್ಳು ಗೊತ್ತಾಗುತ್ತಾ..?

ಪೊಲೀಸ್ ಠಾಣೆಗೆ ತೆರಳಿದ ಮಾಧವ್, ಅವಿ ಹಾಗೂ ಅಭಿ ಸಮರ್ಥ್ ಜೊತೆಗೆ ಮಾತನಾಡಿದ್ದಾರೆ. ಸತ್ಯವನ್ನು ಅರಿಯಲು ಪ್ರಯತ್ನಿಸಿದ್ದಾರೆ. ಪೊಲೀಸರು ಸಮರ್ಥ್ ನನ್ನು ಕೋರ್ಟ್ ಮುಂದೆ ಹಾಜರು ಪಡಿಸಲು ತಯಾರಿ ನಡೆಸಿದ್ದಾರೆ. ಅಭಿ ಅಣ್ಣನನ್ನು ಬಿಡಿಸುವ ತವಕದಲ್ಲಿ ಕೂಗಾಡಿದ್ದಾನೆ. ಸಮರ್ಥ್ ಪದೇ ಪದೇ ತಾನೇ ಆಕ್ಸಿಡೆಂಟ್ ಮಾಡಿರುವುದಾಗಿ ಹೇಳುತ್ತಿದ್ದಾನೆ. ಇದನ್ನು ನಂಬಲಾಗದೇ ಅವಿ ಮತ್ತು ಮಾಧವ್ ಒದ್ದಾಟ ನಡೆಸಿದ್ದಾರೆ. ಅಭಿಗೆ ಸಮರ್ಥ್ ಸುಳ್ಳು ಹೇಳುತ್ತಿದ್ದಾನೆ ಎಂಬುದು ಸ್ಪಷ್ಟವಾಗಿ ಗೊತ್ತದ್ದರೂ, ಸತ್ಯ ಏನು ಎಂಬುದು ಅರಿಯದೇ ಸಂಕಷ್ಟದಲ್ಲಿ ಸಿಲುಕಿದ್ದಾನೆ. ಸಮರ್ಥ್ ನಿಧಿಯನ್ನು ಉಳಿಸುವ ಸಲುವಾಗಿ ಸತ್ಯವನ್ನು ಹೇಳದೆಯೇ ಮೌನಕ್ಕೆ ಜಾರಿದ್ದಾನೆ. ಈ ಮೂಲಕವಾದರೂ ಮಾಧವ್ ಕುಟುಂಬದ ಋಣವನ್ನು ತೀರಿಸಬೇಕು. ನನ್ನ ತಾಯಿಗೆ ಆಸರೆಯಾದ ಮನೆಯ ಮರಿಯಾದೆಯನ್ನು ಉಳಿಸಬೇಕು ಎಂದು ಸುಮ್ಮನಿದ್ದಾನೆ.

srirasthu-shubhamasthu-serial-18-january-episode-written-update

ನಿಧಿ ಮದುವೆ ನಿಂತೋಯ್ತಾ..?

ಮಾಧವ್ ಮನೆಗೆ ಬರುತ್ತಿದ್ದಂತೆಯೇ ಪೂರ್ಣಿಮಾ ಸಿರಿ ತಂದೆ ರಂವೀಂದ್ರ ಸಾವನ್ನಪ್ಪಿದ್ದಾರೆ. ದತ್ತ ತಾತ ಸೀರಿಯಸ್ ಆಗಿದ್ದು, ಇಬ್ಬರಿಗೂ ಆಕ್ಸಿಡೆಂಟ್ ಆಗಿದೆ ಎಂಬ ವಿಚಾರವನ್ನು ಹೇಳಿದ್ದಾಳೆ. ಈ ವಿಚಾರವನ್ನು ತಿಳಿದ ಮಹೇಶ ಹೇಗೆ ತುಳಸಿ ಅತ್ತಿಗೆಗೆ ಹೇಳುವುದು ಎಂದು ಗಾಬರಿಯಾಗಿದ್ದಾರೆ. ಸೂತಕದ ಮನೆಯಲ್ಲಿ ಮದುವೆ ಮಾಡುವುದು ಹೇಗೆ ಎಂದು ಮಾಧವ್ ತಲೆ ಕೆಡಿಸಿಕೊಂಡಿದ್ದು, ಮಹೇಶ ನಿಧಿ ಮದುವೆಯನ್ನು ಮುಂದೂಡಿದ್ದಾನೆ. ನಿಧಿಗೂ ಮದುವೆಯಾಗುವ ಮನಸ್ಥಿತಿ ಈಗಿಲ್ಲ.

ಸೂತಕದ ಮನೆಯಲ್ಲಿ ದ್ವೇಷದ ಕಿಡಿ

ಆದರೆ, ಶಾರ್ವರಿಯ ಧ್ವೇಷದ ಕಿಚ್ಚು ಸೂತಕದ ಮನೆಯಲ್ಲಿ ಹೆಚ್ಚಾಗಿದೆ. ಕಣ್ಣೀರಿಟ್ಟ ತುಳಸಿಯನ್ನು ಕಂಡು ಖುಷಿ ಪಡುತ್ತಿದ್ದ ಶಾರ್ವರಿ ಈಗ ತನ್ನ ಮಗಳ ಮದುವೆ ನಿಂತು ಹೋಗಿದ್ದಕ್ಕೆ ಧ್ವೇಷದ ಕಿಡಿ ಕಾರಿದ್ದಾಳೆ. ತುಳಸಿಗೆ ಸತ್ಯ ಗೊತ್ತಾಗಿದ್ದು, ಯಾಕೀಗೆ ಆಗುತ್ತಿದೆ ಎಂದು ಕಣ್ಣೀರು ಹಾಕಿದ್ದಾಳೆ. ಪೂರ್ಣಿಮಾ ತುಳಸಿಯನ್ನು ಸಮಾಧಾನ ಮಾಡಿದ್ದು, ತುಳಸಿ ಆಸ್ಪತ್ರೆಗೆ ಹೋಗಿ ಮಾವ ದತ್ತನನ್ನು ನೋಡಬೇಕು ಎಂದು ಹಠ ಮಾಡಿದ್ದಾಳೆ. ಆದರೆ, ಗರ್ಭಿಣಿಯಾಗಿರುವ ತುಳಸಿ ಆರೋಗ್ಯಕ್ಕೆ ಸಮಸ್ಯೆ ಆಗಬಾರದು ಎಂದು ಮನೆಯವರು ಆಕೆಯನ್ನು ತಡೆದಿದ್ದಾರೆ.

ಮಾಧವ್ ಗೆ ಸತ್ಯ ಗೊತ್ತಾಗುತ್ತಾ..?

ಮಾಧವ್ ಆಸ್ಪತ್ರೆಗೆ ಬಂದಿದ್ದು, ಇದೆಲ್ಲಾ ಹೇಗಾಯ್ತು. ಏನಾಯ್ತು ಎಂದು ವಿಚಾರಿಸಿದ್ದಾನೆ. ಪೋಲೀಸರು ದತ್ತ ಮತ್ತು ರವೀಂದ್ರನ ಸ್ಥಿತಿಗೆ ಸಮರ್ಥ್ ಕಾರಣ. ರಾತ್ರಿ ಅಪಘಾತ ಮಾಡಿದ್ದು ಸಮರ್ಥ್ ಎಂದು ಹೇಳಿದ್ದಾರೆ. ಇದನ್ನು ಕೇಳಿ ಶಾಕ್ ಆದ ಮಾಧವ್ ದತ್ತ ಸಮರ್ಥ್ ಸ್ವಂತ ತಾತ, ರವೀಂದ್ರ ಸಮರ್ಥ್ ಮಾವ ಅವನೇ ಆಕ್ಸಿಡೆಂಟ್ ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾನೆ. ಆದರೆ, ಹೇಗೆ ಆಕ್ಸಿಡೆಂಟ್ ಮಾಡಿದ. ಹಿಟ್ ಆಂಡ್ ರನ್ ಕೇಸ್ ಆಗಲು ಹೇಗೆ ಸಾಧ್ಯ. ಸಮರ್ಥ್ ಏತಕ್ಕಾಗಿ ಮನೆಗೆ ಹೋಗಿದ್ದ ಎಂಬುದೇ ಅರ್ಥವಾಗುತ್ತಿಲ್ಲ. ಮಾಧವ್ ಗೆ ಈ ಆಕ್ಸಿಡೆಂಟ್ ಹಿಂದೆ ಇರುವುದು ನಿಧಿ ಎಂಬ ಸತ್ಯ ಗೊತ್ತಾಗುತ್ತಾ ಎಂಬ ಕುತೂಹಲ ಮೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X