Srirasthu Shubhamasthu;ಚೌಧರಿ ಪ್ರಶ್ನೆಗೆ ಇಂಗ್ಲೀಷ್ ನಲ್ಲಿ ಉತ್ತರಿಸಿದ ತುಳಸಿ : ಮನೆಯವರಿಗೆ ಶಾಕ್ ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಮನೆಯ ಕಾರ್ಯಕ್ರಮಗಳು ಮುಗಿದ ಬಳಿಕ ಭಾಗ ಬೇಕು ಎಂದು ಕೇಳಿದ್ದಾನೆ. ಆದರೆ, ಮಾಧವ್ ಮನೆ ಭಾಗ ಮಾಡಲು ಇಷ್ಟಪಡುತ್ತಿಲ್ಲ.ಹೀಗಾಗಿ ಕಂಪನಿ ಬಗ್ಗೆ ಹಾಗೂ ನಮ್ಮ ಕುಟುಂಬದ ಬಗ್ಗೆ ಮಾಹಿತಿ ಪಡೆಯಲು ನ್ಯೂಸ್ ಚಾನೆಲ್ ನವರು ಆಗಮಿಸುತ್ತಿದ್ದಾರೆ. ಅವರು ಬಂದು ಹೋಗುವವರೆಗೂ ಮನೆ ಭಾಗ ಆಗುವುದಿಲ್ಲ ಎಂದಿದ್ದಾನೆ. ಇದರಿಂದ ಅಭಿಗೆ ಮತ್ತೆ ನಿರಾಸೆಯಾಗುತ್ತೆ.ಆದರೆ ಅಭಿಗೆ ಬೇರೆ ದಾರಿ ಇಲ್ಲದೇ ಸುಮ್ಮನಾಗಿದ್ದಾನೆ. ಇದೇ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿರುವ ಶಾರ್ವರಿ ಹೊಸ ಐಡಿಯಾ ಕೊಟ್ಟಿದ್ದಾಳೆ.


ಆಸ್ತಿ ಕೇಳಲು ಹೊಸ ಮಾರ್ಗ

ಅಭಿ ಪರಿಸ್ಥಿತಿಯನ್ನು ದೀಪಿಕಾ ಮತ್ತು ಶಾರ್ವರಿ ಆಡಿಕೊಳ್ಳುತ್ತಿದ್ದಾರೆ. ಸ್ಟೇಜ್ ಮೇಲೆ ಆಸ್ತಿಯಲ್ಲಿ ಭಾಗ ಕೇಳುವೆ ಎಂದ ಅಭಿ ಸುಮ್ಮನಾಗಿ ಬಿಟ್ಟ. ಹೀಗೆ ಇದ್ದರೆ, ಅಭಿಗೆ ಈ ಮನೆಯಲ್ಲಿ ಯಾರೂ ಭಾಗ ಕೊಡುವುದಿಲ್ಲ. ಇದೇ ಮನೆಯಲ್ಲಿ ಅವರೆಲ್ಲಾ ಹೇಳಿದಂತೆ ಕೇಳಿಕೊಂಡು ಅಭಿ ಬದುಕಬೇಕು ಅಷ್ಟೇ ಎಂದು ಹೀಯಾಳಿಸುತ್ತಾರೆ. ನ್ಯೂಸ್ ಚಾನೆಲ್ ಅವರ ಮುಂದೆ ಮನೆಯವರ ಬಗ್ಗೆ ಹೊಗಳಿ ಮಾತನಾಡಿದ ಬಳಿಕ ಆಸ್ತಿಯಲ್ಲಿ ಪಾಲು ಕೇಳುವ ಮಾತೆಲ್ಲಿದೆ ಎಂದಾಗ ಅಭಿ ತಾನು ಇಡೀ ಮೀಡಿಯಾದಲ್ಲೇ ವೈರಲ್ ಆಗುವಂತೆ ಆಸ್ತಿಯಲ್ಲಿ ಭಾಗ ಕೇಳುವುದಾಗಿ ಹೇಳುತ್ತಾನೆ. ಈ ಮಾತನ್ನು ಕೇಳಿದ ಶಾರ್ವರಿ ಮತ್ತು ದೀಪಿಕಾ ಮನದೊಳಗೆ ಖುಷಿ ಪಡುತ್ತಾರೆ.

srirasthu-shubhamasthu-serial-18-june-episode-written-update

ಇಂಗ್ಲೀಷ್ ನಲ್ಲಿ ಮಾತನಾಡಿದ ತುಳಸಿ

ಇನ್ನು ನ್ಯೂಸ್ ಚಾನೆಲ್ ಸಂದರ್ಶನ ಕ್ಯಾನ್ಸಲ್ ಆಗಿದ್ದು, ಮಾಧವ್ ಮನೆಗೆ ಅವರ ಹೆಳೆಯ ಗೆಳೆಯ ಚೌಧರಿ ಎಂಬುವರು ದೆಹಲಿಯಿಂದ ಬಂದಿದ್ದಾರೆ. ಚೌಧರಿ ಕೂಡ ಚೆಫ್ ಆಗಿದ್ದು, ಮಾಧವ್ ನನ್ನು ನೋಡಲು ಆಗಮಿಸಿದ್ದಾರೆ. ಚೌಧರಿಗೆ ಕನ್ನಡ ಬರುವುದಿಲ್ಲ. ಹಾಗಾಗಿ ಇಂಗ್ಲೀಷ್ ನಲ್ಲೇ ಮಾತನಾಡುತ್ತಾರೆ. ಮನೆಯವರ ಬಗ್ಗೆ ಎಲ್ಲಾ ಮಾತನಾಡುತ್ತಾ ತಿಂಡಿ ತಿನ್ನುತ್ತಿರುತ್ತಾರೆ. ರುಚಿ ನೋಡಿದ ಚೌಧರಿ ಅವರು ತುಳಸಿ ಅಡುಗೆಯನ್ನು ಹೊಗಳುತ್ತಾರೆ. ನಂತರ ತುಳಸಿ ಅವರನ್ನು ಈ ಮನೆ ಬಗ್ಗೆ ಹೇಳಿ ಎಂದು ಕೇಳಿದಾಗ ಶಾರ್ವರಿ ತುಳಸಿಗೆ ಇಂಗ್ಲೇಷ್ ಬರುವುದಿಲ್ಲ ಎಂದು ಹೇಳುತ್ತಾಳೆ. ಆದರೆ ತುಳಸಿ ಎಲ್ಲರೂ ನಿಬ್ಬೆರಗಾಗುವಂತೆ ಇಂಗ್ಲೀಷ್ ನಲ್ಲಿ ಮಾತನಾಡುತ್ತಾಳೆ.

ಅಭಿಗಾಗಿ ನಾನು ಇಂಗ್ಲೀಷ್ ಕಲಿತೆ ಎಂದ ತುಳಸಿ

ಈ ಮನೆಗೆ ಸೊಸೆಯಾಗಿ ಬರಲು ನಾನು ಪುಣ್ಯ ಮಾಡಿದ್ದೇನೆ ಎಂದು ಇಂಗ್ಲೀಷ್ ನಲ್ಲಿ ಮಾತನಾಡುತ್ತಾಳೆ. ಇದನ್ನು ಕೇಳಿದ ಪ್ರತಿಯೊಬ್ಬರೂ ಶಾಕ್ ಆಗುತ್ತಾರೆ. ಬಳಿಕ ಇಂಗ್ಲೀಷ್ ನಲ್ಲೇ ನಾನು ಅಭೀಗೋಸ್ಕರ ಇಂಗ್ಲೀಷ್ ಭಾಷೆ ಕಲಿತೆ. ನನಗೆ ಅಭಿ ಎಂದರೆ ಬಹಳ ಇಷ್ಟ. ಈ ಮನೆಯಲ್ಲಿ ನಾವೆಲ್ಲರೂ ಒಟ್ಟಿಗೆ ಇದ್ದರೇನೇ ಚೆಂದ ಎಂದು ಹೇಳುತ್ತಾಳೆ. ತುಳಸಿ ಮಾತುಗಳನ್ನು ಖೇಳಿದ ಅಭಿಗೆ ಏನು ಹೇಳಬೇಕು ಎಂಬುದೇ ಗೊತ್ತಾಗುವುದಿಲ್ಲ.

srirasthu-shubhamasthu-serial-18-june-episode-written-update

ಸಂಧ್ಯಾ ಮಾತು ಕೇಳಿ ದತ್ತ ತಾತನಿಗೆ ಗಾಬರಿ

ಇತ್ತ ಸಂಧ್ಯಾ ಒಡವೆ ಅಂಗಡಿಗೆ ಹೋಗಿ ಸರ ಖರೀದಿಸಿರುತ್ತಾಳೆ. ಅದನ್ನು ಧರಿಸಿಕೊಂಡು ಮನೆಗೆ ಬರುತ್ತಾಳೆ. ದತ್ತ ತಾತ ಸರವನ್ನು ನೋಡಿ ಏನಿದು ಎಂದು ಕೇಳಿದ್ದಕ್ಕೆ ಮೊದಲು ಸಂಧ್ಯಾ ಇದು ನಕಲಿ ಸರ ಎನ್ನುತ್ತಾಳೆ. ಬಳಿಕ ತನ್ನ ಗಂಡ ಹಣ ಕೊಟ್ಟ ಅದಕ್ಕೆ ಚಿನ್ನದ ಸರ ಖರೀದಿಸಿದೆ ಎನ್ನುತ್ತಾಳೆ. ನಂತರ ತನ್ನ ಮಾವ ಕೊಟ್ಟ ಹಣದಲ್ಲಿ ಖರೀದಿ ಮಾಡಿದೆ ಎನ್ನುತ್ತಾಳೆ. ಕೊನೆಗೆ ದತ್ತ ತಾತನ ಬಳಿ ಸುಳ್ಳು ಹೇಳಲಾಗದೇ ಶಾರ್ವರಿ ಮತ್ತು ದೀಪಿಕಾ ತನಗೆ ಹಣ ಕೊಟ್ಟ ವಿಚಾರವನ್ನು ಹೇಳುತ್ತಾಳೆ. ಈ ಮಾತನ್ನು ಕೇಳಿದ ದತ್ತ ತಾತನಿಗೆ ಶಾಕ್ ಆಗುತ್ತದೆ. ಇದರಲ್ಲೇನೋ ಮಸಲತ್ತಿದೆ ಎಂದು ಊಹಿಸುತ್ತಾರೆ.

More from Filmibeat

English summary
Tulasi answers in english for chaudary’s question
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X