Srirasthu Shubhamasthu ; ತುಳಸಿ ಅಮ್ಮನಿಗೆ ನೋವಾಗಬಾರದು ಎಂದು ಹೊಸ ಚಾಲೆಂಜ್ ಒಪ್ಪಿಕೊಂಡ ಸಮರ್ಥ್

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಕೈಯಲ್ಲಿ ಮನೆಯ ಜವಾಬ್ದಾರಿ ಇರುವುದಿರಿಂದ ಶಾರ್ವರಿ ಹಾಗೂ ದೀಪಿಕಾಳಿಗೂ ಇದು ಇಷ್ಟವಾಗುತ್ತಿಲ್ಲ. ಮನೆಯ ಬೀಗದ ಕೀನ, ತಮ್ಮ ವಶ ಮಾಡಿಕೊಳ್ಳಬೇಕು ಎಂದು ಶಾರ್ವರಿ ಹಾಗೂ ದೀಪಿಕಾ ಇಬ್ಬರೂ ಸತತವಾಗಿ ಪ್ರಯತ್ನ ಪಡುತ್ತಲೇ ಇದ್ದಾರೆ. ದೀಪಿಕಾ ಮಾಡುತ್ತಿರುವ ಪ್ಲಾನ್ ನಿಂದಾಗಿ ತುಳಸಿ ಎಲ್ಲರ ಎದುರು ಕೂಡ ಅವಮಾನಕ್ಕೊಳಗಾಗುತ್ತಿದ್ದಾಳೆ. ತುಳಸಿಗೆ ವಯಸ್ಸಾಗಿದೆ. ಜವಾಬ್ದಾರಿ ಹೊತ್ತುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ದೀಪಿಕಾ ಪ್ರೂವ್ ಮಾಡುತ್ತಿದ್ದಾಳೆ.

ಮತ್ತೆ ಎಲ್ಲರಿಂದಲೂ ಬೈಯಿಸಿಕೊಂಡ ತುಳಸಿ

ಈಗಾಗಲೇ ತುಳಸಿ ಮಾಡಿದ ಅಡುಗೆ ಹಾಳಾಗಿದ್ದರಿಂದ ಅವಳಿಗೆ ಅಡುಗೆ ಮನೆಯಿಂದ ಗೇಟ್ ಪಾಸ್ ಕೊಡಲಾಗಿದೆ. ಇನ್ನು ಅನಾಥಾಶ್ರಮದಿಂದ ದೇಣಿಗೆ ಕೇಳಿಕೊಂಡು ಬಂದವರಿಗೂ ಕೂಡ ತುಳಸಿಯಿಂದ ಅವಮಾನವಾಗಿದೆ ಎಂದು ಮನೆಯವರೆಲ್ಲಾ ಸೇರಿ ತುಳಸಿಗೆ ಬುದ್ಧಿ ಇಲ್ಲ ಎಂದು ಬೈದಿದ್ದಾರೆ. ಈಗ ಮನೆಗೆ ಆಫೀಸ್ ಫೈಲ್ ನ ಕೇಳಿಕೊಂಡು ಬಂದ ವ್ಯಕ್ತಿಗೆ ತುಳಸಿ ಯಾರ ಒಪ್ಪಿಗೆಯೂ ಇಲ್ಲದೇ ಫೈಲ್ ಕೊಟ್ಟು ಕಳಿಸಿದ್ದಾಳೆ. ಇದರಿಂದ ಮುಂದೆ ದೊಡ್ಡ ಅನಾಹುತ ಕಾದಿದೆ ಎಂದು ದೀಪಿಕಾ ಮನದಲ್ಲೇ ನಗುತ್ತಾಳೆ.

Srirasthu shubhamasthu serial 18 March episode written update

ಅಮ್ಮನ ಒಳಿತಿಗಾಗಿ ಚಾಲೆಂಜ್ ಮಾಡಿದ ಸಮರ್ಥ್

ಆಫೀಸಿನಿಂದ ಮನೆಗೆ ಬಂದ ಅವಿ ಫೈಲ್ ಹುಡುಕಿದರೆ, ಕಾಣಿಸುವುದಿಲ್ಲ. ಆಗ ತುಳಸಿ ಆ ಫೈಲ್ ಅನ್ನು ಸಿದ್ಧಾರ್ಥ್ ಎಂಬಾತನಿಗೆ ನೀಡಿದ ವಿಚಾರ ಗೊತ್ತಾಗುತ್ತದೆ. ಆಗ ಅವಿಗೆ ಕೋಪ ಬರುತ್ತದೆ. 120ಕೋಟಿ ಮೌಲ್ಯದ ಪ್ರಾಜೆಕ್ಟ್ ಅದು. ಆ ಫೈಲ್ ಕಳುವಾಗಿದ್ದು, ಅದರಿಂದ ಟೆಂಡರ್ ಕಳೆದುಕೊಳ್ಳುವ ಆತಂಕ ಸೃಷ್ಟಿಯಾಗಿದೆ. ಇದರಿಂದ ನಮಗೆ ದೊಡ್ಡ ನಷ್ಟವಾಗುತ್ತದೆ ಎಂದು ಅವಿ ತುಳಸಿಯನ್ನು ಬೈಯುತ್ತಾನೆ. ಅಭಿ, ಮಾಧವ್, ಶಾರ್ವರಿ ಎಲ್ಲರೂ ಕೂಡ ತುಳಸಿಯದ್ದೇ ತಪ್ಪು ಎಂಬಂತೆ ಮಾತನಾಡುತ್ತಾರೆ. ಆಗ ತುಳಸಿಗೆ ಹೆಚ್ಚು ಗಾಬರಿಯಾಗುತ್ತದೆ. ಮುಂದೇನು ಮಾಡುವುದು ಎಂದು ಅವಿ ಮತ್ತು ಅಭಿ ಚಿಂತೆಗೀಡಾಗುತ್ತಾರೆ. ತುಳಸಿ ನ ಬೈಯುತ್ತಿರುವುದಕ್ಕೆ ಸಮರ್ಥ್ ಗೆ ಬೇಸರವಾಗುತ್ತದೆ. ಹಾಗೆಲ್ಲಾ ಬೈಯುವುದರ ಬದಲು ಮತ್ತೆ ಪ್ರಾಜೆಕ್ಟ್ ರೆಸಿ ಮಾಡಬಹುದು ಎಂದು ಸಲಹೆ ಕೊಡುತ್ತಾನೆ. ಆಗ ಅವಿ ಸಮರ್ಥ್ ಗೆ ಚಾಲೆಂಜ್ ಮಾಡುತ್ತಾನೆ.

ಅಮ್ಮನಿಗಾಗಿ ಕಷ್ಟಪಡುತ್ತಿರುವ ಸಮರ್ಥ್

ಬೆಳಗ್ಗೆ ಆಗುವುದರೊಳಗೆ ನೀನೇ ಫೈಲ್ ರೆಡಿ ಮಾಡಿಕೊಡು. ಆಗ ನಾವ್ಯಾರು ನಿಮ್ಮ ಅಮ್ಮನಿಗೆ ನೋವಾಗುವಂತೆ ಮಾತನಾಡುವುದಿಲ್ಲ. ಜೊತೆಗೆ ನಿನಗೆ ಪಾರ್ಟಿ ಕೂಡ ಕೊಡಿಸುತ್ತೇನೆ ಎಂದು ಅವಿ ಹೇಳುತ್ತಾನೆ. ತುಳಸಿ ಅಮ್ಮನಿಗೋಸ್ಕರ ಸಮರ್ಥ್ ಈ ಚಾಲೆಂಜ್ ಗೆ ಒಪ್ಪಿಕೊಳ್ಳುತ್ತಾನೆ. ಅವಿ ಪ್ರಾಜೆಕ್ಟ್ ಗೆ ಸಂಬಂಧ ಪಟ್ಟ ವಿವರಗಳನ್ನೆಲ್ಲಾ ಕೊಡುತ್ತಾನೆ. ಸಮರ್ಥ್ ತನ್ನ ತಾಯಿಗೋಸ್ಕರ ಪ್ರಾಜೆಕ್ಟ್ ಫೈಲ್ ರೆಡಿ ಮಾಡುತ್ತಾ ಕೂರುತ್ತಾನೆ. ಮಗನ ಕಾಳಜಿ ಹಾಗೂ ಅವನ ಶ್ರದ್ಧೆಯನ್ನು ಕಂಡು ತುಳಸಿ ಮನಸ್ಸು ಕೊರಗುತ್ತಿರುತ್ತದೆ. ಸಮರ್ಥ್ ಕಷ್ಟಪಡುವುದನ್ನು ನೋಡಲಾರದೇ ಮಗನಿಗೆ ಕಾಫಿ ಮಾಡಿಕೊಡಬೇಕು ಎಂದು ಅಡುಗೆ ಮನೆಗೆ ಹೋಗುತ್ತಾಳೆ.

Srirasthu shubhamasthu serial 18 March episode written update

ಕಾಫಿಯಲ್ಲಿ ಮತ್ತು ಸೇರಿಸಿದ ದೀಪಿಕಾ

ಆದರೆ, ಸಮರ್ಥ್ ಈ ಚಾಲೆಂಜ್ ನಲ್ಲಿ ಗೆಲ್ಲಬಾರದು ಎಂದು ತಾನೇ ಕಾಫಿ ಮಾಡಿಕೊಡುವುದಾಗಿ ಹಠ ಮಾಡುತ್ತಾಳೆ. ಕಾಫಿಯಲ್ಲಿ ನಿದ್ರೆ ಮಾತ್ರೆಯನ್ನು ಬೆರೆಸುತ್ತಾಳೆ. ಸಮರ್ಥ್ ಕಾಫಿ ಕುಡಿದ ಮೇಲೆ ನಿದ್ರೆ ಮಾಡುತ್ತಾನಾ, ಇಲ್ಲವೇ ಪ್ರಾಜೆಕ್ಟ್ ಕಂಪ್ಲೀಟ್ ಮಾಡಿ ಸೈ ಎನಿಸಿಕೊಳ್ಳುತ್ತಾನಾ ಎಂಬ ಕುತೂಹಲ ಒಂದೆಡೆಯಾದರೆ, ದೀಪಿಕಾ ತುಳಸಿ ವಿರುದ್ಧ ಮಾಡಿರುವ ಪ್ಲಾನ್ ಗಳು ಸಕ್ಸಸ್ ಆಗುತ್ತವಾ ಎಂಬುದು ಗೊತ್ತಿಲ್ಲ. ಇನ್ನು ಈ ಪ್ರಾಜೆಕ್ಟ್ ಚಾಲೇಂಜ್ ಸಮರ್ಥ್ ಗೆ ಒಳ್ಳೆಯ ಕೆಲಸ ಸಿಗುವಂತೆ ಮಾಡುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
for tulasi mistake Samarth accepts the challenge done by avinash
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X