ಸಿರಿ ಮನೆಗೆ ಬಂದ ತುಳಸಿ, ಸಮರ್ಥ್: ಮದುವೆ ದಿನವೂ ಫಿಕ್ಸ್ ಆಯ್ತಾ?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಹಾಗೂ ಮನೆಗೆ ಸೊಸೆಯಾಗಿ ಬರುವ ಸಿರಿಯನ್ನು ಅಕಸ್ಮಾತ್ ಆಗಿ ಭೇಟಿಯಾಗಿ ಪರಿಚಯ ಮಾಡಿಕೊಂಡಿದ್ದಾರೆ. ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದಾರೆ. ಸಮರ್ಥ್ ಗೆ ಗೊತ್ತಿಲ್ಲದ ಹಾಗೆ ಸಿರಿ ತನ್ನ ಅತ್ತೆಯನ್ನು ಭೇಟಿ ಮಾಡಿಯಾಗಿದೆ.

ತುಳಸಿ ಹೇಳಿದಂತೆ ಸಮರ್ಥ್ ಅನ್ನು ಸಿರಿ ತನ್ನ ಅತ್ತೆಯ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಇದರಿಂದ ಸಮರ್ಥ್ ಮೊದಲು ಶಾಕ್ ಆಗುತ್ತಾನೆ. ತುಳಸಿ ಸಿರಿಯನ್ನು ತನ್ನ ಸೊಸೆ ಎಂದು ಖುಷಿಯಲ್ಲಿ ಒಪ್ಪಿಕೊಂಡಿದ್ದಾಳೆ.

ಆದರೆ, ಸಮರ್ಥ್ ಅವರ ತಾತನಿಗೆ ಈ ವಿಚಾರ ಗೊತ್ತೇ ಇಲ್ಲ. ತುಳಸಿ ತಾತನ ಮಾತನ್ನು ಮೀರಿ ಸಮರ್ಥ್ ಇಷ್ಟಪಟ್ಟಿರುವ ಸಿರಿಯನ್ನು ಮನೆ ಸೊಸೆಯೆಂದು ಒಪ್ಪಿಕೊಂಡಿದ್ದಾಳೆ. ಆದರೆ ತಾತನಿಗೆ ಏನು ಹೇಳುತ್ತಾಳೋ ಗೊತ್ತಿಲ್ಲ.

ಸೊಸೆ ಕಾಲು ಒತ್ತಿದ ಮಾಧವ

ಸೊಸೆ ಕಾಲು ಒತ್ತಿದ ಮಾಧವ

ಪೂರ್ಣಿಮಾಳನ್ನು ಶರಾವರಿ ಅನಾಥೆ ಎಂದು ಒತ್ತಿ ಹೇಳುತ್ತಾಳೆ. ಈ ಮಾತಿನಿಂದ ಬೇಸರಗೊಂದ ಪೂರ್ಣಿಮಾ ಮಾವನ ಕೆಫೆಗೆ ಹೋಗುತ್ತಾಳೆ. ಮಾಧವ ಸೊಸೆಯನ್ನು ಗಾಡಿಯಲ್ಲಿ ಕೂರಿಸಿಕೊಂಡು ಬರುತ್ತಾನೆ. ಇದನ್ನು ನೋಡುವ ಶರಾವರಿ ಎಲ್ಲಿಗೆ ಹೋಗಿದ್ದೆ ಎಂದು ಪೂರ್ಣಿಮಾಳನ್ನು ಕೇಳಿದ್ದಕ್ಕೆ, ದೇವಸ್ಥಾನ ಎಂದು ಸುಳ್ಳು ಹೇಳುತ್ತಾಳೆ. ಹೇಗೆ ಬಂದೆ ಎಂದಿದ್ದಕ್ಕೆ ಆಟೋ ಎಂದು ಹೇಳುತ್ತಾಳೆ. ಯಾಕೆಂದರೆ ಶರಾವರಿ ಬುದ್ಧಿ ಪೂರ್ಣಿಮಾಗೆ ಗೊತ್ತಿರುತ್ತದೆ. ಆದರೆ, ಮಾಧವನಿಗೆ ಇದು ಅರ್ಥವಾಗುವುದಿಲ್ಲ. ಪೂರ್ಣಿಮಾ ಕಾಲು ನೋವು ಎಂದಿದ್ದಕ್ಕೆ ಮಾಧವ ಅವಳ ಕಾಲನ್ನು ಒತ್ತುತ್ತಿರುತ್ತಾನೆ. ಇದೆ ವೇಳೆಗೆ ಬಂದ ಅಭಿಲಾಶ್ ತನ್ನ ಹೆಂಡತಿ ಪೂರ್ಣಿಮಾಳನ್ನು ಕಾಳಜಿಯಿಂದ ಎತ್ತಿಕೊಂಡು ರೂಮಿಗೆ ಹೋಗಿ ಕಾಲು ಒತ್ತುತ್ತಾನೆ.

ತಾತನನ್ನು ಯಾಮಾರಿಸಿದ ಸಮರ್ಥ್

ತಾತನನ್ನು ಯಾಮಾರಿಸಿದ ಸಮರ್ಥ್

ತುಳಸಿ ಸಿರಿ ಅವರ ತಂದೆಗೆ ನಾಳೆಯೇ ಮನೆಗೆ ಬರುವುದಾಗಿ ಒಪ್ಪಿಕೊಂಡು ಬಿಡುತ್ತಾಳೆ. ಸಿರಿಗೆ ಇಷ್ಟ ಎಂದು ರವೆ ಉಂಡೆ ಕೂಡ ಮಾಡುತ್ತಾಳೆ. ಬೆಳಗ್ಗೆ ಎದ್ದು ಅಮ್ಮ-ಮಗ ಸಿರಿ ಮನೆಗೆ ರೆಡಿಯಾಗುತ್ತಾರೆ. ಆದರೆ, ಅವರ ತಾತ ಬೇಕಂತಲೇ ಮನೆಯಲ್ಲಿ ಉಳಿದುಕೊಂಡಿರುತ್ತಾರೆ. ಸಮರ್ಥ್ ಅವರ ತಾತನನ್ನು ಮನೆಯಿಂದ ಹೊರಗೆ ಕಳಿಸಲು ಯತ್ನಿಸಿದರೂ ಸಾಧ್ಯವಾಗುವುದಿಲ್ಲ. ನಂತರ ಅಮ್ಮನಿಗೆ ಮಂಡಿ ನೋವು, ಆಸ್ಪತ್ರೆಗೆ ಕರೆದುಕೊಂಡು ಹೋಗುವುದಾಗಿ ಸುಳ್ಳು ಹೇಳಿ ಕರೆದುಕೊಂಡು ಹೋಗುತ್ತಾನೆ.

ಇದಕ್ಕೂ ಕೊಕ್ಕೆ ಹಾಕುತ್ತಾಳಾ ಶರಾವರಿ..?

ಇದಕ್ಕೂ ಕೊಕ್ಕೆ ಹಾಕುತ್ತಾಳಾ ಶರಾವರಿ..?

ಪೂರ್ಣಿಮಾ ಮಾವನ ಜೊತೆಗೆ ಮಾತನಾಡುತ್ತಿರುತ್ತಾಳೆ. ಆಗ ಬರುವ ಪಾಪಮ್ಮ ಪೂರ್ಣಿಮಾಗೆ ಐದು ತಿಂಗಳು ತುಂಬಿತು ಸೀಮಂತ ಮಾಡಬೇಕು ಎಂದು ಹೇಳುತ್ತಾಳೆ. ಅದಕ್ಕೆ ಮಾಧವ ಹೌದು.. ನನ್ನ ಮಗಳು ಪೂರ್ಣಿಮಾ ಸೀಮಂತವನ್ನು ಯಾರೂ ಮಾಡಿರಬಾರದು ಹಾಗೆ ಮಾಡಬೇಕು ಎನ್ನುತ್ತಾನೆ. ಇದೇ ವೇಳೆಗೆ ಶರಾವರಿ ಬಂದು ಹೌದು.. ಅದ್ಧೂರಿಯಾಗಿ ಪೂರ್ಣಿಮಾ ಸೀಮಂತವನ್ನು ಮಾಡಬೇಕು. ಆದರೆ ನೀವು ಮುಂದಾಳತ್ವ ತೆಗೆದುಕೊಳ್ಳಲು ಅಭಿ ಬಿಡುತ್ತಾನಾ ಎಂದು ಒಂದು ಪ್ರಶ್ನೆ ಹಾಕಿ ಸುಮ್ಮನಾಗುತ್ತಾಳೆ.

ತಾತನ ವಿರುದ್ಧವಾಗಿ ಮೊಮ್ಮಗನ ಮದುವೆ..!

ತಾತನ ವಿರುದ್ಧವಾಗಿ ಮೊಮ್ಮಗನ ಮದುವೆ..!

ಇನ್ನು ಸಿರಿ ಮನೆಗೆ ತುಳಸಿ ಮತ್ತು ಸಮರ್ಥ್ ಬರುತ್ತಾರೆ. ಸಮರ್ಥ್ ಅವರ ತಾಯಿ ಬಂದದ್ದಕ್ಕೆ ಸಿರಿ ತಂದೆ ಖುಷಿ ಪಡುತ್ತಾರೆ. ಸಿರಿ ರೆಡಿಯಾಗುತ್ತಿರುವ ರೂಮಿಗೆ ತುಳಸಿ ಹೋಗುತ್ತಾಳೆ. ತುಳಸಿಯನ್ನು ನೋಡಿ ಸಿರಿ ಕೂಡ ಸಂತಸ ಪಡುತ್ತಾಳೆ. ಇನ್ನು ಸಿರಿ ಅವರ ತಂದೆ ಮದುವೆಯ ದಿನಾಂಕವನ್ನು ನಿಗದಿ ಪಡಿಸೋಣ ಎಂದು ಕೇಳಿದಾಗ ತುಳಸಿ ಶಾಕ್ ಆಗುತ್ತಾಳೆ. ಸಮರ್ಥ್ ತಾತನಿಗೆ ಏನು ಹೇಳುವುದು ಎಂದು ಯೋಚನೆ ಮಾಡುತ್ತಾಳೆ. ಸಿರಿ-ಸಮರ್ಥ್ ಮದುವೆಯನ್ನು ತುಳಸಿ ನಿಗದಿ ಪಡಿಸುತ್ತಾಳಾ..? ಇಲ್ಲವೇ ಅವರ ಮಾವನಿಗೆ ವಿಷಯ ತಿಳಿಸುತ್ತಾಳಾ..?

More from Filmibeat

English summary
Tulasi agreed for Samarth and Siri marriage as she liked Siri and she did not informed it to her father in law
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X