Srirasthu Shubhamasthu ; ದತ್ತ ತಾತನ ಮನೆಗೆ ಬಂದ ತುಳಸಿ :ದೀಪಿಕಾ ಲೆಕ್ಕಾಚಾರವನ್ನು ಬುಡಮೇಲು ಮಾಡುತ್ತಾಳಾ ಶಾರ್ವರಿ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ, ಅವಿ ಹಾಗೂ ಪೂರ್ಣಿಮಾ ಮನೆಯಿಂದ ಹೊರಟು ದತ್ತ ತಾತನ ಮನೆಗೆ ಬಂದಿದ್ದಾರೆ. ಹಬ್ಬದ ದಿನ ಮೌನವಾಗಿ ಮನೆಗೆ ಬಂದಿರುವುದು ಸಮರ್ಥ್ ಗೆ ಪರೀಸ್ಥಿತಿ ಅರ್ಥವಾಗುತ್ತಿಲ್ಲ. ಬಾಗಿಲಿನಲ್ಲೇ ನಿಂತು ದತ್ತ ತಾತನನ್ನು ತುಳಸಿ ನನಗೆ ಹಾಗೂ ನನ್ನ ಮಗ ಸೊಸೆಗೆ ಈ ಮನೆಯಲ್ಲಿ ಇರಲು ಅವಕಾಶವಿದೆಯಾ. ಇನ್ನು ಮುಂದೆ ನಾವು ಇಲ್ಲೇ ಇರುತ್ತೇವೆ ಎಂದು ಕೇಳುತ್ತಾಳೆ. ದತ್ತ ತಾತ ಇದು ನಿಮ್ಮ ಮನೆ. ನಿಮಗೆ ಇಷ್ಟ ಬಂದಷ್ಟು ದಿನ ಅರಾಮವಾಗಿ ಇರಬಹುದು ಎಂದು ಹೇಳಿ ಮನೆಯೊಳಗೆ ಕರೆಸಿಕೊಳ್ಳುತ್ತಾನೆ. ಬಳಿಕ ಏನಾಯ್ತು, ಯಾಕೆ ಹೀಗಿದ್ದೀರಾ ಎಂದು ಕೇಳುತ್ತಾರೆ.

ತುಳಸಿಗೆ ಬೈದು ಬುದ್ಧಿ ಹೇಳಿದ ದತ್ತ ತಾತ

ಅವಿನಾಶ್ ದತ್ತ ತಾತನಿಗೆ ಮನೆಯಲ್ಲಿ ನಡೆದ ಎಲ್ಲಾ ಘಟನೆಯನ್ನು ವಿವರವಾಗಿ ಬಿಡಿಸಿ ಹೇಳುತ್ತಾನೆ. ಅಪ್ಪ ಮನೆಯಿಂದ ಹೊರಡು ಎಂದು ಹೇಳಿದರು. ಹಾಗಾಗಿ ನಾವು ಮೂವರು ಹೊರಟು ಇಲ್ಲಿಗೆ ಬಂದೆವು ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ದತ್ತ ತಾತ ತುಳಸಿಯನ್ನು ರೂಮಿಗೆ ಕರೆದುಕೊಂಡು ಹೋಗಿ ಬೈಯುತ್ತಾರೆ. ನಿನಗೆ ಬುದ್ಧಿ ಇದೆಯಾ. ಅಣ್ಣ-ತಮ್ಮ ಜಗಳ ಮಾಡಿದರೆ ಅವರನ್ನು ಒಂದು ಮಾಡುವ ಕೆಲಸ ಮಾಡಬೇಕು. ಅದು ಬಿಟ್ಟು ನೀನೂ ಅವರ ಜೊತೆಗೆ ಸೇರಿಕೊಂಡು ಮಗ ಸೊಸೆಯನ್ನು ಕರೆದುಕೊಂಡು ಮನೆ ಬಿಟ್ಟು ಬಂದಿದ್ದೀಯಲ್ಲ. ನಿನಗೆ ನಾನು ಏನು ಹೇಳಲಿ ಎಂದು ಬೈಯುತ್ತಾರೆ. ತುಳಸಿ ಏನೂ ಮಾತನಾಡದೇ ಸುಮ್ಮನಿರುತ್ತಾಳೆ.

srirasthu shubhamasthu serial 19 August episode written update

ಮನೆಯಲ್ಲಿ ಖುಷಿಯಾಗಿರುವ ದೀಪಿಕಾ

ಇತ್ತ ಮನೆಯಲ್ಲಿ ದೀಪಿಕಾ ಫುಲ್ ಹ್ಯಾಪಿ ಮೂಡ ನಲ್ಲಿ ಇರುತ್ತಾಳೆ. ಅಡುಗೆ ಮನೆಯಲ್ಲಿ ಡ್ಯಾನ್ಸ್ ಮಾಡುತ್ತಿರುತ್ತಾಳೆ. ಇದನ್ನು ನೋಡಿದ ಶಾರ್ವರಿ ಒಂದೇ ಕಲ್ಲಿನಲ್ಲಿ ಮೂರು ಹಕ್ಕಿಯನ್ನು ಹೊಡೆದಿದ್ದೀಯಾ. ಇನ್ಮೇಲಾದರೂ ನೀನು ಮತ್ತು ಅಭಿ ಖುಷಿಯಾಗಿ ಈ ಮನೆಯಲ್ಲಿ ಸಂಸಾರ ಮಾಡಿ ಎಂದು ಹೇಳುತ್ತಾಳೆ. ದೀಪಿಕಾ ಅವರೆಲ್ಲಾ ಮನೆ ಬಿಟ್ಟು ಹೋಗಿದ್ದು ತುಂಬಾ ಖುಷಿಯಾಗುತ್ತಿದೆ. ಇನ್ಮುಂದೆ ಈ ಮನೆಗೆ ನಾನೇ ಹಿರಿ ಸೊಸೆ ಹಾಗೂ ಕಿರಿ ಸೊಸೆ. ನಾನೇ ರಾಣಿ ಎಂದು ಹೇಳುತ್ತಾಳೆ.

ಮನೆ ಇಬ್ಬಾಗವಾಗಿದ್ದಕ್ಕೆ ಶಾರ್ವರಿಗೆ ಸಮಾಧಾನ

ದೀಪಿಕಾ ಖುಷಿಯನ್ನು ನೋಡಿ ಮನದೊಳಗೆ ವ್ಯಂಗ್ಯವಾಗಿ ಶಾರ್ವರಿ ಮಾತನಾಡಿಕೊಳ್ಳುತ್ತಾಳೆ. ಈ ಮನೆ ಛಿದ್ರ ಛಿದ್ರವಾಗಿ ಮಾಧವ್ ನರಳಿ ನರಳಿ ಸಾಯಬೇಕು. ಅದನ್ನು ನಾನು ಕಣ್ಣು ತುಂಬಾ ನೋಡಬೇಕು. ಅದೇ ನನ್ನ ಆಸೆ ಎಂದು ಮಾತನಾಡಿಕೊಳ್ಳುತ್ತಾಳೆ. ಬಳಿಕ ಅಭಿ ರೂಮ್ ಗೆ ಹೋಇ ಮಾತನಾಡಿಸುತ್ತಾಳೆ. ಇದೆಲ್ಲಾ ಕನಸಿನಂತೆ ಇದೆ. ಇದೆಲ್ಲಾ ಹೇಗಾಯ್ತು ಎಂದು ಜೀರ್ಣಿಸಿಕೊಳ್ಳಲು ಸಾಧ್ಯವೇ ಆಗುತ್ತಿಲ್ಲ. ನೀನು ಅರಾಮಾಗಿ ಇರು. ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಸಮಾಧಾನ ಮಾಡುತ್ತಾಳೆ. ನೀವೆಲ್ಲರೂ ಹೀಗೆ ಒದ್ದಾಡುವುದನ್ನು ನೋಡುವುದಕ್ಕೆ ನನಗೆ ಖುಷಿಯಾಗುತ್ತಿದೆ ಎಂದು ಮನದೊಳಗೆ ಗೊಣಗಿಕೊಳ್ಳುತ್ತಾಳೆ.

srirasthu shubhamasthu serial 19 August episode written update

ಅಣ್ಣನಿಲ್ಲದ ಕಾರಣ ಬೇಸರದಲ್ಲಿರುವ ಅಭಿ

ಅಭಿಗೆ ಅಣ್ಣ ಮನೆ ಬಿಟ್ಟು ಹೋಗುವಂತಾಯ್ತಲ್ಲ ಎಂದು ಬಹಳ ಬೇಸರದಲ್ಲಿರುತ್ತಾನೆ. ಎಲ್ಲರೂ ಊಟಕ್ಕೆ ಕುಳಿತಾಗ ಅಡುಗೆ ರುಚಿ ನೋಡಿ ನಿಧಿ ಮತ್ತು ಮಹೇಶ ಬೇಸರ ಮಾಡಿಕೊಳ್ಳುತ್ತಾರೆ. ಬಳಿಕ ದೀಪಿಕಾ ತಾನೇ ಅಡುಗೆ ಮಾಡಿದ್ದು ಎಂದಿದ್ದಕ್ಕೆ ಮಾಧವ್ ಅಡುಗೆ ಬಹಳ ರುಚಿಯಾಗಿದೆ ಎಂದು ನಾಟಕ ಮಾಡುತ್ತಾನೆ. ದೀಪಿಕಾಳಿಗೆ ಬೇಸರ ಆಗಬಾರದು ಎಂದು ಎಲ್ಲರೂೂಟ ಮಾಡುವಾಗ ಅಭಿಗೆ ಅಣ್ಣ ಹಾಗೂ ಅತ್ತಿಗೆ ನೆನಪಾಗಿದ್ದು ಊಟ ಬಿಟ್ಟು ಎದ್ದು ಹೋಗಿದ್ದಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X