Srirasthu Shubhamasthu ; ದೀಪಿಕಾ ಕೈಗೆ ಸಿಕ್ತು ಹೊಸ ಅಸ್ತ್ರ; ಸಿಂಪಲ್ ಆಗಿ ನಡೀತು ನಿಧಿ ನಿಶ್ಚಿತಾರ್ಥ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಮತ್ತು ಮಾಧವ್ ಇಬ್ಬರು ಜಾಲಿಯಾಗಿ ಎರಡು ದಿನಗಳ ಕಾಲ ಮೈಸೂರು ಸುತ್ತಾಡಿಕೊಂಡು ವಾಪಸ್ ಮನೆಗೆ ಬಂದಿದ್ದಾರೆ. ತುಳಸಿಯ ಕನಸುಗಳನ್ನು ನನಸು ಮಾಡುವ ಸಲುವಾಗಿ ಮಾಧವ್ ಇಷ್ಟೆಲ್ಲಾ ಪ್ಲಾನ್ ಮಾಡಿದ್ದರು ಎಂಬ ಸತ್ಯ ತುಳಸಿಗೆ ಪೂರ್ಣಿಮಾ ತಿಳಿಸಿ ಹೇಳುತ್ತಾಳೆ. ಇನ್ನು ನಿಧಿ ಹಾಗೂ ಸಂಜಯ್ ನಿಶ್ಚಿತಾರ್ಥವನ್ನು ಮಾಡಲು ಡೇಟ್ ಫೀಕ್ಸ್ ಮಾಡಿದ್ದು, ತಯಾರಿ ಮಾಡಿಕೊಳ್ಳಲು ಸಮಯವಿಲ್ಲದ ಕಾರಣ ಮನೆಯಲ್ಲೇ ಎಂಗೇಜ್ ಮೆಂಟ್ ಮಾಡಲು ನಿರ್ಧರಿಸಿದ್ದಾರೆ.
ಖಾಲಿ ಹಾಳೆಗೆ ಸಹಿ ಹಾಕಿದ ಸಂಧ್ಯಾ
ಇತ್ತ ಸಂಧ್ಯಾ ತಲೆಗೆ ಜುಗ್ಗ ಜನಾರ್ಧನಾ ಏನೇನೋ ತುಂಬಿದ್ದು, ಬಿಸಿನೆಸ್ ಮಾಡಲು ದೀಪಿಕಾ ಬಳಿ ಹಣ ಕೇಳುವಂತೆ ಹೇಳಿದ್ದಾಳೆ. ಸಂಧ್ಯಾಳಿಗೆ ಅವರ ಮನೆಯವರೆಲ್ಲಾ ಅಷ್ಟೆಲ್ಲಾ ಬೈದು ಬುದ್ಧಿ ಹೇಳಿದರೂ ಅರ್ಥವಾಗದವಳಂತಿದ್ದು, ದೀಪಿಕಾಳಿಗೆ ಫೋನ್ ಮಾಡಿ ಹಣ ಕೇಳಿದ್ದಾಳೆ. ದೀಪಿಕಾ ಅಗ್ರಿಮೆಂಟ್ ಗೆ ಸಹಿ ಹಾಕು ನಂತರ ಹಣ ಕೊಡುತ್ತೇನೆ ಎಂದು ಖಾಲಿ ಹಾಳೆಗಳನ್ನು ಕೊರಿಯರ್ ಮಾಡಿದ್ದಾಳೆ. ಸಂಧ್ಯಾಳನ್ನು ದಡ್ಡಿ ಎನ್ನಬೇಕೋ, ದುರಾಸೆ ಬುದ್ಧಿಯನ್ನಬೇಕೋ ಗೊತ್ತಾಗುತ್ತಿಲ್ಲ. ಖಾಲಿ ಹಾಳೆಗೆ ಸಹಿ ಹಾಕಿರುವುದಲ್ಲದೇ ಅದನ್ನು ಕೊರಿಯರ್ ಮಾಡಲು ಮುಂದಾಗಿದ್ದಾಳೆ.

ದೀಪಿಕಾ ಕೈಗೆ ಸಿಕ್ತು ಹೊಸ ಅಸ್ತ್ರ
ಅಷ್ಟರಲ್ಲಿ ದತ್ತ ತಾತ ಸಂಧ್ಯಾ ಮತ್ತೇನೋ ಎಡವಟ್ಟು ಮಾಡಬಹುದು ಎಂದು ತಿಳಿದು ತಡೆಯಲು ಯತ್ನಿಸುತ್ತಾನೆ. ಆದರೆ, ಸಂಧ್ಯಾ ಮತ್ತು ಜುಗ್ಗ ಜನಾರ್ಧನ ಸೇರಿಕೊಂಡು ದತ್ತ ತಾತನನ್ನು ಯಾಮಾರಿಸಿದ್ದಾರೆ. ದೀಪಿಕಾ ಕೈಗೆ ಈಗ ಹೊಸ ಅಸ್ತ್ರ ಸಿಕ್ಕಿದ್ದು, ಸಂಧ್ಯಾಳಿಗೆ ಹಣ ಕೊಡುವುದಾಗಿ ತಿಳಿಸಿದ್ದಾಳೆ. ಅಷ್ಟೇ ಅಲ್ಲದೇ, ತುಳಸಿ ಮೇಲೆ ಸಂಧ್ಯಾಳನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ದಾಳೆ. ಸಂಧ್ಯಾ ಮಾಡಿರುವ ಈ ದಡ್ಡತನದಿಂದ ತುಳಸಿಗೆ ಮತ್ಯಾವ ಗಂಡಾಂತರ ಒದಗಿ ಬರುತ್ತದೋ ಕಾದು ನೋಡಬೇಕಿದೆ. ಇನ್ನು ತುಳಸಿ ದತ್ತ ಮಾವನಿಗೆ ಫೋನ್ ಮಾಡಿ ನಿಧಿ ನಿಶ್ಚಿತಾರ್ಥ ಇರುವ ವಿಚಾರವನ್ನು ಹೇಳಿದ್ದಾಳೆ. ಅಲ್ಲದೇ, ಮನೆಯವರಿಗೆಲ್ಲಾ ಸಮಾರಂಭದಲ್ಲಿ ಭಾಗಿಯಾಗುವ ಅವಕಾಶ ಇಲ್ಲ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿದ್ದಾಳೆ.
ಸಿಂಪಲ್ ಆಗಿ ನಡೀತು ನಿಧಿ ನಿಶ್ಚಿತಾರ್ಥ
ನಿಧಿ ಎಂಗೇಜ್ಮೆಂಟ್ ಗೆ ಮನೆಯಲ್ಲೇ ಸಿಂಪಲ್ ಆಗಿ ತಯಾರಿ ನಡೆಸಲಾಗಿದೆ. ಶೇಖರ್ ಮನೆಯವರು ಮಾಧವ್ ಮನೆಗೆ ಆಗಮಿಸಿದ್ದಾರೆ. ಪುರೋಹಿತರು ಇವತ್ತೇ ಒಳ್ಳೆಯ ದಿನ ಎಂದಿದ್ದಕ್ಕೆ ಎಂಗೇಜ್ ಮೆಂಟ್ ಅವಸರದಲ್ಲಿ ಮಾಡುವಂತಾಯ್ತು. ಹೀಗಾಗಿ ನಿಶ್ಚಿತಾರ್ಥಕ್ಕೆ ಯಾರನ್ನೂ ಆಹ್ವಾನಿಸಿಲ್ಲ. ಮದುವೆಯನ್ನು ಅದ್ಧೂರಿಯಾಗಿ ಮಾಡೋಣ ಎಂದು ಮಾತನಾಡಿಕೊಳ್ಳುತ್ತಾಳೆ. ತಾಂಬೂಲವನ್ನು ಮನೆಯಲ್ಲೇ ಬದಲಾಯಿಸಿಕೊಂಡು, ನಿಧಿ ಮತ್ತು ಸಂಜಯ್ ಉಂಗುರ ಬದಲಾಯಿಸಿಕೊಳ್ಳುತ್ತಾರೆ. ಈ ಖುಷಿಯ ಸಂದರ್ಭದಲ್ಲೂ ತುಳಸಿ ಬಹಳ ಮೌನವಾಗಿದ್ದಾಳೆ.

ಬೇಸರ ಮಾಡಿಕೊಂಡಿರುವ ತುಳಸಿ
ತನ್ನ ಮಕ್ಕಳನ್ನು ದೂರ ಇಡುವ ಈ ಸಂದರ್ಭ ತುಳಸಿಗೆ ಬಹಳ ನೋವುಂಟು ಮಾಡಿದೆ. ಅಕಸ್ಮಾತ್ ಆಗಿ ಸಮರ್ಥ್ ನಿಶ್ಚಿತಾರ್ಥದ ಸಂದರ್ಭದಲ್ಲಿ ಕಾಣಿಸಿಕೊಂಡಿದ್ದು, ಅವಿ ಆತನನ್ನು ತನ್ನ ತಮ್ಮ ಎಂದು ಪರಿಚಯಿಸಿದ್ದಾನೆ. ಆದರೆ, ಸಮರ್ಥ್ ಪರೀಸ್ಥಿತಿಯನ್ನು ಮ್ಯಾನೇಜ್ ಮಾಡುತ್ತಾನೆ. ಕಾರ್ಯಕ್ರಮ ಮುಗಿದ ಬಳಿಕ ಮಾಧವ್ ನಡೆದ ಘಟನೆಯನ್ನು ಅವಿಗೆ ತಿಳಿಸಿ ಹೇಳಿದ್ದು, ಈಗ ಅವಿ ಮತ್ತಜ ಪೂರ್ಣಿಮಾ ಸೇರಿಕೊಂಡು ಸಮರ್ಥ್ ತಮ್ಮವನೇ ಎಂದು ಭಾವಿಸುವಂತೆ ಮಾಡುತ್ತಿದ್ದಾಳೆ. ಸಮರ್ಥ್ ಅನ್ನು ಅವಿ ಬಲವಂತವಾಗಿ ತಿಂಡಿ ತಿನ್ನು ಎಂದು ಡೈನಿಂಗ್ ಟೇಬಲ್ ನಲ್ಲಿ ಕೂರಿಸುತ್ತಾನೆ. ಪೂರ್ಣಿಮಾ ಸಮರ್ಥ್ ನನ್ನನ್ನು ಅತ್ತಿಗೆ ಎಂದು ಕರೆಯಲಿ ಎಂದು ಬಯಸುತ್ತಾಳೆ. ಇದೆಲ್ಲವೂ ಸಮರ್ಥ್ ಗೆ ಮುಜುಗರ ಉಂಟು ಮಾಡುತ್ತದೆ.


Click it and Unblock the Notifications











