Srirasthu Shubhamasthu ; ಪೂರ್ಣಿಮಾಳನ್ನು ಅಕ್ಕ ಎಂದು ಒಪ್ಪಲಾರದೇ ಸಂಕಷ್ಟಕ್ಕೆ ಸಿಲುಕಿರುವ ದೀಪಿಕಾ !

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತ ತೀರ್ಥ ಯಾತ್ರೆಯಿಂದ ಯಾವಾಗ ಮರಳಿ ಬರುತ್ತಾರೋ ಗೊತ್ತಿಲ್ಲ. ಆದರೆ, ಜುಗ್ಗ ಜಗನ್ನಾಥ ಮಾತ್ರ ಮನೆಯಲ್ಲಿ ತನ್ನದೇ ಎಲ್ಲಾ ನಡೆಯಬೇಕು ಎಂದು ಆಸೆ ಪಟ್ಟಿದ್ದಾನೆ. ಸಂಧ್ಯಾ ಕೂಡ ಈಗ ಕೆಲಸಕ್ಕೆ ಹೋಗುತ್ತಿದ್ದು, ಪದೇ ಪದೇ ಮಾವನನ್ನು ಹಣದ ವಿಚಾರಕ್ಕೆ ಹೀಯಾಳಿಸುತ್ತಲೇ ಇದ್ದಾಳೆ. ಅಲ್ಲದೇ, ತನ್ನ ಹಣ ವಾಪಾಸ್ ಕೊಡಲೇ ಬೇಕು ಎಂದು ಕಂಡೀಷನ್ ಹಾಕಿದ್ದಾಳೆ. ಸಂಧ್ಯಾ ಏನೇ ಹೇಳಿದರೂ ಹಣ ವಾಪಸ್ ಕೊಡುವ ಮನಸ್ಸನ್ನು ಮಾಡದ ಜುಗ್ಗ ಈಗಾಗಲೇ ಐದು ಲಕ್ಷವನ್ನು ತನಗೆ ಬೇಕಾದಂತೆ ಖರ್ಚು ಮಾಡಿಕೊಂಡಿದ್ದಾನೆ.

ಹಣದಾಸೆಗೆ ಬಿದ್ದ ಜುಗ್ಗನಿಗೆ ಚೊಂಬು ಗ್ಯಾರೆಂಟಿ

ಅದರಲ್ಲಿ ಉಳಿದಿರುವ ಒಂದು ಲಕ್ಷ ಹಣವನ್ನು ಯಾರದೋ ಮಾತು ಕೇಳಿ ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದಿದ್ದು, ಇನ್ನೂ ತಾನು ಎಡವಿದ ವಿಚಾರ ತಿಳಿಯದೆಯೇ ಬಹಳ ಖುಷಿ ಮೂಡ್ ನಲ್ಲಿ ಇದ್ದಾನೆ. ಅದ್ಯಾರೋ ಫೋನ್ ಮಾಡಿ ನಿಮ್ಮ ಬಳಿ ಹಣವಿದ್ದರೆ, ಶೇರ್ ಮಾರ್ಕೆಟ್ ನಲ್ಲಿ ಇನ್ವೆಸ್ಟ್ ಮಾಡಿ. ಇಂದು ಒಂದು ಲಕ್ಷ ಹಾಕಿದರೆ, ಇಪ್ಪತ್ತು ದಿನದಲ್ಲಿ ಒಂದು ಲಕ್ಷಕ್ಕೆ ಒಂದು ಲಕ್ಷ ಹಣ ಎಂಬಂತೆ ಎರಡು ಲಕ್ಷ ಬರುತ್ತದೆ. ಲಕ್ಷಾಂತರ ರೂಪಾಯಿ ಹಣವನ್ನು ಹೂಡಿದರೆ, ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾಗಬಹುದು ಎಂದು ಹೇಳಿದ್ದಾರೆ. ಈ ಮಾತನ್ನು ನಂಬಿದ ಜುಗ್ಗ ತನ್ನಲಿದ್ದ ಹಣವನ್ನು ಇನ್ವೆಸ್ಟ್ ಮಾಡಲು ನೀಡಿದ್ದಾನೆ. ಆ ಹಣ ಡಬಲ್ ಆಗುತ್ತೆ ಎಂದು ಕಾಯುತ್ತಿದ್ದು, ಯಾವಾಗ ನಾಮ ಇಟ್ಟುಕೊಳ್ಳುತ್ತಾನೋ ಕಾದು ನೋಡಬೇಕಿದೆ.

Srirasthu Shubhamasthu serial 19 November episode written update

ತುಳಸಿಗಾಗಿ ಬಳೆ ತಂದ ಅಭಿ

ಇತ್ತ ತುಳಸಿ ಗರ್ಭಿಣಿ ಎಂಬ ವಿಚಾರವನ್ನು ಮನೆಯಲ್ಲಿ ಎಲ್ಲರೂ ಪಾಸಿಟಿವ್ ಆಗಿ ತೆಗೆದುಕೊಂಡಿದ್ದು, ಸಮರ್ಥ್, ಸಿರಿ, ಸಂಧ್ಯಾ, ಅಭಿ, ಪೂರ್ಣಿ ಹಾಗೂ ಅವಿ ತುಳಸಿಯನ್ನು ಬಹಳ ಕೇರ್ ಮಾಡುತ್ತಿದ್ದಾರೆ. ನಿತ್ಯ ತುಳಸಿಗೆ ಸರ್ಪ್ರೈಸ್ ಗಳ ಮೇಲೆ ಸರ್ ಪ್ರೈಸ್ ನೀಡುತ್ತಿದ್ದಾರೆ. ಇದರಿಂದ ಮನೆಯಲ್ಲಿಯೂ ಎಲ್ಲರೂ ಖುಷಿಯಾಗಿದ್ದು, ಈಗ ಅಭಿ ತುಳಸಿಗೆ ಏನಾದರೂ ಕೊಡಬೇಕು ಎಂದು ಭಾವಿಸಿದ್ದು, ತುಳಸಿಗೆ ಇಷ್ಟವಾದ ಗಾಜಿನ ಬಳೆಗಳನ್ನು ತಂದು ಕೊಟ್ಟಿದ್ದಾನೆ. ಇದನ್ನು ಕಂಡು ಸಮರ್ಥ್ ಹಾಗೂ ತುಳಸಿ ಇಬ್ಬರೂ ಖುಷಿಪಟ್ಟಿದ್ದಾರೆ.

ಅನಾಥ ಭಾವವೇ ಚೆಂದ ಎಂದ ಪೂರ್ಣಿಮಾ

ಇತ್ತ ಜನಾರ್ಧನ್ ಗೆ ತನ್ನ ಮೊದಲ ಮಗಳಿಂದ ಆಸ್ತಿಯನ್ನು ಪಡೆಯುವ ಸಲುವಾಗಿ ಸಾಕಷ್ಟು ಹುಡುಕಾಡಿದ್ದು, ಈ ಪೂರ್ಣಿಯೇ ಅವಳು ಎಂದು ತಿಳಿದಿದ್ದಾಗಿದೆ. ಮಗಳು ಸಿಕ್ಕಳು ಎಂಬ ಖುಷಿಗಿಂತಲೂ ಆಸ್ತಿ ಉಳಿಯುತು ಎಂಬುದೇ ಜನಾರ್ಧನ್ ಖುಷಿಗೆ ಕಾರಣವಾಗಿದೆ. ನಿತ್ಯ ದೀಪಿಕಾಳಿಂದ ತಾನು ಅನಾಥೆ ಎನಿಸಿಕೊಳ್ಳುತ್ತಿದ್ದ ಪೂರ್ಣಿಮಾಳಿಗೆ ಈಗ ಖುಷಿಯಾಗಿದೆ. ಆದರೆ ಅದನ್ನು ಸಂಭ್ರಮಿಸುವ ಮುನ್ನವೇ ಆಸ್ತಿ ವಿಚಾರ ನೋವು ಕೊಟ್ಟಿದ್ದು. ಇನ್ಯಾವತ್ತು ನನ್ನನ್ನು ನೋಡಲು ಬರಬೇಡಿ. ನನಗೆ ತಂದೆ ಇಲ್ಲ ಎಂದು ಪೂರ್ಣಿ ಕಣ್ಣಿರು ಹಾಕಿದ್ದಾಳೆ. ಇದಕ್ಕಿಂತಲೂ ಅನಾಥೆಯಾಗಿದ್ದೇ ಚೆನ್ನಾಗಿರುತ್ತಿತ್ತು ಎಂದು ನೊಂದುಕೊಂಡಿದ್ದಾಳೆ.

ದೀಪಿಕಾಳಿಗೆ ತಳಲಾರದ ಸಂಕಟ

ಇತ್ತ ದೀಪಿಕಾ ಪ್ರತಿಯೊಂದು ವಿಚಾರದಲ್ಲೂ ಸ್ವಾರ್ಥಿಯಾಗಿ ಯೋಚಿಸುವ ಅವಳಿಗೆ ಪೂರ್ಣಿಮಾ ತನ್ನ ಅಕ್ಕ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಪೂರ್ಣಿಮಾ ಅನಾಥೆ ಎಂದು ಅವಳನ್ನು ಧ್ವೇಷಿಸುತ್ತಿದ್ದ ದೀಪಿಕಾಳಿಗೆ ಈಗ ಅವಳೇ ತನ್ನ ಸ್ವಂತ ಅಕ್ಕ ಎಂಬ ಭಾವ ಇನ್ನಷ್ಟು ವೈರತ್ವವನ್ನು ಹೆಚ್ಚಿಸಿಕೊಳ್ಳುವಂತೆ ಮಾಡಿದೆ. ಅಲ್ಲದೇ, ಮನೆಯವರೆಲ್ಲಾ ಈ ವಿಚಾರವನ್ನು ಸಂಭ್ರಮಿಸಿದ್ದರೆ, ಅಭಿ ಕೂಡ ತನ್ನ ಸಪೋರ್ಟ್ ಗೆ ಬರುತ್ತಿಲ್ಲ ಎಂಬ ಸಂಕಟ ಹೆಚ್ಚಾಗಿದೆ. ದೀಪಿಕಾಳ ಸ್ವಾರ್ಥ ಬುದ್ಧಿ ಮನೆಯಲ್ಲಿ ಇನ್ನೂ ಏನೇನು ಅವಾಂತರಗಳನ್ನು ಸೃಷ್ಟಿಸುತ್ತದೋ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X