Srirasthu Shubhamasthu ; ಅಮ್ಮನ ಬೆಲೆ ತಿಳಿದ ಸಮರ್ಥ್ : ಮಾಧವ್ ಮನೆಗೆ ಓಡಿ ಬಂದ ತುಳಸಿ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ಹುಚ್ಚನಂತೆ ನಡೆದುಕೊಂಡಿದ್ದಾನೆ. ತನ್ನ ತಾಯಿ ತನಗೆ ಮಾತ್ರ ಮೀಸಲು ಎಂಬಂತೆ ನಡೆದುಕೊಂಡಿದ್ದಾನೆ. ಆದರೆ, ಈಗ ತುಳಸಿ ಸಮರ್ಥ್ ನಿಂದ ಇನ್ನಷ್ಟು ದೂರ ಸರಿಯಬಹುದು ಎಂದು ಊಹಿಸಲಾಗಿದೆ. ತುಳಸಿ ಬಹಳ ವೀಕ್ ಆಗಿದ್ದು, ವೈದ್ಯರು ಹೇಲಿದ ಸುದ್ದಿ ಶಾಕ್ ಆಗಿದೆ.ತುಳಸಿ ಈ ವಯಸ್ಸಿನಲ್ಲಿ ಗರ್ಭಿಣಿಯಾಗಿರುವ ಸುದ್ದಿ ಸ್ವತಃ ಅವಳಿಗೆ ಆತಂಕವನ್ನು ಉಂಟು ಮಾಡಿದೆ. ಆದರೆ, ಸಮರ್ಥ್ ತಪ್ಪಾಗಿ ಅರ್ಥೈಸಿಕೊಂಡಿದ್ದಾನೆ.

ಅಮ್ಮನ ಬೆಲೆ ತಿಳಿದ ಸಮರ್ಥ್

ಅಮ್ಮನಿಗೆ ಬ್ರೈನ್ ಟ್ಯೂಮರ್ ಇದೆ. ಅದಕ್ಕೆ ವೀಕ್ ಆಗಿದ್ದಾಳೆ. ಇನ್ನೆರಡು ಮೂರು ತಿಂಗಳಷ್ಟೇ ಅವಳು ಬದುಕಬಹುದು ಎಂದು ಸಮರ್ಥ್ ಅಪಾರ್ಥ ಮಾಡಿಕೊಂಡಿದ್ದಾನೆ. ಈ ವಿಚಾರವನ್ನು ಯಾರಿಗೂ ತಿಳಿಸದೇ ತಾನೇ ತನ್ನ ತಾಯಿಯನ್ನು ಆರೈಕೆ ಮಾಡುತ್ತಿದ್ದಾನೆ. ಅದರಲ್ಲೂ ಮಾಧವ್ ಕುಟುಂಬದವರು ತುಳಸಿಯನ್ನು ಭೇಟಿ ಕೂಡ ಮಾಡದಂತೆ ತಡೆದಿದ್ದಾನೆ. ತುಳಸಿಯೂ ಕೂಡ ತಾನು ಗರ್ಭಿಣಿ ಆಗಿರುವ ಸುದ್ದಿಯನ್ನು ತಿಳಿದು ಶಾಕ್ ನಲ್ಲಿ ಇದ್ದಾಳೆ. ಸಮರ್ಥ್ ರೂಮಿನಲ್ಲಿ ಕೂಡಿ ಹಾಕಿದ್ದರೂ ಕೂಡ ಏನೂ ಮಾತನಾಡದೆಯೇ ಸುಮ್ಮನಿದ್ದಾಳೆ. ಪತಿ ಮಾಧವ್ ಬಳಿ ಸತ್ಯ ಹೇಳಲು ಪೇಚಾಡುತ್ತಿದ್ದಾಳೆ.

srirasthu shubhamasthu serial 19 September episode written update

ಪತಿ ಬಳಿ ಸತ್ಯ ಹೇಳಲಾಗದೇ ಒದ್ದಾಟ

ತಾನು ಈ ವಯಸ್ಸಿನಲ್ಲಿ ಗರ್ಭಿಣಿ ಆಗಿದ್ದೇನೆ ಎಂದು ನೇರವಾಗಿ ಹೇಳಿಕೊಳ್ಳಲಾಗದೇ ಒಗಟಿನ ಮೂಲಕ ಅರ್ಥ ಮಾಡಿಸಲು ಮುಂದಾಗಿದ್ದಾಳೆ. ಆದರೆ, ಒಗಟನ್ನು ಅರ್ಥ ಮಾಡಿಕೊಂಡ ಮಾಧವ್, ತುಳಸಿ ಹೇಳಲು ಹೊರಟ ಸತ್ಯವನ್ನು ತಿಳಿಯದಂತಾಗಿದ್ದಾನೆ. ಸಮರ್ಥ್ ನಡೆದುಕೊಳ್ಳುತ್ತಿರುವ ರೀತಿ ಎಲ್ಲರಿಗೂ ವಿಚಿತ್ರ ಎನಿಸುತ್ತಿದೆ. ಅಮ್ಮನ ಮೇಲಿನ ಅತೀಯಾದ ಪ್ರೀತಿಯಿಂದ ಹೀಗೆ ಮಾಡುತ್ತಿದ್ದಾನೆ ಎಂದು ಎಲ್ಲರೂ ಸುಮ್ಮನಿದ್ದರೆ, ಶಾರ್ವರಿ ಇದೇ ವಿಚಾರವನ್ನೇ ಗಾಳವನ್ನಾಗಿ ಮಾಡಿಕೊಂಡು ಅಭಿ ಮನಸ್ಸಿನಲ್ಲಿ ಕೋಪವನ್ನು ಸೃಷ್ಟಿಸಿದ್ದಾಳೆ. ಸಮರ್ಥ್ ಮತ್ತು ಅಭಿ ನಡುವೆ ಗಲಾಟೆಯಾಗಲಿ ಎಂದು ಆಲೋಚಿಸಿದ್ದಾಳೆ. ಆದರೆ, ಅಷ್ಟರಲ್ಲಿ ತುಲಸಿ ಮಾಧವ್ ಮನೆಗೆ ಆಗಮಿಸಿದ್ದು, ಸಮರ್ಥ್ ಕೂಡ ಅಮ್ಮನನ್ನು ಹುಡುಕಿಕೊಂಡು ಇಲ್ಲಿಗೇ ಬಂದಿದ್ದಾನೆ. ಮುಂದೆ ಏನಾಗುತ್ತದೆ ಎಂಬ ಕುತೂಹಲವಂತೂ ಮೂಡಿದೆ.

ಧಾರಾವಾಹಿ ವೀಕ್ಷಕರಿಂದ ಬೇಸರದ ನುಡಿಗಳು

ಆದರೆ, ಧಾರಾವಾಹಿಯ ಕಥೆ ನಿರೀಕ್ಷೆಗೂ ಮೀರಿದ್ದು, ಊಹಿಸಲಾರದಂತಹ ತಿರವನ್ನು ಪಡೆದಿದೆ. ಇದು ವೀಕ್ಷಕರಲ್ಲಿ ಬೇಸರವನ್ನುಂಟು ಮಾಡಿದೆ. 45 ವರ್ಷದ ವಿಧವೆ ಮತ್ತು ವಿಧವ ತಮ್ಮ ಮುಂದಿನ ಬದುಕಿಗಾಗಿ ಬಾಳ ಸಂಗಾತಿಯನ್ನು ಆರಿಸಿಕೊಂಡು ಎರಡನೇ ಮದುವೆಯಾಗಿದ್ದನ್ನು ವೀಕ್ಷಕರು ಖುಷಿಯಿಂದ ಒಪ್ಪಿಕೊಂಡಿದ್ದರು. ತುಳಸಿ ಮತ್ತು ಮಾಧವ್ ಇಬ್ಬರಿಗೂ ಸಾಂಗತ್ಯದ ಅಗತ್ಯವಿತ್ತು ಎಂದು ಭಾವಿಸಿದ್ದರು. ಇಬ್ಬರ ಮಕ್ಕಳ ಮದುವೆಯಾಗಿದೆ. ಇನ್ನೇನಿದ್ದರೂ ಮೊಮ್ಮಕ್ಕಳನ್ನು ಆಡಿಸುವ ಕಾಲ. ಈ ಸಂದರ್ಭದಲ್ಲಿ ಸ್ವತಃ ತುಳಸಿ ಮತ್ತು ಮಾಧವ್ ತಮ್ಮ ಮಗುವಿಗೆ ಪೋಷಕರಾಗಲು ಹೊರಟಿರುವುದನ್ನು ಕಂಡು ವೀಕ್ಷಕರು ಬೇಸರ ಮಾಡಿಕೊಂಡಿದ್ದಾರೆ.

srirasthu-shubhamasthu-serial-19-september-episode-written-update

ಧಾರಾವಾಹಿ ಮುಗಿಯುವ ಆತಂಕ

ಈ ವಯಸ್ಸಿನಲ್ಲಿ ಇವರಿಬ್ಬರಿಗೆ ಇದೆಲ್ಲಾ ಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ. ಧಾರಾವಾಹಿಯಲ್ಲಿನ ಈ ತಿರುವು ನಿಜಕ್ಕೂ ಸರಿಯಿಲ್ಲ. ಇದು ಹೀಗೆ ಮುಂದುವರೆದರೆ, ಸೀರಿಯಲ್ ಅಂತ್ಯವಾಗೋದಂತೂ ಪಕ್ಕಾ ಎಂದಿದ್ದಾರೆ. ತುಳಸಿಗೆ ಈ ವಯಸ್ಸಿನಲ್ಲಿ ಮಗು ಆಗುವುದಾದರೂ ಹೇಗೆ ಸಾಧ್ಯ. ಈ ಕಾಲದಲ್ಲಿ 30 ರ ಹರೆಯದವರಿಗೆ ಸರಿಯಾಗಿ ಮಕ್ಕಳಾಗುತ್ತಿಲ್ಲ. ಹಾಗಿರುವಾಗ ಮಧ್ಯವಯ್ಯಸ್ಸಿನ ತುಳಸಿ ಗರ್ಭಿಣಿ ಆಗಿರುವುದು ಸರಿಯಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಮತ್ತೂ ಕೆಲವರು ಮಗಳು, ಸೊಸೆಯಂದಿರಿಗೆ ಮದುವೆಯಾಗಿ ವರ್ಷ ತುಂಬಿದರೂ ಮಕ್ಕಳಾಗಿಲ್ಲ. ಪೂರ್ಣಿಮಾಳಿಗೂ ಮಕ್ಕಳಾಗದೇ ನಿತ್ಯ ಕಣ್ಣೀರಿಡುತ್ತಿದ್ದಾಳೆ. ಇಂತಹ ಸಂದರ್ಭದಲ್ಲಿ ತುಳಸಿಯನ್ನು ಗರ್ಭಿಣಿ ಎಂದು ತೋರಿಸಿದ್ದು, ನಿರ್ದೇಶಕರ ತಪ್ಪು ಎಂದು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X