Srirasthu Shubhamasthu ; ಬೆಲೆ ಬಾಳುವ ಹಾರ ಕದ್ದ ದೀಪಿಕಾ : ತುಳಸಿಗಾಗಿ ಸತ್ಯ ಮುಚ್ಚಿಟ್ಟ ಮಾಧವ

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತ ಹಾಗೂ ಪಾರ್ವತಿ ಅಜ್ಜಿ ಇಬ್ಬರೂ ಈಗ ಒಳ್ಳೆಯ ಸ್ನೇಹಿತರಾಗಿದ್ದಾರೆ. ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದಾರೆ. ದತ್ತ ತಾತನಿಗೆ ಮಂಡಿ ನೋವು ಬಂದಾಗ ಅಜ್ಜಿ ತೈಲ ಕೊಟ್ಟು ಸಹಾಯ ಮಾಡಿದ್ದಾರೆ.ಅಜ್ಜಿಗೆ ಕಣ್ಣಿನ ಆಪರೇಷನ್ ಮಾಡಿಸಲು ದತ್ತ ತಾತ ಮುಂದಾಗಿದ್ದಾರೆ. ಇನ್ನು ಸಮರ್ಥ್ ತಾಯಿ ತುಳಸಿಗೋಸ್ಕರ ರಾತ್ರಿಯೆಲ್ಲಾ ಕಷ್ಟಪಟ್ಟು ಪ್ರಾಜೆಕ್ಟ್ ಕೆಲಸವನ್ನು ಮಾಡಿ ಮುಗಿಸಿಕೊಡುತ್ತಾನೆ. ಇದರಿಂದ ಅವಿನಾಶ್ ಗೆ ಬಹಳಷ್ಟು ಸಹಾಯವಾಗುತ್ತದೆ.

ಬೇಕಂತಲೇ ಹಾರ ಕದ್ದ ದೀಪಿಕಾ

ಸಮರ್ಥ್ ತಯಾರಿಸಿದ ಫೈಲ್ ನಿಂದಾಗಿ ಅವಿಗೆ ಟೆಂಡರ್ ಸಿಕ್ಕಿದೆ. ಇದೇ ಖುಷಿಯಲ್ಲಿ ಅವಿ ಎಲ್ಲರ ಎದುರೂ ತುಳಸಿಯನ್ನು ಕ್ಷಮೆ ಕೇಳಿದ್ದಾನೆ. ಅಲ್ಲದೇ, ಸಮರ್ಥ್ ಗೆ ಪಾರ್ಟಿ ಕೊಡಿಸಲಿದ್ದು, ನಾಳೆ ಊಟಕ್ಕೆ ಮನೆಗೆ ಬನ್ನಿ ಎಂದು ಕರೆದಿದ್ದಾನೆ. ಆದರೆ, ಇದೇ ಸಂದರ್ಭದಲ್ಲಿ ದೀಪಿಕಾ ಬೇಕಂತಲೇ ಹೊಸ ಪ್ಲಾನ್ ಮಾಡಿದ್ದಾಳೆ. ತುಳಸಿ ಆಕಸ್ಮಾತ್ ಆಗಿ ಒಡವೆಗಳ ಕೀಗಳನ್ನು ಮರೆತು ಬಿಟ್ಟಿದ್ದಾಳೆ. ಇದನ್ನು ಗಮನಿಸಿದ ದೀಪಿಕಾ ಕೀ ತೆಗೆದುಕೊಂಡಿದ್ದಲ್ಲದೇ, ತಲತಲಾಂತರದಿಂದ ಬಂದ ಹಾರವನ್ನು ಕದ್ದಿದ್ದಾಳೆ. ಅಲ್ಲದೇ, ಇದರ ಆರೋಪವನ್ನು ತುಳಸಿ ಮೇಲೆ ಹಾಕಲು ದೀಪಿಕಾ ಪ್ಲಾನ್ ಮಾಡಿದ್ದಾಳೆ.

Srirasthu shubhamasthu serial 20 March episode written update

ಸತ್ಯ ಮುಚ್ಚಿಟ್ಟ ಮಾಧವ

ದೀಪಿಕಾ ಬೇಕಂತಲೇ ಹಾರವನ್ನು ನೋಡಬಹುದಾ ಎಂದು ಮಾಧವನನ್ನು ಕೇಳುತ್ತಾಳೆ. ಮಾಧವ, ತುಳಸಿ ಬಳಿ ಕೀ ಕೇಳಿದಾಗ ಕೀ ಕಳೆದುಕೊಂಡ ತುಳಸಿಗೆ ಗಾಬರಿಯಾಗಿದ್ದು, ಮನೆಯೆಲ್ಲಾ ಹುಡುಕುತ್ತಾಳೆ. ತುಳಸಿ ಜೊತೆಗೆ ಸೇರಿಕೊಂಡು ಮನೆಯವರು ಕೂಡ ಕೀ ಅನ್ನು ಹುಡುಕುತ್ತಾರೆ. ಕೀ ಸಿಕ್ಕ ಬಳಿಕ ಒಡವೆಗಳನ್ನು ಸಮರ್ಥ್ ಕದ್ದಿರಬಹುದು ಎಂದು ಆರೋಪವನ್ನೂ ಮಾಡುತ್ತಾರೆ. ಅಭಿ ಅಂತೂ ಬೇಕಂತಲೇ ಸಮರ್ಥ್ ಗೆ ನೋವಾಗುವಂತೆ ಮಾತನಾಡುತ್ತಾನೆ. ಆಗ ದೀಪಿಕಾ ಎಲ್ಲಾ ಒಡವೆಗಳು ಇವೆಯಾ ಎಂದು ನೋಡಿ ಎಂದಾಗ ಮಾಧವ ಮತ್ತು ತುಳಸಿ ಇಬ್ಬರೂ ಹೋಗಿ ನೋಡುತ್ತಾರೆ. ಎಲ್ಲಾ ಒಡವೆಗಳು ಕೂಡ ಇರುತ್ತವೆ. ಆದರೆ, ತಲತಲಾಂತರದಿಂದ ಬಂದ ಒಡವೆ ಮಾತ್ರವೇ ಇರುವುದಿಲ್ಲ. ಇದರಿಂದ ತುಳಸಿಗೆ ಗಾಬರಿಯಾಗುತ್ತದೆ. ಆದರೆ, ಮಾಧವ ಮಿಸ್ ಆಗಿದೆ. ಯಾರಿಗೂ ಹೇಳಬೇಡಿ. ನಾನು ಮ್ಯಾನೇಜ್ ಮಾಡುತ್ತೇನೆ ಎಂದು ಹೇಳಿ ಸತ್ಯವನ್ನು ಮುಚ್ಚಿಡಲು ಯತ್ನಿಸುತ್ತಾನೆ.

ಕೀ ವಾಪಸ್ ಕೊಟ್ಟ ತುಳಸಿ

ಎಲ್ಲರ ಎದುರಿಗೂ ಮಾಧವ ಎಲ್ಲಾ ಒಡವೆಯೂ ಇದೆ. ಯಾವುದೂ ಮಿಸ್ ಆಗಿಲ್ಲ ಎಂದು ಸುಳ್ಳು ಹೇಳುತ್ತಾನೆ. ಬಳಿಕ ಶಾರ್ವರಿ ಇತ್ತೀಚೆಗೆ ತುಳಸಿ ಬಹಳ ಒತ್ತಡದಲ್ಲಿದ್ದ ಹಾಗಿದೆ. ಅದಕ್ಕೆ ಎಲ್ಲವನ್ನೂ ಮರೆಯುತ್ತಿದ್ದಾರೆ. ಆದರೆ, ಕೀ ಸ್ವಲ್ಪ ಜೋಪಾನವಾಗಿ ನೋಡಿಕೊಳ್ಳಿ ಎಂದು ಹೇಳುತ್ತಾಳೆ. ಆಗ ತುಳಸಿ ಇಲ್ಲ ನನ್ನ ಕೈಯಲ್ಲಿ ಇಷ್ಟು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಈ ಕೀಗಳು ನಿಮ್ಮ ಬಳಿ ಇದ್ದರೆ ಚೆಂದ. ನೀವೇ ಇದರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೀರಾ ಎಂದು ಹೇಳಿ ಶಾರ್ವರಿಗೆ ತುಳಸಿ ಕೀಗಳನ್ನು ವಾಪಸ್ ಮಾಡುತ್ತಾಳೆ.

Srirasthu shubhamasthu serial 20 March episode written update

ದೀಪಿಕಾಳ ಕೆಲಸದಿಂದ ಗೆದ್ದ ಶಾರ್ವರಿ

ಈಗ ದೀಪಿಕಾ ಮಾಡಿದ ಪ್ಲಾನ್ ನಿಂದಾಗಿ ಶಾರ್ವರಿ ಗೆದ್ದಂತಾಗಿದೆ. ಈಗಾಗಲೇ ತುಳಸಿ ಎಲ್ಲರ ಎದುರು ಡಮ್ಮಿ ಆಗಿದ್ದಾಳೆ. ದೀಪಿಕಾ ಶಾರ್ವರಿ ಬಳಿ ಹೋಗಿ ಹಾರ ಕಳುವಾಗಿದೆ. ಆದರೆ, ಮಾವ ಸುಳ್ಳು ಹೇಳುತ್ತಿದ್ದಾರೆ ಎಂದು ಸತ್ಯ ಹೇಳುತ್ತಾಳೆ. ಈ ಮಾತನ್ನು ಕೇಳಿದ ಶಾರ್ವರಿ ತುಳಸಿಗೆ ಎಲ್ಲರೂ ಬೈಯುವಂತೆ ಮತ್ತೆ ಏನನ್ನಾದರೂ ಮಾಡುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
sharvari proves that tulasi can’t take responsibilities and takes back the keys
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X