Srirasthu Shubhamasthu ; ಒಂದಾದ ಅಣ್ಣ ತಮ್ಮ, ಅಪ್ಪನನ್ನು ಒಪ್ಪಿಕೊಳ್ಳುವುದೊಂದೆ ಬಾಕಿ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಅಭಿ ಆಸ್ತಿಯಲ್ಲಿ ಭಾಗ ಮಾಡುತ್ತಿದ್ದಾನೆ ಎಂದು ಎಲ್ಲರೂ ಬೇಸರ ಮಾಡಿಕೊಂಡಿದ್ದರು. ಲಾಯರ್ ಮನೆಗೆ ಬಂದಿದ್ದಕ್ಕೆ ಎಲ್ಲರ ಮನಸ್ಸು ಕೂಡ ಕಂಗಾಲಾಗಿತ್ತು. ಇದರ ಜೊತೆಗೆ ಮೀಡಿಯಾದವರು ಕೂಡ ಮನೆಗೆ ಆಗಮಿಸಿದ್ದರು. ಅಭಿ ಹಾಗೂ ಅವಿ ಜೊತೆಗೆ ಮಾತನಾಡಬೇಕು ಎಂದು ಹೇಳಿದ್ದರು. ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿತ್ತು.ಸುದ್ದಿ ವಾಹಿನಿಗಳು ಕ್ಯಾಮರಾ ಸಮೇತ ಮಾಧವ್ ಮನೆಗೆ ಆಗಮಿಸಿದ್ದರು. ಅಭಿ ಹಾಗೂ ಅವಿಯನ್ನು ನೀವಿಬ್ಬರೂ ಜಗಳ ಮಾಡಿಕೊಂಡಿದ್ದೀರಂತೆ. ಮನೆಯ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದೀರಂತೆ, ಮನೆ ಭಾಗವಾದ ಮೇಲೆ ಮತ್ತೊಂದು ಕಂಪನಿಯನ್ನು ತೆರೆಯುತ್ತೀರಾ. ಅಣ್ಣನ ವಿರುದ್ಧ ಕಂಪನಿಯನ್ನು ನಡೆಸುತ್ತೀರಾ ಎಂದೆಲ್ಲಾ ಪ್ರಶ್ನೆ ಮಾಡಿದ್ದರು.
ಆಸ್ತಿ ಬೇಡ ಮನೆಯವರೇ ಮುಖ್ಯ ಎಂದ ಅಭಿ
ಇದೆಲ್ಲಾ ಪ್ರಶ್ನೆಗಳನ್ನು ಕೇಳಿದ ಅಭಿಗೆ, ಮನೆಯವರೆಲ್ಲಾ ಮನೆ ಭಾಗ ಆಗುವುದು ಬೇಡ, ಅಭಿಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ತೆಗೆದುಕೊಂಡು ಹೋಗಲಿ ಎಂದಿದ್ದು, ಎಲ್ಲವೂ ಕೂಡ ಅಭಿ ಮನಸ್ಸನ್ನು ಕರಗಿಸುತ್ತದೆ. ತಾನು ಮಾಡುತ್ತಿರುವುದು ತಪ್ಪು ಎಂದು ಅನಿಸುತ್ತದೆ. ತನ್ನಿಂದ ಮನೆಯನ್ನು ಎರಡು ಭಾಗ ಮಾಡಬಾರದು ಎಂದು ಯೋಚಿಸುವ ಅಭಿ ತನ್ನಲ್ಲಿನ, ಕೋಪ, ವೈಮನಸ್ಸನ್ನೆಲ್ಲಾ ಬಿಟ್ಟು ಈ ಮನೆಯಲ್ಲೇ ಇರಲು ತೀರ್ಮಾನಿಸುತ್ತಾನೆ. ಈ ಮನೆ ಭಾಗ ಆಗುತ್ತಿಲ್ಲ. ನಾವೆಲ್ಲರೂ ಇಷ್ಟು ದಿನ ಇದ್ದಂತೆಯೇ ಒಟ್ಟಿಗೆ ಇರುತ್ತೇವೆ ಎಂದು ಹೇಳುತ್ತಾನೆ ಈ ಮಾತನ್ನು ಕೇಳಿದ ಕೂಡಲೇ ಮನೆಯವರೆಲ್ಲಾ ಖುಷಿಯಾಗಿ ಬಿಡುತ್ತಾರೆ. ಇನ್ನು ಅವಿ ಈ ಮನೆಯ ಒಗ್ಗಟ್ಟಿನ ಗುಟ್ಟೆ ತುಳಸಿ ಅಮ್ಮ ಎಂದು ಹೆಮ್ಮೆಯಿಂದ ಹೇಳುತ್ತಾನೆ. ಮೀಡಿಯಾದವರು ಹಾಗೂ ಲಾಯರ್ ಹೊರಟ ಬಳಿಕ ತುಳಸಿ ಹಾಗೂ ಅವಿ ತ್ಯಾಗವನ್ನು ಹೇಳುತ್ತಾನೆ. ಈ ಮಾತನ್ನು ಕೇಳಿದ ಮಾಧವ್ ಗೆ ನೋವಾಗುತ್ತದೆ.

ಅಣ್ಣನ ಜೊತೆಗೆ ತಿಂಡಿ ಸವಿದ ಅಭಿ
ಅಭಿ ಆಸ್ತಿಯಲ್ಲಿ ಪಾಲು ಕೇಳಿ ಮಾಧವ್ ಗೆ ನೋವು ಕೊಡುತ್ತಾನೆ. ಈ ಮನೆ ಛಿದ್ರ ಛಿದ್ರವಾಗುತ್ತದೆ ಎಂದು ಶಾರ್ವರಿ ಭಾವಿಸಿದ್ದಳು. ದೀಪಿಕಾಳಿಗೂ ಇದರಿಂದ ನಿರಾಸೆಯಾಗುತ್ತದೆ. ಸ್ವಲ್ಪ ದಿನ ಅಭಿಯನ್ನು ಹೀಗೆ ಬಿಟ್ಟು ಬಿಡೋಣ. ಇನ್ನೊಂದು ತಿಂಗಳಲ್ಲಿ ಈ ಮನೆಗೆ ದೊಡ್ಡ ಆಘಾತವಾಗುವಂತೆ ಏನಾದರೂ ಪ್ಲಾನ್ ಮಾಡಿಕೊಳ್ಳೋಣ ಎಂದು ಶಾರ್ವರಿ ಹೇಳುತ್ತಾಳೆ.ಇದರ ನಡುವೆ ತಿಂಡಿ ತಿನ್ನಲು ಅಭಿ ಮತ್ತು ಅವಿ ಬರುತ್ತಾರೆ. ಇಬ್ಬರಿಗೂ ಒಟ್ಟಿಗೆ ಕೂರಲು ಸಂಕೋಚವಿರುತ್ತದೆ. ಆದರೆ, ಅವಿಯೇ ಪ್ರತಿ ಬಾರಿ ಸಂಕೋಚವನ್ನು ಮುರಿದು ಅಭಿ ಜೊತೆಗೆ ತಿಂಡಿ ತಿನ್ನಲು ಮುಂದಾಗುತ್ತಾನೆ. ಮಾಧವ್ ಗೆ ಈ ದೃಶ್ಯವನ್ನು ಕಂಡು ಖುಷಿಯಾಗುತ್ತದೆ.
ಅವಿನಾಶ್‌ನ ಪ್ರಶ್ನಿಸಿದ ಪೂರ್ಣಿಮಾ
ಪೂರ್ಣಿಮಾ, ಮಾಧವ್ ಹಾಗೂ ತುಳಸಿ ಮೂವರು ವಾಕಿಂಗ್ ಹೋಗಿ ಬರುತ್ತಾರೆ. ಮಾಧವ್ ನಿತ್ಯ ನೀನು ಹೀಗೆಯೇ ನಮ್ಮ ಜೊತೆಗೆ ವಾಕಿಂಗ್ ಬರಬೇಕು ಎಂದು ಮಾಧವ್ ಹೇಳುತ್ತಾನೆ. ಪೂರ್ಣಿಮಾ ಕೂಡ ನಿಮ್ಮ ಜೊತೆಗಿದ್ದರೆ ಬಹಳ ಖುಷಿಯಾಗಿರುತ್ತೇನೆ ಎನ್ನುತ್ತಾಳೆ. ಈ ಮಾತನ್ನು ಕೇಳಿದ ಅವಿ ಹಾಗಿದ್ದರೆ ನಾನು ಬೇಡವಾ ಎಂದಾಗ ಮನೆಯವರೆಲ್ಲಾ ನನ್ನ ಉಸಿರಾದರೆ, ನೀವು ಹೃದಯ ಎನ್ನುತ್ತಾಳೆ. ನೀವು ನಮ್ಮ ಜೊತೆಗೆ ವಾಕಿಂಗ್ ಬನ್ನಿ ಎಂದಿದ್ದಕ್ಕೆ, ಮಾಧವ್ ಬಂದರೆ ಬರುವುದಿಲ್ಲ ಎಂದು ಹೇಳುತ್ತಾನೆ. ಆಗ ಪೂರ್ಣಿಮಾ ನಿಮ್ಮ ತಂದೆಯಿಂದ ನಿಮಗೆ ತಾಯಿ ಇಲ್ಲದಂತಾಗಿರಬಹುದು. ಆದರೆ ಅವರು ಏನೆಲ್ಲಾ ಕೊಟ್ಟಿದ್ದಾರೆ ಯೋಚಿಸಿ ಎಂದು ಪ್ರಶ್ನಿಸುತ್ತಾಳೆ. ಈ ಮಾತಿನಿಂದ ಅವಿ ಕಣ್ಣೀರು ಹಾಕುತ್ತಾನೆ.

ಮಾಧವ್, ತುಳಸಿ ಜೊತೆಗೆ ಮನೆಗೆ ಬಂದ ಸಮರ್ಥ್
ಇನ್ನು ಮಾಧವ್ ಹಾಗೂ ತುಳಸಿ ಇಬ್ಬರೂ ದತ್ತ ತಾತನ ಮನೆಗೆ ಸಮರ್ಥ್ ಜೊತೆಗೆ ಬರುತ್ತಾರೆ. ಸಿರಿ ಬೇಕಂತಲೇ ಅಪ್ಪ, ಅಮ್ಮ, ಮಗ ಮೂವರು ಒಟ್ಟಿಗೆ ಮನೆಗೆ ಬಂದಿದ್ದೀರಾ ಎಂದು ರೇಗಿಸುತ್ತಾಳೆ. ಸಮರ್ಥ್ ಗೆ ಬೇಸರವಾಗುತ್ತದೆ. ತುಳಸಿಯನ್ನು ತಾಯಿ ಅಲ್ಲ ಎಂದು ಹೇಳುತ್ತಿದ್ದು, ಯಾವಾಗ ತನ್ನ ತಾಯಿಯನ್ನು ಒಪ್ಪಿಕೊಳ್ಳುತ್ತಾನೋ ಕಾದು ನೋಡಬೇಕಿದೆ.


Click it and Unblock the Notifications











