Srirasthu Shubhamasthu ; ಜನಾರ್ಧನ್ ಗೆ ಅಗ್ನಿಪರೀಕ್ಷೆ ತಂದ ದತ್ತ ತಾತ : ಪೂರ್ಣಿಮಾ ಯಾರ ಮಗಳು..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಜುಗ್ಗ ಮಾವ ಹಾಗೂ ಸೊಸೆ ಸಂಧ್ಯಾ ಮಾಡಿರುವ ಪ್ಲಾನ್ ಅನ್ನು ಜಾರಿಗೆ ತರುವುದೇ ಬಹಳ ಕಷ್ಟವಾಗುತ್ತಿದೆ. ಒಂದಲ್ಲಾ ಒಂದು ಅಡ್ಡಿಯಾಗುತ್ತಲೇ ಇದೆ. ಇದರಿಂದ ಸಂಧ್ಯಾಳಿಗೆ ಬೇಸರವಾಗಿದೆ. ತನ್ನ ಆಸೆಯು ಈಗಲೇ ನೆರವೇರುತ್ತಾ ಇಲ್ಲ ತಾವು ಮುದುಕರಾದ ಮೇಲೆ ನನಸಾಗುತ್ತಾ ಎಂದು ಬೇಸರ ಮಾಡಿಕೊಳ್ಳುತ್ತಾಳೆ.ತಮ್ಮ ಪ್ಲಾನ್ ಬಗ್ಗೆ ಇಬ್ಬರೂ ಮಾತನಾಡುವಾಗಲೇ ಪ್ರಸಾದ್ ಕೇಳಿಸಿಕೊಂಡಿದ್ದಾನೆ. ಈಗ ಮಾವ ಹಾಗೂ ಸೊಸೆ ಇಬ್ಬರೂ ಸೇರಿಕೊಂಡು ಪ್ರಸಾದ್ ನ ಹೇಗೆ ಸಮಾಧಾನ ಮಾಡುತ್ತಾರೋ ಗೊತ್ತಿಲ್ಲ.

ಜನಾರ್ಧನ್ ಮಾವನ ಸ್ನೇಹಿತ ದತ್ತ ತಾತ

ಇತ್ತ ಜನಾರ್ಧನ್ ಆಸ್ತಿ ವಿಚಾರವನ್ನು ಬಚ್ಚಿಟ್ಟಿದ್ದು, ಅಜ್ಜಿಯ ಒಡವೆಗಳು ಪೂರ್ಣಿಗೆ ಸೇರಬೇಕು ಎಂದು ಹೇಳಿದ್ದಾನೆ. ಲಾಯರ್ ಗೆ ಪೂರ್ಣಿಯೇ ಜನಾರ್ಧನ್ ಮಗಳು ಎಂಬ ನಂಬಿಕೆ ಬಾರದ ಕಾರಣ, ಜನಾರ್ಧನ್ ಅವರ ಮಾವ ತಮ್ಮ ಸ್ನೇಹಿತರಿಗೆ ಈ ಜವಾಬ್ದಾರಿಯನ್ನು ಕೊಟ್ಟಿದ್ದರು. ಅವರ ಸ್ನೇಹಿತ ಯಾರು ಎಂದು ವೀಕ್ಷಕರು ಗೆಸ್ ಮಾಡಿದಂತೆಯೇ ದತ್ತ ತಾತನೇ ಆಗಿದ್ದಾರೆ. ಲಾಯರ್ ಸೀದಾ ದತ್ತ ತಾತನ ಮನೆಗೆ ಆಗಮಿಸಿದ್ದು, ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾರೆ. ಪೂರ್ಣಿ ಜೊತೆಗೆ ಮಾತನಾಡಿ ಅವಳೇ ಜನಾರ್ಧನ್ ಮೊದಲ ಮಗಳು ಹೌದಾ ಅಲ್ಲವಾ ಎಂದು ಹೇಳಬೇಕು ಎಂದಿದ್ದಾರೆ. ದತ್ತ ತಾತ ಕೂಡ ಈ ಜವಾಬ್ದಾರಿಯನ್ನು ನಿಭಾಯಿಸಲು ಮುಂದಾಗಿದ್ದಾರೆ.

srirasthu shubhamasthu serial 21 May episode written update

ಮಾಧವನ ಮನೆಗೆ ಬಂದ ದತ್ತ ತಾತ

ಮಾಧವ್ ಮನೆಯಲ್ಲಿ ಜನಾರ್ಧನ್ ಹಾಗೂ ಲಾಯರ್ ಬರುತ್ತಾರೆ ಎಂದು ಎಲ್ಲರೂ ಕಾಯುತ್ತಿರುತ್ತಾರೆ. ಪೂರ್ಣಿ ಹೇಳಿದ ಮಾತುಗಳು ಮಾಧವ್ ಮತ್ತು ಅವಿ ಮನದಲ್ಲಿ ಹೊಸ ಅನುಮಾನವನ್ನು ಮೂಡಿಸಿರುತ್ತದೆ. ಜನಾರ್ಧನ್ ಬಂದವನೇ ಪೂರ್ಣಿ ಅಜ್ಜಿಯ ಒಡವೆಗಳಿವೆ. ಅದೆಲ್ಲವನ್ನೂ ಪೂರ್ಣಿ ಹೆಸರಿಗೆ ವಿಲ್ ಮಾಡಿದ್ದಾರೆ. ಆ ಲಾಕರ್ ಓಪನ್ ಮಾಡಲು ಪೂರ್ಣಿಯೇ ಆಗಬೇಕು ಅಷ್ಟೇ ಎಂದು ಹೇಳಿ ಸಿಂಪಲ್ ಆಗಿ ಯಾಮಾರಿಸುತ್ತಾನೆ. ದತ್ತ ತಾತ ಬಂದ ಮೇಲೆ ಜನಾರ್ಧನ್ ಹೇಗೆ ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗಪ್ಪ ಎಂದು ಗಾಬರಿಯಾಗುತ್ತಾನೆ. ದತ್ತ ತಾತನೇ ಜನಾರ್ಧನ್ ಮಾವನ ಸ್ನೇಹಿತ ಎಂಬುದನ್ನು ತಿಳಿದು ಮನೆಯವರೆಲ್ಲಾ ಶಾಕ್ ಆಗುತ್ತಾರೆ.

ಗರ್ಭಿಣಿಯಾದ ಸಿರಿ ಸಮರ್ಥ್ ಗೆ ಫುಲ್ ಖುಷ್

ಇನ್ನು ಸಿರಿ ಗರ್ಭಿಣಿಯಾಗಿದ್ದಾಳೆ. ಈ ವಿಚಾರವನ್ನು ಹೇಳಿಕೊಳ್ಳಲು ಮುಜುಗರ ಪಡುತ್ತಾನ=ಳೆ. ಸಮರ್ಥ್ ಬಳಿ ಹೋಗಿ ತಾನು ಗರ್ಭಿಣಿ ಆಗಿರುವ ವಿಚಾರವನ್ನು ಹೇಳುತ್ತಾಳೆ. ಸಮರ್ಥ್ ಗಂತೂ ಈ ವಿಚಾರವನ್ನು ಕೇಳಿ ಫುಲ್ ಹ್ಯಾಪಿ ಆಗಿ ಫೀಲ್ ಆಗುತ್ತಾನೆ. ಆದರೆ, ಸಿರಿಗೆ ಖುಷಿ ಇರುವುದಿಲ್ಲ. ಸದ್ಯ ಮನೆಯ ಪರೀಸ್ಥಿತಿ ಕಷ್ಟವಾಗಿದೆ. ಮನೆ ತುಂಬಾ ಜನರಿದ್ದು, ಅವರನ್ನೆಲ್ಲಾ ಮ್ಯಾನೇಜ್ ಮಾಡಲು ಸಾಧ್ಯವಾಗುತ್ತಿಲ್ಲ. ಇಂತಹ ಸಂಧರ್ಭದಲ್ಲಿ ಈ ಮಗು ಬೇಕಾ ಎಂದು ಪ್ರಶ್ನಿಸುತ್ತಾಳೆ. ಆದರೆ, ಸಮರ್ಥ್ ಸಿರಿಗೆ ಬುದ್ಧಿ ಹೇಳುತ್ತಾನೆ.

srirasthu shubhamasthu serial 21 May episode written update

ದತ್ತ ತಾತನ ಪ್ರಶ್ನೆಗೆ ತಬ್ಬಿಬ್ಬಾದ ಜನಾರ್ಧನ್

ದತ್ತ ತಾತ ಪೂರ್ಣಿ ಅನಾಥ ಹುಡುಗಿ ಎಂಬುದನ್ನು ತಿಳಿದಿದ್ದ ನೀನು ಈಗ ಆಸ್ತಿಗೋಸ್ಕರ ಇವಳೇ ನಿನ್ನ ಮಗಳು ಎಂದು ಹೇಗೆ ಹೇಳುತ್ತೀಯಾ. ಅಷ್ಟೇ ಅಲ್ಲದೇ, ನಿನ್ನ ಮಗಳಿಗೆ ಮಚ್ಚೆ ಏನಾದರೂ ಇತ್ತೇ. ನನಗೆ ಈ ವಿಚಾರದಲ್ಲಿ ನಂಬಿಕೆ ಬಾರದಿದ್ದರೆ, ನಾನು ಡಿಎನ್ ಎ ಟೆಸ್ಟ್ ಮಾಡಿಸುತ್ತೇನೆ. ನಿನ್ನ ಮಗಳು ಎಂಬುದಕ್ಕೆ ಸಾಕ್ಷಿ ಏನು ಎಂದು ಕೇಳುತ್ತಾರೆ. ಆಗ ಜನಾರ್ಧನ್ ಅನಾಥಶ್ರಮದಲ್ಲಿದ್ದ ಕನಕ ಎಂಬಾಕೆಯನ್ನು ಕರೆದುಕೊಂಡು ಬಂದಿದ್ದೀನಿ. ಅವಳಿಗೆ ನಾನು ನನ್ನ ಮಗುವನ್ನು ಕೊಟ್ಟು ಬಂದಿದ್ದು ಎಂದು ಹೇಳುತ್ತಾನೆ.

More from Filmibeat

English summary
Janardhan needs to face big exam in front of datha thatha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X