Srirasthu Shubhamasthu ; ಪೂರ್ಣಿಮಾಳಿಗೆ ತೊಂದರೆ ಕೊಟ್ಟ ದೀಪಿಕಾ : ಜುಗ್ಗನ ಸೊಂಟಕ್ಕೆ ಆಪತ್ತು ತಂದ ಗೋವಿಂದಾ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಾಧವ್ ಕುಟುಂಬವನ್ನು ಒಡೆಯಬೇಕು ಎಂದು ಶಾರ್ವರಿ ಸಾಕಷ್ಟು ಪ್ರಯತ್ನವನ್ನು ಪಟ್ಟಿದ್ದು, ಸೋಲುತ್ತಲೇ ಇದ್ದಾಳೆ. ಶಾರ್ವರಿ ಜೊತೆ ಸೇರಿ ದೀಪಿಕಾ ಕೂಡ ಅಭಿಯನ್ನು ಕರೆದುಕೊಂಡು ಮನೆಯಿಂದ ಹೊರಗೆ ಹೋಗಬೇಕು. ಆಗಲಾದರೂ ಮಾಧವ್ ಕುಟುಂಬ ಇಬ್ಬಾಗವಾಗುತ್ತದೆ ಎಂದು ಯತ್ನಿಸುತ್ತಿದ್ದಾಳೆ. ಇದಕ್ಕಾಗಿ ಪದೇ ಪದೇ ಪೂರ್ಣಿಮಾ ಮೇಲೆ ಒಂದಲ್ಲ ಒಂದು ಸಮಸ್ಯೆ ಅನ್ನು ತಂದೊಡ್ಡುತ್ತಿದ್ದಾಳೆ. ಪೂರ್ಣಿಮಾ ಏನು ತಪ್ಪು ಮಾಡದಿದ್ದರೂ ಅವಳ ಮೇಲೆ ಆರೋಪ ಬರುತ್ತಲೇ ಇದೆ.

ದಿನಕ್ಕೊಂದು ಕಿತಾಪತಿ ಮಾಡುತ್ತಿರುವ ದೀಪಿಕಾ

ಈ ಹಿಂದೆ ತನ್ನ ಸೀರೆಯನ್ನು ತಾನೇ ಸುಟ್ಟು, ಕೊನೆಗೆ ಪೂರ್ಣಿಮಾ ಮೇಲೆ ಹಾಕಿದ್ದಳು. ಇದರಿಂದ ಅಭಿ ಮತ್ತು ಅವಿ ಇಬ್ಬರೂ ಕೂಡ ಪೂರ್ಣಿಮಾಳನ್ನೇ ಬೈದಿದ್ದರು. ಇದೀಗ ಮತ್ತೆ ದೀಪಿಕಾ ಅಡುಗೆ ಮನೆಗೆ ಬಂದು ಹಾಲು ಬೇಕು ಎಂದು ಕೇಳಿದ್ದಾಳೆ. ಪೂರ್ಣಿಮಾ ಕೊಡುವುದಿಲ್ಲ. ಕೊಟ್ಟರೆ ಅದಕ್ಕೆ ನೀನು ನಿಂಬೆ ಹುಳಿ ಹಿಂಡಿ ಹಾಳು ಮಾಡುತ್ತೀಯಾ ಎನ್ನುತ್ತಾಳೆ. ದೀಪಿಕಾ ಅವಿ ನಿಮ್ಮನ್ನು ಕರೆಯುತ್ತಿದ್ದರು ಎಂದು ಸುಳ್ಳು ಹೇಳಿ ಅಡುಗೆ ಕೋಣೆಯಿಂದ ಹೊರಗೆ ಹೋಗುತ್ತಾಳೆ. ದೀಪಿಕಾ ಬೇಕಂತಲೇ ಗ್ಯಾಸ್ ಆನ್ ಮಾಡಿ ಲೀಕ್ ಆಗಲು ಬಿಡುತ್ತಾಳೆ. ಸ್ವಲ್ಪ ಸಮಯದ ಬಳಿಕ ಅಭಿಯನ್ನು ಗಾಬರಿಯಿಂದ ಕರೆಯುತ್ತಾಳೆ. ಈ ಮನೆಯಲ್ಲಿ ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸುತ್ತಾಳೆ. ಆಗ ಅಭಿ ಕೋಪ ಮಾಡಿಕೊಂಡು ಪೂರ್ಣಿಮಾ ಮೇಲೆ ಕೂಗಾಡುತ್ತಾಳೆ.

srirasthu-shubhamasthu-serial-22-july-episode-written-update


ಪೂರ್ಣಿಮಾ ಮನಸ್ಸಿಗೆ ಬೇಸರ

ಪೂರ್ಣಿಮಾ ತಾನು ಗ್ಯಾಸ್ ಲೀಕ್ ಮಾಡಲಿಲ್ಲ. ತನಗೇನು ಗೊತ್ತಿಲ್ಲ ಎಂದರೂ ಅಭಿ ನಂಬುವುದಿಲ್ಲ. ಆಗ ಅವಿ ಕೂಡ ಪೂರ್ಣಿಮಾಳನ್ನು ಅನುಮಾನಿಸುತ್ತಾನೆ. ಇದರಿಂದ ಪೂರ್ಣಿ ಬೇಸರ ಮಾಡಿಕೊಳ್ಳುತ್ತಾಳೆ. ಅವಿ ಬಳಿ ಪೂರ್ಣಿಮಾ ಕಣ್ಣಿರು ಹಾಕುತ್ತಾ ತನ್ನದೇನು ತಪ್ಪಿಲ್ಲ ಎಂದಾಗ ಅವಿ ದೀಪಿಕಾಳನ್ನು ಮತ್ತೆ ಪ್ರಶ್ನೆ ಮಾಡಲು ಮುಂದಾಗುತ್ತಾನೆ. ದೀಪಿಕಾ ಸಿಕ್ಕಿದ್ದೇ ಅವಕಾಶ ಎಂದು ಹೇಳಿ ಮತ್ತೆ ಅಭಿಯನ್ನು ಕರೆದು ದೂರುತ್ತಾಳೆ. ಆಗ ಅಭಿ ನಾವು ಈ ಮನೆಯಲ್ಲಿ ಇರುವುದು ಬೇಡ ಎಂದರೆ ಹೇಳಿ, ನಮ್ಮ ಪಾಡಿಗೆ ನಾವು ಹೋಗುತ್ತೇವೆ. ಅದು ಬಿಟ್ಟು ಹೀಗೆಲ್ಲಾ ಮಾಡಬೇಡಿ ಎಂದು ಕೂಗಾಡುತ್ತಾನೆ. ಅವಿಗೆ ಏನು ಹೇಳಬೇಕು ಎಂಬುದೇ ಗೊತ್ತಾಗುವುದಿಲ್ಲ.

ಸಮರ್ಥ್ ಗೆ ಯಾವುದೇ ದಾರಿ ಕಾಣುತ್ತಿಲ್ಲ

ಇತ್ತ ಸಮರ್ಥ್ ಅವಿ ಮತ್ತು ಪೂರ್ಣಿಮಾ ತನ್ನನ್ನು ಮನೆಯವರಂತೆ ನೋಡಿಕೊಂಡಿದ್ದಕ್ಕೆ ಗೊಂದಲಕ್ಕೊಳಗಾಗಿರುತ್ತಾನೆ. ಏನು ಮಾಡುವುದು ಎಂಬುದು ತಿಳಿಯದೆಯೇ ಅರ್ಧ ದಿನಕ್ಕೆ ರಜೆ ತೆಗೆದುಕೊಂಡು ಮನೆಗೆ ಬರುತ್ತಾನೆ. ದತ್ತ ತಾತ ಇದೇ ವೇಳೆಗೆ ಟ್ಯಾಪ್ ನಲ್ಲಿ ನೀರು ಬರುತ್ತಿಲ್ಲ. ಪ್ಲಂಬರ್ ಅನ್ನು ಕರೆಸು ಎನ್ನುತ್ತಾನೆ. ಸಮರ್ಥ್ ಕರೆಸಲು ಮುಂದಾದಾಗ ಅದಕ್ಕೆಲ್ಲಾ ಸುಮ್ಮನೆ ಹಣ ಯಾಕೆ ಖರ್ಚು ಮಾಡುತ್ತೀರಾ. ನಾನೇ ಇದ್ದೀನಲ್ಲ ಎಂದು ಜುಗ್ಗ ಜನಾರ್ಧನಾ ತಾನೇ ಪೈಪ್ ಕ್ಲೀನ್ ಮಾಡುತ್ತೇನೆ ಎನ್ನುತ್ತಾನೆ.

srirasthu-shubhamasthu-serial-22-july-episode-written-update

ಏನೋ ಮಾಡಲು ಹೋಗಿ..

ಟ್ಯಾಂಕ್ ನೋಡುವುದಕ್ಕೆ ಏಣಿ ಹತ್ತುತ್ತಾನೆ. ಈ ವೇಳೆ ಸುಮ್ಮನಿರದ ಸಂಧ್ಯಾ ತಿರುಪತಿ ತಿಮ್ಮಪ್ಪನನ್ನು ನೆನಪಿಸಿದ್ದಾಳೆ. ಜುಗ್ಗ ಕೂಡ ಮೈಮರೆತು ಗೋವಿಂದ ಎನ್ನುತ್ತಾ ಕೈ ಬಿಟ್ಟು ನೆಲಕ್ಕೆ ಉರುಳಿ ಬೀಳುತ್ತಾನೆ. ಸೊಂಟ ಹಿಡಿದುಕೊಂಡಿದ್ದು ಕೂಗಾಡುತ್ತಾನೆ. ದುಡ್ಡು ಉಳಿಸುವ ನೆಪದಲ್ಲಿ ಈಗ ದತ್ತ ತಾತನಿಗೆ ಆಸ್ಪತ್ರೆಯ ಖರ್ಚನ್ನು ತಂದೊಡ್ಡಿದ್ದಾನೆ. ಸಮರ್ಥ್ ಜುಗ್ಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ವೈದ್ಯರು ಏನು ಹೇಳುತ್ತಾರೋ ಗೊತ್ತಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X