Srirasthu Shubhamasthu ; ಕೊನೆಗೂ ತುಳಸಿಯನ್ನು ತಮ್ಮ ಮನೆಯವರು ಎಂದು ಒಪ್ಪಿಕೊಂಡ ಅಭಿ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಬಹಳ ಮುಖ್ಯವಾದ ಪಾತ್ರ ಎಂದರೆ ಅದು ದತ್ತ ತಾತ. ದತ್ತ ತಾತನ ಹಾಸ್ಯ ಮತ್ತು ಡೈಲಾಗ್ ಗಳನ್ನು ನೋಡಲೆಂದೇ ಹಲವರು ಸೀರಿಯಲ್ ನೋಡುತ್ತಾರೆ. ದತ್ತ ತಾತ ತಮಾಷೆ ಮಾಡುವುದರ ಜೊತೆಗೆ ಎಲ್ಲರಿಗೂ ಬುದ್ಧಿ ಹೇಳುತ್ತಾರೆ. ಜೀವನಕ್ಕೆ ಬೇಕಾಗಿರುವಂತಹ ಪಾಠವನ್ನೂ ಮಾಡುತ್ತಾರೆ. ಬುದ್ಧಿ ಹೇಳುವುದನ್ನು ಕೂಡ ನಯವಾಗಿ ಹೇಳುವುದರಿಂದ ಎಲ್ಲರೂ ದತ್ತ ತಾತನ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ತುಳಸಿ ಮಾಧವ್ ನನ್ನು ಮದುವೆಯಾಗುವುದಕ್ಕೂ ಮುನ್ನ ದತ್ತ ತಾತನ ಸೀನ್ ಗಳು ಹೆಚ್ಚಾಗಿರುತ್ತಿತ್ತು. ಆದರೆ, ಈಗ ಕಡಿಮೆಯಾಗಿದ್ದು, ವೀಕ್ಷಕರಿಗೂ ಬೇಸರವಾಗಿದೆ.

ತಾತನಿಗೆ ಜೋಡಿ ಬಂದಾಯ್ತು..!

ವೀಕ್ಷಕರಿಗೆ ನಿರಾಸೆಯಾಗಬಾರದು ಎಂಬ ಕಾರಣಕ್ಕೆ ಈಗ ದತ್ತ ತಾತನಿಗೆ ಜೋಡಿಯಾಗಿ ಅಜ್ಜಿ ಒಬ್ಬರ ಎಂಟ್ರಿಯಾಗಿದೆ. ದತ್ತ ತಾತ ವಾಕಿಂಗ್ ಮಾಡುವಾಗ ಸಿಕ್ಕ ಈ ಅಜ್ಜಿ ತಾತನೊಂದಿಗೆ ಜಗಳವಾಡುತ್ತಲೇ ಗೆಳೆತನವನ್ನು ಬೆಳೆಸಿಕೊಂಡಿದ್ದಾರೆ. ದತ್ತ ತಾತನಿಗೂ ಅಜ್ಜಿ ಇಷ್ಟವಾಗಿದ್ದಾರೆ. ಅಜ್ಜಿ ಮಕ್ಕಳಿಂದ ದೂರ ಇದ್ದು, ಒಬ್ಬಂಟಿಯಾಗಿ ಜೀವಿಸುತ್ತಿದ್ದಾರೆ. ದತ್ತ ತಾತನಿಗೆ ಅಜ್ಜಿಯ ಮೇಲೆ ಕನಿಕರ ಮೂಡಿದೆ. ಮುಂದೆ ಧಾರಾವಾಹಿಯಲ್ಲಿ ಅಜ್ಜಿ ಹಾಗೂ ದತ್ತ ತಾತ ಒಂದಾಗುತ್ತಾರಾ..? ಅಥವಾ ಪಾರ್ಕ್ ನಲ್ಲಿ ವಾಕ್ ಮಾಡುವ ಸ್ನೇಹಿತರಾಗಿಯೇ ಉಳಿಯುತ್ತಾರಾ ಎಂಬುದು ಗೊತ್ತಿಲ್ಲ. ಆದರೆ, ವೀಕ್ಷಕರು ಮಾತ್ರ ಈ ಎರಡೂ ಜೋಡಿಯನ್ನು ಒಪ್ಪಿಕೊಂಡಿದ್ದಾರೆ.

srirasthu shubhamasthu serial 23 February episode written update

ಮಗನಿಗೆ ಬುದ್ಧಿ ಹೇಳಿದ ಮಾಧವ

ಇತ್ತ ತುಳಸಿ ಮನೆಯಲ್ಲಿ ಒಂದಾದ ಮೇಲೆ ಒಂದರಂತೆ ಸಮಸ್ಯೆಗಳು ಎದುರಾಗುತ್ತಲೇ ಇವೆ. ಪೂರ್ಣಿ ಕುಡಿದ ಔಷಧಿಯಲ್ಲಿ ಸಮಸ್ಯೆ ಆಗಿದ್ದಲ್ಲದೇ, ಈಗ ವಂಶವೃಕ್ಷದ ತಲೆ ನೋವು ಶುರುವಾಗಿದೆ. ಮಾಧವ ನ ಹೆಸರಲ್ಲಿ ಇರುವ ಜಾಗವೊಂದನ್ನು ಮಾರಾಟ ಮಾಡಬೇಕು ಎಂದು ಅವಿ ಹಾಗೂ ಅಭಿ ಪ್ಲಾನ್ ಮಾಡಿದ್ದಾರೆ. ಸುಮಾರು ನಾಲ್ಕೂವರೆ ಕೋಟಿ ರೂಪಾಯಿವರೆಗೂ ಆ ಜಾಗಕ್ಕೆ ಬೆಲೆ ಇದೆ. ಇದು ಮಾರಾಟವಾದ ಬಳಿಕ ಆ ಹಣದಲ್ಲಿ ಖರೀದಿಸುವ ಬೇರೆ ಜಾಗ ತನ್ನ ಹೆಸರಿನಲ್ಲಿರಬೇಕು ಎಂದು ಶಾರ್ವರಿ ಲೆಕ್ಕಾಚಾರ ಹಾಕಿದ್ದಾಳೆ.

ಆದರೆ ಇತ್ತ ದೀಪಿಕಾ ಕೂಡ ಇದೇ ಪ್ಲಾನ್ ಮಾಡಿಕೊಂಡಿದ್ದಾಳೆ. ಆಸ್ತಿ ಮಾರುವ ಮುನ್ನವೇ ಸಮಸ್ಯೆ ಒಂದು ಎದುರಾಗಿದೆ. ಅದೇನೆಂದರೆ, ಮಾಧವ ಹೆಸರಲ್ಲಿ ಇರುವ ಜಾಗವನ್ನು ಮಾರಾಟ ಮಾಡಲು ಈಗ ವಂಶವೃಕ್ಷವನ್ನು ಮಾಡಿಸಬೇಕಿದೆ. ಅದರಲ್ಲಿ ತುಳಸಿಯ ಹೆಸರನ್ನು ಸೇರಿಸಬೇಕಿದೆ. ಆದರೆ, ಇದಕ್ಕೆ ಅಭಿ ಸುತಾರಾಂ ಒಪ್ಪುತ್ತಿಲ್ಲ. ಅವರ ಹೆಸರು ಇಲ್ಲದೇ, ವಂಶವೃಕ್ಷವನ್ನು ತಯಾರಿಸಬೇಕು ಎಂದು ಹಠ ಹಿಡಿದಿದ್ದಾನೆ. ಮಾಧವ ಇದಕ್ಕೆ ಒಪ್ಪದೇ, ಅವಳು ನನ್ನ ಹೆಂಡತಿ ಅವಳ ಹೆಸರನ್ನು ವಂಶವೃಕ್ಷಕ್ಕೆ ಸೇರಿಸಬೇಕು ಎಂದು ತೀರ್ಮಾನಿಸಿದ್ದು, ಅಭಿಗೆ ಬುದ್ಧಿ ಹೇಳುತ್ತಾನೆ.

srirasthu shubhamasthu serial 23 February episode written update

ತುಳಸಿಯನ್ನು ಒಪ್ಪಿಕೊಂಡ ಅಭಿ..!

ಮಹೇಶ್ ಕೂಡ ಅಭಿಗೆ ಅರ್ಥ ಮಾಡಿಸುತ್ತಾನೆ. ತುಳಸಿ ಅತ್ತಿಗೆ ಬಹಳ ಒಳ್ಳೆಯವರು ಅವರ ಬಗ್ಗೆ ಯಾಕೆ ಹಾಗೆಲ್ಲಾ ಯೋಚಿಸುತ್ತೀಯಾ ಎಂದು ಬುದ್ಧಿ ಹೇಳುತ್ತಾರೆ. ಆಗ ಅಭಿ ನಂಬಿಕೆಯ ಪ್ರಶ್ನೆ ಬಂದರೆ ನಾನು, ಮಾಧವ ಗಿಂತಲೂ ನಾನು ತುಳಸಿ ಅವರನ್ನು ನಂಬುತ್ತೇನೆ ಎಂದು ಹೇಳುತ್ತಾನೆ. ವಂಶವೃಕ್ಷಕ್ಕೆ ತುಳಸಿ ಹೆಸರನ್ನು ಸೇರಿಸಲು ಇದ್ದ ಸಮಸ್ಯೆ ಈಗ ಪರಿಹಾರವಾಗಿದೆ.

srirasthu shubhamasthu serial 23 February episode written update

ಹೊಸ ಸವಾಲನ್ನು ಎದುರಿಸುತ್ತಾಳಾ ತುಳಸಿ..?

ಆದರೆ, ಈಗ ತುಳಸಿ ಹೆಸರಿನ ಜೊತೆಗೆ ಸಂಧ್ಯಾ ಮತ್ತು ಸಮರ್ಥ್ ಹೆಸರನ್ನೂ ಕೂಡ ಸೇರಿಸಬೇಕು ಎಂದು ವಕೀಲರು ಹೇಳಿದ್ದಾರೆ. ಈ ಮಾತಿನಿಂದ ಅಭಿಗೆ ಕೋಪ ಬಂದಿದೆ. ತುಳಸಿಯೂ ಕೂಡ ತನಗೆ ಇದು ಇಷ್ಟವಿಲ್ಲ. ನನ್ನ ಮಕ್ಕಳ ಹೆಸರನ್ನು ಸೇರಿಸುವುದು ಸರಿಯಲ್ಲ ಎಂದು ಹೇಳುತ್ತಾಳೆ. ಆದರೆ, ಮಾಧವ ಇಲ್ಲ ನೀವು ನನ್ನ ಹೆಂಡತಿ ಎಂದ ಮೇಲೆ ನಿಮ್ಮ ಮಕ್ಕಳ ಹೆಸರು ಸೇರುವುದರಲ್ಲಿ ತಪ್ಪಿಲ್ಲ. ಅವರಿಗೆ ಆಸ್ತಿಯಲ್ಲೂ ಪಾಲು ಕೊಡುವುದು ಸರಿ ಎಂದು ಹೇಳಿದ್ದಾರೆ. ಈಗ ಈ ಸವಾಲನ್ನು ತುಳಸಿ ಹೇಗೆ ಎದುರಿಸುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
abhi finally accepts to add tulasi name in family tree.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X