Srirasthu Shubhamasthu ; ಮೋಸದ ಅಪ್ಪ ಅಮ್ಮ ಬೇಡ ಎಂದ ಪೂರ್ಣಿ : ಹೊಸ ನಾಟಕಕ್ಕೆ ನಾಂದಿ ಹಾಡಿದ ದೀಪಿಕಾ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ದತ್ತ ತಾತ ಮಾಧವನ ಮನೆಯಲ್ಲಿ ನ್ಯಾಯ ಪಂಚಾಯ್ತಿ ಮಾಡುತ್ತಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ತನ್ನ ಮನೆಯಲ್ಲೇ ಸಮಸ್ಯೆ ಆಗಿದೆ. ಸಂಧ್ಯಾ ಮತ್ತು ಜುಗ್ಗ ಸೇರಿ ಈಗಾಗಲೇ ದತ್ತ ತಾತನ ಹೆಸರಲ್ಲಿ ಮರಣ ಪ್ರಮಾಣ ಪತ್ರವನ್ನು ಮಾಡಿಸಿದ್ದು, ಮುಂದಿನ ಕೆಲಗಳನ್ನು ಹೇಗೆ ಮಾಡುವುದು ಎಂದು ಯೋಚಿಸುತ್ತಿದ್ದಾರೆ. ಅಪ್ಪ ಹಾಗೂ ಹೆಂಡತಿ ಸೇರಿಕೊಂಡು ಏನೋ ತರ್ಲೆ ಮಾಡುತ್ತಿದ್ದಾರೆ ಎಂಬ ಅರಿವಿದ್ದ ಪ್ರಸಾದ್ ಆಗಾಗ ಇವರ ಮಾತುಗಳನ್ನು ಕದ್ದು ಕೇಳುತ್ತಿದ್ದರು. ಆದರೆ ಈಗ ಸತ್ಯ ಕೇಳಿ ಪ್ರಸಾದ್ ಗೆ ಶಾಕ್ ಆಗಿದೆ.
ಅಪ್ಪನ ಮೋಸದಾಟಕ್ಕೆ ಬೇಸತ್ತ ಪ್ರಸಾದ್
ಇಬ್ಬರ ಮಾತುಗಳನ್ನು ಕೇಳಿ ದಂಗಾದ ಪ್ರಸಾದ್ ಮೊದಲ ಬಾರಿಗೆ ಧ್ವನಿ ಎತ್ತರಿಸಿ ಮಾತನಾಡಿದ್ದಾನೆ. ಉಳಿದು ಕೊಳ್ಳಲು ಜಾಗಕೊಟ್ಟಿರುವುದಲ್ಲದೇ, ಹೊಟ್ಟೆ ತುಂಬಾ ಊಟ ಹಾಕುತ್ತಿರುವ ಅವರ ಜೀವಕ್ಕೆ ಆಪತ್ತನ್ನು ತಂದಿದ್ದೀರಾ ಎಂದು ಬೈಯುತ್ತಾನೆ. ಆಗ ಜುಗ್ಗ ಇಲ್ಲ ಅವರು ಇನ್ನಿಲ್ಲ ಎಂದು ಹೇಳಿ ಡೆತ್ ಸರ್ಟಿಫಿಕೇಟ್ ಮಾಡಿಸಿದ್ದೀವಿ ಅಷ್ಟೇ. ಇವತ್ತಲ್ಲ ನಾಳೆ ಈ ಮನೆ ಸಂಧ್ಯಾಗೆ ಸೇರಬೇಕು. ಇನ್ಯಾವತ್ತೋ ಬರುವವರೆಗೂ ಕಾಯುವುದಕ್ಕಿಂತ ಈಗಲೇ ಮನೆಯನ್ನು ಸಂಧ್ಯಾ ಹೆಸರಿಗೆ ಮಾಡಿ ಲೋನ್ ತೆಗೆದುಕೊಳ್ಳೋಣ ಅಂತ ಇದ್ದೀವಿ ಅಷ್ಟೇ ಎಂದು ಹೇಳುತ್ತಾನೆ. ಅದಕ್ಕೆ ಪ್ರಸಾದ್ ಇದನ್ನು ಇಲ್ಲಿಗೆ ನಿಲ್ಲಿಸಿ ಎಂದು ವಾರ್ನಿಂಗ್ ಕೊಡುತ್ತಾನೆ.

ಅಪ್ಪ ಅಮ್ಮ ಬೇಡವೇ ಬೇಡ ಎಂದ ಪೂರ್ಣಿ
ಆಸ್ತಿಗೋಸ್ಕರ ಪೂರ್ಣಿಮಾಳನ್ನು ಮಗಳು ಎಂದು ಜನಾರ್ಧನ್ ಹೇಳಿದ ಮಾತನ್ನು ಒಪ್ಪಿಕೊಳ್ಳುತ್ತಾನೆ. ದತ್ತ ತಾತ ಇದು ತಪ್ಪು ಎಂದು ಹೇಳಿದ್ದಕ್ಕೆ, ಜನಾರ್ಧನ್ ವಾದ ಮಾಡುತ್ತಾನೆ. ಪೂರ್ಣಿಮಾಳಿಗೆ ಹಣ ಕೊಡುತ್ತೇನೆ. ಅಪ್ಪನಾಗಿರುತ್ತೇನೆ. ಜೊತೆಗೆ ಅವಳಿಗೆ ಅಮ್ಮ ಸಿಗುತ್ತಾರೆ. ಒಪ್ಪಿಕೊಂಡರೆ ಆಸ್ತಿ ಎಲ್ಲಾ ಅನಾಥಾಶ್ರಮಕ್ಕೆ ಹೋಗುವ ಬದಲು ನಮಗೆ ಉಳಿಯಲಿ ಎಂದು ಜನಾರ್ಧನ್ ಹೇಳುತ್ತಾನೆ. ಆದರೆ, ಈ ಮಾತು ಯಾರಿಗೂ ಇಷ್ಟವಾಗುವುದಿಲ್ಲ. ಮನೆಯವರೆಲ್ಲರೂ ಜನಾರ್ಧನ್ ಮಾತನ್ನು ವಿರೋಧಿಸುತ್ತಾರೆ. ಪೂರ್ಣಿ ಕೂಡ ಜನಾರ್ಧನ್ ನ ಅಪ್ಪ ಎಂದು ಒಪ್ಪಿಕೊಳ್ಳುವುದಿಲ್ಲ.
ಅವಮಾನಕ್ಕೊಳಗಾದ ಜನಾರ್ಧನ್
ಜನಾರ್ಧನ್ ಗೆ ಅವಮಾನವಾಗುತ್ತದೆ. ಮಾಧವ್ ಬೇರೆ ಕೋಪದಲ್ಲಿ ಕೆನ್ನೆಗೆ ಹೊಡೆಯುತ್ತಾನೆ. ಜನಾರ್ಧನ್ ಅನ್ನು ಮನೆಯಿಂದ ಹೊರಗೆ ಹೋಗುವಂತೆ ಹೇಳುತ್ತಾನೆ. ಪೂರ್ಣಿಗೆ ಬುದ್ಧಿ ಇಲ್ಲ ಎಂದು ಜನಾರ್ಧನ್ ಹೇಳಿದಾಗ ಅವಿ ಜನಾರ್ಧನ್ ಮೇಲೆ ಕೂಗಾಡುತ್ತಾನೆ. ಮೊದಲು ಇಲ್ಲಿಂದ ತೊಲಗಿ ಎನ್ನುತ್ತಾನೆ. ಆಗ ಜನಾರ್ಧನ್ ಮಗಳು ದೀಪಿಕಾ ಸಹಾಯ ತೆಗೆದುಕೊಳ್ಳಲು ಯತ್ನಿಸುತ್ತಾನೆ. ದೀಪಿಕಾ ಕೂಡ ಅಪ್ಪನದ್ದೇ ತಪ್ಪು ಎಂದು ಬೈದು ಕಳಿಸುತ್ತಾಳೆ. ಜನಾರ್ಧನ್ ಹೊರಟು ಬಿಡುತ್ತಾನೆ.

ಅಪ್ಪನನ್ನು ಓಲೈಸಿದ ಮಗಳು ದೀಪಿಕಾ
ಸ್ವಲ್ಪ ಸಮಯ ಕಳೆದ ಮೇಲೆ ದೀಪಿಕಾ ಅಪ್ಪನಿಗೆ ಫೋನ್ ಮಾಡುತ್ತಾಳೆ. ಎಲ್ಲರ ಮುಂದೆ ನಾನು ಮಾಡಿದ್ದು ನಾಟಕ. ನಾನು ಇಲ್ಲಿದ್ದುಕೊಂಡೇ ಅವರಿಗೆಲ್ಲಾ ಪಾಠ ಕಲಿಸುತ್ತೇನೆ ಎಂದು ಅಪ್ಪನನ್ನು ಓಲೈಸುತ್ತಾಳೆ. ಬಳಿಕ ಅಪ್ಪನ ತಪ್ಪಿಲ್ಲ. ಆಸ್ತಿ ಉಳಿಯುವುದು ಮುಖ್ಯ ಅಲ್ವಾ ಎಂದು ಅಭಿ ಬ್ರೈನ್ ವಾಶ್ ಮಾಡುತ್ತಾಳೆ. ಅಭಿ ಕೂಡ ದೀಪಿಕಾ ಮಾತನ್ನು ನಂಬುತ್ತಾನೆ. ಜನಾರ್ಧನ್ ಗೆ ತನ್ನ ಸಪೋಟ್ ಇರುವುದಾಗಿ ಹೇಳುತ್ತಾನೆ. ಇನ್ನು ದೀಪಿಕಾ ಪೂರ್ಣಿಮಾ ಒಬ್ಬಳೇ ಇರುವಾಗ ಮತ್ತೆ ಹಂಗಿಸುತ್ತಾಳೆ. ನೀನು ಅನಾಥೆ, ನಿನ್ನ ಯೋಗ್ಯತೆ ಇಷ್ಟೇ ಎಂದು ಹೀಯಾಳಿಸುತ್ತಾಳೆ. ಪೂರ್ಣಿಗೆ ದೀಪಿಕಾ ಮಾತುಗಳು ಹಿಂಸೆ ಆಗುತ್ತದೆ.


Click it and Unblock the Notifications











