Srirasthu Shubhamasthu;ನಿಧಿ ಮದುವೆ ಮುರಿದು ಬೀಳಲು ಕಾರಣವಾದಳಾ ತುಳಸಿ..?!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿ ಗರ್ಭಿಣಿಯಾಗಿರುವ ವಿಚಾರ ಈಗ ಮನೆಯವರಿಗೆಲ್ಲಾ ಗೊತ್ತಾಗಿದೆ. ಸಮರ್ಥ್ ತಾಯಿ ಆರೋಗ್ಯವಾಗಿದ್ದರೆ ಸಾಕು ಎಂಬ ಕಾರಣಕ್ಕೆ ತಾಯಿಯ ನಿರ್ಧಾರವನ್ನು ಒಪ್ಪಿದ್ದಾನೆ. ಇನ್ನುಳಿದಂತೆ ಪೂರ್ಣಿ, ಅವಿ, ಮಾಧವ್ ಎಲ್ಲರೂ ಈ ಮಗುವಿನಿಂದ ಮನೆಗೆ ಒಳಿತಾಗುತ್ತದೆ ಎಂದು ಭಾವಿಸಿದ್ದಾರೆ. ಮಹೇಶನಿಗೆ ಅಣ್ಣ-ಅತ್ತಿಗೆಯ ನಿರ್ಧಾರದ ಬಗ್ಗೆ ಯಾವುದೇ ತಕರಾರಿರದ ಕಾರಣ ಈ ಬೆಳೆವಣಿಗೆಯಲ್ಲಿ ಸಂತಸವನ್ನೆ ತೋರಿದ್ದಾನೆ.ಇತ್ತ ಸಿರಿ ಮತ್ತು ಸಂಧ್ಯಾ ಕೂಡ ಈ ವಯಸ್ಸಲ್ಲಿ ಅಮ್ಮ ಗರ್ಭಿಣಿಯಾಗಿದ್ದಾಳೆ ಎಂದು ಬೇಸರ ಮಾಡಿಕೊಳ್ಳದೇ, ಈ ವಯಸ್ಸಿನಲ್ಲೂ ಅಮ್ಮನಿಗೆ ಒಂದು ಜೀವಕ್ಕೆ ಜನ್ಮ ಕೊಡುವ ಸಾಮರ್ಥ್ಯವಿದೆ ಎಂದು ಖುಷಿಪಟ್ಟಿದ್ದಾರೆ.

ಆತಂಕ ವ್ಯಕ್ತಪಡಿಸಿದ ತುಳಸಿ

ಆದರೆ, ದೀಪಿಕಾ ಮತ್ತು ಶಾರ್ವರಿ ತುಳಸಿಯ ಈ ಪರಿಸ್ಥಿತಿಯನ್ನು ಒಪ್ಪಿಕೊಂಡಿಲ್ಲ. ಹಾಗಾಗಿ ನಿಧಿಯನ್ನು ಮದುವೆಯಾಗುವ ಹುಡುಗನ ಮನೆಯವರು ಬಂದು ಲಗ್ನಪತ್ರಿಕೆ ನೀಡಬೇಕು ಅಂದುಕೊಂಡಿದ್ದಾರೆ. ಈ ವೇಳೆಗೆ ತುಳಸಿ ಅವರ ಎದುರಿಗೆ ಬರುವುದು ಬೇಡ ಎಂದು ಹೇಳಿದ್ದಾಳೆ. ಹಾಗೇನಾದರೂ ಬಂದು ತುಳಸಿ ಗರ್ಭಿಣಿ ಎಂಬ ವಿಚಾರ ಬೀಗರಿಗೆ ಗೊತ್ತಾದರೆ, ಮಗಳ ಮದುವೆ ಮುರಿದು ಬೀಳುತ್ತೆ ಎಂಬುದು ಶಾರ್ವರಿಯ ಆತಂಕ. ಇದೇ ಆತಂಕದಲ್ಲಿ ತುಳಸಿ ಕೂಡ ಇದ್ದಾಳೆ. ಶಾರ್ವರಿ ಇಷ್ಟದಂತೆ ತುಳಸಿ ತನ್ನ ಪಾಡಿಗೆ ತಾನು ರೂಮಿನಲ್ಲಿದ್ದಾಳೆ. ಆದರೆ, ಬೀಗರು ತುಳಸಿಯನ್ನು ಕೇಳಿದ್ದಕ್ಕೆ ಪೂರ್ಣಿಮಾ ಹೋಗಿ ತುಳಸಿಯನ್ನು ಕರೆದುಕೊಂಡು ಬರುತ್ತಾಳೆ. ತುಳಸಿಗೆ ಬರಲು ಇಷ್ಟವಿಲ್ಲದಿದ್ದರೂ ಕೂಡ ಅನಿವಾರ್ಯವಾಗಿ ಮನೆಯವರ ಮುಂದೆ ಕಾಣಿಸಿಕೊಳ್ಳುತ್ತಾಳೆ.

srirasthu shubhamasthu serial 23 October episode written update

ಬೇಕಂತಲೇ ಸತ್ಯ ಹೇಳಿದ ದೀಪಿಕಾ

ಬೀಗರು ಮಾಧವ್ ಮತ್ತು ತುಳಸಿಗೆ ಲಗ್ನಪತ್ರಿಕೆ ಕೊಡಲು ಮುಂದಾದಾಗ ತುಳಸಿ ಅದನ್ನು ಮಹೇಶ ಮತ್ತು ಶಾರ್ವರಿಗೆ ಕೊಡುವಂತೆ ಹೇಳಿದ್ದಾಳೆ. ಮನೆಯವರ ಬಳಿ ತಾನು ಗರ್ಭಿಣಿಯಾಗಿರುವ ಕಾರಣ ಈ ಶಾಸ್ತ್ರಗಳನ್ನು ಮಾಡಬಾರದು ಎಂದು ಅರ್ಥ ಮಾಡಿಸುತ್ತಾಳೆ. ಲಗ್ನಪತ್ರಿಕೆ ಕೊಟ್ಟ ಬಳಿಕ ಪೂರ್ಣಿಮಾ ಎಲ್ಲರಿಗೂ ತಿಂಡಿಯನ್ನು ತಂದುಕೊಡುತ್ತಾಳೆ. ಈ ವೇಳೆ ತುಳಸಿ ಕೂಡ ತಿಂಡಿ ತರುವಾಗ ತಲೆ ಸುತ್ತು ಬರುತ್ತದೆ. ಇದನ್ನು ಮನೆಯವರೆಲ್ಲಾ ಗಮನಿಸಿ ಗಾಬರಿಯಾಗುತ್ತಾರೆ. ಪೂರ್ಣಿಮಾ ತುಲಸಿಗೆ ಯಾಕೆ ಕೆಲಸ ಮಾಡಲು ಬಂದ್ರಿ ಎಂದು ಸಮಾಧಾನದಿಂದ ಮಾತನಾಡಲು ಯತ್ನಿಸಿದರೆ, ದೀಪಿಕಾ ಪ್ರೆಗ್ನೆಂಟ್ ಆಗಿರುವ ಮನೆ ಕೆಲಸ ಮಾಡುವ ಅಗತ್ಯವೇನಿತ್ತು. ಈ ಸಮಯದಲ್ಲಿ ಹುಷಾರಾಗಿ ಇರಬೇಕಲ್ವಾ ಎಂದು ಹೇಳುತ್ತಾಳೆ.

ಅಮ್ಮನ ಪರ ನಿಂತ ಅಭಿ

ಈ ಮಾತನ್ನು ಕೇಳಿದ ಬೀಗರ ಮನೆಯವರು ಶಾಕ್ ಆಗಿದ್ದಾರೆ. ಇದೇನು ಹೇಳುತ್ತಿದ್ದೀರಾ, ತುಳಸಿ ಅವರು ಗರ್ಭಿಣಿ ಹೌದಾ ಅಲ್ವಾ ಎಂದು ಪ್ರಶ್ನೆ ಮಾಡುತ್ತಾರೆ. ಸತ್ಯವನ್ನು ಮುಚ್ಚಿಡಲಾಗದೇ ಮಾಧವ್ ಸತ್ಯ ಹೇಳುತ್ತಾನೆ. ಆಗ ಬೀಗರ ಮನೆಯವರು ಶಾಕ್ ಆಗುತ್ತಾರೆ. ಮಕ್ಕಳ ಮದುವೆ ಮಾಡಿ ಮೊಮ್ಮಕ್ಕಳನ್ನು ಆಡಿಸುವ ವಯಸ್ಸಲ್ಲಿ ಇದೇನಿದು ಹುಚ್ಚಾಟ ಎಂದು ಬೈಯುತ್ತಾರೆ. ಈ ಮಾತನ್ನು ಕೇಳಿ ಅಭಿ ಬಂದು ತಡೆಯುತ್ತಾನೆ. ಈ ವಯಸ್ಸಿನಲ್ಲಿ ಅವರಿಗೆ ಮಗುವಿಗೆ ಜನ್ಮ ಕೊಡುವ ಶಕ್ತಿ ಇದೆ ಅದನ್ನು ಮೆಚ್ಚಿಕೊಳ್ಳಿ. ಅದು ಬಿಟ್ಟು ದೂರಬೇಡಿ ಎನ್ನುತ್ತಾನೆ. ಆದರೆ, ಜನರ ಎದುರು ಮರಿಯಾದೆ ಹೋಗುತ್ತೆ ಎಂದಿದ್ದಕ್ಕೆ, ನಿಮ್ಮಂತೆ ಸಣ್ಣ ಆಲೋಚನೆ ಮಾಡುವ ಮನೆಗೆ ನಿಧಿಯನ್ನು ನಾವು ಕೊಡುವುದಿಲ್ಲ ಎಂದು ಅಭಿ ಒಂದೇ ಮಾತಿನಲ್ಲಿ ಹೇಳುತ್ತಾನೆ.


ಮುರಿದು ಬಿತ್ತು ನಿಧಿ ಮದುವೆ

ಈ ಮಾತನ್ನು ಕೇಳಿದ ಬೀಗರ ಮನೆಯವರು ಕೂಡ ಈ ಮದುವೆ ಬೇಡ ಎಂದು ಕ್ಯಾನ್ಸಲ್ ಮಾಡುತ್ತಾರೆ. ಶಾರ್ವರಿ. ತುಳಸಿ, ಮಾಧವ್ ಎಷ್ಟು ಹೇಳಲು ಪ್ರಯತ್ನಿದರೂ ಒಪ್ಪುವುದಿಲ್ಲ. ಬೀಗರು ಮನೆಯಿಂದ ಹೊರಡುತ್ತಿದ್ದಂತೆಯೇ ನಿಧಿ ಬೇಸರ ಮಾಡಿಕೊಂಡು ಹೋಗುತ್ತಾಳೆ. ಇನ್ನು ದೀಪಿಕಾಳಿಗೆ ಅಭಿ ತುಳಸಿಯನ್ನು ಸಪೋರ್ಟ್ ಮಾಡಿದ್ದು, ಶಾಕ್ ಆಗಿದೆ. ಸದ್ಯ ಶಾರ್ವರಿ ಮತ್ತು ದೀಪಿಕಾ ಹೊರತು ಪಡಿಸಿ ಎಲ್ಲರೂ ತುಳಸಿ ಗರ್ಭಿಣಿಯಾಗಿರುವುದಕ್ಕೆ ಖುಷಿಯಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X