Srirasthu Shubhamasthu ; ಮದುವೆಯನ್ನೇ ದಿಕ್ಕರಿಸಿದ ನಿಧಿ, ಕಣ್ಣು ಬಿಟ್ಟ ದತ್ತ ತಾತ ಹೇಳಿದ್ದೇನು ?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ಜೈಲು ಪಾಲಾಗಿರುವುದಕ್ಕೆ ತುಳಸಿ ಕಾರಣವನ್ನು ತಿಳಿದುಕೊಂಡಿದ್ದಾಳೆ. ನಿಧಿಯ ಜೀವನ ಚೆನ್ನಾಗಿರಬೇಕು ಎಂದರೆ ಅವಳು ಮಾಡಿದ ತಪ್ಪನ್ನು ಮುಚ್ಚಿಡುವುದೇ ಸರಿ ಎಂದು ನಂಬಿದ್ದಾಳೆ.ಜೈಲಿಗೆ ಭೇಟಿ ಕೊಟ್ಟು ಮಗ ಸಮರ್ಥ್ ಗೆ ಧೈರ್ಯವನ್ನು ಕೂಡ ಹೇಳಿದ್ದಾಳೆ. ನಿಧಿಗೋಸ್ಕರ ನೀನು ಮಾಡುತ್ತಿರುವ ತ್ಯಾಗದ ಬಗ್ಗೆ ನನಗೆ ಅರಿವಿದೆ ಎಂದು ಹೇಳಿ ಸಮಾಧಾನ ಮಾಡುತ್ತಾಳೆ.ನಿಧಿಯೂ ಆಗಾಗ ಮನೆಯವರಿಗೆಲ್ಲಾ ಸತ್ಯ ಹೇಳಬೇಕು ಎಂದು ಪ್ರಯತ್ನಿಸಿದಾಗ ತುಳಸಿ ತಡೆಯುತ್ತಿದ್ದಾಳೆ. ಇದರಿಂದ ನಿನ್ನ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಬುದ್ಧಿ ಹೇಳಿದ್ದಾಳೆ.
ಗಟ್ಟಿ-ಮುಟ್ಟಾಗಿದ್ದೀನಿ ಎಂದ ದತ್ತ ತಾತ
ತುಳಸಿ ಮನೆಯಲ್ಲಿ ಹೀಗೆ ಯಾಕಾಗುತ್ತಿದೆ ಎಂಬ ಬೇಸರವದ್ದರೂ ದತ್ತ ತಾತನನ್ನು ನೋಡಬೇಕು ಎಂದು ಮಾಧವ್ ಜೊತೆಗೆ ಆಸ್ಪತ್ರೆಗೆ ಬಂದಿದ್ದಾಳೆ. ವೈದ್ಯರು ದತ್ತ ತಾತನಿಗೆ ವಯಸ್ಸಾಗಿರುವುದರಿಂದ ಚೇತರಿಸಿಕೊಲ್ಳಲು ಹೆಚ್ಚು ಸಮಯಬೇಕಾಗಬಹುದು ಎಂದು ಭಾವಿಸಿದ್ದಾರೆ. ಆದರೆ, ತುಳಸಿ ದತ್ತ ತಾತನನ್ನು ಮಾವ ಎಂದು ಕರೆದ ಒಡನೆಯೇ ದತ್ತ ಎಚ್ಚರ ಮಾಡಿಕೊಳ್ಳುತ್ತಾರೆ. ತುಳಸಿಯನ್ನು ಮಾತನಾಡಿಸುತ್ತಾರೆ. ನೀವು ಆದಷ್ಟು ಬೇಗನೇ ಚೇತರಿಸಿಕೊಳ್ಳಿ ಎಂದು ಹೇಳಿದ್ದಕ್ಕೆ ದತ್ತ ತಾತ ನಾನು ಇನ್ನೂ ಗಟ್ಟಿ-ಮುಟ್ಟಾಗಿದ್ದೀನಿ. ಈಗಲೇ ನಡೆದುಕೊಂಡು ಬರುತ್ತೇನೆ ಎಂದು ಹೇಳುತ್ತಾರೆ. ಇನ್ನು ರವೀಂದ್ರ ಎಲ್ಲಿ ಎಂದು ಕೇಳಿದಾಗ ಸತ್ಯ ಹೇಳುವುದರಿಂದ ಸಮಸ್ಯೆ ಆಗಬಹುದು ಎಂದು ತಿಳಿದ ಮಾಧವ್ ಅವರು ಮನೆಯಲ್ಲಿದ್ದಾರೆ. ಅವರಿಗೇನೂ ಆಗಿಲ್ಲ ಎಂದು ಸುಳ್ಳು ಹೇಳುತ್ತಾರೆ.

ದುಃಖದಲ್ಲಿ ಮುಳುಗಿರುವ ಸಿರಿ
ಇತ್ತ ಸಿರಿ ಒಂದು ಕಡೆ ತಂದೆಯನ್ನು ಕಳೆದುಕೊಂಡು ದುಃಖದಲ್ಲಿದ್ದರೆ, ಇನ್ನೊಂದು ಕಡೆ ಸಮರ್ಥ್ ಜೈಲು ಪಾಲಾಗಿದ್ದಾನೆ. ಇದೆರಡೂ ದುಃಖ ಸಿರಿಯನ್ನು ಹೈರಾಣಾಗಿಸಿದೆ. ಮುಂದೆ ಏನು ಮಾಡಬೇಕು ಎಂಬುದೇ ಅರ್ಥವಾಗದೇ ದುಃಖದಲ್ಲಿ ಮುಳುಗಿ ಹೋಗಿದ್ದಾಳೆ. ಸಂಧ್ಯಾ ತನ್ನ ಕೈಯಲ್ಲಾದಷ್ಟು ಸಮಾಧಾನ ಮಾಡುತ್ತಿದ್ದಾಳೆ. ದತ್ತ ತಾತನೂ ಆಸ್ಪತ್ರೆಯಲ್ಲಿರುವ ಕಾರಣ ಸಿರಿ ಮತ್ತು ಸಂಧ್ಯಾಗೂ ಧೈರ್ಯ ಹೇಳುವವರು ಯಾರೂ ಇಲ್ಲದಂತಾಗಿದೆ. ಸಮರ್ಥ್ ತಾನು ತಪ್ಪು ಮಾಡದೇ ಹೋದರೂ ಈಗ ಸತ್ಯ ಹೇಳಲಾಗದೇ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಅಭಿ ಸಮರ್ಥ್ ಸ್ಥಿತಿಯನ್ನು ನೋಡಲಾಗದೇ ಒದ್ದಾಡುತ್ತಿದ್ದಾನೆ.
ಮದುವೆಯನ್ನೇ ದಿಕ್ಕರಿಸಿದ ನಿಧಿ
ಇನ್ನು ಮಾಧವ್ ಮನೆಗೆ ಬೀಗರು ಬಂದಿದ್ದು, ಪದೇ ಪದೇ ಬೇಡದವರ ವಿಚಾರಕ್ಕೆ ಮದುವೆ ಮುಂದಕ್ಕೆ ಹೋಗುತ್ತಿದೆ. ಈ ಬಾರಿಯಂತೂ ಸಂಬಂಧಿಕರೆಲ್ಲರೂ ಮದುವೆಗೆ ಬಂದಿದ್ದರು. ಇದೆಲ್ಲಾ ಸರಿ ಹೋಗುತ್ತಿಲ್ಲ. ಸಮರ್ಥ್ ಈ ಮನೆಯ ಕಾರ್ ಡ್ರೈವರ್ ಎಂದು ಹೀಯಾಳಿಸಿದ್ದಾರೆ. ಆಗ ಮಾಧವ್ ಸಮರ್ಥ್ ತಮ್ಮ ಮಗ ಎಂದು ಹೇಳಿದ್ದು, ನಿಧಿಯೂ ಕೂಡ ಸಂಬಂಧದ ಬಗ್ಗೆ ಬೆಲೆ ಕೊಡದ ಮನೆಗೆ ನಾನು ಸೊಸೆಯಾಗಿ ಬರಲು ಇಷ್ಟವಿಲ್ಲ ಎಂದು ನೇರವಾಗಿ ಹೇಳಿದ್ದಾಳೆ. ನಿಧಿಯ ಮಾತನ್ನು ಕೇಳಿದ ಬೀಗರ ಮನೆಯವರು ಮದುವೆಯೇ ಬೇಡ ಎಂದು ಹೇಳಿ ಹೊರಟಿದ್ದಾರೆ.
ಪಶ್ಚಾತಾಪದಲ್ಲಿ ಬೇಯುತ್ತಿರುವ ನಿಧಿ
ನಿಧಿಗೆ ತಾನು ಮಾಡಿದ ತಪ್ಪಿಗೆ ಸಮರ್ಥ್ ಶಿಕ್ಷೆ ಅನುಭವಿಸುತ್ತಿದ್ದಾನೆ ಎಂಬ ಕೊರಗಿದೆ. ಪಶ್ಚಾತಾಪದಲ್ಲಿ ಬೇಯುತ್ತಿರುವ ನಿಧಿ ಎಲ್ಲರ ಎದುರಿಗೂ ಸತ್ಯ ಹೇಳಬೇಕು ಎಂದು ಯತ್ನಿಸುತ್ತಲೇ ಇದ್ದಾಳೆ. ಆದರೆ, ತುಳಸಿ ನಿಧಿಗೆ ಸಮಾಧಾನವನ್ನು ಹೇಳಿದ್ದಾಳೆ. ಇದರಿಂದ ನಿನ್ನ ಭವಿಷ್ಯಕ್ಕೆ ತೊಂದರೆಯಾಗುತ್ತದೆ. ಅಂತಹ ತಪ್ಪು ಮಾಡಬೇಕು. ನಡೆದಿದ್ದೆಲ್ಲವನ್ನೂ ಮರೆತು ನೀನು ಅರಾಮಾಗಿರು ಎಂದು ಬುದ್ಧಿ ಹೇಳಿದ್ದಾಳೆ. ಆದರೂ ನಿಧಿ ಮನಸ್ಸಿಗೆ ಸಮಾಧಾನವೇ ಆಗಿಲ್ಲ. ಈ ಘಟನೆಯಿಂದ ಮುಂದೆ ಇನ್ನೂ ಯಾವೆಲ್ಲಾ ಸಮಸ್ಯೆಗಳು ಬರುತ್ತದೋ ಕಾದು ನೋಡಬೇಕಿದೆ.


Click it and Unblock the Notifications











