Srirasthu Shubhamasthu ; ಹಲವು ದಿನಗಳ ಬಳಿಕ ಮನೆಗೆ ವಾಪಸ್ ಆದ ಶಾರ್ವರಿ : ಮಹೇಶ ಪೊಲೀಸರನ್ನು ಕರೆ ತಂದಿದ್ದೇಕೆ..?

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿಮಾ ತೆಗೆದುಕೊಂಡ ನಿರ್ಧಾರ ತಪ್ಪು ಎಂದು ದೀಪಿಕಾ ಭಾವಿಸಿದ್ದು, ಅದನ್ನೇ ಅಭಿ ಮನದಲ್ಲೂ ಬಿತ್ತಿದ್ದಾಳೆ. ಇದರಿಂದ ಪೂರ್ಣಿಗೆ ನೋವಾಗುವಂತೆ ಮಾತನಾಡುತ್ತಿದ್ದಾಳೆ.

ಇನ್ನು ದತ್ತ ತಾತನ ಮನೆಯಲ್ಲಿ ಜನ ಹೆಚ್ಚಾಗಿದ್ದು, ಆದಾಯ ಕಡಿಮೆ ಆಗಿದೆ. ಈಗ ಅಡುಗೆ ಮಾಡಲು ರೇಷನ್ ಕೂಡ ಇಲ್ಲದಂತಾಗಿದೆ. ಈ ಬಗ್ಗೆ ಸಮರ್ಥ್ ಬಳಿ ಸಿರಿ ಹೇಳುತ್ತಿರುತ್ತಾಳೆ.ಇದೇ ಸಮಯಕ್ಕೆ ಸರಿಯಾಗಿ ಅವರ ಮನೆಗೆ ಮಾಧವ್ ಬರುತ್ತಾರೆ. ಇವರ ಮಾತನ್ನು ಕೇಳಿಸಿಕೊಂಡು ದತ್ತ ತಾತನ ಬಳಿ ಕಷ್ಟ ಬಂದಾಗ ನಾನು ನಿಮಗೆ ನೆನಪಾಗುವುದಿಲ್ಲವೇ ಎಂದು ಕೇಳುತ್ತಾರೆ. ದತ್ತ ತಾತ ಹಾಗೆಲ್ಲಾ ಏನೂ ಇಲ್ಲ ಎಂದು ಮ್ಯಾನೇಜ್ ಮಾಡುತ್ತಾರೆ.

srirasthu-shubhamasthu-serial-24-may-episode-written-update

ದೆಹಲಿಯಿಂದ ವಾಪಸ್ ಬಂದ ಶಾರ್ವರಿ

ಇನ್ನು ಶಾರ್ವರಿ ದೆಹಲಿಯಲ್ಲಿರುವ ತಮ್ಮ ಕಂಪನಿಯಲ್ಲಿ ಸಮಸ್ಯೆ ಆಗಿತ್ತು ಎಂಬ ಕಾರಣಕ್ಕೆ ಮಾಧವ್ ಬದಲು ತಾನು ಹೋಗಿರುತ್ತಾಳೆ. ಶಾರ್ವರಿ ಹೋಗಿ ಬಹಳ ದಿನಗಳಾಗಿದ್ದು ಇದೀಗ ವಾಪಸ್ ಮನೆಗೆ ಬಂದಿದ್ದಾಳೆ. ಬಂದವಳೇ ವ್ಯಂಗ್ಯವಾಗಿ ಮಹೇಶನಿಗೆ ಇರಿಟೇಟ್ ಆಗುವಂತೆ ಮಾತನಾಡುತ್ತಾಳೆ. ತನ್ನನ್ನು ಮಹೇಶ್ ಮಿಸ್ ಮಾಡಿಕೊಳ್ಳುತ್ತಿದ್ದರು ಎಂಬಂತೆ ನಡೆದುಕೊಳ್ಳುತ್ತಾಳೆ. ಇನ್ನು ಮನೆಯವರ ಬಳಿ ಬಹಳ ಪ್ರೀತಿಯಿಂದ ಎಲ್ಲರ ಯೋಗ ಕ್ಷೇಮವನ್ನು ವಿಚಾರಿಸಿಕೊಳ್ಳುತ್ತಾಳೆ. ಮಹೇಶನಿಗೆ ಶಾರ್ವರಿಯನ್ನು ನೋಡುತ್ತಿದ್ದಂತೆಯೇ ಕೋಪ ಬರುತ್ತದೆ. ಬಹಳ ಬೇಸರವಾಗಿ ಮುಖ ಸಪ್ಪ ಮಾಡಿಕೊಳ್ಳುತ್ತಾನೆ.

ತನ್ನ ಕುಟುಂಬದ ಬಗ್ಗೆ ಮಾತನಾಡಿದ ಶಾರ್ವರಿ

ಇಬ್ಬರೂ ರೂಮಿನಲ್ಲಿ ಮಾತನಾಡುವಾಗ ಶಾರ್ವರಿಯನ್ನು ಬರೀ ದೆಹಲಿಗೆ ಹೋಗಿದ್ಯಾ ಅಥವಾ ನಿನ್ನ ಕೆಲಸಕ್ಕೆ ಬೇರೆಲ್ಲಾ ಕಡೆ ತಿರುಗಾಡಿಕೊಂಡು ಬಂದ್ಯಾ ಎಂದು ಮಹೇಶ ಪ್ರಶ್ನಿಸುತ್ತಾನೆ. ಶಾರ್ವರಿ ಹೌದು ನನಗೆ ಬೇಕಾದ ಕಡೆ ನಾನು ಹೋಗಿ ಬಂದೆ ಎಂದು ಸಿಟ್ಟಲ್ಲಿ ಹೇಳುತ್ತಾಳೆ. ಎಲ್ಲಿಗೆ ಎಂದು ಮತ್ತೆ ಮಹೇಶ ಕೇಳುತ್ತಾನೆ. ಆಗ ಶಾರ್ವರಿ, ನನ್ನ ಕುಟುಂಬದವರಿಗೆ ನಿಮ್ಮ ಅಣ್ಣನನಿಂದ ಅನ್ಯಾಯ ಆಗಿದ್ದು, ಅವರ ಅಳಲು ಕೇಳಲು ಹೋಗಿದ್ದೆ ಎಂದು ಹೇಳುತ್ತಾಳೆ. ಆಗ ಮಹೇಶ ನೀನು ಅನಾಥೆ ತಾನೆ. ಹಾಗೆಂದು ಈ ಮನೆಗೆ ಬಂದವಳು ಅಲ್ಲವೇ ಎಂದಿದ್ದಕ್ಕೆ, ಶಾರ್ವರಿ ಇಲ್ಲ ನನ್ನ ಕುಟುಂಬಕ್ಕೆ ಅನ್ಯಾಯ ಆಗಿದ್ದಕ್ಕೆ ಆ ದ್ವೇಷವನ್ನು ತೀರಿಸಿಕೊಳ್ಳಲೆಂದೇ ಈ ಮನೆಗೆ ಅನಾಥೆ ಎಂದುಕೊಂಡು ಬಂದೆ ಎನ್ನುತ್ತಾಳೆ. ಶಾರ್ವರಿ ಮಾತು ಕೇಳಿ ಮಹೇಶನಿಗೆ ಶಾಕ್ ಆಗುತ್ತದೆ.

srirasthu-shubhamasthu-serial-24-may-episode-written-update

ಪೊಲೀಸ್ ಠಾಣೆಗೆ ಮಹೇಶ ಹೋಗಿದ್ದೇಕೆ..?

ಮಹೇಶ ಪೊಲೀಸ್ ಠಾಣೆಗೆ ಹೋಗಬೇಕು ಎಂದು ಹೊರಡುತ್ತಾನೆ. ಹೋಗುವಾಗಲೂ ಕೂಡ ಅವಿನಾಶ್ ಬಳಿ ಏನೋ ಮಾತನಾಡುತ್ತಿರುತ್ತಾರೆ. ಪೊಲೀಸ್ ಠಾಣೆಗೆ ಮಹೇಶ ಹೋಗುತ್ತಿದ್ದಾನೆ ಎಂಬುದು ತಿಳಿದ ಕೂಡಲೇ ಶಾರ್ವರಿ ಗಾಬರಿಯಾಗುತ್ತಾಳೆ. ಯಾವ ವಿಚಾರ ಎಂದು ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಾಳೆ. ಆದರೆ ಗೊತ್ತಾಗುವುದೇ ಇಲ್ಲ. ಅಷ್ಟರಲ್ಲಿ ಪೊಲೀಸರನ್ನು ಕರೆದುಕೊಂಡು ಮಹೇಶ ಬರುತ್ತಾನೆ. ಶಾರ್ವರಿಯನ್ನು ತೋರಿಸುತ್ತಾನೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಶಾರ್ವರಿ ಪಾತ್ರಧಾರಿ ಬದಲಾವಣೆ..?

ಇನ್ನು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಇಷ್ಟು ದಿನಗಳವರೆಗೂ ಶಾರ್ವರಿ ಪಾತ್ರವನ್ನು ನಟಿ ನೇತ್ರಾ ಜಾಧವ್ ಅವರು ನಡೆಸಿಕೊಡುತ್ತಿದ್ದರು. ಅವರ ನಟನೆಗೆ ಎಲ್ಲರೂ ಫಿದಾ ಆಗಿದ್ದರು. ಆದರೆ, ದೆಹಲಿಗೆ ಹೋಗಿ ಬರುತ್ತೇನೆ ಎಂದು ಹೊರಟ ಶಾರ್ವರಿ, ವಾಪಸ್ ಬಂದಿದ್ದು, ಸ್ವಪ್ನಾ ದೀಕ್ಷಿತ್ ಆಗಿ. ಹೌದು, ನೇತ್ರ ಜಾಧವ್ ಅವರು ಧಾರಾವಾಹಿಯಿಂದ ಹೊರ ನಡೆದಿದ್ದು, ಸದ್ಯ ನಟಿ ಸ್ವಪ್ನ ದೀಕ್ಷಿತ್ ಅವರು ಶಾರ್ವರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

More from Filmibeat

English summary
Sharvari comes home from delhi after so many days. Mahesh doubts sharvari
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X