Sriasthu Shubhamasthu ; ಅಬಾರ್ಷನ್ ಮಾಡಿಸಿ ಎಂದ ವೈದ್ಯರು : ಸತ್ಯ ತಿಳಿಯದೆ ಪೆದ್ದನಾಗುತ್ತಿದ್ದಾನಾ ಸಮರ್ಥ್..?!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್ ತನ್ನ ತಾಯಿಯ ಬೆಲೆಯನ್ನು ಅರಿತಿದ್ದು, ಈಗ ಅತೀಯಾಗಿ ಕೇರ್ ಮಾಡಲು ಶುರು ಮಾಡಿದ್ದಾನೆ.ಅಮ್ಮನಿಗೆ ಬ್ರೈನ್ ಟ್ಯೂಮರ್ ಇದೆ ಎಂದು ಭಾವಿಸಿದ್ದು, ಎಲ್ಲಿ ಅಮ್ಮ ತಮ್ಮನ್ನು ಬಿಟ್ಟು ಹೋಗುತ್ತಾರೋ ಎಂಬ ಆತಂಕದಲ್ಲೇ ಇದ್ದಾನೆ. ಹೀಗಾಗಿ ಅಮ್ಮನೊಂದಿಗೆ ಈಗ ಖುಷಿಯಾಗಿ ಕಾಲ ಕಳೆಯುತ್ತಿದ್ದಾನೆ.ಇತ್ತ ದತ್ತ ತಾತ ಇದ್ದಕ್ಕಿದ್ದ ಹಾಗೆಯೇ ತೀರ್ಥಯಾತ್ರೆಗೆ ಹೊರಟಿದ್ದಾರೆ. ಸಿರಿ ಮನೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಸಮರ್ಥ್ ತಾಯಿ ಜೊತೆಗೆ ಬ್ಯೂಸಿಯಾಗಿದ್ದರೆ, ಸಂಧ್ಯಾ ಕೆಲಸ ಹುಡುಕುವುದರಲ್ಲಿ ಬ್ಯುಸಿಯಾಗಿದ್ದಾರೆ.

ಮಾಧವ್ ಗೆ ಸತ್ಯ ಹೇಳಿದ ತುಳಸಿ

ತುಳಸಿ ಒಂದು ವಾರದಿಂದ ನರಳಾಡಿ ಈಗ ಪತಿಯ ಬಳಿ ಸತ್ಯ ಹೇಳಲು ಮುಂದಾಗಿದ್ದಾಳೆ. ರೂಮಿನಲ್ಲಿ ಒಂಬೆಗಳನ್ನು ಜೋಡಿಸಿದ ತುಳಸಿ ತನ್ನ ಕುಟುಂಬ ಇಷ್ಟೇ ಅಲ್ಲ. ಈಗ ಕುಟುಂಬದ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ತಿಳಿಸಿಕೊಟ್ಟಿದ್ದಾಳೆ. ಮಾಧವ್ ಊಹೆಗೂ ಮೀರಿದ ಸ್ಥಿತಿಯನ್ನು ಕಂಡು ಆಶ್ಚರ್ಯ ಪಟ್ಟಿದ್ದಾನೆ. ಆದರೆ, ಕೊಂಚವೂ ಆತಂಕಗೊಳ್ಳದೇ, ಖುಷಿಪಟ್ಟಿದ್ದಾನೆ. ಈ ಮಗು ನಮಗೆ ಇರಲಿ ಎಂದು ಬಯಸಿದ್ದಾನೆ. ತುಳಸಿಗೆ ಮಾಧವ್ ಖುಷಿ ಸಮಾಧಾನ ತಂದಿದ್ದರೂ ಕೂಡ ಸಮಾಜವನ್ನು ಹೆದರಿಸುವ ಆತಂಕ ಕಾಡಿದೆ. ಮಗು ಬೇಕು ಬೇಡ ಎಂಬ ಗೊಂದಲದಲ್ಲಿ ತುಳಸಿ ಇದ್ದಾಳೆ.

srirasthu shubhamasthu serial 24 September episode written update

ಅಬಾರ್ಷನ್ ಮಾಡಿಸಿ ಎಂದ ವೈದ್ಯರು

ಹೀಗಾಗಿ ಮಾಧವ್ ಸಮಾಜಕ್ಕೆ ಹೆದರುವ ಅಗತ್ಯವಿಲ್ಲ. ನಮ್ಮ ಮಕ್ಕಳು ಇದನ್ನು ಒಪ್ಪಿಕೊಳ್ಳುತ್ತಾರೆ. ಬೇರೆಯವರ ಬಗ್ಗೆ ಯೋಚಿಸುವ ಅಗತ್ಯವಿಲ್ಲ ಎಂದು ಹೇಳುತ್ತಾನೆ. ಈಗಲೇ ವೈದ್ಯರನ್ನು ಭೇಟಿ ಮಾಡೋಣ ಎಂದು ಆಸ್ಪತ್ರೆಗೆ ತೆರಳುತ್ತಾರೆ. ಅಲ್ಲಿ ವೈದ್ಯರು ಒಂದಷ್ಟು ಪರೀಕ್ಷೆಗಳನ್ನು ಮಾಡಿಸಿದ್ದು, ಈ ವಯಸ್ಸಿನಲ್ಲಿ ತುಳಸಿ ಅವರು ಗರ್ಭಿಣಿ ಆಗಿರುವುದು ಅವರ ಜೀವಕ್ಕೆ ಅಪಾಯವನ್ನು ತರವಂತಹದ್ದು. ಹಾಗಾಗಿ ಈ ಮಗುವನ್ನು ಅಬಾರ್ಟ್ ಮಾಡಿಸುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ. ಆಗ ತುಳಸಿ ಮತ್ತು ಮಾಧವ್ ಇಬ್ಬರಿಗೂ ಭೇಸರವಾಗಿದ್ದು, ಮಾಧವ್ ಬೇರೆ ದಾರಿ ಇಲ್ಲವಾ ಎಂದು ವಿಚಾರಿಸಿದ್ದಾನೆ. ವೈದ್ಯರು ಒಂದು ವಾರ ಸಮಯ ಕೊಟ್ಟಿದ್ದಾರೆ.

ಅಸಹಾಯಕಳಾಗಿ ನೊಂದಿರುವ ದೀಪಿಕಾ

ಇತ್ತ ದೀಪಿಕಾಳಿಗೆ ಎಲ್ಲಾ ಕಡೆಯಿಂದಲೂ ಮಾನಸಿಕವಾಗಿ ಹಿಂಸೆಯಾಗುತ್ತಿದೆ. ಅಭಿ ತನ್ನ ಮಾತನ್ನು ಕೇಳುತ್ತಿಲ್ಲ. ಹೆಂಡತಿಗಿಂತಲೂ ಕುಟುಂಬವೇ ಮುಖ್ಯ ಎಂಬಂತೆ ಅಭಿ ನಡೆದುಕೊಳ್ಳುತ್ತಿದ್ದಾನೆ. ತನ್ನ ಮಾತನ್ನು ಕೇಳುತ್ತಿಲ್ಲ ಎಂದು ಬೇಸರಗೊಂಡಿದ್ದಾಳೆ. ಇನ್ನು ತಾಯಿ ವನಜಾ ಮನೆಗೆ ನಿತ್ಯ ಬಂದರೂ ಕೂಡ ಪೂರ್ಣಿಮಾ ಜೊತೆಗೆ ಕಾಲ ಕಳೆದು ಹೊರಟು ಹೋಗುತ್ತಿದ್ದಾರೆ. ಮನೆಯಲ್ಲಿ ಮಾತ್ರ ದೀಪಿಕಾಳನ್ನು ನೋಡಲು ಹೋಗಿದ್ದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇದು ದೀಪಿಕಾಳಿಗೆ ಹಿಂಸೆಯಾಗುವಂತೆ ಮಾಡುತ್ತಿದೆ.

srirasthu shubhamasthu serial 24 September episode written update

ವೀಕ್ಷಕರಿಗೆ ಬೇಸರ ತಂದ ಸಂಗತಿಗಳು

ಇನ್ನು ಧಾರಾವಾಹಿಯ ಕಥೆಯನ್ನು ಪಾತ್ರಗಳನ್ನು ಮೆಚ್ಚಿಕೊಂಡಿದ್ದ ವೀಕ್ಷಕರು ಇತ್ತೀಚೆಗೆ ಬಹಳ ಬೇಸರ ಮಾಡಿಕೊಳ್ಳುತ್ತಿದ್ದಾರೆ. ತುಳಸಿ ಗರ್ಭಿಣಿ ಎಂಬ ಸುದ್ದಿ ತಿಳಿದಾಗಿನಿಂದ ಧಾರಾವಾಹಿಗೆ ಕೊಟ್ಟ ಟ್ವಿಸ್ಟ್ ಅನ್ನು ಹೆಚ್ಚು ಜನ ಸ್ವೀಕರಿಸಿಲ್ಲ. ಅಲ್ಲದೇ, ಸೀರಿಯಲ್ ಅನ್ನು ರಬ್ಬರ್ ಎಳೆದ ಹಾಗೆ ಎಳೆಯುತ್ತಿದ್ದಾರೆ. ಸಮರ್ಥ್ ಆಲೋಚನೆಗಳಂತೂ ಕ್ರೇಜಿಯಾಗಿವೆ ಎಂದು ಬೇಸರ ಮಾಡಿಕೊಂಡಿದ್ದಾರೆ. ತನ್ನ ತಾಯಿ ಮದುವೆಯಾಗಿದ್ದನ್ನು ಸಹಿಸದ ಸಮರ್ಥ್ ಆಗಲೂ ಯಾರ ಮಾತನ್ನು ಕೇಳದೇ ಪ್ರತಿಯೊಂದು ಘಟನೆಯನ್ನೂ ಅಪಾರ್ಥ ಮಾಡಿಕೊಂಡ. ಈಗ ತನ್ನ ತಾಯಿ ಗರ್ಭಿಣಿಯಾಗಿದ್ದು, ಇದನ್ನೂ ತಪ್ಪಾಗಿ ಅರಿತಿದ್ದು, ಮಾಧವ್ ನಿನ್ನ ತಾಯಿ ಮತ್ತೆ ಅಮ್ಮ ಆಗುತ್ತಿರುವುದನ್ನು ಒಪ್ಪಿಕೊಂಡೆ ಎಂದರೂ ಕೂಡ ಈ ಮಾತನ್ನು ತನಗೆ ಬೇಕಾದಂತೆ ತಿಳಿದುಕೊಂಡಿದ್ದಾನೆ. ಇದೆಲ್ಲವೂ ವೀಕ್ಷಕರಲ್ಲಿ ಬೇಸರ ಮೂಡಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X