Srirasthu Shubhamasthu: ಮಾಧನವ ಮನೆಗೆ ಬಂದ ದತ್ತನಿಗೆ ಎದುರಾದ ಶಾರ್ವರಿ: ಯಾವುದಕ್ಕೂ ಬಗ್ಗುವವನಲ್ಲ ದತ್ತ!
ಶ್ರೀರಸ್ತು ಶುಭಮಸ್ತು ಧಾರಾವಾಹಿ ನೋಡುಗರಿಗೆ ಬಹಳ ಖುಷಿ ನೀಡುತ್ತಿದೆ. ಇದೀಗ ದತ್ತ ಮನೆಯಲ್ಲಿ ಯಾರಿಗೂ ಕೇಳದೆ ಯಾರ ಮಾತಿಗೆ ಕಿವಿಗೊಡದೆ ತುಳಸಿಯನ್ನು ತುಳಸಿ ಹಬ್ಬಕ್ಕೆ ಕರೆದುಕೊಂಡು ಬರಬೇಕು, ದಂಪತಿ ಸಮೇತ ಅವರನ್ನ ತುಳಸಿ ಹಬ್ಬಕ್ಕೆ ಬರಲು ಹೇಳಬೇಕು ಎಂದು ಮಾಧವನ ಮನೆಗೆ ಹೋಗುತ್ತಾನೆ. ಇನ್ನು ದತ್ತ ಮಾಧವನ ಮನೆಯೊಳಗೆ ಬರುವುದನ್ನು ಕೆಲಸದಾಕೆ ಶಾರ್ವರಿಯ ಬಳಿ ಸನ್ನೆ ಮಾಡುತ್ತಾಳೆ.
ಶಾರ್ವರಿ ಹಿಂದೆ ತಿರುಗಿ ನೋಡಿದಾಗ ಅಲ್ಲಿ ದತ್ತ ನಿಂತಿರುತ್ತಾನೆ. ದತ್ತನನ್ನು ನೋಡಿದ ಶಾರ್ವರಿ ಬಹಳ ಶಾಕ್‌ಗೆ ಒಳಗಾಗಿದ್ದಾಳೆ. ಈವಯ್ಯ ಯಾಕೆ ಮನೆಗೆ ಬಂದ ಎಂದು ಯೋಚನೆ ಮಾಡುತ್ತಾ ಶಾರ್ವರಿ ತಿಂಡಿ ತಿನ್ನಲು ದತ್ತನಿಗೆ ಹೇಳುತ್ತಾಳೆ. ದತ್ತನ ಬಗ್ಗೆ ಗೊತ್ತಿದ್ದರೂ ಶಾರ್ವರಿ ಮಾತ್ರ ಬಹಳ ಹಾಸ್ಯಮಯವಾಗಿ ಮಾತನಾಡುತ್ತಿರುತ್ತಾಳೆ. ದತ್ತನನ್ನು ಅಪಹಾಸ್ಯ ಮಾಡುತ್ತಾಳೆ. ದತ್ತ ತಿನ್ನುತ್ತಿರುವ ತಿಂಡಿಯ ಬಗ್ಗೆ ಕೂಡ ಮಾತನಾಡಿದಾಗ ದತ್ತನಿಗೆ ಸಹಿಸಲು ಆಗುವುದಿಲ್ಲ. ನಾನು ನನ್ನ ಮಗಳ ಮನೆಗೆ ಬಂದು ತಿಂಡಿ ತಿನ್ನುತ್ತಿದ್ದೇನೆ ಯಾರು ಕೂಡ ತಿಂಡಿ ತಿನ್ನಬೇಡಿ ಎಂದು ಹೇಳಿಲ್ಲ ನನಗೆ ಆ ಹಕ್ಕಿದೆ ಎಂದು ಹೇಳುತ್ತಾನೆ.

ನಿಮಗೆ ತುಳಸಿ ಮಗಳು ಅಥವಾ ಸೊಸೆಯೋ.. ಇದೀಗ ಯಾವ ಸಂಬಂಧ ಇಟ್ಟುಕೊಂಡು ಇಲ್ಲಿಗೆ ಬಂದಿದ್ದಿರಾ ಪ್ರಶ್ನೆ ಮಾಡುತ್ತಾಳೆ. ಇದನ್ನು ಕೇಳಿದ ದತ್ತ ಹೇಳುತ್ತಾನೆ ನನ್ನ ಮಗ ತೀರಿ ಹೋದ ಮೇಲೆ ನನಗೆ ತುಳಸಿ ಮಗಳಾಗಿದ್ದಳು. ಅದಕ್ಕೆ ಇದೀಗ ಮಗಳನ್ನು ಮಾಧವನಿಗೆ ಕೊಟ್ಟು ಮದುವೆ ಮಾಡಿದ್ದೇನೆ ಮಗಳ ಮನೆಗೆ ಬಂದಿದ್ದೇನೆ ಇಲ್ಲಿ ನಾನು ತಿಂಡಿ ತಿನ್ನುತ್ತೇನೆ ಎಂದು ಹೇಳಿದಾಗ ಶಾರ್ವರಿ ಸುಮ್ಮನಾಗದೆ ಇನ್ನೂ ಕುಹಕವಾಡುತ್ತಾಳೆ.
ಕುಹಕವಾಡಿದ ಶಾರ್ವರಿಗೆ ಮಾತಿನ ಏಟು ಕೊಟ್ಟ ದತ್ತ
ಇದನ್ನು ಕೇಳಿದ ದತ್ತ ಶಾರ್ವರಿಗೆ ಪ್ರಶ್ನೆ ಮಾಡುತ್ತಾನೆ ನಾನು ಇಲ್ಲಿಗೆ ಮಗಳ ಮನೆಗೆ ಬಂದಿದ್ದೇನೆ ನಾನು ಬಿಟ್ಟಿಕೂಳು ತಿನ್ನುವುದಾದರೆ ನೀನು ಏನು ಮಾಡುತ್ತಿದ್ದಿಯಾ ಎಂದು ಮರು ಪ್ರಶ್ನೆ ಕೇಳುತ್ತಾನೆ. ಬಳಿಕ ನಾನು ನನ್ನ ಅಳಿಯನ ಮನೆಗೆ ಬಂದು ತಿಂಡಿ ತಿನ್ನುತ್ತಿದ್ದೇನೆ. ಆದರೆ ನೀನು ನಿನ್ನ ಗಂಡ ಮಾಡಿಟ್ಟಿರೋ ಆಸ್ತಿ ಅಥವಾ ನಿನ್ನ ಆಸ್ತಿಯಲ್ಲಿದಿಯ ಅಥವಾ ನಿಮ್ಮಪ್ಪ ಮಾಡಿಟ್ಟು ಹೋದ ಆಸ್ತಿಯಲ್ಲಿ ತಿಂತಿದ್ದಿಯಾ ಎಂದು ಪ್ರಶ್ನೆ ಮಾಡುತ್ತಾನೆ.

ಇದು ನನ್ನ ಅಳಿಯ, ಮಗಳ ಮನೆ: ಶಾರ್ವರಿಗೆ ಮಾತಿನೇಟು ಕೊಟ್ಟ ದತ್ತ
ಮುಮದುವರಿದು ಮಾತನಾಡಿದ ದತ್ತ ನೀನೇ ಇಷ್ಟು ರಾಜ ರೋಷವಾಗಿ ಇಲ್ಲಿ ಇದ್ದು ಕೂಳುತಿಂದುಕೊಂಡು ಇರುವಾಗ ನಾನು ನನ್ನ ಅಳಿಯನ ಮನೆಯಲ್ಲಿ ತಿಂಡಿ ತಿನ್ನುವುದರಲ್ಲಿ ಏನು ತಪ್ಪಿಲ್ಲ ಎಂದು ಹೇಳುವಾಗ ಶಾರ್ವರಿಗೆ ಮುಖಕ್ಕೆ ಹೊಡೆದ ಹಾಗೆ ಆಗುತ್ತದೆ.
ದತ್ತನ ಮಾತಿಗೆ ಮುಂದೆ ಏನು ಮಾತನಾಡಬೇಕೆಂದು ತೋಚದೆ, ಶಾರ್ವರಿ ಅಲ್ಲಿಂದ ಹೋಗುತ್ತಾಳೆ. ಇನ್ನು ಮಾವನನ್ನು ನೋಡಿದ ತುಳಸಿಗೆ ಬಹಳ ಖುಷಿಯಾಗುತ್ತದೆ. ಆಫೀಸಿನಲ್ಲಿ ಏನಾದರೂ ನೀನು ಸಮರ್ಥ್‌ಗೆ ಅಂದಿದೀಯಾ ಅವನು ಬಹಳ ಬೇಸರ ಮಾಡಿಕೊಂಡಿದ್ದಾನೆ ಎಂದೆಲ್ಲಾ ಹೇಳಿದಾಗ ಅಲ್ಲಿ ನಡೆದ ವಿಚಾರವನ್ನ ತುಳಸಿ ಮಾವನ ಬಳಿ ಹೇಳುತ್ತಾಳೆ. ಆದರೆ ದತ್ತ ಕೂಡ ನೀನು ಅಭಿಗೆ ಇನ್ನು ಮೇಲೆ ಬುದ್ಧಿ ಹೇಳಬೇಕು ನಿನಗೆ ಆ ಎಲ್ಲಾ ಹಕ್ಕು ಇದೆ ಎಂದು ಹೇಳುತ್ತಾನೆ.


Click it and Unblock the Notifications











