Srirasthu Shubhamasthu ;ತುಳಸಿಯನ್ನು ನೋಡಲು ಬಂದ ಮಾಧವ್ ಕುಟುಂಬ : ಸಮರ್ಥ್ ಮನದಲ್ಲಿ ಬೇಸರ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಮರ್ಥ್, ಅವಿ ಮತ್ತು ಅಭಿ ಮೂವರು ಒಟ್ಟಿಗೆ ಕುಳಿತುಕೊಂಡು ತಿಂಡಿ ತಿನ್ನುತ್ತಿರುತ್ತಾರೆ. ಇದು ಅಭಿಗೆ ಇಷ್ಟವಿಲ್ಲದಿದ್ದರೂ ಕೂಡ ಸುಮ್ಮನಿರುತ್ತಾನೆ.ಈ ವೇಳೆ ತುಳಸಿ ಸೌತೆಕಾಯಿ ಕಟ್ ಮಾಡುವಾಗ ಬೆರಳು ಕಟ್ ಆಗುತ್ತದೆ.ಆಗ ಸಮರ್ಥ್ ಗಾಬರಿಯಾಗಿ ಅಮ್ಮನನ್ನು ಕೇರ್ ಮಾಡುತ್ತಾನೆ.ಸಮರ್ಥ್ ಕಾಳಜಿಯಿಂದ ತುಳಸಿಗೆ ಬ್ಯಾಂಡೇಜ್ ಹಾಕುತ್ತಾನೆ.ಬಳಿಕ ಬೈಯುತ್ತಾನೆ. ಮನೆಯಲ್ಲಿ ಇಷ್ಟು ಕೆಲಸದ ಆಳುಗಳಿದ್ದರೂ ಇವರೇ ಮಾಡಬೇಕಾ. ಅಮ್ಮನನ್ನು ನೋಡಿಕೊಳ್ಳಲು ಬರುವುದಿಲ್ವಾ. ಜೋಪಾನವಾಗಿ ನೋಡಿಕೊಳ್ಳಿ ಎಂದು ಬುದ್ಧಿ ಹೇಳಿ ಹೋಗುತ್ತಾನೆ

ಅಪ್ಪ-ಅಮ್ಮನ ಮದುವೆ ನೋಡುವಾಸೆ

ಸಮರ್ಥ ತನ್ನ ಪ್ರೀತಿಯನ್ನು ತೋರಿಸಿದ್ದಕ್ಕೆ ಅವಿ ಮತ್ತು ತುಳಸಿ ಖುಷಿ ಪಡುತ್ತಾರೆ. ಇನ್ನು ಮಾಧವ್ ಕೆಲಸದ ಮೇಲೆ ಮುಂಬೈಗೆ ಹೊರಡಬೇಕು ಎಂದು ಹೇಳುತ್ತಾನೆ. ಆದರೆ, ಮನೆಯವರೆಲ್ಲಾ ಮಾಧವ್ ನನ್ನು ಕಳಿಸಲು ಬಿಡುವುದಿಲ್ಲ. ಹೋಗುವುದಾದರೆ ತುಳಸಿ ಅಮ್ಮನನ್ನೂ ಕರೆದುಕೊಂಡು ಹೋಗಿ ಎಂದು ಪೂರ್ಣಿಮಾ ಹಠ ಮಾಡುತ್ತಾಳೆ. ಯಾಕೆ ಎಂದು ವಿಚಾರಿಸಿದಾಗ ತುಳಸಿ ಮತ್ತು ಮಾಧವ್ ಮದುವೆಯ ಮೊದಲ ವಾರ್ಷಿಕೋತ್ಸವ ಇದೆ ಎಂದಾಗ, ಅವಿ ಮತ್ತು ಮಹೇಶ ಇಬ್ಬರೂ ಕೂಡ ಇವರಿಬ್ಬರ ಮದುವೆ ಹೇಗಾಯ್ತೋ ನಾವ್ಯಾರೂ ನೋಡೇ ಇಲ್ಲ. ಆನಿವರ್ಸರಿ ನೆಪದಲ್ಲಾದರೂ ಇಬ್ಬರ ಮದುವೆಯನ್ನು ನೋಡಬೇಕು ಎಂದು ಬಯಸುತ್ತಾರೆ.

srirasthu-shubhamasthu-serial-25-july-episode-written-update


ಖುಷಿಯಿಂದ ಇರುವ ಸಮರ್ಥ್

ಆದರೆ, ತುಳಸಿ ಮತ್ತು ಮಾಧವ್ ಮದುವೆ ಆತುರದಲ್ಲಿ ನಡೆದಿದ್ದು, ಮದುವೆಯ ವೀಡಿಯೋ ಅಥವಾ ಫೋಟೋಗಳು ಇಲ್ಲ. ಹಾಗಾಗಿ ಅವಿ ಇನ್ನೊಮ್ಮೆ ಮದುವೆ ಮಾಡೋಣ. ಆಗ ನಾವೆಲ್ಲರೂ ಕಣ್ತುಂಬಿ ಕೊಳ್ಳಬಹುದು ಎಂದು ಹೇಳುತ್ತಾನೆ. ಮಹೇಶ ಅವಿ ಮಾತಿಗೆ ಸಪೋರ್ಟ್ ಮಾಡುತ್ತಾನೆ. ಮನೆಯಲ್ಲಿ ಎಲ್ಲರೂ ಇದಕ್ಕೆ ಒಪ್ಪಿದಾಗ ಅಭಿ ಮತ್ತು ಶಾರ್ವರಿ ಬೇರೆ ದಾರಿ ಕಾಣದೇ ಹೂಂ ಗುಡುತ್ತಾರೆ. ಸರಿ ಮೊದಲಿನಿಂದ ಶಾಸ್ತ್ರ ಮಾಡಬೇಕು ಎಂದು ಅವಿ ತುಳಸಿಯನ್ನು ದತ್ತ ತಾತನ ಮನೆಗೆ ಕಳಿಸಬೇಕು ಎಂದು ಅಂದುಕೊಳ್ಳುತ್ತಾನೆ. ಹೀಗಾಗಿ ಸಮರ್ಥ್ ಅನ್ನು ಕರೆದು ಅಮ್ಮನನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗು. ಅವರು ಅಲ್ಲೇ ಇರಲಿ ಎನ್ನುತ್ತಾನೆ. ಈ ಮಾತನ್ನು ಕೇಳಿ ಸಮರ್ಥ್ ಖುಷಿ ಪಡುತ್ತಾರೆ.


ಸಮರ್ಥ್ ಖುಷಿಗೆ ಬಿತ್ತು ತಣ್ಣೀರು

ಸಮರ್ಥ್ ಜಗಳ ಮಾಡಿಕೊಂಡು ಅಮ್ಮನನ್ನು ನಮ್ಮ ಮನೆಗೆ ವಾಪಸ್ ಕಳಿಸುತ್ತಿದ್ದಾರೆ ಎಂದು ಅಂದುಕೊಳ್ಳುತ್ತಾನೆ. ಕೊನೆಗೂ ತನ್ನ ತಾಯಿ ತನ್ನ ಮನೆಯಲ್ಲೇ ಇರುವಂತೆ ಆಯ್ತು. ಇನ್ಮುಂದೆ ಅಮ್ಮನನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎಂದು ತೀರ್ಮಾನಿಸುತ್ತಾನೆ. ಕಾರಣ ತಿಳಿಯದೇ ಸಮರ್ಥ್ ಖುಷಿಯಾಗಿದ್ದಾನೆ. ಮನೆಯಲ್ಲೂ ಎಲ್ಲರಿಗೂ ತುಳಸಿ ಅಮ್ಮನನ್ನು ಕಾಳಜಿಯಿಂದ ನೋಡಿಕೊಳ್ಳಿ ಎಂದು ಹೇಳುತ್ತಾನೆ. ಆದರೆ, ಸಮರ್ಥ್ ಗೆ ಸತ್ಯ ಹೇಳಲು ಮುಮದಾದಾಗಲೂ ಕೇಳಲು ತಯಾರಿರುವುದಿಲ್ಲ. ಮಾರನೇಯ ದಿನ ಮಾಧವ್ ಮನೆಯವರು ಕುಟುಂಬ ಸಮೇತರಾಗಿ ಬರುತ್ತಾರೆ. ಯಾಕೆ ಬಂದಿದ್ದು ಎಂದು ಕೇಳಿದ್ದಕ್ಕೆ, ತುಳಸಿ ಅಮ್ಮನನ್ನು ನಮ್ಮ ಮನೆಗೆ ಕರೆದುಕೊಂಡು ಹೋಗಲು ಎಂದಾಗ ಸಮರ್ಥ್ ದುಃಖತಪ್ತನಾಗುತ್ತಾನೆ.

srirasthu-shubhamasthu-serial-25-july-episode-written-update

ಹೆಣ್ಣು ಕೇಳಲು ಬಂದ ಮಾಧವ್ ಕುಟುಂಬ

ಮದುವೆ ವಾರ್ಷಿಕೋತ್ಸವದ ದಿನ ಇಬ್ಬರ ಮದುವೆ ಮಾಡುವ ಸಲುವಾಗಿ ಈ ಪ್ಲಾನ್ ಮಾಡಿದ್ದು ಎನ್ನುತ್ತಾರೆ. ಇದರಿಂದ ಸಮರ್ಥ್ ಬಹಳ ಬೇಸರ ಮಾಡಿಕೊಳ್ಳುತ್ತಾನೆ. ತುಳಸಿ ಮದುವೆಯ ಹುಡುಗಿಯಂತೆ ರೆಡಿಯಾಗಿದ್ದು, ಎರಡೂ ಕುಟುಂಬದವರೂ ಖುಷಿಯಾಗಿದ್ದಾರೆ. ಆದರೆ, ಸಮರ್ಥ್ ಮಾತ್ರ ನೊಂದುಕೊಂಡಿದ್ದು, ಸದ್ಯ ಮಾಧವ್ ಮತ್ತು ದತ್ತ ತಾತನ ಮನೆಯಲ್ಲಿ ಮದುವೆಯ ಕಳೆ ತುಂಬಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X