Srirasthu Shubhamasthu; ಅವಿನಾಶ್ ಮೇಲೆ ಕೋಪ ಮಾಡಿಕೊಂಡ ತುಳಸಿ : ಹೆಂಡತಿಗಾಗಿ ಮಿಡಿದ ಮಾಧವ್..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿಯ ತಾಯಿಗೆ ಹಲವು ಬಗೆಯ ಅಡುಗೆಗಳು ತಿಳಿದಿತ್ತು. ಅವನ್ನೆಲ್ಲಾ ಒಂದು ಪುಸ್ತಕದಲ್ಲಿ ಬರೆದಿಟ್ಟಿದ್ದೀನಿ ಎಂದು ಹೇಳುತ್ತಾಳೆ. ಅದನ್ನು ತರಲೆಂದು ಮಾಧವ್ ಮತ್ತು ತುಳಸಿ ದತ್ತ ತಾತನ ಮನೆಗೆ ಹೋಗುತ್ತಾರೆ. ಸ್ಟೋರ್ ರೂಮ್ ನಲ್ಲಿ ಸಮರ್ಥ್ ಮತ್ತು ಸಂಧ್ಯಾ ಮಕ್ಕಳಾಗಿದ್ದಾಗ ಬಳಸುತ್ತಿದ್ದ ಬಟ್ಟೆಗಳನ್ನು ತೋರಿಸುತ್ತಾಳೆ. ಅದನ್ನು ತಂದು ತಮ್ಮ ಕೆಫೆಯಲ್ಲಿ ಹೊಸ ರೀತಿಯ ಅಡುಗೆಯನ್ನು ಮಾಡಲು ಮಾಧವ್ ಪ್ಲಾನ್ ಮಾಡಿದ್ದಾನೆ. ಪುಸ್ತಕ್ಕಾಗಿ ಮಾಧವ್ ಹುಡುಕುತ್ತಿರುತ್ತಾನೆ.
ತುಳಸಿ ಡೈರಿ ಓದಿ ಭಾವುಕನಾದ ಮಾಧವ್
ಆಗ ಮಾಧವ್ ಗೆ ತುಳಸಿ ತನ್ನ ಮನದಾಳದ ಮಾತುಗಳ ಬಗ್ಗೆ, ತನ್ನ ಆಸೆಗಳ ಬಗ್ಗೆ ಬರೆದಿರುವ ಪುಸ್ತಕ ಮಾಧವ್ ಕೈಗೆ ಸಿಕ್ಕಿ ಬಿಡುತ್ತದೆ. ಇದರಲ್ಲಿ ಒಂದಷ್ಟು ಸಾಲುಗಳನ್ನು ಓದುವ ಮಾಧವ್ ತೆಗೆದಿಟ್ಟುಕೊಳ್ಳುತ್ತಾನೆ. ಇನ್ನು ಅಡುಗೆ ರೆಸಿಪಿ ಬರೆದ ಪುಸ್ತಕವನ್ನು ತೆಗೆದುಕೊಂಡು ಬರುತ್ತಾನೆ. ಮನೆಗೆ ಬಂದ ಬಳಿಕ ತುಳಸಿ ಮಲಗಿದ ನಂತರ ತುಳಸಿ ಈ ಮನೆಗೆ ಬಂದ ಮೇಲೆ ಬರೆದಿರುವ ಡೈರಿಯನ್ನು ತೆಗೆದುಕೊಂಡು ಕದ್ದು ಓದುತ್ತಾನೆ. ತುಳಸಿ ಅಭಿ ಮತ್ತು ಅವಿ ಬಗ್ಗೆ ಸಾಕಷ್ಟು ವಿಚಾರಗಳ ಬಗ್ಗೆ ಬರೆದಿರುತ್ತಾಳೆ. ಈ ಮನೆಯಲ್ಲಿ ಎಲ್ಲರೂ ಒಂದಾಗಿ ಸುಖವಾಗಿ ಬಾಳಬೇಕು ಎಂದು ತುಳಸಿಯ ಆಸೆಯನ್ನು ತಿಳಿದು ಮಾಧವ್ ಖುಷಿ ಪಡುತ್ತಾನೆ.

ಸಮರ್ಥ್ ಸಾಲವನ್ನು ಚುಕ್ತಾ ಮಾಡಿದ ಮಾಧವ್
ಸಮರ್ಥ್ ಮನೆ ಮುಂದೆ ಬಂದ ರೌಡಿಗಳು ಹಣ ವಾಪಸ್ ಕೊಡುವಂತೆ ಕೇಳುತ್ತಿದ್ದನ್ನು ಗಮನಿಸುವ ಮಾಧವ್ ಮಾರನೇಯ ದಿನವೇ ಸೇಟು ಬಳಿ ಹೋಗಿ ಪೊಲೀಸರಿಗೆ ಫೋನ್ ಮಾಡುತ್ತಾನೆ. ಬಡ್ಡಿಗೆ ಹಣ ನೀಡುತ್ತಿರುವುದಕ್ಕೆ ಬೈಯುತ್ತಾನೆ. ಬಳಿಕ ಒಂದು ಲಕ್ಷ್ ಸಾಲ ಹಾಗೂ ಬಡ್ಡಿ ಹಣವನ್ನು ಕೊಟ್ಟು, ಸಮರ್ಥ್ ಬಳಿ ತೆಗೆದುಕೊಂಡ ಹಣವನ್ನು ವಾಪಸ್ ಮಾಡುವಂತೆ ಹೇಳುತ್ತಾನೆ. ಮಾಧವ್ ಮಾತನ್ನು ಸೇಟು ಕೇಳುತ್ತಾನೆ. ಮತ್ಯಾವತ್ತೂ ಸಮರ್ಥ್ ಗೆ ಸಮಸ್ಯೆ ನೀಡದಂತೆ ವಾರ್ನಿಂಗ್ ಕೊಟ್ಟು ಮಾಧವ್ ಬರುತ್ತಾನೆ.
ಮೆಟ್ಟಿಲಿನಿಂದ ಜಾರಿ ಬಿದ್ದ ತುಳಸಿ
ಪೂರ್ಣಿಮಾ ಅವಿ ಚಿಕ್ಕವನಾಗಿದ್ದಾಗ ತೆಗೆಸಿಕೊಂಡ ಫೋಟೋಗಳನ್ನು ನೋಡುತ್ತಿರುತ್ತಾಳೆ. ಇದೇ ಸಮಯಕ್ಕೆ ತುಳಸಿ ಬಂದಾಗ ತುಳಸಿಗೂ ಫೋಟೋಗಳನ್ನು ತೋರಿಸಿ ತಮಾಷೆ ಮಾಡುತ್ತಿರುತ್ತಾರೆ. ಆಗ ಅವಿ ಬಂದು ಫೋಟೋಗಳನ್ನು ಕಿತ್ತುಕೊಳ್ಳಲು ಯತ್ನಿಸಿದಾಗ ತುಳಸಿ ಮೆಟ್ಟಿಲಿನ ಮೇಲಿಂದ ಜಾರಿ ಬಿದ್ದು ಪ್ರಜ್ಞೆ ತಪ್ಪುತ್ತಾಳೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಂದ ಬಳಿಕ ಮಾಧವ್ ಮೂಗೇಟು ಆಗಿದೆ ಅಷ್ಟೇ ಆದರೆ, ತುಳಸಿ ಜೀವದ ಜೊತೆಗೆ ಯಾರೂ ಆಟವಾಡಬೇಡಿ. ನನ್ನ ಬದುಕಿಗೆ ಅವಳೊಬ್ಬಳೇ ಆಧಾರ ಎಂದು ಹೇಳುತ್ತಾನೆ.

ಅವಿ ಜೊತೆಗೆ ಮುನಿಸಿಕೊಂಡ ತುಳಸಿ
ಇನ್ನು ಅವಿ ತುಳಸಿಯನ್ನು ತನ್ನಿಂದಲೇ ಇಷ್ಟೆಲ್ಲಾ ಆಗಿದ್ದು ಎಂದು ಕ್ಷಮೆ ಕೇಳುತ್ತಾನೆ. ಆದರೆ ತುಳಸಿ ಅವಿ ಜೊತೆಗೆ ಮಾತನಾಡುವುದಿಲ್ಲ. ಇದು ಅವಿಗೆ ಹರ್ಟ್ ಆಗುವಂತೆ ಮಾಡುತ್ತದೆ. ಇನ್ನು ಸಮರ್ಥ್ ಕೂಡ ಅವಿ ಜೊತೆಗೆ ನಿಮ್ಮ ಕೈಯಲ್ಲಿ ನನ್ನ ತಾಯಿಯನ್ನು ನೋಡಿಕೊಳ್ಳಲು ಆಗುವುದಿಲ್ಲ ಎಂದರೆ ನನ್ನ ಜೊತೆಗೆ ಕಳಿಸಿಕೊಡಿ ಎಂದು ಜಗಳ ಮಾಡುತ್ತಾನೆ. ಅಭಿ ಬಂದು ಸಮರ್ಥ್ ಗೆ ಬೈಯುತ್ತಾನೆ. ಈ ಮನೆಯಲ್ಲಿ ನಿನ್ನ ಕೆಲಸವೆಷ್ಟೋ ಅಷ್ಟು ನೋಡಿಕೋ. ನಮ್ಮ ಮನೆಯೊಳಗೆ ನಡೆಯುವ ವಿಚಾರಕ್ಕೆಲ್ಲಾ ನೀನು ಮೂಗು ತೂರಿಸಬೇಡ ಎಂದು ಬೈಯುತ್ತಾನೆ. ಸಮರ್ಥ್ ಮತ್ತೆ ಮತ್ತೆ ವಾದ ಮಾಡಿದ್ದಕ್ಕೆ ಅವಿ ಕೂಡ ಬೈದು ಕಳಿಸುತ್ತಾನೆ.


Click it and Unblock the Notifications











