Don't Miss!
- Sports
ಜಸ್ಪ್ರೀತ್ ಬೂಮ್ರಾ ಪಾಕ್ ವೇಗಿ ಶಾಹಿನ್ ಅಫ್ರಿದಿಯ ಹತ್ತಿರಕ್ಕೂ ಬರಲ್ಲ ಎಂದ ಪಾಕ್ ಮಾಜಿ ಕ್ರಿಕೆಟಿಗ
- News
ಬಿಬಿಸಿ ಸಾಕ್ಷ್ಯಚಿತ್ರ ವಿವಾದ: ಫೆಬ್ರವರಿ 6 ರಂದು ಕೇಂದ್ರದ ನಿಷೇಧದ ವಿರುದ್ಧದ ಮನವಿ ಆಲಿಸಲು SC ಒಪ್ಪಿಗೆ
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಮರ್ಥ್-ಸಿರಿ ಮದುವೆ ನಡೆಯುತ್ತಿರುವ ಮಂಟಪಕ್ಕೆ ಬಂದ ದತ್ತ ತಾತ ಮಾಡಿದ್ದೇನು?
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತಾತನ ವಿರುದ್ಧವಾಗಿ ಸಮರ್ಥ್ ಸಿರಿಯನ್ನು ಮದುವೆಯಾಗಲು ಮುಂದಾಗಿದ್ದಾನೆ. ಸಿರಿಗೆ ಮನೆಯಲ್ಲಿ ನಡೆದ ವಿಚಾರವನ್ನು ಹೇಳದೆಯೇ ದೇವಸ್ಥಾನದಲ್ಲಿ ಮದುವೆಗೆ ವ್ಯವಸ್ಥೆ ಮಾಡಿದ್ದಾನೆ.
ಈ ವಿಚಾರವನ್ನು ತಿಳಿದ ತುಳಸಿ ಮದುವೆ ಮಂಟಪಕ್ಕೆ ಬಂದಿದ್ದಾಳೆ. ಆದರೆ, ಎಲ್ಲರ ಮುಂದೆ ಬೈಯಲಾಗದೇ, ತನ್ನ ದುಃಖ, ಬೇಸರವನ್ನೆಲ್ಲಾ ಮನಸಿನಲ್ಲೇ ಇಟ್ಟುಕೊಂಡಿದ್ದು, ಮದುವೆಯನ್ನು ನಡೆಸಿಕೊಡಲು ಮುಂದಾಗಿದ್ದಾಳೆ.
ಮದುವೆ ಮನೆಯಲ್ಲಿ ತುಳಸಿ ಕೂಡ ಇರುವುದಕ್ಕೆ ಸಿರಿ ಖುಷಿ ಪಟ್ಟಿದ್ದಾಳೆ. ಅಮ್ಮನ ಎದುರಿಗೆ ಮದುವೆಯಾಗುತ್ತಿರುವುದರಿಂದ ಸಮರ್ಥ್ ಮೇಲೆ ಯಾವುದೇ ಅನುಮಾನವಿಲ್ಲ. ಆದರೆ, ಮುಂದೆ ದತ್ತ ತಾತ ಮದುವೆ ನಿಲ್ಲಿಸಬಹುದು.

ಫೋನ್ ರಿಸೀವ್ ಮಾಡದ ದತ್ತ ತಾತ
ತುಳಸಿ ಮಾವನಿಗೆ ಹೇಳದೆ ಮದುವೆ ನಡೆಯಬಾರದು ಎಂದು ಫೋನ್ ಮಾಡುತ್ತಾಳೆ. ಆದರೆ ದತ್ತ ತಾತ ಟಿವಿ ನೋಡಿಕೊಂಡು ಫೋನ್ ಕಡೆ ಗಮನವನ್ನೇ ಕೊಡುವುದಿಲ್ಲ. ಆದರೆ, ತುಳಸಿ ಮಾತ್ರ ಒತ್ತಡದಲ್ಲಿ ಹೇಗಾದರೂ ಮಾಡಿ ಮಾವನೂ ಮದುವೆಗೆ ಬರಲಿ ಎಂದು ಬಯಸುತ್ತಿರುತ್ತಾಳೆ. ಎಲ್ಲರ ಸಮ್ಮುಖದಲ್ಲೇ ಮದುವೆ ನಡೆಯಬೇಕು ಎನ್ನುವುದು ತುಳಸಿಯ ಆಲೋಚನೆ. ಆದರೆ, ತಾತ ಫೋನ್ ರಿಸೀವ್ ಮಾಡುತ್ತಿಲ್ಲ.

ಸಿರಿ ಖುಷಿಗೆ ಪಾರವೇ ಇಲ್ಲ
ಸಿರಿ ಮದುವೆಯ ಶಾಸ್ತ್ರಗಳನ್ನು ಖುಷಿಯಿಂದ ಮಾಡುತ್ತಿರುತ್ತಾಳೆ. ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ, ಗೌರಿ ಪೂಜೆ ಎಲ್ಲವನ್ನು ಸಂಭ್ರಮದಿಂದ ಮಾಡುತ್ತಿರುವ ಸಿರಿ ತುಳಸಿ ಮುಖದಲ್ಲಿನ ಆತಂಕವನ್ನು ಗಮನಿಸುತ್ತಾಳೆ. ತುಳಸಿಯನ್ನು ಯಾಕಮ್ಮ ಗಾಬರಿ, ಏನಾಯ್ತು ಎಂದು ಕೇಳಿದ್ದಕ್ಕೆ, ತುಳಸಿ ಏನೂ ಇಲ್ಲ, ಮದುವೆ ಮನೆ ಕೆಲಸ ಇರುತ್ತೆ ಎಂದು ನೆಪ ಹೇಳುತ್ತಾಳೆ. ಇನ್ನು ಸಿರಿಗೆ ಎಲ್ಲಾ ಶಾಸ್ತ್ರದ ಬಗ್ಗೆಯೂ ತುಳಸಿ ಅರ್ಥ ಹೇಳುತ್ತಿರುತ್ತಾಳೆ. ಅಮ್ಮನಿಗೆ ಎಲ್ಲವೂ ಗೊತ್ತು ಎಂದು ಸಿರಿಯೂ ಕೂಡ ತಮಾಷೆ ಮಾಡುತ್ತಾಳೆ. ಮದುವೆ ಮಂಟಪಕ್ಕೆ ಸಿರಿ ಪಲ್ಲಕ್ಕಿಯಲ್ಲಿ ಬರುವುದನ್ನು ನೋಡಿ ಖುಷಿ ಪಡುತ್ತಾನೆ.

ತಾತನಿಗೆ ಸಮರ್ಥ್ ಮದುವೆ ವಿಷಯ ಗೊತ್ತಾಯ್ತಾ?
ಜುಗ್ಗ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗಲು ಬಂದಿರುತ್ತಾನೆ. ತೆಂಗಿನಕಾಯಿಯನ್ನು ತೆಗೆದುಕೊಂಡು ಹೋಗುವಾಗ ದೇವಸ್ಥಾನದಲ್ಲಿ ಯಾರ ಮದುವೆ ಎಂದು ವಿಚಾರಿಸುತ್ತಾನೆ. ಮಂಟಪದ ಕಡೆ ತಿರುಗಿ ನೋಡಿದ ಅವನಿಗೆ ತುಳಸಿ ಮತ್ತು ಸಮರ್ಥ್ ಕಾಣಿಸುತ್ತಾರೆ. ಇದನ್ನು ನೋಡಿ ಶಾಕ್ ಆದ ಅವನು ದತ್ತ ತಾತನನ್ನು ಹುಡುಕುತ್ತಾನೆ. ಅವರು ಕಾಣಿಸದಿದ್ದಾಗ ಜುಗ್ಗ, ತಾತನನನ್ನು ಕರೆದುಕೊಂಡು ಬಂದು ಮದುವೆಯನ್ನು ನಿಲ್ಲಿಸಲೇ ಬೇಕು ಎಂದು ಫೋಟೋ ತೆಗೆಯುತ್ತಾನೆ. ತಾತನಿಗೆ ಫೋನ್ ಮಾಡಿಸರೆ, ರಿಸೀವ್ ಮಾಡದ ಕಾರಣ ಸೀದಾ ಮನೆಗೆ ಹೋಗುತ್ತಾನೆ. ಅಲ್ಲಿ ತಾತ ಟಿವಿ ನೋಡುತ್ತಿರುತ್ತಾರೆ. ನಿಮ್ಮ ಮೊಮ್ಮೊಗನ ಮದುವೆ ನಡೆಯುತ್ತಿದೆ ಎಂದು ಹೇಳಿದರೂ ತಾತ ನಂಬುವುದಿಲ್ಲ. ನನ್ನನ್ನು ಕಿಡ್ಯ್ನಾಪ್ ಮಾಡಿ ನಿಮ್ಮ ಮಗಳ ಜೊತೆಗೆ ನನ್ನ ಮೊಮ್ಮೊಗನ ಮದುವೆ ಮಾಡಲು ಪ್ಲಾನ್ ಮಾಡಿದ್ದೀಯಾ ಎಂದು ಹೇಳುತ್ತಾನೆ. ಆಗ ಜುಗ್ಗ ಮದುವೆಯ ಫೋಟೋ ತೋರಿಸುತ್ತಾನೆ.

ಕಣ್ಣೀರಿಟ್ಟ ತಾತ ತುಳಸಿ ಗ್ರಹಚಾರ ಕೆಟ್ಟೋಯ್ತಾ?
ತಾತ ಫೋಟೋ ನೋಡಿ ಶಾಕ್ ಆಗುತ್ತಾರೆ. ಅಲ್ಲಿಂದ ಸೀದ ಜುಗ್ಗನ ಜೊತೆಗೆ ಮದುವೆ ಮಂಟಪಕ್ಕೆ ಬರುತ್ತಾರೆ. ತಾತ ನಿಲ್ಲಿಸಿ ಎಂದು ಹೇಳುವಷ್ಟರಲ್ಲಿ ಸಮರ್ಥ್ ಸಿರಿ ಕುತ್ತಿಗೆಗೆ ತಾಳಿ ಕಟ್ಟಿ ಬಿಟ್ಟಿರುತ್ತಾನೆ. ಅಲ್ಲದೇ, ಅಲ್ಲಿನ ಶಬ್ಧಕ್ಕೆ ತಾತ ಹೇಳಿದ್ದು ಕೂಡ ಯಾರಿಗೂ ಕೇಳಿಸಿರುವುದಿಲ್ಲ. ತಾತನ ಕೈಗೆ ಅಲ್ಲಿದ್ದವರು ಅಕ್ಷತೆ ಕೊಡುತ್ತಾರೆ. ಸಮರ್ಥ್ ಮತ್ತು ಸಿರಿ ತಾತನನ್ನು ನೋಡಿ ಎದ್ದು ನಿಲ್ಲುತ್ತಾರೆ. ಕಣ್ಣು ಒದ್ದೆ ಮಾಡಿಕೊಂಡು ಅಕ್ಷತೆ ಹಾಕುತ್ತಾರೆ. ಆದರೆ ತುಳಸಿಯನ್ನು ನೋಡಿ ಕೋಪ ಮಾಡಿಕೊಳ್ಳುತ್ತಾರೆ. ಮುಂದೆ ಏನು ಕಾದಿದಿಯೋ ಗೊತ್ತಿಲ್ಲ.