Srirasthu Shubhamasthu ; ವಂಶವೃಕ್ಷದಲ್ಲಿ ಇಲ್ಲ ಸಮರ್ಥ್-ಸಂಧ್ಯಾ ಹೆಸರು : ಮನೆಯನ್ನು ಬಿಟ್ಟು ಹೋದ ಪೂರ್ಣಿಮಾ..!
ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮಹೇಶನಿಗೆ ಶಾರ್ವರಿ ಮಾಡಿರುವ ಅಷ್ಟೂ ಕೆಲಸಗಳು ಗೊತ್ತಿವೆ. ಇಷ್ಟು ದಿನ ತನಗೇನೋ ನೆನಪಾಗುತ್ತಿದೆ ಎಂಬಂತೆ ನಟಿಸುತ್ತಿದ್ದರು. ಆದರೆ, ಶಾರ್ವರಿಯನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಿ ಕ್ಲಾಸ್ ತೆಗೆದುಕೊಂಡಿದ್ದಾನೆ. ನೀನೇ ನನ್ನ ಅತ್ತಿಗೆಯನ್ನು ಕೊಂದಿದ್ದು, ಆವತ್ತು ನಡೆದಿದ್ದೆಲ್ಲವೂ ನನಗೆ ಗೊತ್ತಿದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೇ, ಶಾರ್ವರಿಯನ್ನು ಮದುವೆಯಾದ ತಪ್ಪಿಗೆ ತಮ್ಮ ಮನೆಯೇ ಸರ್ವನಾಶವಾಯಿತು ಎಂದು ಬೇಸರ ಮಾಡಿಕೊಳ್ಳುತ್ತಾರೆ. ಶಾರ್ವರಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.
ಶಾರ್ವರಿಯನ್ನು ಆಡಿಸುತ್ತಿರುವ ಮಹೇಶ..!
ಶಾರ್ವರಿಯಿಂದಲೇ ಸುಮತಿ ಅತ್ತಿಗೆಯ ಸಾವಾಗಿದ್ದು ಎಂಬ ಸತ್ಯ ಗೊತ್ತಿದೆ. ಆದರೆ, ಈ ಬಗ್ಗೆ ಯಾರಿಗೂ ತಿಳಿಸಿಲ್ಲ. ನಾನು ಶಾರ್ವರಿಯತಯಂತಹ ಕೆಟ್ಟವಳನ್ನು ಪ್ರೀತಿಸಿ ಬಲವಂತವಾಗಿ ಮನೆಯವರನ್ನು ಒಪ್ಪಿಸಿ ಮದುವೆಯಾದೆ. ಅವಳಿಂದಲೇ ಇಷ್ಟೆಲ್ಲಾ ಆಗಿದ್ದು, ಅಣ್ಣ ಹಾಗೂ ಅವರ ಮಕ್ಕಳು ನೋವು ಅನುಭವಿಸಿದ್ದು. ಮೊದಲು ಶಾರ್ವರಿಗೆ ಪಾಠ ಕಲಿಸಿ, ಅವಳು ಯಾಕೆ ಹೀಗೆ ಮಾಡಿದೆ ಎಂದು ಪ್ರಶ್ನೆ ಮಾಡುತ್ತಾನೆ. ಶಾರ್ವರಿ ತನ್ನ ಅಧಿಕಾರದ ಆಸೆಗೆ ಹೀಗೆಲ್ಲಾ ಮಾಡಿದ್ದನ್ನು ಹೇಳುತ್ತಾಳೆ. ಆಗ ಮಹೇಶ ಇದೆಲ್ಲವನ್ನೂ ಮನೆಯಲ್ಲಿ ಹೇಳುವೆ ಎಂದಾಗ ಶಾರ್ವರಿ ಗಾಬರಿಯಾಗುತ್ತಾಳೆ. ಎರಡು ದಿನ ಸಮಯ ಕೊಡಿ ನಾನೇ ಹೇಳುತ್ತೇನೆ ಎಂದು ಹೇಳುತ್ತಾಳೆ. ಆ ಎರಡು ದಿನ ತನ್ನ ಮಾತನ್ನು ಕೇಳಬೇಕು ಎಂದು ತಾಕೀತು ಮಾಡಿದ್ದು., ಮನೆಯವರ ಮುಂದೆ ಎಲ್ಲರಿಗೂ ಊಟ ಬಡಿಸಲು ಹೇಳುತ್ತಾನೆ.

ವಂಶವೃಕ್ಷಕ್ಕೆ ಸೇರದ ಸಮರ್ಥ್-ಸಂಧ್ಯಾ ಹೆಸರು
ಇನ್ನು ಸಮರ್ಥ್ ಮತ್ತು ಸಂಧ್ಯಾ ಹೆಸರನ್ನು ಸೇರಿಸಬೇಕು ಎಂದು ಮಾಧವ್ ಸಾಕಷ್ಟು ಪ್ರಯತ್ನಪಟ್ಟ. ಆದರೆ, ಅವರಿಬ್ಬರ ಹೆಸರನ್ನು ವಂಶವೃಕ್ಷಕ್ಕೆ ಸೇರಿಸಲಾಗದು ಎಂದು ಲಾಯರ್ ತಿಳಿಸಿದ್ದಾರೆ. ಈ ಮಾತನ್ನು ಕೇಳಿದ ಅಭಿಗೆ ಬಹಳ ಖುಷಿಯಾಗುತ್ತದೆ. ಅವರಿಬ್ಬರಿಗೂ ನಮ್ಮ ಮನೆಯ ಆಸ್ತಿಯಲ್ಲಿ ಪಾಲು ಕೊಡುವ ಅಗತ್ಯವಿಲ್ಲ ಎಂದು ಸಂತಸಪಡುತ್ತಾನೆ. ಸಮರ್ಥ್ ಬಳಿ ಹೋಗಿ ಇದೇ ವಿಚಾರವಾಗಿ ವ್ಯಂಗ್ಯವಾಗಿ ಮಾತನಾಡುತ್ತಾನೆ. ಸಮರ್ಥ್ ಗೆ ತಮ್ಮ ಹೆಸರು ಆ ಕುಟುಂಬದ ಜೊತೆಗೆ ಸೇರುವುದು ಕೂಡ ಅಗತ್ಯವಿರಲಿಲ್ಲ. ಹಾಗಾಗಿ ಅವನಿಗೆ ಬೇಸರ ಅನಿಸುವುದಿಲ್ಲ.
ಪತ್ರ ಬರೆದಿಟ್ಟು ಕಾಣೆಯಾದ ಪೂರ್ಣಿಮಾ..!
ಪೂರ್ಣಿಮಾ ಮಗು ಆಗಲಿ ಎಂದು ಸಾಕಷ್ಟು ವ್ರತ ಮಾಡಿರುತ್ತಾಳೆ. ಆದರೆ, ದೀಪಿಕಾ ರಿಪೋರ್ಟ್ ತೋರಿಸಿ, ಪೂರ್ಣಿಗೆ ಮಕ್ಕಳೇ ಆಗುವುದಿಲ್ಲ ಎಂಬ ಸತ್ಯವನ್ನು ಹೇಳುತ್ತಾಳೆ. ಈ ಮಾತನ್ನು ಕೇಳಿದ ಪೂರ್ಣಿ ಮನಸ್ಸು ಬಹಳ ಘಾಸಿಗೆ ಒಳಗಾಗಿರುತ್ತದೆ. ನೊಂದುಕೊಂಡಿರುತ್ತಾಳೆ. ತನಗೇ ಯಾಕೆ ದೇವರು ಅನ್ಯಾಯ ಮಾಡಿದರು ಎಂದು ಗೋಳಾಡುತ್ತಾ ಈ ಪತ್ರ ಬರೆದಿಟ್ಟು ಮನೆಯಿಂದ ಹೋಗಿದ್ದಾಳೆ. ತುಳಸಿ ಮತ್ತು ಮಾಧವ್ ಪೂರ್ಣಿಮಾಳಿಗಾಗಿ ಹುಡುಕಾಟವನ್ನು ನಡೆಸಿದ್ದಾರೆ. ಅವಳು ಕಾಣದೇ ಇರುವುದಕ್ಕೆ ಗಾಬರಿಯಾಗಿದ್ದಾರೆ.

ಪೂರ್ಣಿಯನ್ನು ಹೊರಹಾಕಿ ಸಂತಸಗೊಂಡ ದೀಪಿಕಾ..!
ದೀಪಿಕಾ ಚುಚ್ಚು ಮಾತಿನಿಂದ ನೊಂದುಕೊಂಡಿದ್ದಕ್ಕಿಂತಲೂ ತನಗೆ ಪೂರ್ಣಿಮಾ ತಾಯಿಯಾಗುವ ಅವಕಾಶವಿಲ್ಲ ಎಂದು ಸಂಕಟ ಅನುಭವಿಸಿದ್ದಾಳೆ. ಇದರಿಂದಲೇ ಅವಳು ಮನೆ ಬಿಟ್ಟು ಹೋಗಿದ್ದಾಳೆ. ಪೂರ್ಣಿ ಇಲ್ಲದ ಕಾರಣ ದೀಪಿಕಾ ಫುಲ್ ಹ್ಯಾಪಿಯಾಗಿದ್ದಾಳೆ. ಒಂದು ವಿಕೆಟ್ ಅಂತೂ ಔಟ್ ಆಯ್ತು ಎಂದು ಖುಷಿ ಪಡುತ್ತಾಳೆ. ಈಗ ಪೂರ್ಣಿಮಾ ಇಲ್ಲದಿರುವುದಕ್ಕೆ ಅವಿ ಕೂಡ ಕೊರಗಿ ಕೊರಗಿ ಎಲ್ಲಾ ಬಿಟ್ಟು ಹೋಗುತ್ತಾನೆ ಎಂದು ದೀಪಿಕಾ ಮತ್ತು ಶಾರ್ವರಿ ಸಂತಸ ಪಡುತ್ತಾರೆ. ಪೂರ್ಣಿಮಾ ಎಲ್ಲಿಗೆ ಹೋಗಿದ್ದಾಳೆ..? ಮನೆಯವರ ಕೈಗೆ ಸಿಗುತ್ತಳಾ..? ಇಲ್ಲ ಇನ್ನೇನಾದರೂ ಮಾಡಿಕೊಳ್ಳುತ್ತಾಳಾ ಎಂದು ಮನೆಯವರು ಗಾಬರಿಯಾಗಿದ್ದಾರೆ.


Click it and Unblock the Notifications