Srirasthu Shubhamasthu ; ಅವಿನಾಶ್ ಮಾಡಿದ ತಪ್ಪಿನ ಬಗ್ಗೆ ಬುದ್ಧಿ ಹೇಳಲು ಯತ್ನಿಸಿದ ತುಳಸಿ..!

By ಪ್ರಿಯಾ ದೊರೆ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸಂಧ್ಯಾ ಮನೆಗೆ ತರಕಾರಿಯನ್ನು ತೆಗೆದುಕೊಂಡು ಹೋಗುತ್ತಿರುತ್ತಾಳೆ. ಸಂಧ್ಯಾಳನ್ನು ಕಂಡ ದೀಪಿಕಾ ಕಾರ್ ನಿಲ್ಲಿಸುತ್ತಾಳೆ. ಈ ಉರಿ ಬಿಸಿಲಿನಲ್ಲಿ ಭಾರ ಹೊತ್ತುಕೊಂಡು ಎಲ್ಲಿಗೆ ಹೊರಟೆ ಎಂದು ವಿಚಾರಿಸುತ್ತಾಳೆ. ಅವಕಾಶ ಸಿಕ್ಕಿದ್ದೇ ಸರಿ ಎಂದು ನನ್ನ ಕಷ್ಟ ಕೇಳೋರು ಯಾರೂ ಇಲ್ಲ. ಆಟೋದಲ್ಲಿ ಹೋಗೋಕೆ ಹಣವಿಲ್ಲ ಎನ್ನುತ್ತಾಳೆ. ದೀಪಿಕಾ ಹತ್ತು ಸಾವಿರ ಹಣ ಕೊಟ್ಟು ಮನೆಯವರೆಗೂ ಡ್ರಾಪ್ ಮಾಡುತ್ತಾಳೆ. ದೀಪಿಕಾ ಮತ್ತು ಶಾರ್ವರಿ ಸಂಧ್ಯಾಳನ್ನು ಮುಂದಿಟ್ಟುಕೊಂಡು ಏನೋ ಪ್ಲಾನ್ ಮಾಡಿದ್ದಾರೆ.

ಮಗುವಿಗಾಗಿ ಹುಡುಕಾಟ ನಿಲ್ಲಿಸದ ಜನಾರ್ಧನ್

ಜನಾರ್ಧನ್ ತನ್ನ ಆಸ್ತಿಯನ್ನು ಉಳಿಸಿಕೊಳ್ಳಲು ಇನ್ನು ಮಗುವಿಗಾಗಿ ಹುಡುಕಾಡುತ್ತಿದ್ದಾನೆ. ಆದರೆ, ವನಜಾ ಮಗುವಿನ ಬಗ್ಗೆ ಯಾವುದೇ ಮಾಹಿತಿಯನ್ನೂ ಹೇಳುತ್ತಿಲ್ಲ. ಕೇಳಿದರೆ, ನಿಮ್ಮ ಮೋಸಕ್ಕೆ ನನ್ನ ಮಗು ಬಲಿಯಾಗುವುದು ಬೇಡ, ಸಿಗುವುದೂ ಬೇಡ ಎಂದು ಹೇಳುತ್ತಾಳೆ. ಹಾಗೆಂದ ವನಜಾ ಮಗುವಿನ ಗುರುತಿನ ಬಗ್ಗೆ ಡೈರಿಯಲ್ಲಿ ಬರೆಯುತ್ತಾಳೆ. ಮಗುವನ್ನು ಕರೆದುಕೊಂಡು ಹೋದ ದಿನ ಪಿಂಕ್ ಫ್ರಾಕ್ ಹಾಕಿತ್ತು, ಅಂಗೈಯಲ್ಲಿ ಮಚ್ಚೆ ಇತ್ತು ಎಂದು ಬರೆದಿರುತ್ತಾಳೆ. ಇದನ್ನು ನೋಡಿದ ಜನಾರ್ಧನ್ ತನ್ನ ಕೆಲಸ ಸುಲಭವಾಯ್ತು ಎಂದು ಅಂದುಕೊಳ್ಳುತ್ತಾನೆ.

srirasthu-shubhamasthu-serial-26-june-episode-written-update

ತುಳಸಿ ಕೋಪಕ್ಕೆ ನೊಂದ ಅವಿ

ಇನ್ನು ತುಳಸಿ ಬೇಕಂತಲೇ ಅವಿನಾಶ್ ಜೊತೆಗೆ ಮಾತನಾಡುತ್ತಿಲ್ಲ. ಅವಿ ಕ್ಷಮೆ ಕೇಳಿದರೂ ಮಾತನಾಡುತ್ತಿಲ್ಲ. ತಾನೇನು ತಪ್ಪು ಮಾಡಿಲ್ಲ. ನನ್ನ ಜೊತೆಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರೂ ತುಳಸಿ ಸುಮ್ಮನಿದ್ದಾಳೆ. ತುಳಸಿ ಪೂರ್ಣಿಮಾಳನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೊರಟಿದ್ದಾಳೆ. ಅವಿ ಕೂಡ ತಾನೂ ಬರುವುದಾಗಿ ಹೇಳಿದ್ದಾನೆ. ತುಳಸಿ ಅವಿಗೆ ಬೇಸರ ಮಾಡಲೆಂದೇ ಸಮರ್ಥ್ ಬಳಿ ಮುದ್ದಾಗಿ ಮಾತನಾಡುತ್ತಾಳೆ. ನಾಲ್ವರೂ ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿ ಅವಿ ತುಳಸಿ ಇಲ್ಲದಾಗ ಸಮರ್ಥ್ ಬಳಿ ಅಮ್ಮ ತನ್ನ ಮೇಲೆ ಕೋಪ ಮಾಡಿಕೊಂಡಿದ್ದಾರೆ. ನಾನು ಏನೂ ತಪ್ಪು ಮಾಡಿಲ್ಲ. ಅವರಿಗೆ ಕೋಪ ಬಂದಾಗ ಏನು ಮಾಡಬೇಕು ಎಂದು ಕೇಳುತ್ತಾನೆ.


ಮನೆಯಲ್ಲಿ ಕೂಗಾಡಿದ ಸಮರ್ಥ್

ಆಗ ಸಮರ್ಥ್ ಅಮ್ಮ ತಮ್ಮ ಮೇಲೆ ಯಾವತ್ತೂ ಕೋಪ ಮಾಡಿಕೊಂಡಿಲ್ಲ. ತನಗೆ ಇತರರಿಗೆ ಕೆಟ್ಟದ್ದನ್ನು ಬಯಸಿ ಕೂಡ ಗೊತ್ತಿಲ್ಲ. ಅವರ ಹಿಂದೆಯೇ ಹೋಗು. ಕ್ಷಮೆ ಕೇಳು ಆಗ ಸರಿ ಹೋಗಬಹುದು. ಅಮ್ಮ ಹಾಗೆಲ್ಲಾ ಸುಮ್ಮನೆ ಯಾರ ಮೇಲೂ ಬೇಸರ ಮಾಡಿಕೊಳ್ಳುವುದಿಲ್ಲ ಎಂದು ಹೇಳುತ್ತಾನೆ. ಆಗ ಅವಿ ದೇವಸ್ಥಾನದಲ್ಲಿ ತುಳಸಿ ಸುತ್ತ ಸತ್ತಾಡಿ ಕ್ಷಮೆ ಕೇಳುತ್ತಾನೆ. ಆದರೆ ತುಳಸಿಗೆ ನಗು ಬಂದರೂ ತಡೆದುಕೊಂಡು ಕೋಪ ತೋರಿಸುತ್ತಾಳೆ. ಸಮರ್ಥ್ ಮನೆಗೆ ಬಂದು ಕೋಪದಲ್ಲಿ ಕೂಗಾಡುತ್ತಾನೆ. ನನ್ನಮ್ಮನನ್ನು ನನ್ನಿಂದ ಕಿತ್ತುಕೊಂಡವರಿಗೆ ನಾನು ಸಹಾಯ ಮಾಡುತ್ತಿದ್ದೇನೆ ಎಂದು ಕಿರುಚಾಡುತ್ತಾನೆ. ದತ್ತ ತಾತ ಏನಾಯ್ತು ಎಂದಾಗ ನಡೆದ ಘಟನೆಯನ್ನು ವಿವರಿಸುತ್ತಾನೆ. ದತ್ತ ತಾತ ಸಮರ್ಥ್ ಗೆ ಬೈಯುತ್ತಾನೆ.

srirasthu-shubhamasthu-serial-26-june-episode-written-update

ಅವಿಗೆ ಮಾಧವ್ ಬಗ್ಗೆ ಹೇಳಿದ ತುಳಸಿ

ಇನ್ನು ಅವಿ ತನಗೆ ತೋಚಿದೆಲ್ಲವನ್ನೂ ಮಾಡುತ್ತಾನೆ. ತುಳಸಿ ತನ್ನ ಜೊತೆಗೆ ಮಾತನಾಡಲಿ ಎಂದು ಸಾಕಷ್ಟು ಬಾರಿ ಕ್ಷಮೆ ಕೇಳುತ್ತಾನೆ. ಆದರೆ ತುಳಸಿಯ ಮನಸ್ಸು ಕರಗುವುದಿಲ್ಲ. ಆಗ ಕಣ್ಣೀರು ಹಾಕುತ್ತಾ ಆಕ್ಸಿಡೆಂಟ್ ಆಗಿದ್ದು, ಅಕಸ್ಮಾತ್ ಆಗಿ ಮಾಡಿದ ತಪ್ಪಿಗೆ ಈ ಶಿಕ್ಷೆಯಾಕೆ ಎಂದು ಕೇಳುತ್ತಾನೆ. ಆಗ ತುಳಸಿ ನಿಮ್ಮ ತಂದೆ ಮಾಧವ್ ಅವರು ಕೂಡ ಕಾರು ಓಡಿಸುವಾಗ ಅಕಸ್ಮಾತ್ ಆಗಿ ಆದ ಆಕ್ಸಿಡೆಂಟ್ ಅದು. ಆದರೆ, ನೀವು ಅವರನ್ನು ಎಷ್ಟು ದೂರ ಇಟ್ಟಿದ್ದೀರಾ ಎಂದು ಹೇಳುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X